ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ನಿದ್ದೆ ಮಂಪರಿನಲ್ಲಿ ವಾಹನ ಚಾಲನೆ ಮಾಡುವುದರಿಂದ ವಾಹನ ಚಾಲನೆ ಮಾಡುವವರ ಜೀವಕ್ಕೆ ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುವ ಇತರರ ಜೀವಕ್ಕೂ ಅಪಾಯ ಉಂಟಾಗುತ್ತದೆ.

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಭಾರತದಲ್ಲಿ ಟ್ರಕ್ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಟ್ರಕ್ ಚಾಲಕರು ನಿದ್ರೆಯಲ್ಲಿ ವಾಹನ ಚಾಲನೆ ಮಾಡುವುದು ಎಂದು ಅಧ್ಯಯನಗಳಿಂದ ಕಂಡು ಬಂದಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಟ್ರಕ್ ಚಾಲಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ಟ್ರಕ್ ಚಾಲನೆ ಮಾಡುವಾಗ ಈ ರೀತಿ ನಿದ್ರಾ ಹೀನತೆಯಿಂದ ಬಳಲುವವರು ಅಪಘಾತಕ್ಕೀಡಾಗುವ ಸಾಧ್ಯತೆಗಳು ಹಲವು ಪಟ್ಟು ಹೆಚ್ಚಿರುತ್ತದೆ.

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಸೇವ್ ಲೈಫ್ ಫೌಂಡೇಶನ್ ಹಾಗೂ ಮಹೀಂದ್ರಾ ನಡೆಸಿದ ಸಂಶೋಧನೆಯ ಪ್ರಕಾರ ದೇಶದ ಇಬ್ಬರು ಟ್ರಕ್ ಚಾಲಕರಲ್ಲಿ ಒಬ್ಬರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಟ್ರಕ್ ದಿನಕ್ಕೆ ಸರಾಸರಿ 12 ಗಂಟೆಗಳ ಕಾಲ ಸಂಚರಿಸುತ್ತದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಈ ಟ್ರಕ್ ಚಾಲಕರಲ್ಲಿ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ತರಹದ ಕಾಯಿಲೆ ಕಂಡುಬಂದಿದೆ. ಹೆಚ್ಚಿನ ಟ್ರಕ್ ಚಾಲಕರಿಗೆ ಈ ರೋಗದ ಬಗ್ಗೆ ತಿಳಿದೇ ಇಲ್ಲ ಎಂಬುದು ಗಮನಾರ್ಹ. ಚಿಕಿತ್ಸೆಯ ಕೊರತೆಯಿಂದಾಗಿ ಅವರು ಬಳಲುತ್ತಿದ್ದಾರೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

80%ನಷ್ಟು ಟ್ರಕ್ ಚಾಲಕರು ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 250 ಮಿಲಿಯನ್‌ಗಿಂತ ಹೆಚ್ಚು ಎಂದು ಲ್ಯಾನ್ಸೆಂಟ್‌ನ ವರದಿಯಲ್ಲಿ ಹೇಳಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹಗಲು ವೇಳೆ ಹೆಚ್ಚು ನಿದ್ರೆ ಬರುತ್ತದೆ. ಚಾಲನೆ ಮಾಡುವಾಗ ಅವರಿಗೆ ನಿದ್ರೆ ಬರುತ್ತದೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಚಾಲನೆ ವೇಳೆ ಬರುವ ಸ್ವಲ್ಪ ನಿದ್ರೆಯೂ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಉತ್ತರ ಪ್ರದೇಶದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ನಾಲ್ಕು ರಾತ್ರಿ ಕೇವಲ 5 ಗಂಟೆಗಳ ಕಾಲ ನಿದ್ರಿಸಿದರೆ, ಅವನ ದೇಹದಲ್ಲಿ 0.6%ನಷ್ಟು ಆಲ್ಕೋಹಾಲ್ ಹೆಚ್ಚುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಈ ಪ್ರಮಾಣವು ಸಾಧಾರಣವಾಗಿದ್ದರೂ ಬಹಳ ಅಪಾಯಕಾರಿಯಾಗಿರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಈ ಸಮೀಕ್ಷೆಯಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವ ಚಾಲಕರು ಹಗಲಿನಲ್ಲಿ ವಾಹನ ಚಾಲನೆ ಮಾಡುವಾಗ ನಿದ್ರೆ ಬರುತ್ತದೆ ಎಂದು ತಿಳಿದುಬಂದಿದೆ.

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ಇದು ರಸ್ತೆ ಅಪಘಾತದ ಅಪಾಯವನ್ನು 300%ನಷ್ಟು ಹೆಚ್ಚಿಸುತ್ತದೆ. ಅಂತಹ ಚಾಲಕರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಏಕಾಗ್ರತೆಯ ಸಮಸ್ಯೆ ಕಂಡು ಬರುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಚಾಲಕರ ನಿದ್ರಾ ಹೀನತೆ ಸಮಸ್ಯೆ

ರಾತ್ರಿ ವೇಳೆ ಎಚ್ಚರವಿದ್ದು ವಾಹನ ಚಲಾಯಿಸುವ ಟ್ರಕ್ ಹಾಗೂ ಟ್ಯಾಕ್ಸಿ ಡ್ರೈವರ್‌ಗಳಲ್ಲಿ ಸ್ಲೀಪ್ ಡಿಸಾರ್ಡರ್ ಹೆಚ್ಚು ಕಂಡುಬರುತ್ತದೆ. ಸಂಶೋಧನೆಯಲ್ಲಿ ಭಾಗಿಯಾಗಿದ್ದ 100 ಟ್ರಕ್ ಚಾಲಕರ ಪೈಕಿ 23 ಜನರಲ್ಲಿ ನಿದ್ರಾಹೀನತೆ ಕಂಡುಬಂದಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Sleep disorder among truck drivers has more risk of accidents says research. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X