ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಭಾರತವು ವಿಶ್ವದ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ರಸ್ತೆಯ ಸ್ಥಿತಿಗಳು ವಾಹನ ಸವಾರರ ಸುರಕ್ಷತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದರ ಜೊತೆಗೆ ವಾಹನ ಸವಾರರೂ ಸಹ ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಅಪಘಾತಗಳಿಗೆ ಕಾರಣರಾಗುತ್ತಾರೆ. ಭಾರತದ ರಸ್ತೆಗಳಲ್ಲಿ ಚಲಿಸುವ ವಾಹನ ಸವಾರರು ಮಾಡುವ ಸಾಮಾನ್ಯವಾದ ತಪ್ಪೆಂದರೆ ರಾಂಗ್ ಸೈಡಿನಲ್ಲಿ ವಾಹನಗಳನ್ನು ಚಲಾಯಿಸುವುದು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಬಹುತೇಕ ವಾಹನ ಸವಾರರು, ಮುಂದೆ ಹೋಗಿ ಯೂ ಟರ್ನ್ ತೆಗೆದುಕೊಳ್ಳುವ ಬದಲು, ತಮ್ಮ ಅನುಕೂಲಕ್ಕಾಗಿ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುತ್ತಾರೆ. ರಾಂಗ್ ಸೈಡಿನಲ್ಲಿ ಸಾಗುವ ವಾಹನಗಳಿಂದಾಗಿ ಹಲವು ಅಪಘಾತಗಳಾಗಿವೆ. ಹಲವು ಬಾರಿ ಹಲವರ ಜೀವಕ್ಕೂ ಮುಳುವಾಗಿದೆ. ಆದರೂ ಬಹಳಷ್ಟು ಮಂದಿ ಇದನ್ನು ಮುಂದುವರೆಸುತ್ತಲೇ ಇದ್ದಾರೆ. ಈ ವೀಡಿಯೊದಲ್ಲಿರುವ ಘಟನೆಯು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಇದರಲ್ಲಿ ಸ್ಕೂಲ್ ವ್ಯಾನ್ ರಾಂಗ್ ಸೈಡಿನಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಟೈಮ್ಸ್ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ಈ ವ್ಯಾನ್‍‍ನಲ್ಲಿ ಶಾಲಾ ಮಕ್ಕಳಿರುವುದನ್ನು ಕಾಣಬಹುದು. ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಘಟನೆ ನಡೆದಾಗ ವ್ಯಾನ್‌ನಲ್ಲಿ ಎಂಟು ಮಕ್ಕಳು ಇದ್ದರು. ರಾಂಗ್ ಸೈಡಿನಲ್ಲಿ ಬಂದ ಹಳದಿ ಬಣ್ಣದ ವ್ಯಾನ್ ಹೋಂಡಾ ಅಮೇಜ್ ಕಾರಿಗೆ ಡಿಕ್ಕಿ ಹೊಡೆಯುವುದನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಹೋಂಡಾ ಅಮೇಜ್ ಕಾರು ಸರಿಯಾದ ದಾರಿಯಲ್ಲಿಯೇ ಸಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೋಂಡಾ ಅಮೇಜ್ ಕಾರಿಗೆ ಡಿಕ್ಕಿ ಹೊಡೆಯುವುದರಿಂದ ಪಾರಾದರೂ ಸ್ಕೂಲ್ ವ್ಯಾನ್ ಚಾಲಕನು ಏನೂ ಆಗಿಯೇ ಇಲ್ಲವೆಂಬಂತೆ ತನ್ನ ಚಾಲನೆಯನ್ನು ಮುಂದುವರೆಸಿದ್ದಾನೆ. ಮುಂದಿರುವ ರಸ್ತೆಯಲ್ಲಿನ ವಾಹನ ದಟ್ಟಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ರಾಂಗ್ ಸೈಡಿನಲ್ಲಿಯೇ ವ್ಯಾನ್ ಚಲಾಯಿಸಿಕೊಂಡು ಹೋಗಿದ್ದಾನೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಕೆಲವೇ ದಿನಗಳ ಹಿಂದೆ, ಲಕ್ನೋದಲ್ಲಿ ಶಾಲಾ ವ್ಯಾನ್‍‍ವೊಂದು ಯುಪಿಎಸ್ಆರ್‍‍ಟಿ‍‍ಸಿ ಬಸ್ಸಿಗೆ ಡಿಕ್ಕಿ ಹೊಡೆದು, ವ್ಯಾನ್‍‍ನಲ್ಲಿದ್ದ ನಾಲ್ಕು ಮಕ್ಕಳು ಗಾಯಗೊಂಡಿದ್ದರು. ಕಳೆದ ಮಂಗಳವಾರ, 11 ಮಕ್ಕಳನ್ನು ಹೊಂದಿದ್ದ ಮತ್ತೊಂದು ಶಾಲಾ ವ್ಯಾನ್ ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಈ ಎರಡೂ ಸಂದರ್ಭಗಳಲ್ಲಿ, ಶಾಲಾ ವ್ಯಾನ್‌ಗಳು ರಾಂಗ್ ಸೈಡಿನಲ್ಲಿದ್ದವು. ರಾಂಗ್ ಸೈಡಿನಲ್ಲಿ ಹೋಗುವುದರಿಂದ ಸಾಕಷ್ಟು ಸಮಯ ಉಳಿತಾಯವಾಗುವ ಕಾರಣ, ವ್ಯಾನ್ ಚಾಲಕರು, ಈ ವ್ಯಾನ್‍‍ಗಳಲ್ಲಿರುವ ಶಾಲಾ ಮಕ್ಕಳ ಪ್ರಾಣಕ್ಕೆ ಸಂಚಕಾರ ತರುತ್ತಿದ್ದಾರೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಘಟನೆಗಳಿಗೆ ಸಂಬಂಧಿಸಿದಂತೆ ಲಕ್ನೋ ನಗರ ಪೊಲೀಸರು ಇನ್ನೂ ಯಾವುದೇ ಕ್ರಮಗಳನ್ನು ಕೈಗೊಂಡು, ವಾಹನಗಳನ್ನು ವಶಕ್ಕೆ ಪಡೆದಿಲ್ಲ. ಕೆಲವು ವಾರಗಳ ಹಿಂದೆ, ಗುಜರಾತ್‌ನಲ್ಲಿ ಸಂಚಾರ ಪೊಲೀಸರು ಮಕ್ಕಳ ಸುರಕ್ಷತಾ ನಿಯಮಗಳನ್ನು ಪಾಲಿಸದ ಸ್ಕೂಲ್ ಬಸ್‌ ಹಾಗೂ ವ್ಯಾನ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದರು. ಇದರಿಂದ ಶಾಲಾ ವಾಹನ ಚಾಲಕರು ಭಾರೀ ಪ್ರತಿಭಟನೆ ನಡೆಸಿದ್ದರು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಚಾಲಕರು ಕೆಲವು ದಿನಗಳವರೆಗೆ ಮುಷ್ಕರ ನಡೆಸಿದ್ದ ಕಾರಣ, ನಗರ ಪೊಲೀಸರು ತಮ್ಮ ಇಲಾಖೆಯ ವಾಹನಗಳಲ್ಲಿಯೇ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದರು. ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದು ಭಾರತದಲ್ಲಿ ದೊಡ್ಡ ಅಪಾಯವಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ, ರಾಂಗ್ ಸೈಡಿನಲ್ಲಿ ಚಲಿಸುವ ವಾಹನಗಳ ಟಯರ್‌ಗಳನ್ನು ಪಂಕ್ಚರ್ ಮಾಡಲು ಅಧಿಕಾರಿಗಳು ಸ್ಪೈಕ್‌ಗಳನ್ನು ಅಳವಡಿಸಿದ್ದರು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿ ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿರುವ ಸ್ಕೂಲ್ ವ್ಯಾನ್‍

ಈ ಯೋಜನೆಯನ್ನು ನೋಯ್ಡಾ ನಗರದಲ್ಲಿ ಪೈಲಟ್ ಯೋಜನೆಯಾಗಿ ಪ್ರಾರಂಭಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಯೋಜನೆಯನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸಲು ಯೋಜಿಸುತ್ತಾರೆಯೇ ಎಂಬುದು ತಿಳಿದಿಲ್ಲ. ವೀಡಿಯೊದಲ್ಲಿರುವ ಘಟನೆ ನಡೆದಿರುವ ಸ್ಥಳದಲ್ಲಿ ಸಂಚಾರವನ್ನು ನಿಯಂತ್ರಿಸಲು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಯಾವುದೇ ಪೊಲೀಸರು ಇರಲಿಲ್ಲ.

Image Courtesy: TOI

Most Read Articles

Kannada
English summary
School van driving on the wrong side nearly crashes into a Honda Amaze - Read in kannada
Story first published: Friday, July 19, 2019, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more