ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಹಾಗಂತ ಅದು ಎಲ್ಲರಿಗೂ ಅನ್ವಯವಾಗುತ್ತೆ ಎಂದುಕೊಂಡಿದ್ರೆ ಅದು ನಮ್ಮ ತಪ್ಪು ಕಲ್ಪನೆ ಅಂತಾ ಅನಿಸುತ್ತೆ. ಇದಕ್ಕೆ ಕಾರಣ, ಹಣ ಮತ್ತು ಅಧಿಕಾರಿಶಾಹಿ ಮುಂದೆ ಎಂತದ್ದೇ ಕಾನೂನು ಉಲ್ಲಂಘನೆ ಆದ್ರು ಅದು ಯಾವುದು ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಪುತ್ರಿಯ ದರ್ಬಾರ್ ನೋಡಿದ್ರೆ ಅರ್ಥವಾಗುತ್ತೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಹೌದು, ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿಯೇ ದೇಶದಲ್ಲಿ ದಿನಂಪ್ರತಿ ನೂರಾರು ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ನಗರಪ್ರದೇಶದಲ್ಲಿ ಹೆಚ್ಚಿದ ಸೂಪರ್ ಕಾರುಗಳ ಕ್ರೇಜ್‌ನಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಹೀಗಿರುವಾಗ ಡಿಸಿಎಂ ಜಿ. ಪರಮೇಶ್ವರ್ ಅವರ ಪುತ್ರಿ ಶನಾ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡುತ್ತಿದ್ದರೂ ಸಹ ಇದನ್ನು ತಡೆಯಬೇಕಾದ ಟ್ರಾಫಿಕ್ ಪೊಲೀಸರು ಗೊತ್ತಿದ್ದರೂ ಗೊತ್ತಿಲ್ಲದಂತೆ ಕೈಕಟ್ಟಿ ಕುಳಿತಿದ್ದಾರೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಇಷ್ಟು ದಿನಗಳ ಕಾಲ ವಿದೇಶದಲ್ಲಿದ್ದ ಡಾ. ಜಿ ಪರಮೇಶ್ವರ್ ಪುತ್ರಿ ಶನಾ ಕೆಲವು ತಿಂಗಳ ಹಿಂದಷ್ಟೇ ಸ್ವದೇಶಕ್ಕೆ ಮರಳಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ವಾಸವಾಗಿರುವ ಶನಾ ತಮ್ಮ ಸೂಪರ್ ಕಾರುಗಳ ಕಲೆಕ್ಷನ್ ಮೂಲಕ ಸಖತ್ ಧೂಳೆಬ್ಬಿಸುತ್ತಿದ್ದಾರೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಆದ್ರೆ ಸೂಪರ್ ಕಾರು ಕಲೆಕ್ಷನ್ ಅವರ ವ್ಯಯಕ್ತಿಕವಾಗಿದ್ದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸುವುದಲ್ಲದೇ ಕಾರಿನ ಪರ್ಫಾಮೆನ್ಸ್ ಪ್ರದರ್ಶನ ಮಾಡುವುದಕ್ಕೆ ಡ್ರ್ಯಾಗ್ ರೇಸ್ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಶನಾ ರ್‍ಯಾಷ್ ಡ್ರೈವ್ ಮಾಡುತ್ತಿರುವುದನ್ನು ಸಾರ್ವಜನಿಕರೇ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೂಡಾ ಈ ವಿಡಿಯೋ ವೈರಲ್ ಆಗಿದೆ. ಆದ್ರೆ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಟ್ರಾಫಿಕ್ ಪೊಲೀಸರು ಮಾತ್ರ ಮೌನವಹಿಸಿದ್ದಾರೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಐಷಾರಾಮಿ ಲೈಫ್​ ಸ್ಟೈಲ್ ಮೂಲಕ ಕಾಲೇಜು ಯುವಕ-ಯುವತಿಯರ ತಲೆ ಗಿರಾ ಗಿರಾ ಅನ್ನೋ ಹಾಗೆ ಇರುವ ಶನಾಗೆ ಸೂಪರ್ ಕಾರುಗಳ ಬಗ್ಗೆ ಎಲ್ಲಿಲ್ಲದ ಕ್ರೇಜ್. ಹೀಗಾಗಿಯೇ ಪರ್ಫಾಮೆನ್ಸ್ ಕಾರುಗಳ ಡ್ರೈವ್ ಮಾಡುವ ಶನಾ ಸಾರ್ವಜನಿಕರಿಗೆ ಆಗಾಗ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಆಡಿ, ಪೋರ್ಷೆ, ಜಾಗ್ವಾರ್ ಸೇರಿದಂತೆ ಹಲವು ಹೈ ಎಂಡ್ ಕಾರುಗಳ ಕಲೆಕ್ಷನ್ ಹೊಂದಿರುವ ಶನಾ, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕಾರ್​ ಡ್ರಿಫ್ಟ್, ಸಡನ್ ಯೂ ಟರ್ನ್, ಸ್ಪೀಡ್ ಡ್ರೈವ್ ಹೀಗೆ ಹತ್ತು ಹಲವು ಸ್ಟಂಟ್​ಗಳನ್ನ ಮಾಡುವುದು ಕಾಮನ್ ಆಗಿದೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಪರ್ಫಾಮೆನ್ಸ್ ಕಾರು ಸ್ಟಂಟ್‌ನಲ್ಲಿ ಡ್ರೈವ್​ ಲೈಕ್ ಶನಾ, ಡ್ರಿಫ್ಟಿಂಗ್ ಕ್ವೀನ್ ಅಂತಾ ಬಿರುದು ಹೊಂದಿರುವ ಶನಾ, 360 ಡಿಗ್ರೀ ಕಾರ್ ಟರ್ನಿಂಗ್, ಸಡನ್ ಯೂ ಟರ್ನ್ ಮಾಡುವುದಲ್ಲೇ ಡೇಂಜರ್​ ಡ್ರೈವಿಂಗ್ ಸ್ಟಂಟ್ ಮಾಡುವುದರಲ್ಲಿ ಎಕ್ಸ್‌ಫರ್ಟ್ ಎಂದ್ರೆ ತಪ್ಪಾಗುವುದಿಲ್ಲ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಆದ್ರೆ ಇದು ಇದು ನಿರ್ದಿಷ್ಟ ಪ್ರದೇಶಗಳಲ್ಲಿ ಸೂಪರ್ ಕಾರ್ ಸ್ಟಂಟ್ ಮಾಡುವುದಾದರೇ ಯಾರಿಗೂ ತೊಂದರೆ ಇರುವುದಿಲ್ಲ. ಅದನ್ನು ಬಿಟ್ಟು ಶೋಕಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ ಸ್ಟಂಟ್ ಮಾಡಿದ್ರೆ ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತೆ ಅನ್ನುವುದನ್ನು ಪೊಲೀಸರಿಗೆ ತಿಳಿಸುವುದು ಹೇಗೆ ಗೊತ್ತಾಗುತ್ತಿಲ್ಲ.

MOST READ: ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಹೀಗಾಗಿ ಜನಸಾಮಾನ್ಯರು ಟ್ರಾಫಿಕ್​ ರೂಲ್ಸ್​ ಮೀರಿದರೆ ಸಾಕು ಫೈನ್​ ಹಾಕುವ ಪೊಲೀಸರು ಡಿಸಿಎಂ ಮಗಳ ವಿಚಾರದಲ್ಲಿ ಮೌನ ವಹಿಸಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಇನ್ನಾದ್ರು ಕ್ರಮ ಕೈಗೊಳ್ಳುತ್ತಾರಾ ಅಂತಾ ಕಾಯ್ದು ನೋಡಬೇಕಿದೆ.

ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಇನ್ನು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ, ಅಪಘಾತ ಪ್ರಕರಣಗಳ ಕಡಿವಾಣಕ್ಕೆ ಡಿಸಿಎಂ ನೇತೃತ್ವದಲ್ಲಿ ಹಲವು ಟ್ರಾಫಿಕ್ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೀಗಿರುವಾಗ ಡಿಸಿಎಂ ಪುತ್ರಿಯೇ ಹೀಗೆ ಮಾಡುತ್ತಿರುವುದು ಮಾತ್ರ ವಿಪರ್ಯಾಸ.

Image Source: Instagram

MOST READ: ಬಿಡುಗಡೆಯಾಗಲಿರುವ ಹೊಸ ಆರ್‌ಎಕ್ಸ್100 ಬೈಕ್ ಹೇಗಿರಲಿವೆ ಗೊತ್ತಾ?

ಬೆಂಗಳೂರಿನ ವಿಠಲ್ ಮಲ್ಯ ರೋಡ್, ಎಂಜಿ ರೋಡ್,ಲ್ಯಾವೆಲ್ಲೆ ರೋಡ್, ಕಸ್ತೂರ ಬಾ ರೋಡ್ ಮತ್ತು ಸೆಂಟ್ ಮಾರ್ಕ್ಸ್ ರೋಡ್‌ಗಳಲ್ಲೇ ಹೆಚ್ಚಾಗಿ ಕಂಡು ಬರುವ ಶನಾ ಹೈ ಎಂಡ್ ಕಾರುಗಳು ದಿನಂಪ್ರತಿ ಒಂದಿಲ್ಲಾ ಒಂದು ರೀತಿಯ ಕಾರ್ ಸ್ಟಂಟ್‌ ನಡೆಯುತ್ತಲೇ ಇರುತ್ತವೆ.

Kannada
English summary
Shana Parmeshwar drifts in Porsche Cayman GT4 On Public Road. Read in Kannada
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more