ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ವ್ಯಕ್ತಿಯೊಬ್ಬನ ಒಳಗಿರುವ ಇಚ್ವಾಶಕ್ತಿ ಹಾಗೂ ಜಗತ್ತನ್ನು ಗೆಲ್ಲಬಲ್ಲೆ ಎನ್ನುವ ಧೈರ್ಯ ಆತನಿಂದ ಏನೂ ಬೇಕಾದರೂ ಮಾಡಿಸುತ್ತದೆ. ಅಂತಹ ವ್ಯಕ್ತಿಗಳು ಮಾಡುವ ಸಾಧನೆಯನ್ನು ಯಾರೂ ತಡೆಯುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆ ಗುಜರಾತ್‌ನ ಮುಂಡ್ರಾ ತಾಲೂಕಿನ 47 ವರ್ಷದ ಧಂಜಿಭಾಯ್ ಕೇರೈ.

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಧಂಜಿಭಾಯ್ ಕೇರೈ, ಎರಡು ವರ್ಷದವರಿದ್ದಾಗ ಪೋಲಿಯೊ ರೋಗಕ್ಕೆ ತುತ್ತಾಗಿ ತಮ್ಮ ಕಾಲುಗಳನ್ನು ಕಳೆದುಕೊಂಡರು. ಅಂದಿನಿಂದ ಅವರು ತಮ್ಮ ಹೆತ್ತವರ ಮೇಲೆ ಅವಲಂಬಿತರಾಗಿದ್ದರು. ಧಂಜಿಭಾಯ್ ಕೇರೈ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಾರೆ. ಅವರು ಹೊರಗೆ ಹೋಗುವಗೆಲ್ಲಾ ಇತರರ ಸಹಾಯವನ್ನು ಪಡೆಯಬೇಕಾಗಿತ್ತು.

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಇದರ ಹೊರತು ಅವರಿಗೆ ಬೇರೆ ದಾರಿಯಿರಲಿಲ್ಲ. ಅವರು ನಿಮಿಷಕ್ಕೆ 3 ಮೀಟರ್ ನಡೆಯುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸ್ಕೂಟರ್ ಅನ್ನು ಮಾಡಿಫೈಗೊಳಿಸಲು ನಿರ್ಧರಿಸಿದರು. ಅಂದ ಹಾಗೆ ವಿಕಲ ಚೇತನರ ಪ್ರಯಾಣಕ್ಕಾಗಿ ಬೇರೆಯೇ ಆಯ್ಕೆಗಳಿವೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಮೊದಲಿಗೆ ಹಳೆಯ ಸ್ಕೂಟರ್ ಅನ್ನು ಖರೀದಿಸಿದ ಅವರು ಸ್ಕೂಟರ್‌ನಲ್ಲಿ ತನ್ನ ದೇಹಕ್ಕೆ ತಕ್ಕಂತೆ ಯಾವ ಬದಲಾವಣೆಗಳನ್ನು ಮಾಡಬಹುದೆಂದು ಯೋಚಿಸಿದರು. ಅವರ ಉದ್ದ ಕೇವಲ ಅರ್ಧ ಅಡಿಗಳಷ್ಟಿದ್ದು, ಅವರ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿವೆ. ಈ ಕಾರಣಕ್ಕೆ ಅವರು ಹ್ಯಾಂಡ್ ಹೆಲ್ಡ್ ಸ್ಕೂಟರ್ ನಿರ್ಮಿಸಬೇಕಿತ್ತು.

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಸ್ಕೂಟರ್ ಬ್ಯಾಲೆನ್ಸ್ ಆಗಲಿ ಎಂಬ ಕಾರಣಕ್ಕೆ ಸ್ಕೂಟರ್‌ನ ಹಿಂಭಾಗದ ವ್ಹೀಲ್ ನ ಪಕ್ಕದ ಎರಡೂ ಬದಿಗಳಲ್ಲಿ ಎರಡು ವ್ಹೀಲ್ ಗಳನ್ನು ಅಳವಡಿಸಿದರು. ಹಿಂಭಾಗದ ಬ್ರೇಕ್ ತೆಗೆದು ಮೃದುವಾದ ಲಿವರ್ ಜೋಡಿಸಿದರು. ನಂತರ ತಮ್ಮ ಕೈಗೆ ಹ್ಯಾಂಡಲ್ ಸುಲಭವಾಗಿ ಎಟುಕಲಿ ಎಂಬ ಕಾರಣಕ್ಕೆ ಸೀಟಿನ ಮುಂದೆ ಮತ್ತೊಂದು ಸೀಟನ್ನು ಜೋಡಿಸಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಸ್ಕೂಟರ್ ನಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿ ಈ ಸ್ಕೂಟರ್ ಅನ್ನು ತಾವೇ ಸಿದ್ಧಪಡಿಸಿಕೊಂಡರು. ಈ ಸ್ಕೂಟರ್ ಅನ್ನು ಮಾರ್ಪಡಿಸಲುಅವರಿಗೆ 3 - 4 ತಿಂಗಳು ಬೇಕಾಯಿತು. ಸ್ಕೂಟರ್ ಮಾಡಿಫೈಗೊಳಿಸಲು ಅವರು ಸುಮಾರು 6 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಧಂಜಿಭಾಯ್ ಕೇರೈ ಈ ಮೊದಲು ಎಲ್ಲಿಯಾದರೂ ಹೋಗಬೇಕಾದಾಗ ಬೇರೆಯವರನ್ನು ಆಶ್ರಯಿಸಬೇಕಾಗಿತ್ತು. ಈ ಸ್ಕೂಟರ್ ರೆಡಿಯಾದ ನಂತರ ಬೇರೆಯವರ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಈ ಸ್ಕೂಟರ್‌ನಿಂದಾಗಿ ಅವರು ಸುತ್ತ ಮುತ್ತಲ ಹಳ್ಳಿಗಳಲ್ಲಿ ಜನಪ್ರಿಯರಾಗಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ತಮ್ಮ ಈ ಆವಿಷ್ಕಾರಕ್ಕಾಗಿ ಧಂಜಿಭಾಯ್ ಕೇರೈ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಧಂಜಿಭಾಯ್ ಕೇರೈ ಇಷ್ಟಕ್ಕೆ ಸುಮ್ಮನಾಗಲಿಲ್ಲ. ತಮ್ಮ ಸ್ಕೂಟರ್‌ನಲ್ಲಿ ಇನ್ನೂ ಹೆಚ್ಚಿನ ಮಾರ್ಪಾಡುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಬೇರೆ ವಿಕಲ ಚೇತನರಿಗೂ ಸಹ ಸ್ಕೂಟರ್‌ಗಳನ್ನು ಮಾರ್ಪಡಿಸುವ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ.

ಓಡಾಟಕ್ಕಾಗಿ ಸ್ವತಃ ಸ್ಕೂಟರ್ ಸಿದ್ದಪಡಿಸಿಕೊಂಡ ಛಲದಂಕ ಮಲ್ಲ

ಪ್ರತಿಯೊಬ್ಬರ ದೈಹಿಕ ಅಂಗವೈಕಲ್ಯವು ಇತರರಿಗಿಂತ ಭಿನ್ನವಾಗಿರುತ್ತದೆ ಎಂದು ಹೇಳುವ ಅವರು, ದೇಹದ ಅಗತ್ಯಕ್ಕೆ ತಕ್ಕಂತೆ ಸ್ಕೂಟರ್ ಗಳನ್ನು ಮಾಡಿಫೈಗೊಳಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮಾರ್ಪಾಡು ಮಾಡಲು ಹೆಚ್ಚು ಖರ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ಧಂಜಿಭಾಯ್ ಕೇರೈ ಇದುವರೆಗೂ 12 ಸ್ಕೂಟರ್‌ಗಳನ್ನು ತಯಾರಿಸಿದ್ದು, ಈಗ ಮತ್ತೆರಡು ಸ್ಕೂಟರ್‌ಗಳನ್ನು ಸಿದ್ದಪಡಿಸುತ್ತಿದ್ದಾರೆ.

ಮೂಲ: ಹಿಂದಿ ದಿ ಬೆಟರ್ ಇಂಡಿಯಾ

Most Read Articles

Kannada
English summary
Specially abled man modifies scooter for himself. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X