ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಹೊಸ ವಾಹನಗಳ ಖರೀದಿ ನಂತರ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಕಾಮನ್. ಈ ವೇಳೆ ಬಹುತೇಕ ವಾಹನ ಮಾಲೀಕರು ಗುಣಮಟ್ಟದ ಸರ್ವಿಸ್ ಪಡೆಯುವ ಉದ್ದೇಶದಿಂದ ಹಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಧಿಕೃತ ಡೀಲರ್ಸ್ ಬಳಿಯೇ ಸೇವೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಡೀಲರ್ಸ್‌ಗಳು ವಾಹನ ಮಾಲೀಕರನ್ನು ಹೇಗೆಲ್ಲಾ ಸುಲಿಗೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಹೌದು, ಕಾರು ಮಾಲೀಕರೊಬ್ಬರು ರೀಪೆರಿಗೆ ಅಂತಾ ತಮ್ಮ ಸ್ಕೋಡಾ ಲೌರಾ ಐಷಾರಾಮಿ ಸೆಡಾನ್ ಕಾರನ್ನು ಅಧಿಕೃತ ಡೀಲರ್ಸ್ ಬಳಿ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಕಾರು ರೀಪೆರಿ ಮೊತ್ತವು ಬರೋಬ್ಬರಿ 3 ಲಕ್ಷ ಆಗಬಹುದು ಹೇಳಲಾಗಿತ್ತು. ಆದ್ರೆ ರೀಪೆರಿ ಬಂದಿದ್ದ ಕಾರನ್ನು ಅಧಿಕೃತ ಡೀಲರ್ಸ್ ಬಳಿ ರೀಪೆರಿ ಮಾಡಿಸದೇ ಲೋಕಲ್ ಗ್ಯಾರೇಜ್‌ನಲ್ಲಿ ರೀಪೆರಿ ಮಾಡಿಸಿದಾಗ ಕೇವಲ ರೂ. 1 ಸಾವಿರ ವೆಚ್ಚದಲ್ಲಿ ಕಾರಿನಲ್ಲಿ ಕಾಣಿಸಿಕೊಂಡಿದ್ದ ಫ್ಯೂಲ್ ಟ್ಯಾಂಕ್ ಸಮಸ್ಯೆ ಬಗೆಹರಿದಿದೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಸ್ಕೋಡಾ ಕಾರು ಮಾಲೀಕನಿಗೆ ಲೋಕಲ್ ಗ್ಯಾರೇಜ್ ಸಿಬ್ಬಂದಿಯು ಕೇವಲ 10 ನಿಮಿಷದಲ್ಲಿ ರೂ. 1 ಸಾವಿರ ಬಿಲ್‌ನೊಂದಿಗೆ ಸಮಸ್ಯೆಯನ್ನು ಬಗೆಹರಿಸಿದ್ದು, ಇದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ಲಕ್ಷ ಲಕ್ಷ ಬಿಲ್ ಮಾಡಲು ಮುಂದಾಗಿದ್ದ ಅಧಿಕೃತ ಡೀಲರ್ಸ್ ಅಸಲಿಯತ್ತು ಇದೀಗ ಬಯಲಾಗಿದೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಎಂಜಿನ್ ಸ್ಟಾರ್ಟ್ ಸಮಸ್ಯೆ ಎದುರಿಸುತ್ತಿದ್ದ ಸ್ಕೋಡಾ ಲೌರಾ ಕಾರನ್ನು ಅಧಿಕೃತ ಡೀಲರ್ಸ್ ಬಳಿ ರೀಪೆರಿಗಾಗಿ ಬಿಡಲಾಗಿತ್ತು. ಈ ವೇಳೆ ಕಾರು ಪರೀಶಿಲಿಸಿದ್ದ ಅಧಿಕೃತ ಡೀಲರ್ಸ್ ಸಿಬ್ಬಂದಿಯು ಸಮಸ್ಯೆಯ ಪರಿಹಾರಕ್ಕಾಗಿ ಕೆಲವು ಬಿಡಿಬಿಭಾಗಗಳನ್ನು ಬದಲಿಸುವ ಅವಶ್ಯಕತೆಯಿದೆ ಇರುವುದಾಗಿ ಮಾಲೀಕನಿಗೆ ಮಾಹಿತಿ ನೀಡಿದ್ದರು.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಈ ವೇಳೆ ಬೀಡಿಭಾಗಗಳ ಬದಲಾವಣೆಗೆ ಎಷ್ಟು ಖರ್ಚಾಗಬಹುದು ಎಂದು ಕೇಳಿದ್ದ ಕಾರು ಮಾಲೀಕನಿಗೆ ಅಧಿಕೃತ ಡೀಲರ್ಸ್ ಕಡೆಯಿಂದ ಬಂದ ಉತ್ತರ ಶಾಕ್ ಕೊಟ್ಟಿತ್ತು. ಕೆಲವು ಬೀಡಿಭಾಗಗಳು ಮತ್ತು ಸರ್ವಿಸ್ ಚಾರ್ಜ್ ಸೇರಿ ಜಸ್ಟ್ ರೂ. 3 ಲಕ್ಷ ಆಗಬಹುದು ಎಂದಿದ್ದರು.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಆದ್ರೆ ಡೀಲರ್ಸ್‌ ಮಾತು ಕಾರು ಮಾಲೀಕನ ಅನುಮಾನಕ್ಕೆ ಕಾರಣವಾಗಿತ್ತು. ಕೆಲವ ಸ್ಟಾರ್ಟ್ ತೊಂದರೆ ಅನುಭವಿಸುತ್ತಿರುವ ಕಾರು ರೀಪೆರಿ ರೂ.3 ಲಕ್ಷ ಬಿಲ್ ಆಗಬಹುದು ಎಂದಾಗ ಸೀದಾ ಲೋಕಲ್ ಗ್ಯಾರೇಜ್‌ಗೆ ಭೇಟಿ ಆಗಿರುವ ಸಮಸ್ಯೆ ಹೇಳಿಕೊಂಡಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಆಗ ತಕ್ಷಣವೇ ಅಧಿಕೃತ ಡೀಲರ್ಸ್ ಬಳಿ ಇದ್ದ ಕಾರನ್ನು ಲೋಕಲ್ ಗ್ಯಾರೇಜ್‌ಗೆ ತೆಗೆದುಕೊಂಡ ಬಂದ ಮಾಲೀಕನಿಗೆ ಅಚ್ಚರಿ ಎಂಬಂತೆ 10 ನಿಮಿಷದಲ್ಲಿ ಕಾರನ್ನು ರೀಪೆರಿ ಮಾಡಿದ್ದಲ್ಲದೇ ಕೇವಲ ಒಂದು ಸಾವಿರ ಬಿಲ್ ಮಾಡಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಕಾರಿನಲ್ಲಿ ಸ್ಟಾರ್ಟ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಾಲೀಕನಿಂದ ಲಕ್ಷ ಲಕ್ಷ ವಸೂಲಿ ಮಾಡಲು ಮುಂದಾಗಿದ್ದ ಅಧಿಕೃತ ಡೀಲರ್ಸ್ ಮಹಾಶಯನು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದ ಫ್ಯೂಲ್ ಟ್ಯಾಂಕ್ ಸಂಪರ್ಕವನ್ನು ಸಂಪೂರ್ಣ ಬದಲಾಯಿಸಲು ಮುಂದಾಗಿದ್ದ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಈ ವೇಳೆ ಅಧಿಕೃತ ಡೀಲರ್ಸ್ ಮಾತಿಗೆ ಮರಳಾಗದ ಕಾರು ಮಾಲೀಕನು ಲೋಕಲ್ ಗ್ಯಾರೇಜ್‌ನಲ್ಲಿ ರೀಪೆರಿ ಮಾಡಿಸುವ ಮೂಲಕ ಅಧಿಕೃತ ಡೀಲರ್ಸ್ ಬಂಡವಾಳವನ್ನು ಬಯಲಿಗೆ ಎಳೆದಿದ್ದು, ಪ್ರತಿಯೊಬ್ಬ ಕಾರು ಮಾಲೀಕರು ಸಹ ಇಂತವರ ಬಗ್ಗೆ ಎಚ್ಚರವಾಗಿರುವಂತೆ ಮನವಿ ಮಾಡಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಡೀಲರ್ಸ್ ಮಟ್ಟದಲ್ಲಿ ಗ್ರಾಹಕರಿಗೆ ಮೋಸವಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಪ್ರತಿಷ್ಠಿತ ಕಾರು ಡೀಲರ್ಸ್‌ಗಳು ಮೋಸದ ವ್ಯವಹಾರದ ಮೂಲಕ ಲಕ್ಷ ಲಕ್ಷ ಬಿಲ್ ಮಾಡಿ ಸಿಕ್ಕಿಬಿದ್ದಿರುವ ಹಲವಾರು ಪ್ರಕರಣಗಳು ಬಯಲಿಗೆ ಬಂದಿದ್ದನ್ನು ಡ್ರೈವ್‌ಸ್ಪಾರ್ಕ್ ವರದಿ ಮಾಡಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಯಾವುದೇ ಕಾರಣಕ್ಕೂ ನೀವು ಕೂಡಾ ಅಧಿಕೃತ ಡೀಲರ್ಸ್ ಬಳಿ ಸರ್ವಿಸ್ ಮಾಡಿಸುವಾಗ ಇಂತಹ ವಿಚಾರಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲವಾದ್ರೆ ಒಂದಕ್ಕೆ ಹತ್ತು ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು.

Source: Team BHP

Most Read Articles

Kannada
English summary
Skoda Service Center Quotes Rs 3 Lakh Estimate For Car Repair, But Owner Gets It Just Thousand Rupees in Outside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more