ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ರಿಕ್ಷಾಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಈ ಕಾರಣಕ್ಕೆ ಢಾಕಾವನ್ನು ರಿಕ್ಷಾಗಳ ನಗರ ಎಂದು ಕರೆಯಲಾಗುತ್ತದೆ. ಆದರೆ ನಿಧಾನವಾಗಿ ಚಲಿಸುವ ರಿಕ್ಷಾಗಳಿಂದಾಗಿ ಢಾಕಾದ ರಸ್ತೆಗಳಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಲಾಗಿದೆ.

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈಗ ಆ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಢಾಕಾದಲ್ಲಿ ಎಂಜಿನ್-ಚಾಲಿತ ಹಾಗೂ ಬ್ಯಾಟರಿ-ಚಾಲಿತ ರಿಕ್ಷಾಗಳನ್ನು ನಿಷೇಧಿಸಲಾಗಿದೆ. ಡಿಎಸ್‌ಸಿಸಿ (ಢಾಕಾ ಸೌತ್ ಸಿಟಿ ಕಾರ್ಪೊರೇಷನ್) ಢಾಕಾದ ರಸ್ತೆಗಳಲ್ಲಿ ನಿಷೇಧಿತ ರಿಕ್ಷಾಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ.

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಂಚಾರ ದಟ್ಟಣೆಯಿಂದ ತತ್ತರಿಸಿರುವ ಢಾಕಾದ ರಸ್ತೆಗಳಿಗೆ ಪರಿಹಾರ ನೀಡುವ ಸಲುವಾಗಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ ಅಧಿಕಾರಿಗಳ ಈ ಕ್ರಮ ಅನೇಕ ರಿಕ್ಷಾ ಚಾಲಕರ ಜೀವನವನ್ನು ಕಸಿದುಕೊಂಡಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಂತಹವರಲ್ಲಿ ಫಜ್ಲೂರ್ ರಹಮಾನ್ ಸಹ ಒಬ್ಬರು. ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾದ ಲಾಕ್ ಡೌನ್ ನಿಂದ ಫಜ್ಲೂರ್ ರಹಮಾನ್ ಭಾದಿತರಾಗಿದ್ದರು. ಲಾಕ್ ಡೌನ್ ನಂತರ ಅವರು ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದರು.

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆದರೆ ಕಾರಣಾಂತರಗಳಿಂದ ಆ ಕೆಲಸವನ್ನು ಕಳೆದುಕೊಂಡರು. ನಂತರ ಫಜ್ಲೂರ್ ರಹಮಾನ್ ರಿಕ್ಷಾ ಓಡಿಸಲು ನಿರ್ಧರಿಸಿದರು. 80 ಸಾವಿರ ರೂಪಾಯಿ ಸಾಲ ಪಡೆದು ಬ್ಯಾಟರಿ ಚಾಲಿತ ರಿಕ್ಷಾ ಖರೀದಿಸಿದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆದರೆ ಹೊಸ ನಿಯಮಗಳನ್ವಯ ಅಧಿಕಾರಿಗಳು ರಿಕ್ಷಾವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜೀವನಕ್ಕೆ ದಾರಿಯಾಗಿದ್ದ ರಿಕ್ಷಾವನ್ನು ಕಳೆದುಕೊಂಡ ಫಜ್ಲೂರ್ ರಹಮಾನ್ ಕಣ್ಣೀರಿಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೊ ನೋಡಿ ಜನ ದುಃಖಿತರಾಗಿದ್ದಾರೆ. ಅವರಲ್ಲಿ ಕೆಲವರು ಸ್ವಯಂಪ್ರೇರಿತರಾಗಿ ಫಜ್ಲೂರ್ ರಹಮಾನ್‌ಗೆ ನೆರವಿಗೆ ಧಾವಿಸಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೀಗೆ ಫಜ್ಲೂರ್ ರಹಮಾನ್‌ಗೆ ನೆರವಿಗೆ ಧಾವಿಸಿದವರಲ್ಲಿ ಅಹ್ಸಾನ್ ಬೂಯಾನ್ ಸಹ ಒಬ್ಬರು. ಅಹ್ಸಾನ್ ಬೂಯಾನ್ ಫಜ್ಲೂರ್ ರಹಮಾನ್ ರವರಿಗೆ ಹೊಸ ರಿಕ್ಷಾವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಗತ್ಯ ಬಿದ್ದಾಗ ನಾವು ವಿಷಯಗಳನ್ನು ಬದಲಿಸಬಹುದು ಎಂದು ಹೇಳಿರುವ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಫಜ್ಲೂರ್ ರಹಮಾನ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಹೊಸ ರಿಕ್ಷಾ ನೀಡಿ ಜೀವನಕ್ಕೆ ಆಸರೆಯಾದ ಅಹ್ಸಾನ್ ಬೂಯಾನ್ ಅವರನ್ನು ಜನರು ಶ್ಲಾಘಿಸುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಹಲವು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

Most Read Articles

Kannada
English summary
Stranger gifts rickshaw to rickshaw driver. Read in Kannada.
Story first published: Saturday, October 10, 2020, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X