ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನು ಜಾರಿಗೆ ತರುವುದರ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಹೊಸ ನಿಯಮದಂತೆ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ಗಳಲ್ಲಿ ಎಮರ್ಜೆನ್ಸಿ ಕಾಂಟಾಕ್ಟ್ (ತುರ್ತು ಸಂಪರ್ಕ) ಮೊಬೈಲ್ ನಂಬರ್‍ ಅನ್ನು ನಮೂದಿಸಬೇಕಾಗುತ್ತದೆ. ಮೊದಲಿಗೆ ಈ ನಿಯಮವನ್ನು ದೆಹಲಿ ಹಾಗೂ ಗುಜರಾತ್‍‍ನಲ್ಲಿ ಕಡ್ಡಾಯಗೊಳಿಸಲಾಗಿತ್ತು. ಈಗ ನಿಯಮವನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಈ ರೀತಿಯಾಗಿ ಮೊಬೈಲ್ ನಂಬರ್ ಅನ್ನು ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ನಲ್ಲಿ ನಮೂದಿಸುವುದರಿಂದ ಅಪಘಾತಕ್ಕೆ ಒಳಗಾಗುವವರ ಕುಟುಂಬ ಸದಸ್ಯರನ್ನು ತಕ್ಷಣವೇ ಸಂಪರ್ಕಿಸಬಹುದಾಗಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯಿಂದ ಈ ನಿಯಮದ ಬಗೆಗಿನ ಆದೇಶವು ಜಾರಿಯಾದ ನಂತರ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ನಲ್ಲಿ ಎಮರ್ಜೆನ್ಸಿ ಕಾಂಟಾಕ್ಟ್ ಮೊಬೈಲ್ ನಂಬರ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಅಕ್ಟೋಬರ್ 1ರಿಂದ ಈ ನಿಯಮವನ್ನು ಅಳವಡಿಸಿಕೊಂಡಿರುವ ಉತ್ತರ ಪ್ರದೇಶ ರಾಜ್ಯವು ಈ ನಿಯಮವನ್ನು ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ. ಹೊಸ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ಗಳನ್ನು ನೀಡುವಾಗ ಖುದ್ದು ಆರ್‍‍ಟಿ‍ಒ ಅಧಿಕಾರಿಗಳೇ ಎಮರ್ಜೆನ್ಸಿ ಮೊಬೈಲ್ ಸಂಖ್ಯೆಯನ್ನು ನಮೂದಿಸಲಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಹಳೆ ವಾಹನಗಳನ್ನು ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಹೊಂದಿರುವವರು ಆರ್‍‍ಟಿ‍ಒ ಕಚೇರಿಗೆ ಭೇಟಿ ನೀಡಿ ಅಥವಾ ಆನ್‍‍ಲೈನ್ ಮುಖಾಂತರ ಮೊಬೈಲ್ ನಂಬರ್ ಅನ್ನು ಅಪ್‍‍ಡೇಟ್ ಮಾಡಬಹುದಾಗಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಈ ಹೊಸ ನಿಯಮದನ್ವಯ ಅರ್ಜಿದಾರರು ತಮ್ಮ ವಾಹನದ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಇ-ಕಾಮರ್ಸ್ ವೈಬ್‍‍ಸೈಟಿನ ರೀತಿಯಲ್ಲಿ ಟ್ರಾಕ್ ಮಾಡಬಹುದಾಗಿದೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ವೆಬ್‍‍ಸೈಟಿಗೆ ಭೇಟಿ ನೀಡಿ ಎಮರ್ಜೆನ್ಸಿ ಕಾಂಟಾಕ್ಟ್ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಬಹುದಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಇದಾದ ನಂತರ ಲಾಗಿನ್ ಐಡಿಯಿಂದ ವಾಹನದ ರಿಜಿಸ್ಟ್ರೇಷನ್‍‍ಗಳಿಗೆ ಸಂಬಂಧಪಟ್ಟಂತೆ ಇರುವ ಸೇವೆಗಳಲ್ಲೂ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಬಹುದಾಗಿದೆ. ಈ ಸೆಕ್ಷನ್‍‍ನಲ್ಲಿ ವಾಹನದ ರಿಜಿಸ್ಟ್ರೇಷನ್ ನಂಬರ್, ಎಂಜಿನ್ ನಂಬರ್ ಹಾಗೂ ಚಾಸೀಸ್ ನಂಬರ್‍‍ಗಳನ್ನು ಒದಗಿಸಬೇಕು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಪಟ್ಟಂತೆ ಇರುವ ಸಾರಥಿಯಲ್ಲಿಯೂ ಸಹ ಮೊಬೈಲ್ ನಂಬರ್ ಅನ್ನು ಅಪ್‍‍ಡೇಟ್ ಮಾಡಬಹುದು. ಕೇಂದ್ರ ಸರ್ಕಾರವು ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆನ್‍‍ಲೈನ್‍‍ನಲ್ಲಿ ಅಪ್‍‍ಲೋಡ್ ಮಾಡುತ್ತಿದೆ. ಇದರಿಂದಾಗಿ ವಾಹನ ಸವಾರರ ಸಮಯ ಉಳಿತಾಯವಾಗುವುದರ ಜೊತೆಗೆ ಭ್ರಷ್ಟಾಚಾರವನ್ನು ಕಡಿಮೆಗೊಳಿಸಬಹುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಸದ್ಯಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ಗಾಗಿ ವಿವಿಧ ರೀತಿಯ ನಮೂನೆಗಳಿವೆ. ಹೊಸ ನಿಯಮದಿಂದಾಗಿ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಕಂಡು ಬರಲಿದೆ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಡ್ಡಾಯವಾಗಲಿದೆ ಈ ಅಂಶ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಾಹನಗಳ ಹಾಗೂ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಪಟ್ಟ ಎಲ್ಲಾ ವಿವರಗಳು ಕೇಂದ್ರ ಸರ್ಕಾರದ ಬಳಿ ದೊರೆಯಲಿವೆ. ಇದರಿಂದಾಗಿ ಪೊಲೀಸ್, ಆರ್‍‍ಟಿ‍ಒ ಅಥವಾ ಸಂಬಂಧಪಟ್ಟವರು ಅಪಘಾತಕ್ಕೊಳಗಾದವರ ಕುಟುಂಬ ಸದಸ್ಯರನ್ನು ಸುಲಭವಾಗಿ ಸಂಪರ್ಕಿಸಬಹುದು.

Most Read Articles

Kannada
English summary
Driving licences to have emergency contact numbers - Read in Kannada
Story first published: Monday, October 21, 2019, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X