ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಬಾಲಿವುಡ್ ಸೆಲಬ್ರಿಟಿಗಳು ಆಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐಷಾರಾಮಿ ಎಸ್‍ಯುವಿಯ ಬೆಲೆಯು ಎಕ್ ಶೋರೂಂ ಪ್ರಕಾರ ರೂ.2.28 ಕೋಟಿಯಾಗಿದೆ. ಈ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯು ಹಾಲಿವುಡ್ ಮತ್ತು ಬಾಲಿವುಡ್‌ನ ಸೆಲೆಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಭಾರತದಲ್ಲಿ ರೋಹಿತ್ ಶೆಟ್ಟಿ, ಹಾರ್ದಿಕ್ ಪಾಂಡ್ಯ, ಸಾರಾ ಅಲಿ ಖಾನ್, ಜಿಮ್ಮಿ ಶೆರ್ಗಿಲ್ ಮತ್ತು ಇತರ ಅನೇಕ ಸೆಲಬ್ರಿಟಿಗಳು ಈ ಎಸ್‍ಯುವಿಯನ್ನು ಹೊಂದಿದ್ದಾರೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

CS 12 Vlogs ಅಪ್‌ಲೋಡ್ ಮಾಡಿರುವ ಯೂಟ್ಯೂಬ್ YouTube ವೀಡಿಯೊದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಹೊಚ್ಚ ಹೊಸ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ ನಾವು ನೋಡಬಹುದು. ಕುಂದ್ರಾ ಅವರ ಕಂಪನಿಯು ಜಿ63 ಅನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

RTO ಪರಿವಾಹನ್ ಅಪ್ಲಿಕೇಶನ್ ಪ್ರಕಾರ, ಹೊಸ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯನ್ನು 2022ರ ಆಗಸ್ಟ್ ತಿಂಗಳಿನಲ್ಲಿ ಖರೀದಿಸಲಾಗಿದೆ. ಜಿ63 ವಿಶಿಷ್ಟವಾದ ರೋಸ್ ಗೋಲ್ಡ್ ಬಣ್ಣವನ್ನು ಹೊಂದಿದೆ ಎಂದು ಗಮನಿಸಬೇಕಾದ ಅಂಶವಾಗಿದೆ, ಇದು ಅದರ ವರ್ಗದಲ್ಲಿ ಇತರ ಮಾದರಿಯಿಂದ ಪ್ರತ್ಯೇಕಿಸುತ್ತದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಇನ್ನು ಮರ್ಸಿಡಿಸ್ ಬೆಂಝ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅವರು ಇದೀಗ ಅನೇಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮರ್ಸಿಡಿಸ್ ಬೆಂಝ್ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಜಿ-ವ್ಯಾಗನ್ ಕೂಡ ಒಂದಾಗಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಈ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಎಸ್‍ಯುವಿ ಅನೇಕ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಕಂಪನಿಯು ಈ ಎಸ್‍ಯುವಿಯ ವಿನ್ಯಾಸವನ್ನು ಹೆಚ್ಚು ಬದಲಾಯಿಸಲಿಲ್ಲ. ಇದು ರೆಟ್ರೋದಂತೆ ಕಾಣುತ್ತದೆ ಆದರೆ ಪ್ರೀಮಿಯಂ ಲುಕ್ ಅನ್ನು ಒಳಗೊಂಡಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಈ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 577 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಇನ್ನು ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯು ಸಮರ್ಥ ಆಫ್-ರೋಡ್ ಎಸ್‍ಯುವಿಯಾಗಿದೆ. ಆಟೋ ತಯಾರಕರ 4 ಮ್ಯಾಟಿಕ್ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಮರ್ಸಿಡಿಸ್-ಎಎಂಜಿ ಜಿ63 ಎಸ್‌ಯುವಿ ಹೊರತಾಗಿ, ಜಿ-ಕ್ಲಾಸ್ ಜಿ350ಡಿಯ ಎಂಬ ಎಸ್‍ಯುವಿಯು ಮಾರಾಟವಾಗುತ್ತಿದೆ. ಇದರಲ್ಲಿ ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 281 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಈ 350 ಡಿ ಎಸ್‍‍ಯು‍ವಿ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ350ಡಿ ಎಸ್‍‍ಯು‍ವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ,

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಇನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಜನ್ಮದಿನದಂದು ದುಬಾರಿ ಬೆಲೆಯ ಐಷಾರಾಮಿ ವ್ಯಾನಿಟಿ ವ್ಯಾನ್ ಅನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್ ನಟಿಯರಾದ ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಬಳಿಕ ಇದೀಗ ಐಷಾರಾಮಿ ಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್ ಖರೀದಿ ಮಾಡಿದ ಬಾಲಿವುಡ್'ನ 8ನೇ ನಟಿ ಇವರಾಗಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರು ವ್ಯಾನಿಟಿ ವ್ಯಾನ್ ಅನ್ನು ತಮಗೆ ಬೇಕಾದಂತೆ ಕಸ್ಟಮೈಸ್ ಮಾಡಿಸಿಕೊಂಡಿದ್ದಾರೆ.

ಬಹುಕೋಟಿ ಬೆಲೆಯ ಮರ್ಸಿಡಿಸ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಐಷಾರಾಮಿ ಮತ್ತು ಫಿಟ್ನೆಸ್ನ ಎರಡು ಅಂಶಗಳನ್ನು ಕೇಂದ್ರೀಕರಿಸುತ್ತದೆ. ಹೊರಭಾಗದಲ್ಲಿ, ವ್ಯಾನಿಟಿ ವ್ಯಾನ್ ಅನ್ನು ಕಪ್ಪು ಬಣ್ಣವನ್ನು ಹೊಂದಿದೆ, ವ್ಯಾನ್‌ನ ಹೆಚ್ಚು ಮರುಹೊಂದಿಸಲಾದ ಮುಂಭಾಗದ ಪ್ರೊಫೈಲ್ ಸ್ಲಿಮ್ ಮತ್ತು ಕೋನೀಯ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ ಮತ್ತು ಮುಂಭಾಗದ ಬಂಪರ್‌ನ ಮೇಲೆ ಮಧ್ಯದಲ್ಲಿ ಕ್ವಾಡ್ ದುಂಡಾದ ಹ್ಯಾಲೊಜೆನ್ ಲ್ಯಾಂಪ್ ಗಳನ್ನು ಹೊಂದಿದೆ.

Most Read Articles

Kannada
English summary
Shilpa shetty spotted in brand new rose gold mercedes amg g63 suv features details
Story first published: Friday, September 23, 2022, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X