ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಸ್ಕೂಟರ್ ಸವಾರನೊಬ್ಬ ಕ್ರಿಕೆಟಿಗನಂತೆ ಉಡುಗೆ ತೊಟ್ಟು ಪೆಟ್ರೋಲ್‌ ಬಂಕ್'ನಲ್ಲಿ ಕ್ರಿಕೆಟ್ ಆಡುತ್ತಿರುವ ರೀತಿಯಲ್ಲಿ ಪೋಸ್ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ನಮ್ಮ ನೆರೆಯ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಭಾರತಕ್ಕಿಂತ ಸುಮಾರು ರೂ.50ಗಳಷ್ಟು ಕಡಿಮೆ ಬೆಲೆಗೆ ಲಭ್ಯವಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ.100 ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಬಹುತೇಕ ಜನರು ಕಾರು, ಬೈಕುಗಳ ಬದಲು ಸೈಕಲ್‌ಗಳನ್ನು ಬದಲಿಸುತ್ತಿದ್ದಾರೆ. ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂಜರಿಯುತ್ತಿದ್ದಾರೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಈ ಸನ್ನಿವೇಶದಲ್ಲಿ ಯುವಕನೊಬ್ಬ ಕ್ರಿಕೆಟ್ ಆಟಗಾರರಂತೆ ಉಡುಗೆ ತೊಟ್ಟು ಪೆಟ್ರೋಲ್ ಬಂಕ್'ನಲ್ಲಿ ಕ್ರಿಕೆಟ್ ಆಡುವಂತೆ ಪೋಸ್ ನೀಡಿ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗಡಿ ದಾಟಿದ್ದನ್ನು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾನೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಸ್ಕೂಟರ್‌ನಲ್ಲಿ ಆಗಮಿಸಿದ ಆತ ಇದ್ದಕ್ಕಿದ್ದಂತೆ ಪೆಟ್ರೋಲ್ ಬಂಕ್ ಮುಂದೆ ಹೋಗಿ ಸಂಭ್ರಮದಿಂದ ತನ್ನ ಬ್ಯಾಟ್ ಹಾಗೂ ಕೈಗಳನ್ನು ಎತ್ತಿ ಸಂಭ್ರಮಿಸಿದ್ದಾನೆ. ಈ ವೀಡಿಯೊಗೆ ರವಿ ಶಾಸ್ತ್ರೀಯವರ ಕಾಮೆಂಟರಿಯನ್ನು ಹಿನ್ನೆಲೆ ಧ್ವನಿಯಾಗಿ ಬಳಸಿಕೊಳ್ಳಲಾಗಿದೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರ ನೂರು ರನ್ ಹೊಡೆದಾಗ ಸಂಭ್ರಮಿಸುವ ರೀತಿಯಲ್ಲಿ ಈ ಸ್ಕೂಟರ್ ಸವಾರ ಸಂಭ್ರಮಿಸಿದ್ದಾನೆ. ಈ ವೀಡಿಯೊ ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚು ತೆರಿಗೆಯನ್ನು ವಿಧಿಸುತ್ತಿರುವದನ್ನು ಖಂಡಿಸಿ ಪ್ರತಿಪಕ್ಷಗಳು ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿವೆ. ಪ್ರತಿ ಲೀಟರ್ ಪೆಟ್ರೋಲ್‌ನ ಮೂಲ ಬೆಲೆ ರೂ.34.19 ಮಾತ್ರ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಆದರೆ ಈ ಮೂಲ ಬೆಲೆಯ ಮೇಲೆ ಹಲವು ರೀತಿಯ ತೆರಿಗೆಗಳನ್ನು ವಿಧಿಸಲಾಗುತ್ತದೆ. ಇವುಗಳಲ್ಲಿ ಅಬಕಾರಿ ಸುಂಕ, ವ್ಯಾಟ್, ಸರಕು ಸಾಗಣೆ, ಡೀಲರ್ ಕಮಿಷನ್ ಸೇರಿವೆ. ಈ ಎಲ್ಲಾ ತೆರಿಗೆಗಳ ನಂತರ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಲಾಗುತ್ತದೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಪೆಟ್ರೋಲ್, ಡೀಸೆಲ್ ಎರಡನ್ನೂ ಮೂಲ ಬೆಲೆಗಿಂತ ಹಲವು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ 35.35ರಷ್ಟು ಅಬಕಾರಿ ಸುಂಕ ಸಂಗ್ರಹಿಸುತ್ತದೆ.

ಡೀಲರ್ ಕಮಿಷನ್ ಆಗಿ ಪ್ರತಿ ಲೀಟರ್‌ಗೆ ರೂ.3.77 ಶುಲ್ಕ ವಿಧಿಸಲಾಗುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರಗಳೂ ಸಹ ತಮ್ಮ ಪಾಲಿನ ತೆರಿಗೆಯಾಗಿ ಗಮನಾರ್ಹ ಮೊತ್ತವನ್ನು ವಿಧಿಸುತ್ತವೆ.

ಕ್ರಿಕೆಟ್ ಆಟಗಾರನಂತೆ ಉಡುಗೆ ತೊಟ್ಟು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಸ್ಕೂಟರ್ ಸವಾರ

ಈ ಎಲ್ಲಾ ತೆರಿಗೆಗಳ ಪರಿಣಾಮವಾಗಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ದೇಶದ ಕೆಲವು ಭಾಗಗಳಲ್ಲಿ ಡೀಸೆಲ್ ಬೆಲೆಯು ಸಹ ರೂ.100ರ ಗಡಿ ದಾಟಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಕೂಟರ್ ಸವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ.

ವೀಡಿಯೊ ಹಾಗೂ ಚಿತ್ರ ಕೃಪೆ: ಶ್ಯಾಮ್ ರಂಗೀಲಾ

Most Read Articles

Kannada
English summary
Scooterist protests against fuel price hike by wearing cricketer dress. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X