ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ದಿನನಿತ್ಯ ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸ್ಪೂರ್ತಿದಾಯಕ ಘಟನೆಯೊಂದು ತಮಿಳುನಾಡಿನಿಂದ ವರದಿಯಾಗಿದೆ. ಈ ಘಟನೆಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರು 10 ಗಂಟೆಗಳ ಕಾಲ ಸೈಕಲ್ ತುಳಿದು 165 ಕಿ.ಮೀ ಸಂಚರಿಸಿದ್ದಾರೆ.

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ಈ ವ್ಯಕ್ತಿಯು ಅಪಘಾತದಲ್ಲಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ವಕೀಲರಿಗೆ ಕೆಲವು ಮಹತ್ವದ ದಾಖಲೆಗಳನ್ನು ನೀಡಬೇಕಾಗಿತ್ತು. ಆದರೆ ಸಾರ್ವಜನಿಕ ಸಾರಿಗೆಗಳು ಇಲ್ಲದ ಕಾರಣಕ್ಕೆ ತಮಿಳುನಾಡಿನ ತಂಜಾವೂರಿನಿಂದ ಮಧುರೈಗೆ ಸೈಕಲ್ ಮೂಲಕ ತಲುಪಿದ್ದಾರೆ.

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ತಂಜಾವೂರು ಜಿಲ್ಲೆಯ ಪಿಲಿಯರಪಟ್ಟಿ ಗ್ರಾಮಕ್ಕೆ ಸೇರಿದ ರಾಜಾ 1994ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ನಡೆದ ಅಪಘಾತದಲ್ಲಿ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಪರಿಹಾರ ಕೋರಿ ರಾಜಾರವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಆದರೆ ಇದುವರೆಗೂ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ರಾಜಾರವರು ತಮ್ಮ ಪ್ರಕರಣದ ಸಂಬಂಧ ಆಗಾಗ್ಗೆ ತಂಜಾವೂರಿನಿಂದ ಮಧುರೈಗೆ ಹೋಗುತ್ತಿರುತ್ತಾರೆ. ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಪ್ರಕರಣವು ಅಂತಿಮ ಹಂತವನ್ನು ತಲುಪಿದ್ದು, ಅವರು ನ್ಯಾಯಾಲಯಕ್ಕೆ ಹೋಗಿ ದಾಖಲೆಗಳನ್ನು ಸಲ್ಲಿಸಲ್ಲೇ ಬೇಕಿತ್ತು.

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ಈ ಕಾರಣಕ್ಕೆ ಅವರು ಸೈಕಲ್ ಮೂಲಕವೇ ಮಧುರೈಗೆ ಹೋಗಲು ತೀರ್ಮಾನಿಸಿದ್ದಾರೆ. 10 ಗಂಟೆಗಳ ಪ್ರಯಾಣದ ನಂತರ ಮಧುರೈ ತಲುಪಿದ್ದಾರೆ. ತಮ್ಮ ಸುದೀರ್ಘ ಪ್ರಯಾಣದಲ್ಲಿ ಅವರು ಎಲ್ಲಿಯೂ ತೊಂದರೆಯನ್ನು ಅನುಭವಿಸಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ತಮಿಳುನಾಡಿನಲ್ಲಿ ಕರೋನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕ ಸಾರಿಗೆಗಳನ್ನು ಆರಂಭಿಸಿಲ್ಲ. ಇದರಿಂದಾಗಿ ಅನೇಕ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜನರು ತಮ್ಮ ಪ್ರಮುಖ ಕೆಲಸಗಳಿಗಾಗಿ ತಮ್ಮದೇ ಬೈಕ್, ಕಾರು ಹಾಗೂ ಸೈಕಲ್‌ಗಳಲ್ಲಿ ಸಂಚರಿಸುತ್ತಿದ್ದಾರೆ.

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ರಾಜಾರವರು ಜುಲೈ 31ರಂದು ಲಾಕ್‌ಡೌನ್‌ ಕೊನೆಗೊಂಡು ಬಸ್ಸುಗಳ ಸಂಚಾರ ಆರಂಭವಾಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‌ಡೌನ್‌ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಕಾರಣಕ್ಕೆ ಅವರು ಸೈಕಲ್ ಮೂಲಕವೇ ಮಧುರೈಗೆ ಹೋಗಲು ತೀರ್ಮಾನಿಸಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾಲು ಕಳೆದುಕೊಂಡರೂ ಕಡಿಮೆಯಾಗದ ಆತ್ಮ ವಿಶ್ವಾಸ

ತಮಗೆ ಸೈಕಲ್ ತುಳಿದ ಅನುಭವವಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲವೆಂದು ರಾಜಾ ಹೇಳಿದ್ದಾರೆ. ಅವರು ಸೈಕಲ್ ಮೂಲಕವೇ ಅನೇಕ ಸ್ಥಳಗಳನ್ನು ತಲುಪಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ತಮಿಳುನಾಡು ಪೊಲೀಸರು ಮನೆಯಿಂದ 2 ಕಿ.ಮೀ ದೂರ ಬಂದವರನ್ನು ಬಂಧಿಸುತ್ತಿದ್ದರು. ಈಗ ಆ ನಿಯಮವನ್ನು ಸಡಿಲಿಸಲಾಗಿದೆ.

Most Read Articles

Kannada
English summary
Specially abled person travels 165 kms with one leg. Read in Kannada.
Story first published: Wednesday, August 5, 2020, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X