ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಭಾರತೀಯ ಮೂಲದ ಈ ಉದ್ಯಮಿ ಸದ್ಯ ಯುನೈಟೆಡ್ ಕಿಂಗ್‍ಡಮ್‌ನಲ್ಲಿ ಬಿಲಿಯನೇರ್. ಆದರೂ ಭಾರತೀಯ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಇವರು ಹಲವು ಕಾರಣಗಳಿಂದಾಗಿ ಯುಕೆನಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವವನ್ನೇ ತಮ್ಮತ್ತ ನೋಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುವ ಐಷಾರಾಮಿ ಕಾರುಗಳ ಸಂಗ್ರಹ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಹೌದು, ಐಷಾರಾಮಿ ಕಾರುಗಳನ್ನು ಸಂಗ್ರಹಿಸುವುದು ಉದ್ಯಮಿಗಳಿಗೆ ಹೊಸತು ಅಲ್ಲವೇ ಅಲ್ಲ. ಆದ್ರೆ ಕೆಲವು ಉದ್ಯಮಿಗಳು ಲಗ್ಷುರಿ ಕಾರುಗಳ ಸಂಗ್ರಹದಲ್ಲೂ ಸ್ಪೆಷಾಲಿಟಿ ಹೊಂದಿದ್ದಾರೆ. ಇದಕ್ಕೆ ಯುಕೆಯಲ್ಲಿರುವ ಭಾರತೀಯ ಮೂಲದ ಉದ್ಯಮಿ ರುಬೇನ್ ಸಿಂಗ್ ಅವರೇ ಬೆಸ್ಟ್ ಎಕ್ಸಾಪಲ್ ಅಂದ್ರೆ ನಿಮಗೆ ಅಚ್ಚರಿಯಾಗದೇ ಇರಲಾರದು. ಯಾಕೆಂದ್ರೆ ಇವರಿಗೆ ರೋಲ್ಸ್ ರಾಯ್ಸ್ ಖರೀದಿಸುವುದು ಅಂದ್ರೆ ಬಟ್ಟೆ ಖರೀದಿ ಮಾಡಿದಷ್ಟೇ ಸಲೀಸು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ನಾವು ಇಷ್ಟೇಲ್ಲಾ ಹೇಳುವುದಕ್ಕೂ ಹಲವಾರು ಕಾರಣಗಳಿವೆ. ಇದಕ್ಕೆ ಕಾರಣ, ಉದ್ಯಮಿ ರುಬೇನ್ ಸಿಂಗ್ ಅವರು ವಾರದಲ್ಲಿ 7 ದಿನಗಳ ಕಾಲ ಬಳಸುವ ವಿವಿಧ ಬಣ್ಣದ ಟರ್ಬನ್‌ಗಳಿಗೆ ತಕ್ಕಂತೆ ಅದೇ ಬಣ್ಣದ ರೋಲ್ಸ್ ರಾಯ್ಸ್ ಕಾರ್‌ನ್ನು ಸಹ ಬಳಕೆ ಮಾಡುತ್ತಾರೆ ಎನ್ನುವುದೇ ಇವರ ಸ್ಪೆಷಲ್.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಹಾಗಾದ್ರೆ ಉದ್ಯಮಿ ರುಬೇನ್ ಸಿಂಗ್ ಬಳಿ ಎಷ್ಟು ಕಾರುಗಳಿವೆ? ಅಷ್ಟಕ್ಕೂ ರುಬೇನ್ ಸಿಂಗ್ ಯಾವ ಉದ್ಯಮ ನಡೆಸುತ್ತಿದ್ದಾರೆ? ಎನ್ನುವ ಹತ್ತು ಹಲವು ಪ್ರಶ್ನೆಗಳನ್ನು ನಮ್ಮನ್ನ ಕಾಡದೇ ಇರಲಾರದು. ಹೀಗಾಗಿಯೇ ನಾವು ಕೂಡಾ ರುಬೇನ್ ಸಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತದಕಾಡಿದಾಗ ಲಗ್ಷುರಿ ಕಾರುಗಳ ಹೊಸ ಲೋಕವೇ ಪರಿಚಯವಾಯ್ತು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಟರ್ಬನ್ ಬಣ್ಣಕ್ಕೆ ತಕ್ಕಂತೆ ಅದೇ ಬಣ್ಣದ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಕೆ ಮಾಡುವ ಉದ್ಯಮಿ ರುಬೇನ್ ಸಿಂಗ್ 2 ವರ್ಷಗಳ ಹಿಂದೆಯೇ ಬರೋಬ್ಬರಿ 7 ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ್ದು, ವಾರಪೂರ್ತಿ ಟರ್ಬನ್ ಬಣ್ಣಕ್ಕೆ ಹೋಲುವ ಅದೇ ಬಣ್ಣದ ಕಾರಗಳನ್ನು ಬಳಕೆ ಮಾಡುತ್ತಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಇದಷ್ಟೇ ಅಲ್ಲದೇ ಇದೀಗ ಹೊಸದಾಗಿ ಬಿಡುಗಡೆಯಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಬ್ರಾಂಡ್‌ನ ಮೂರು ಹೊಸ ಕಾರುಗಳನ್ನುಸಹ ಖರೀದಿಸಿದ್ದು, ತಮ್ಮ ನೆಚ್ಚಿನ ಟರ್ಬನ್ ಬಣ್ಣಕ್ಕೆ ತಕ್ಕಂತೆ ಹೊಸ ಕಾರು ಖರೀದಿಗಾಗಿ ಬರೋಬ್ಬರಿ 27 ಕೋಟಿ ಖರ್ಚು ಮಾಡಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಲಿನಿಯನ್ ಕಾರು ಕಳೆದ ಡಿಸೆಂಬರ್ 3ರಂದು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಮತ್ತು ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಕಾರು ಖರೀದಿ ಭರಾಟೆ ಜೋರಾಗಿದೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಆರ್ಕಿಟೆಕ್ಚರ್ ಆಫ್ ಲಗ್ಷುರಿ ಎನ್ನುವ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಲಿನಿಯನ್ ಕಾರು ಉತ್ಪಾದನೆಗೊಂಡಿದ್ದು, ಫ್ಯಾಂಟಮ್ VIII ಕಾರಿಗಿಂತಲೂ ಆಕರ್ಷಕ ನೋಟ ಹೊಂದಿರುವ ಹೊಸ ಕಾರು ಖರೀದಿಗಾಗಿ ಈಗಾಗಲೇ ಸಾವಿರಾರು ಉದ್ಯಮಿಗಳು ಮತ್ತು ರಾಜಕಾರಣಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ವಿಶ್ವದರ್ಜೆ ಐಷಾರಾಮಿ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಲಿನಿಯನ್ ಕಾರಿನ ಬೆಲೆಯು ಭಾರತದಲ್ಲಿ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 6.95 ಕೋಟಿ ಬೆಲೆ ಹೊಂದಿದ್ದು, ಇದು ಆನ್ ರೋಡ್ ಬೆಲೆ ಪ್ರಕಾರ ಇದು ರೂ. 8.50 ಕೋಟಿಯಿಂದ ರೂ.9 ಕೋಟಿ ಬೆಲೆ ಪಡೆದುಕೊಳ್ಳಲಿವೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಕಲಿನಿಯನ್ ಕಾರುಗಳು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಬಲಿಷ್ಠ ಎಂಜಿನ್ ಜೊತೆಗೆ ಐಷಾರಾಮಿ ಸೌಲಭ್ಯಗಳನ್ನು ಕಲಿನಿಯನ್ ಕಾರು ಖರೀದಿಗೆ ಭಾರತದಲ್ಲೂ ನೂರಾರು ಉದ್ಯಮಿಗಳು ಬುಕ್ಕಿಂಗ್ ಸಲ್ಲಿಸಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಅದರಲ್ಲೂ ರೋಲ್ಸ್ ರಾಯ್ಸ್ ನಿರ್ಮಾಣದ ಫ್ಯಾಂಟಮ್ ಮತ್ತು ಗೋಸ್ಟ್ ಕಾರುಗಳ ನೆಚ್ಚಿನ ಅಭಿಮಾನಿಯಾಗಿರುವ ರುಬೇನ್ ಸಿಂಗ್ ಅವರು ಹೊಸ ಬ್ರಾಂಡ್ ಕಲಿನಿಯನ್ ಕಾರುಗಳನ್ನು ಸಹ ಖರೀದಿಸಿದ್ದು, ಈ ರೋಲ್ಸ್ ರಾಯ್ಸ್ ಕಾರುಗಳ ಖರೀದಿ ಹಿಂದೆ ಒಂದು ದೊಡ್ಡ ಕಥೆಯೇ ಇದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಕಾರು ಸಂಗ್ರಹ ಹಿಂದಿದೆ ಸ್ವೀಟ್ ರಿವೆಂಜ್..!!

ಹೌದು, ಉದ್ಯಮಿ ರುಬೇನ್ ಸಿಂಗ್ ಐಷಾರಾಮಿ ಕಾರುಗಳ ಸಂಗ್ರಹದ ಹಿಂದೆ ಒಂದು ರೋಚಕ ಕಥೆಯಿದೆ. ಒಂದು ದಿನ ಬ್ರಿಟನ್ ಮೂಲದ ಉದ್ಯಮಿಯೊಬ್ಬರು ರುಬೇನ್ ಸಿಂಗ್ ಟರ್ಬನ್ ಕುರಿತು ಮಾಡಿದ ಅಪಮಾನವೇ ಇಂತದೊಂದು ಕಾರು ಸಂಗ್ರಹಕ್ಕೆ ಕಾರಣ ಅಂದ್ರೆ ನಾವು ನಂಬಲೇಬೇಕು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಟರ್ಬನ್ ಬಗ್ಗೆ ಅಪಹಾಸ್ಯ ಮಾಡಿದ್ದ ಬ್ರಿಟನ್ ಮೂಲದ ಉದ್ಯಮಿಯೊಬ್ಬನು ರುಬೇನ್ ಸಿಂಗ್ ಟರ್ಬನ್ ಅನ್ನು ಬ್ಯಾಂಡೆಜ್‌ಗೆ ಹೋಲಿಕೆ ಮಾಡಿ ನಗಾಡಿದ್ದನಂತೆ. ನಂತರ ನೀನು ವಾರಪೂರ್ತಿ ಹೊಸ ಹೊಸ ಬಣ್ಣದ ಕಾರುಗಳಲ್ಲಿ ಬರುವ ಸಾಮರ್ಥ್ಯ ಇದೆಯೇ ಎಂದು ಸವಾಲು ಹಾಕಿದ್ದನಂತೆ.

MOST READ: ವೃತ್ತಿಯಲ್ಲಿ ಕ್ಷೌರಿಕ- ಆದ್ರೆ ಇವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಇದನ್ನೇ ಸವಾಲಾಗಿ ಸ್ವಿಕರಿಸಿದ ರುಬೇನ್ ಸಿಂಗ್ ಅವರು ಕೆಲವೇ ದಿನಗಳಲ್ಲಿ ಯುಕೆನಲ್ಲೇ ಜನಪ್ರಿಯ 'ಆಲ್ ದ ಡೇ ಪಿಎ' ಕಂಪನಿಯನ್ನು ಹುಟ್ಟುಹಾಕಿದ್ದಲ್ಲದೇ ಬಿಲಿಯನೇರ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ಸದ್ಯ ಬ್ರಿಟಿಷ್ ಬಿಲ್‌ ಗೇಟ್ಸ್ ಎಂದೇ ಜನಪ್ರಿಯತೆ ಹೊಂದಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಈ ಮೂಲಕ ನೂರಾರು ಕೋಟಿ ಮೌಲ್ಯದ ವಿವಿಧ ಬಣ್ಣದ ರೋಲ್ಸ್ ರಾಯ್ಸ್ ಕಾರುಗಳ ಸಂಗ್ರಹವನ್ನು ಹೊಂದಿರುವ ಉದ್ಯಮಿ ರುಬೇನ್ ಸಿಂಗ್, ತಮ್ಮಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅದೆಷ್ಟೋ ಜನಕ್ಕೆ ಸ್ಪೂರ್ತಿದಾಯಕ ವ್ಯಕ್ತಿ ಆಗಿದ್ದಾರೆ ಎನ್ನಬಹುದು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಸದ್ಯ ರುಬೇನ್ ಸಿಂಗ್ ಹೊಂದಿರುವ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಕೇವಲ ರೋಲ್ಸ್ ರಾಯ್ಸ್ ಕಾರುಗಳು ಮಾತ್ರವಲ್ಲದೇ ಇನ್ನು ಹಲವು ಐಷಾರಾಮಿ ಕಾರುಗಳಿದ್ದು, ಸಂದರ್ಭಕ್ಕೆ ತಕ್ಕಂತೆ ಮತ್ತು ಟರ್ಬನ್ ಬಣ್ಣಕ್ಕೆ ಮ್ಯಾಚ್ ಆಗುವಂತೆ ವಿವಿಧ ಕಾರುಗಳಲ್ಲಿ ಕಚೇರಿಗೆ ತೆರಳುತ್ತಾರೆ.

MOST READ: ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ..!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಇನ್ನೊಂದು ವಿಶೇಷ ಅಂದರೇ ರುಬೇನ್ ಸಿಂಗ್‌ಗೆ ಸವಾಲು ಹಾಕಿದ್ದ ಬ್ರಿಟಿಷ್ ಉದ್ಯಮಿಯು ನನ್ನ ಸವಾಲಿನಲ್ಲಿ ವಿಜಯ ಸಾಧಿಸಿದರೇ ಇಂತಿಷ್ಟು ಹಣ ನೀಡುವುದಾಗಿ ಹೇಳಿದ್ದನಂತೆ. ಹೀಗಾಗಿ ಸವಾಲಿನಿಂದ ಬಂದ ಹಣವನ್ನು ತನ್ನ ಸ್ವಂತಕ್ಕೆ ಬಳಸದ ರುಬೇನ್ ಸಿಂಗ್ ಅವರು ಬಡ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ಇನ್ನು ಕಾರು ಬಿಡುಗಡೆಗೂ ಮುನ್ನವೇ ಜಾಗತಿಕವಾಗಿ ಕುತೂಹಲ ಹಾಕಿದ್ದ ಕಲಿನಿಯನ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭವಾದ ಮೊದಲ ದಿನವೇ ಬುಕ್ ಮಾಡಿದ್ದ ಭಾರತೀಯ ಮೂಲದ ಮಹಿಳೆ ಅಭಿನಿ ಸೋಹಾನ್ ರಾಯ್ ಅವರು ಸಹ ಇದೀಗ ಹೊಸ ಕಲಿನಿಯನ್ ಕಾರು ಖರೀದಿಸುವ ಮೂಲಕ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

ದುಬೈನಲ್ಲಿ ನೆಲೆಸಿರುವ ಮುಂಬೈ ಮೂಲದ ಅಭಿನಿ ಸೋಹಾನ್ ರಾಯ್ ಅವರು ಅರೈಸ್ ಗ್ರೂಪ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅಭಿನಿ ಸೋಹಾನ್ ಅವರ ಪತಿಯಿಂದ ಈ ಗಿಫ್ಟ್ ಸಿಕ್ಕಿದೆ ಎನ್ನಲಾಗಿದೆ.

Source: Cartoq

Most Read Articles

Kannada
English summary
Sardar Style Brilliance Sees Sikh Billionaire Colour Match His Turbans With His Rolls Royces. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X