ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಭಾರತದ ಮಧ್ಯಮ ವರ್ಗದ ಜನರಿಗೆ ತಮ್ಮ ಕುಟುಂಬ ಸದಸ್ಯರಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದು ದೊಡ್ಡ ವಿಷಯ. ನಮ್ಮ ದೇಶದಲ್ಲಿರುವ ಹಲವಾರು ಕಾರುಗಳಲ್ಲಿ ಡ್ಯಾಡಿಯ ಉಡುಗೊರೆ, ಮಮ್ಮಿಯ ಉಡುಗೊರೆ ಸೇರಿದಂತೆ ಹಲವಾರು ರೀತಿಯ ಸ್ಟಿಕ್ಕರ್‌ಗಳನ್ನು ಕಾಣಬಹುದು.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಆದರೆ ಕೆಲವೇ ಕೆಲವು ಮಕ್ಕಳು ಮಾತ್ರ ತಮ್ಮ ತಂದೆ ತಾಯಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಹಿಂದೆ ಮಕ್ಕಳು ತಂದೆ ತಾಯಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ್ದ ಹಲವು ಘಟನೆಗಳನ್ನು ಪ್ರಕಟಿಸಲಾಗಿತ್ತು.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಈಗ ಮಗನೊಬ್ಬ ತನ್ನ ತಂದೆಗೆ ಹೊಸ ಕಿಯಾ ಸೆಲ್ಟೋಸ್ ಕಾರನ್ನು ಉಡುಗೊರೆಯಾಗಿ ನೀಡಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಈ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಜಸ್ಬಾ ದರ್ಶನ್ ದೋಶಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಗ ತನ್ನ ತಂದೆಗೆ ಹೊಸ ಕಿಯಾ ಸೆಲ್ಟೋಸ್ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರಿಗೆ ಸರ್ಪ್ರೈಸ್ ನೀಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಮಗ ತನ್ನ ತಂದೆಗೆ ಅವರ 60ನೇ ವರ್ಷದ ಹುಟ್ಟು ಹಬ್ಬಕ್ಕಾಗಿ ಈ ಉಡುಗೊರೆಯನ್ನು ನೀಡಿರುವುದು ವಿಶೇಷ. ತಂದೆಯ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷಗೊಳಿಸಲು ಈ ಉಡುಗೊರೆಯನ್ನು ನೀಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಹೊಸ ಕಿಯಾ ಸೆಲ್ಟೋಸ್ ಕಾರು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಮೂಲಕ ಪ್ರವೇಶಿಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಕಪ್ಪು ಬಣ್ಣದ ಸೆಲ್ಟೋಸ್ ಕಾರನ್ನು ರಿಬ್ಬನ್ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಆ ಕುಟುಂಬದ ಸದಸ್ಯರೊಬ್ಬರು ಕಾರಿಗೆ ಪೂಜೆ ಮಾಡುತ್ತಾರೆ. ಕುಟುಂಬದ ಎಲ್ಲ ಸದಸ್ಯರಿಗೆ ಈ ವಿಶೇಷ ಉಡುಗೊರೆಯ ಬಗ್ಗೆ ಮೊದಲೇ ತಿಳಿದಿರುವ ಸಾಧ್ಯತೆಗಳಿವೆ.ಏಕೆಂದರೆ ಕರೆಯುವ ಮೊದಲೇ ಕುಟುಂಬ ಸದಸ್ಯರು ಕಾರನ್ನು ಸುತ್ತುವರೆದಿರುತ್ತಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಕುಟುಂಬ ಸದಸ್ಯರು ಮಾತ್ರವಲ್ಲದೇ ನೆರೆಹೊರೆಯವರು ಸಹ ಸ್ಥಳದಲ್ಲಿ ಉಪಸ್ಥಿತರಿದ್ದರು. ಸ್ವಲ್ಪ ಸಮಯದ ನಂತರ ತಂದೆಯವರನ್ನು ಕೆಳಗೆ ಬರಲು ಕೋರಲಾಯಿತು. ಅವರು ಕೆಳಗಿಳಿದು ಹೊಸ ಕಾರನ್ನು ನೋಡುತ್ತಿದ್ದಂತೆ ಅವರ ಮುಖದಲ್ಲಿ ಖುಷಿಯನ್ನು ಕಾಣಬಹುದು.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಅಲ್ಲಿದ್ದ ಎಲ್ಲರೂ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ನಂತರ ಅವರಿಗೆ ಕಾರಿನ ಕೀ ನೀಡಲಾಯಿತು. ಈ ವೀಡಿಯೊದಲ್ಲಿ ಅವರು ಖುಷಿಯಾಗಿ ಕಾರು ಚಾಲನೆ ಮಾಡುವುದನ್ನು ಕಾಣಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೆಲ್ಟೋಸ್, ಕಿಯಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಸೇರಿದಂತೆ ಹಲವು ಕಾರುಗಳಿಗೆ ಪೈಪೋಟಿ ನೀಡುತ್ತದೆ.

ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಸೆಲ್ಟೋಸ್ ಎಸ್‌ಯುವಿಯನ್ನು ಮಾತ್ರವಲ್ಲದೇ ಸೊನೆಟ್ ಸಬ್ -4 ಎಂ ಕಾಂಪ್ಯಾಕ್ಟ್ ಎಸ್‌ಯುವಿ ಹಾಗೂ ಕಾರ್ನಿವಲ್ ಎಂಪಿವಿಗಳನ್ನು ಸಹ ಮಾರಾಟ ಮಾಡುತ್ತದೆ. ಕಿಯಾ ಮೋಟಾರ್ಸ್ ಕಂಪನಿಯ ಎಲ್ಲಾ ಕಾರುಗಳು ಭಾರತೀಯ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವುದು ಗಮನಾರ್ಹ.

Most Read Articles

Kannada
English summary
Son gifts Kia Seltos to dad for 60th birthday. Read in Kannada.
Story first published: Tuesday, March 2, 2021, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X