ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಸಿಂಗಾಪುರ್ ಪೊಲೀಸರು ಇತ್ತೀಚೆಗೆ ಹ್ಯುಂಡೈ ಟಕ್ಸನ್ ಎಸ್‌ಯುವಿಯನ್ನು ತಮ್ಮ ಪಡೆಗೆ ಸೇರಿಸಿ ಕೊಂಡಿದ್ದಾರೆ. ಈ ಹ್ಯುಂಡೈ ಟಕ್ಸನ್ ಎಸ್‌ಯುವಿಯನ್ನು ಪೊಲೀಸರ ಬಳಕೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹ್ಯುಂಡೈ ಟಕ್ಸನ್ ಕಾರುಗಳು ಅನೇಕ ಹೊಸ ಎಕ್ವಿಪ್ ಮೆಂಟ್ ಹಾಗೂ ಸುರಕ್ಷತಾ ಫೀಚರ್ ಗಳನ್ನು ಹೊಂದಿವೆ.

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಸಿಂಗಾಪುರ್ ಪೊಲೀಸರು 300 ಹ್ಯುಂಡೈ ಟಕ್ಸನ್ ಎಸ್‌ಯುವಿಗಳನ್ನು ಸೇರ್ಪಡೆಗೊಳಿಸಿದ್ದಾರೆ. 2024ರ ವೇಳೆಗೆ ಸಿಂಗಾಪುರ್ ಪೊಲೀಸರು ತಮ್ಮಲ್ಲಿರುವ ಎಲ್ಲಾ ವಾಹನಗಳನ್ನು ಹ್ಯುಂಡೈ ಟಕ್ಸನ್‌ನೊಂದಿಗೆ ಬದಲಾಯಿಸಲಿದ್ದಾರೆ. ಈ ಎಸ್‌ಯುವಿಗಳು ಹಲವಾರು ಸುರಕ್ಷತಾ ಸಾಧನಗಳು ಹಾಗೂ ಟೆಕ್ನಾಲಜಿಯನ್ನು ಹೊಂದಿವೆ. ಈ ಕಾರುಗಳಲ್ಲಿ, ಇಮೇಜ್ ರೆಕಗ್ನಿಷನ್ ಆಧಾರಿತ ಸ್ಮಾರ್ಟ್ ನಂಬರ್ ಪ್ಲೇಟ್ ಸ್ಕ್ಯಾನಿಂಗ್ ಸಾಧನವನ್ನು ಸ್ಥಾಪಿಸಲಾಗಿದೆ. ಇದರಿಂದ ಚಾಲಕನಿಗೆ ಮುಂಭಾಗದಿಂದ ಬರುವ ವಾಹನಗಳ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗಲಿದೆ.

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಇಮೇಜ್ ರೆಕಗ್ನಿಷನ್ ಟೆಕ್ನಾಲಜಿಯು ವಾಹನಗಳ ಸಂಖ್ಯೆಯನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೇ ವಾಹನದ ಬಣ್ಣ, ವಿನ್ಯಾಸ ಹಾಗೂ ಮಾದರಿಗಳನ್ನು ಸಹ ಪತ್ತೆ ಹಚ್ಚುತ್ತದೆ. ಈ ಎಸ್‌ಯುವಿಯಲ್ಲಿರುವ 360 ಡಿಗ್ರಿ ತಿರುಗುವ ಎಕ್ಸ್ ಟರ್ನಲ್ ಕ್ಯಾಮೆರಾಗಳು ಲೈವ್ ರೆಕಾರ್ಡಿಂಗ್ ಮಾಡಬಲ್ಲವು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಈ ಕ್ಯಾಮೆರಾವು ಪೊಲೀಸ್ ಪ್ರಧಾನ ಕಚೇರಿಗೆ ಲೈವ್ ಫೋಟೋಗಳನ್ನು ಹಾಗೂ ವೀಡಿಯೊಗಳನ್ನು ತಲುಪಿಸುತ್ತದೆ. ಇದರಿಂದ ಕೇಂದ್ರ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳಿಗೆ ಗಸ್ತು ತಿರುಗುವ ವಾಹನಗಳಿಗೆ ನಿರ್ದೇಶನ ನೀಡಲು ಸಾಧ್ಯವಾಗಲಿದೆ.

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಇಮೇಜ್ ರೆಕಗ್ನಿಷನ್ ಸಿಸ್ಟಂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಆಧಾರವಾಗಿದೆ. ಈ ಸಿಸ್ಟಂ ಮೂಲಕ ಮುಖಗಳನ್ನು ಸ್ಕ್ಯಾನ್ ಮಾಡುವುದಿಲ್ಲ ಬದಲಿಗೆ ನಂಬರ್ ಪ್ಲೇಟ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡಲಾಗುತ್ತದೆ. ಮಾನಿಟರಿಂಗ್ ಕೆಲಸವನ್ನು ಸುಲಭಗೊಳಿಸಲು ಈ ತಂತ್ರವನ್ನು ಬಳಸಲಾಗುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಇದರಿಂದ ವಾಹನಗಳ ಮೇಲೆ ಮೊದಲೇ ಯಾವುದೇ ಅಪರಾಧ ಅಥವಾ ಸಂಚಾರ ನಿಯಮಗಳ ಉಲ್ಲಂಘನೆ ದಾಖಲಿಸಲಾಗಿದ್ದರೆ ಅವುಗಳನ್ನು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ.

ಪೊಲೀಸ್ ಪಡೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ

ಈ ಎಸ್‌ಯುವಿಯ ಇಂಟಿರಿಯರ್ ಅನ್ನು ಸಹ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸೀಟುಗಳನ್ನು ದೂರದ ಪ್ರಯಾಣಕ್ಕಾಗಿ ಸಜ್ಜುಗೊಳಿಸಲಾಗಿದೆ. ಹೆಲ್ಮೆಟ್, ಗನ್ ಹಾಗೂ ಲೇಸರ್‌ ಹೊಂದಿರುವ ಪೊಲೀಸ್ ಸಿಬ್ಬಂದಿ ಆರಾಮವಾಗಿ ಹಲವು ಗಂಟೆಗಳ ಕಾಲ ಪ್ರಯಾಣಿಸುವಂತಹ ಸೀಟುಗಳನ್ನು ಒದಗಿಸಲಾಗಿದೆ.

Most Read Articles

Kannada
English summary
Singapore police adds customized Hyundai Tucson suv to its fleet. Read in Kannada.
Story first published: Tuesday, August 4, 2020, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X