ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಗಾಂಧಿ ಕುಟುಂಬದವರು ಇನ್ನು ಮುಂದೆ ಗುಂಡು ನಿರೋಧಕ ರೇಂಜ್ ರೋವರ್ ಎಸ್‌ಯುವಿಗಳಲ್ಲಿ ಓಡಾಡುವುದಿಲ್ಲ. ಇದರ ಬದಲಿಗೆ ಸುಮಾರು 10 ವರ್ಷ ಹಳೆಯದಾದ ಟಾಟಾ ಸಫಾರಿಗಳಲ್ಲಿ ಓಡಾಡಲಿದ್ದಾರೆ ಎಂದು ವರದಿಯಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಕೇಂದ್ರ ಸರ್ಕಾರವು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿರವರಿಗೆ ನೀಡಲಾಗಿರುವ ಭದ್ರತೆಯನ್ನು ಝಡ್ ಪ್ಲಸ್‌ನಿಂದ ಝಡ್ ವರ್ಗಕ್ಕೆ ಇಳಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಅಂದರೆ ಇದುವರೆಗೂ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಝಡ್ ಪ್ಲಸ್ ವಾಹನಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಗಾಂಧಿ ಕುಟುಂಬಕ್ಕೆ ಇನ್ನು ಮುಂದೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ರಕ್ಷಣೆ ನೀಡಲಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಈ ಹಿಂದೆ ಅವರಿಗಾಗಿ ನೀಡಲಾಗಿದ್ದ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍‍ರವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನೂ ಸಹ ಹಿಂದಕ್ಕೆ ಪಡೆಯಲಾಗಿದೆ. ಅವರ ಭದ್ರತೆಯನ್ನು ಝಡ್ ಪ್ಲಸ್‍‍ನಿಂದ ಝಡ್ ವರ್ಗಕ್ಕೆ ಇಳಿಸಲಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಆದರೆ, ಮನಮೋಹನ್ ಸಿಂಗ್‍‍ರವರಿಗೆ ನೀಡಲಾಗಿದ್ದ ಬುಲೆಟ್ ಪ್ರೂಫ್ ಬಿಎಂಡಬ್ಲ್ಯು 7 ಸೀರಿಸ್ ಐಷಾರಾಮಿ ಕಾರ್ ಅನ್ನು ಬಳಸಲು ಅವರಿಗೆ ಅನುಮತಿ ನೀಡಲಾಗಿದೆ. ಗಾಂಧಿ ಕುಟುಂಬದವರ ಬಳಕೆಗಾಗಿ ಬುಲೆಟ್ ಪ್ರೂಫ್ ರೇಂಜ್ ರೋವರ್ ಹಾಗೂ ಟೊಯೊಟಾ ಫಾರ್ಚೂನರ್‌ಗಳನ್ನು ಮರಳಿಸುವಂತೆ ಸಿಆರ್‌ಪಿಎಫ್ ಎಸ್‌ಪಿಜಿಗೆ ಮನವಿ ಮಾಡಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಇದುವರೆಗೂ, ಈ ಬಗ್ಗೆ ಎಸ್‌ಪಿಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಿರುವುದು ಸಂಸತ್ತಿನಲ್ಲಿ ದೊಡ್ಡ ಪ್ರತಿಭಟನೆಗೆ ಕಾರಣವಾಗಿದೆ, ಕಾಂಗ್ರೆಸ್ ಪಕ್ಷವು ಅಧಿವೇಶನವನ್ನು ಬಹಿಷ್ಕರಿಸಿ ಹೊರನಡೆದಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಲೋಕಸಭೆಯ ಕಾಂಗ್ರೆಸ್ ಮುಖಂಡರಾದ ಅಧೀರ್ ರಂಜನ್ ಚೌಧರಿರವರು ಮಾತನಾಡಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿರವರು ಸಾಮಾನ್ಯರಲ್ಲ. ವಾಜಪೇಯಿಯವರು ಗಾಂಧಿ ಕುಟುಂಬಕ್ಕೆ ಎಸ್‍‍ಪಿ‍‍ಜಿ ಸೌಲಭ್ಯವನ್ನು ನೀಡಿದ್ದರು. 1991-2019ರವರೆಗೆ, ಎನ್‌ಡಿಎ ಎರಡು ಬಾರಿ ಅಧಿಕಾರಕ್ಕೆ ಬಂದರೂ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದಿರಲಿಲ್ಲ ಎಂದು ಹೇಳಿದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿರವರಿಗೆ ನೀಡಲಾದ ಹೈ ಎಂಡ್ ರೇಂಜ್ ರೋವರ್ ಎಸ್‍‍ಯುವಿಗಳು ದೊಡ್ಡ ಗಾತ್ರದ ಬುಲೆಟ್‍ ಪ್ರೂಫ್ ಕಾರುಗಳಾಗಿದ್ದವು. ಗ್ರೆನೇಡ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲವಾಗಿದ್ದವು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ರಾಹುಲ್ ಗಾಂಧಿಯವರಿಗೆ ಇದೇ ರೀತಿಯ ಬುಲೆಟ್ ಪ್ರೂಫ್ ಟೊಯೊಟಾ ಫಾರ್ಚೂನರ್ ಎಸ್‌ಯುವಿಯನ್ನು ನೀಡಲಾಗಿತ್ತು. ಗಾಂಧಿ ಕುಟುಂಬಕ್ಕೆ ನೀಡಲಾಗಿರುವ 2010ರ ಮಾದರಿಯ ಟಾಟಾ ಸಫಾರಿ ಎಸ್‌ಯುವಿಗಳು ಬುಲೆಟ್ ಪ್ರೂಫ್‍‍ಗಳಾಗಿದೆಯೇ ಎಂಬುದನ್ನು ಕಾದು ನೋಡಬೇಕು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಬುಲೆಟ್ ಪ್ರೂಫ್ ಆಗಿರದಿದ್ದರೆ, ಟಾಟಾ ಮೋಟಾರ್ಸ್ ಈ ಅಧಿಕೃತವಾಗಿ ಸ್ಥಗಿತಗೊಳಿಸಿರುವ, ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ಸಫಾರಿ 2.2 ಎಸ್‍‍ಯುವಿಯಾಗಿರಲಿವೆ. ಈ ಸಫಾರಿ 2.2 ಎಸ್‍‍ಯುವಿಯು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಈ ಎಂಜಿನ್ 140 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಆಯ್ಕೆ ಮಾಡಿಕೊಳ್ಳುವ ಮಾದರಿಯ ಮೇಲೆ ಎಸ್‌ಯುವಿ ರೇರ್ ವ್ಹೀಲ್ ಡ್ರೈವ್ ಹಾಗೂ ನಾಲ್ಕು ವೀಲ್ ಡ್ರೈವ್ ವಿನ್ಯಾಸಗಳನ್ನು ಹೊಂದಿರಲಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಸಫಾರಿಯನ್ನು ಸ್ಥಗಿತಗೊಳಿಸಿ ಅದರ ಬದಲಿಗೆ ಸಫಾರಿ ಸ್ಟಾರ್ಮ್‌ ಅನ್ನು ಬಿಡುಗಡೆಗೊಳಿಸಲಾಯಿತು. ಸಫಾರಿ ಸ್ಟಾರ್ಮ್ ಅನ್ನು ಈಗಲೂ ಸಹ ಮಾರಾಟ ಮಾಡಲಾಗುತ್ತಿದೆ. ಬಿಎಸ್ 6 ನಿಯಮಗಳು ಜಾರಿಗೆ ಬಂದ ನಂತರ ಅದನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಆಂಧ್ರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಸದ್ಯ ಖಾಸಗಿ ಭದ್ರತೆ ವಿಚಾರವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನೂತನ ಮುಖ್ಯಮಂತ್ರಿಗೆ 4 ಕೋಟಿ ವೆಚ್ಚದಲ್ಲಿ ಗರಿಷ್ಠ ಭದ್ರತೆಗಾಗಿ ಬುಲೆಟ್ ಪ್ರೂಫ್ ಕಾರುಗಳನ್ನು ನೀಡಲಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಜಗನ್ ಮೋಹನ್ ರೆಡ್ಡಿಯವರಿಗೆ ಕೆಲವು ಕಾರಣಾಂತರಗಳಿಂದ ಜೆಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗಿದ್ದು, ಅಧಿಕೃತ ಓಡಾಟಕ್ಕಾಗಿ ಇದೀಗ ಬರೋಬ್ಬರಿ 4 ಕೋಟಿ ವೆಚ್ಚದಲ್ಲಿ 6 ಬುಲೆಟ್ ಕಾರುಗಳನ್ನು ನೀಡಲಾಗಿದೆ. ಜೆಡ್ ಪ್ಲಸ್ ಭದ್ರತಾ ಪಡೆಯಲ್ಲಿ ಒಟ್ಟು ಆರು ಬುಲೆಟ್ ಪ್ರೂಫ್ ಕಾರುಗಳಿದ್ದು, ಜಗನ್ ಮೋಹನ್ ರೆಡ್ಡಿ ಓಡಾಟಕ್ಕಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಬಳಕೆ ಮಾಡಿದ್ದಲ್ಲಿ ಸಿಎಂ ಕಾರಿಗೆ ಕಾವಲಿಗಾಗಿ 5 ಹೆಚ್ಚುವರಿ ಫಾರ್ಚೂನರ್ ಕಾರುಗಳ ಭದ್ರತೆ ಹೊಂದಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಭದ್ರತಾ ಪಡೆಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಟೊಯೊಟಾ ನಿರ್ಮಾಣದ ಫಾರ್ಚೂನರ್ ಮತ್ತು ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳು ರಾಜಕಾರಣಿಗಳ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿ ಖಾಸಗಿ ಭದ್ರತೆಗಾಗಿ ಈ ಕಾರುಗಳು ಸಾಕಷ್ಟು ಅನುಕೂಲಕರವಾಗಿವೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಹೀಗಾಗಿ ಜೆಡ್ ಪ್ಲಸ್ ಪಡೆಯಲ್ಲೂ ಟೊಯೊಟಾ ಫಾರ್ಚೂನರ್ ಮತ್ತು ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳನ್ನೇ ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಇದೀಗ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಗರಿಷ್ಠ ಭದ್ರತೆಯುಳ್ಳ ಲ್ಯಾಂಡ್ ಕ್ರೂಸರ್ ಪ್ರಾಡೋ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಸದ್ಯ ಮಾರುಕಟ್ಟೆಯಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು 1.13 ಕೋಟಿ ಬೆಲೆ ಹೊಂದಿದ್ದು, ಸಿಎಂ ಭದ್ರತೆಗಾಗಿ ದುಬಾರಿ ವೆಚ್ಚದಲ್ಲಿ ಬುಲೆಟ್ ಪ್ರೂಫ್ ಮಾಡಿಫೈಗೊಳಿಸಲಾಗಿದೆ. ಇದರಿಂದ ಮಾಡಿಫೈಗೊಂಡಿರುವ ಕಾರು ಸುಮಾರು 1.50 ಕೋಟಿ ಬೆಲೆ ಹೊಂದಿದೆ ಎನ್ನಲಾಗಿದ್ದು, ಭದ್ರತಾ ಸಿಬ್ಬಂದಿ ಇರುವ ಇನ್ನುಳಿದ 5 ಕಾರುಗಳು ಸಹ ಬುಲೆಟ್ ಪ್ರೂಫ್ ಸೌಲಭ್ಯದೊಂದಿಗೆ ಮಾಡಿಫೈಗೊಳಿಸಲಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಜೆಡ್ ಪ್ಲಸ್ ಭದ್ರತೆಯಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೋ ಜೊತೆ 5 ಫಾರ್ಚೂನರ್ ಕಾರುಗಳಿದ್ದು, ಫಾರ್ಚೂನರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ರೂ.34 ಲಕ್ಷ ಬೆಲೆ ಹೊಂದಿದ್ದು, ಇವುಗಳು ಕೂಡಾ ಬುಲೆಟ್ ಪ್ರೂಫ್ ಸೌಲಭ್ಯ ಹೊಂದಿರುವುದರಿಂದ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಮಾಹಿತಿಗಳ ಪ್ರಕಾರ ಒಂದು ಫಾರ್ಚೂನರ್ ಬುಲೆಟ್ ಪ್ರೂಫ್ ಮಾದರಿಯ ಬೆಲೆ ರೂ. 50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಫಾರ್ಚೂನರ್ ಕಾರುಗಳ ಖರೀದಿಗಾಗಿಯೇ ಬರೋಬ್ಬರಿ ರೂ. 2.50 ಕೋಟಿ ಖರ್ಚು ಮಾಡಲಾಗಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಇನ್ನುಳಿದಂತೆ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ರೂ.1.50 ಕೋಟಿ ಬೆಲೆ ಹೊಂದಿದ್ದು, ಜೆಡ್ ಪ್ಲಸ್ ಭದ್ರತೆಯ ವಾಹನಗಳಿಗಾಗಿ ಒಟ್ಟು 4 ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೇ ಜೆಡ್ ಪ್ಲಸ್ ವಾಹನಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಟಿಯುವಿ300, ಟಾಟಾ ಸಫಾರಿ, ಮಹೀಂದ್ರಾ ಬೊಲೆರೊ, ಮಹೀಂದ್ರಾ ಸ್ಕಾರ್ಪಿಯೋ ಸಹ ಈ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತವೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಇನ್ನು ಭದ್ರತಾ ಪಡೆಯ ಪ್ರಮುಖ ಆಕರ್ಷಣೆಯಾಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ದುಬಾರಿ ಬೆಲೆಗೆ ತಕ್ಕಂತೆ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 2,982-ಸಿಸಿ ಡೀಸೆಲ್ ಎಂಜಿನ್‌ನೊಂದಿಗೆ 173-ಬಿಹೆಚ್‌ಪಿ ಮತ್ತು 410-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಜೊತೆಗೆ ಪ್ರಯಾಣಿಕರ ಸುರಕ್ಷತೆಗೂ ಈ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ 7 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ತ್ರಿ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೊಲ್, 360 ಡ್ರಿಗಿ ವ್ಯೂವ್ ಕ್ಯಾಮೆರಾ, ಪ್ರತಿ ಸೀಟುಗಳ ಮುಂಭಾಗದಲ್ಲೂ ಟಚ್ ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಸ್ಟೀರಿಂಗ್ ಮೌಂಟೆಡ್ ಜೋಡಣೆ ಹೊಂದಿದೆ.

ಇನ್ಮುಂದೆ ರೇಂಜ್ ರೋವರ್‍ ಬದಲಿಗೆ ಟಾಟಾ ಸಫಾರಿ ಬಳಸಲಿದೆ ಗಾಂಧಿ ಕುಟುಂಬ..!

ಹಾಗೆಯೇ ಫಾರ್ಚೂನರ್ ಕಾರು ಸಹ ಬಲಿಷ್ಠ ಎಸ್‌ಯುವಿಗಳಲ್ಲಿ ಒಂದಾಗಿದ್ದು, ಇದು ಕೂಡಾ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ 2.8-ಲೀಟರ್ ಟರ್ಬೋ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ವೈಶಿಷ್ಟ್ಯತೆಗಳು ಈ ಕಾರಿನಲ್ಲಿವೆ.

Most Read Articles

Kannada
English summary
Sonia gandhi downgrades from range rover to tata safari - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X