ಶ್ರೀಶಾಂತ್ ಕಾರುಬಾರು; ಬಿಎಂಡಬ್ಲ್ಯು ಎಕ್ಸ್6, ಹೋಂಡಾ ಸಿವಿಕ್

'ಜಂಟಲ್ ಮ್ಯಾನ್' ಗೇಮ್ ಎಂದೇ ಖ್ಯಾತಿ ಪಡೆದಿರುವ ಕ್ರಿಕೆಟಿಗೆ ಮತ್ತೆ ಕಪ್ಪು ಮಸಿ ಬಳೆಯಲಾಗಿದೆ. ಕೇರಳದ ಸ್ಪೀಡ್ ಸ್ಟಾರ್ 'ಶಾಂತ'ಕುಮಾರನ್ ಶ್ರೀಶಾಂತ್ ಮತ್ತೆ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಕೈವಶವಾಗಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಶಾಂತ್, 'ಸ್ಪಾಟ್ ಫಿಕ್ಸಿಂಗ್‌'ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದೆ. ಈ ಸಂಬಂಧ ದೆಹಲಿ ಪೊಲೀಸ್ ವಿಚಾರಣೆಯನ್ನು ತ್ವರಿತಗೊಳಿಸಿದೆ.

ಅಷ್ಟಕ್ಕೂ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಕ್ರಿಯವಾಗಿರುವ ಶ್ರೀಶಾಂತ್ ನಿಜಕ್ಕೂ ಮೋಸದಾಟದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆ. 2007ನೇ ಇಸವಿಯಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಶಾಂತ್ ಆ ಬಳಿಕ 28 ವರ್ಷಗಳ ಸುದೀರ್ಘ ಅವಧಿಯ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದರು. ಈ ಮೂಲಕ ಕ್ರಿಕೆಟಿನ ಎರಡು ಮಾದರಿಗಳಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರನೆಂಬ ಖ್ಯಾತಿಗೆ ಪಾತ್ರವಾಗಿದ್ದರು.

ಅಂದ ಹಾಗೆ ಶ್ರೀಶಾಂತ್ ಬಳಿ ಎರಡು ದುಬಾರಿ ಕಾರುಗಳಿವೆ. ಬಿಎಂಡಬ್ಲ್ಯು ಎಕ್ಸ್ 6 ಹಾಗೂ ಹೋಂಡಾ ಸಿವಿಕ್ ಕಾರನ್ನು ಶ್ರೀಶಾಂತ್ ಹೊಂದಿದ್ದಾರೆ. ಒಂದು ವೇಳೆ ಮೋಸದಾಟದಿಂದಲೇ ಶ್ರೀ ದುಡ್ಡು ಸಂಪಾದಿಸಿದ್ದರೆ ಈ ಎರಡು ಕಾರುಗಳನ್ನು ಯಾವ ಮಾರ್ಗದಿಂದ ಪಡೆಯಲಾಗಿದೆ ಎಂಬುದನ್ನು ಸಹ ತನಿಖೆಗೆ ಒಳಪಡಿಸಬೇಕಾಗುತ್ತದೆ. ಸದ್ಯಕ್ಕೆ ಕೆಳಗಡೆಯ ಗ್ಯಾಲರಿಯಲ್ಲಿರುವ ಶ್ರೀಶಾಂತ್ ಕಾರುಗಳ ನೋಡುತ್ತಾ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಶ್ರೀಶಾಂತ್ ಕಾರುಬಾರು; ಬಿಎಂಡಬ್ಲ್ಯು ಎಕ್ಸ್6, ಹೋಂಡಾ ಸಿವಿಕ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲು ಎಕ್ಸ್6 ಪ್ರಾರಂಭಿಕ ದರ 80 ಲಕ್ಷ ರು.ಗಳಾಗಿವೆ. ದೊಡ್ಡದಾದ ಫ್ರಂಟ್ ಗ್ರಿಲ್ ಇದರ ಆಕರ್ಷಣೆಗೆ ಕಾರಣವಾಗಿದೆ. ಶ್ರೀಶಾಂತ್ ಬಳಿ ಶ್ವೇತ ವರ್ಣದ ಬಿಎಂಡಬ್ಲ್ಯು ಎಕ್ಸ್6 ಕಾರಿದೆ.

ಶ್ರೀಶಾಂತ್ ಕಾರುಬಾರು; ಬಿಎಂಡಬ್ಲ್ಯು ಎಕ್ಸ್6, ಹೋಂಡಾ ಸಿವಿಕ್

ಇನ್ನು ಹೋಂಡಾ ಸಿವಿಕ್ ಕಾರಿನ ಆರಂಭಿಕ ದರ 16 ಲಕ್ಷ ರು.ಗಳಾಗಿವೆ. ಇದು ಸಿ ಪ್ಲಸ್ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರೆಂಬ ಖ್ಯಾತಿಗೆ ಪಾತ್ರವಾಗಿದೆ.

ಶ್ರೀಶಾಂತ್ ಕಾರುಬಾರು; ಬಿಎಂಡಬ್ಲ್ಯು ಎಕ್ಸ್6, ಹೋಂಡಾ ಸಿವಿಕ್

ಹಾಗೆಯೇ ವಿಶ್ವದ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಪೋರ್ಷೆ ಐಷಾರಾಮಿ ಕಾರು ತಮ್ಮದಾಗಿಸಿಕೊಳ್ಳುವುದು ಶ್ರೀಶಾಂತ್ ಕನಸಾಗಿದೆ.

ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6

ಹೋಂಡಾ ಸಿವಿಕ್

ಹೋಂಡಾ ಸಿವಿಕ್

ಹೋಂಡಾ ಸಿವಿಕ್

ಹೋಂಡಾ ಸಿವಿಕ್

ಹೋಂಡಾ ಸಿವಿಕ್

ಹೋಂಡಾ ಸಿವಿಕ್

Most Read Articles

Kannada
English summary
Indian controversial fast bowler Sreesanth owns BMW X6 and Honda City. He dreams of buying as Porsche.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X