ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಅಧಿಕಾರಿಗಳು ಅಲ್ಲಿನ ರಸ್ತೆಗಳಲ್ಲಿ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ಸೀಟ್‌ಬೆಲ್ಟ್ ಧರಿಸದ ಹಾಗೂ ವಾಹನ ಚಾಲನೆ ವೇಳೆ ಮೊಬೈಲ್'ನಲ್ಲಿ ಮಾತನಾಡುವ ವಾಹನ ಸವಾರರನ್ನು ಪತ್ತೆ ಹಚ್ಚಲು ಈ ಕ್ಯಾಮೆರಾಗಳು ನೆರವಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಯಾವುದೇ ವಾಹನ ಸವಾರರಿಗೆ ಮೊದಲ ಮೂರು ತಿಂಗಳವರೆಗೆ ದಂಡ ವಿಧಿಸುವುದಿಲ್ಲ. ಬದಲಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಅದರ ನಂತರ ಅವರು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ 1,033 ಡಾಲರ್ ಅಂದರೆ ರೂ. 56,000 ಹಾಗೂ ನಾಲ್ಕು ಅರ್ಹತಾ ಅಂಕಗಳಷ್ಟು ದಂಡ ವಿಧಿಸಲಾಗುತ್ತದೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಈ ಮೊತ್ತವು ಆಸ್ಟ್ರೇಲಿಯಾದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ಅತಿ ದೊಡ್ಡ ದಂಡವಾಗಿದೆ. ಸೀಟ್‌ಬೆಲ್ಟ್ ಧರಿಸದ ವಾಹನ ಚಾಲಕರಿಗೆ 413 ಡಾಲರ್ ದಂಡ ವಿಧಿಸಲಾಗುತ್ತದೆ. ಪ್ರತಿ ರಸ್ತೆಯ ಕಾರ್ನರ್'ಗಳಲ್ಲಿ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಈ ಕ್ಯಾಮೆರಾಗಳು ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಹಾಗೂ ಅವುಗಳೊಳಗಿರುವ ಚಾಲಕರ ಚಿತ್ರಗಳನ್ನು ತೆಗೆಯುತ್ತವೆ. ಈ ಕ್ಯಾಮರಾಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಯನ್ನು ಹೊಂದಿವೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಈ ಕ್ಯಾಮೆರಾಗಳು ಚಿತ್ರಗಳನ್ನು ತೆಗೆದ ತಕ್ಷಣ ಪೊಲೀಸರಿಗೆ ಕಳುಹಿಸುತ್ತವೆ. ಕ್ಯಾಮೆರಾಗಳು ಕಳುಹಿಸುವ ಚಿತ್ರಗಳನ್ನು ಪೊಲೀಸರು ಪರಿಶೀಲಿಸುತ್ತಾರೆ. ಪರಿಶೀಲನೆ ನಡೆಸಿದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಈ ಸ್ಮಾರ್ಟ್ ಕ್ಯಾಮೆರಾಗಳು ಭಾರತದಲ್ಲಿರುವ ಸಾಮಾನ್ಯ ಕ್ಯಾಮೆರಾಗಳಂತೆ ಇಲ್ಲ. ಈ ಕ್ಯಾಮೆರಾಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಮೇಲ್ವಿಚಾರಣೆ ಮಾಡುತ್ತವೆ ಎಂಬುದು ಕೆಲವೇ ಗಂಟೆಗಳಲ್ಲಿ ವಾಹನ ಚಾಲಕರಿಗೆ ತಿಳಿಯುತ್ತದೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಈ ತಿಂಗಳಿನಿಂದ ಮುಂದಿನ ಆರು ತಿಂಗಳು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಸ್ಮಾರ್ಟ್ ಟೆಕ್ನಾಲಜಿಯನ್ನು ಪರೀಕ್ಷಿಸಲಾಗುತ್ತದೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್, ಸೀಟ್‌ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡುವ ಚಾಲಕನನ್ನು ಗುರುತಿಸಲು ಕ್ಯಾಮೆರಾಗಳನ್ನು ಅಳವಡಿಸಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ವಾಹನ ಚಾಲನೆ ವೇಳೆ ಮೊಬೈಲ್ ಬಳಸುವ ವಾಹನ ಸವಾರರನ್ನು ಪತ್ತೆಹಚ್ಚಲು 2020 ರ ಮಾರ್ಚ್‌ ತಿಂಗಳಿನಿಂದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚುತ್ತವೆ ಈ ಸ್ಮಾರ್ಟ್ ಕ್ಯಾಮೆರಾಗಳು

ಇದರ ನಂತರ ಕ್ವೀನ್ಸ್‌ಲ್ಯಾಂಡ್'ನಲ್ಲಿಯೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವ ವಾಹನ ಸವಾರರನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2023 ರಿಂದ ವಿಕ್ಟೋರಿಯದ ಅಧಿಕಾರಿಗಳು ಸ್ಮಾರ್ಟ್ ಕ್ಯಾಮೆರಾಗಳನ್ನು ಬಳಸಿಕೊಂಡು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನಿರ್ಧರಿಸಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Smart cameras installed in Queensland detects traffic norms violators automatically. Read in Kannada.
Story first published: Thursday, July 29, 2021, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X