ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕುತ್ತಿಗೆಯಲ್ಲಿ ಗುರುತಿನ ಚೀಟಿ ಹೊಂದಿರುವ ನಾಯಿಯೊಂದು ಶೋರೂಂನಲ್ಲಿರುವ ಫೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ 30,000ಕ್ಕೂ ಹೆಚ್ಚು ಲೈಕ್‌ಗಳು ಹಾಗೂ ಹಲವಾರು ಕಾಮೆಂಟ್‌ಗಳು ಬಂದಿವೆ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಫೋಟೋ ವೈರಲ್ ಆಗುತ್ತಲೇ ಇದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚು ಲೈಕ್ ಗಳನ್ನು ಪಡೆಯುತ್ತಿದೆ. ಈ ಫೋಟೋ ನೋಡಿದಾಗ ಶೋರೂಂ ಆಡಳಿತ ಮಂಡಳಿಯು ಕರೋನಾ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ನಾಯಿಯನ್ನು ನೇಮಕ ಮಾಡಿಕೊಂಡಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಾಯಿಯನ್ನು ನೇಮಕ ಮಾಡಿಕೊಂಡಿರುವುದರ ಹಿಂದೆ ಬೇರೆಯೇ ಕಾರಣವಿದೆ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೊಸ ಕಾರು ಶೋರೂಂನ ಆಡಳಿತ ಮಂಡಳಿಯು ಗ್ರಾಹಕರನ್ನು ಆಕರ್ಷಿಸಲು ನಾಯಿಯನ್ನು ಸ್ವಾಗತಕಾರನಾಗಿ (ರಿಸೆಪ್ಶನಿಸ್ಟ್) ನೇಮಿಸಿಕೊಂಡಿದೆ. ಸಾಮಾನ್ಯವಾಗಿ ಕಾರು ಶೋರೂಂಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಸುಂದರ ಮಹಿಳೆಯರನ್ನು ಸ್ವಾಗತಕಾರರಾಗಿ ನೇಮಿಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಪುರುಷರನ್ನು ಸಹ ನೇಮಿಸಿಕೊಳ್ಳಲಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗ್ರಾಹಕರನ್ನು ವಿಭಿನ್ನವಾದ ರೀತಿಯಲ್ಲಿ ಸ್ವಾಗತಿಸುವ ಉದ್ದೇಶದಿಂದ ಈ ನಾಯಿಯನ್ನು ಬ್ರೆಜಿಲ್‌ನ ಹ್ಯುಂಡೈ ಸೆರಾ, ಇಎಸ್ ಶೋರೂಂನಲ್ಲಿ ಸ್ವಾಗತಕಾರನಾಗಿ ನೇಮಿಸಿಕೊಳ್ಳಲಾಗಿದೆ. ಶೋರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಇದನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ನಾಯಿಗಳಿಗೆ ಸಂಬಂಧಿಸಿದಂತೆ ಹಲವು ವಿಲಕ್ಷಣ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಲೇ ಇರುತ್ತವೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಹಾಗೂ ರೈಲುಗಳಲ್ಲಿ ನೇತಾಡಿಕೊಂಡು ಪ್ರಯಾಣಿಸುವವರ ವಿರುದ್ಧ ನಾಯಿಗಳನ್ನು ಬಳಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ನಾಯಿಗಳು ಕಾವಲುಗಾರನಾಗಿ ಹಾಗೂ ಸ್ನೇಹಿತನಾಗಿ ವರ್ತಿಸುವ ಗುಣವನ್ನು ಹೊಂದಿವೆ. ಹ್ಯುಂಡೈ ಶೋರೂಂ ಮ್ಯಾನೇಜ್‌ಮೆಂಟ್ ನಿಷ್ಟೆಗೆ, ನಿಯತ್ತಿಗೆ ಹೆಸರಾಗಿರುವ ನಾಯಿಯನ್ನು ರಿಸೆಪ್ಶನಿಸ್ಟ್ ಆಗಿ ನೇಮಿಸಿಕೊಂಡಿದೆ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸ್ವಾಗತಕಾರನಾಗಿ ನೇಮಕಗೊಂಡಿರುವ ನಾಯಿಯು ಕೋಪದಿಂದ ವರ್ತಿಸದೇ, ತನ್ನ ನೋಟದಿಂದಲೇ ಗ್ರಾಹಕರನ್ನು ಆಕರ್ಷಿಸುತ್ತಿದೆ. ರಿಸೆಪ್ಶನಿಸ್ಟ್ ಆಗಿ ನೇಮಕಗೊಂಡಿರುವ ನಾಯಿ, ಬೀದಿ ನಾಯಿ ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಅಂದ ಹಾಗೆ ಹ್ಯುಂಡೈ ಶೋರೂಂ ಆಡಳಿತ ಮಂಡಳಿಯು ಈ ನಾಯಿಗೆ ಡಕ್ಸನ್ ಪ್ರೈಮ್ ಎಂಬ ಹೆಸರನ್ನಿಟ್ಟಿದೆ. ಇದು ಹ್ಯುಂಡೈ ಕಂಪನಿಯ ಪ್ರಸಿದ್ಧ ಕಾರು ಮಾದರಿಯ ಹೆಸರು. ಶೋರೂಂನಲ್ಲಿದ್ದಾಗ ನಾಯಿಯು ಈ ಹೆಸರಿನ ಐಡೆಂಟಿಟಿ ಕಾರ್ಡ್ ಧರಿಸಿರುತ್ತದೆ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹ್ಯುಂಡೈ ಶೋರೂಂನ ಆಡಳಿತ ಮಂಡಳಿಯ ಈ ಕ್ರಮಕ್ಕೆ ಸುತ್ತ ಮುತ್ತಲಿರುವ ಪ್ರದೇಶದ ನಿವಾಸಿಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಜೊತೆಗೆ ಇಂಟರ್ ನೆಟ್ ನಲ್ಲಿಯೂ ಸಹ ಹ್ಯುಂಡೈ ಸೆರಾ ಆಡಳಿತ ಮಂಡಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹ್ಯುಂಡೈ ಶೋರೂಂ ಆಡಳಿತ ಮಂಡಳಿಯು ಮೇ 21ರಂದು ಟಕ್ಸನ್ ಪ್ರೈಮ್ ನಾಯಿಯನ್ನು ನೇಮಿಸಿಕೊಂಡಿದೆ. ಇದಕ್ಕೆ ಈ ಶೋರೂಂನಲ್ಲಿರುವ ಇತರ ಉದ್ಯೋಗಿಗಳು ಸಮ್ಮತಿ ಸೂಚಿಸಿದ್ದಾರೆ. ಜೊತೆಗೆ ನಾಯಿಗೆ ಅಗತ್ಯವಿರುವ ಆಹಾರ ಹಾಗೂ ನೀರನ್ನು ಕಾಲ ಕಾಲಕ್ಕೆ ಒದಗಿಸುತ್ತಿದ್ದಾರೆ.

ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ನಾಯಿಯ ಆರೋಗ್ಯ ಕಾಪಾಡಲು ಕಾಲಕಾಲಕ್ಕೆ ಲಸಿಕೆ ಹಾಕಿ ಸ್ವಚ್ವಗೊಳಿಸಲಾಗುತ್ತಿದೆ ಎಂದು ವರದಿಗಳಾಗಿವೆ. ಮುಂಬರುವ ದಿನಗಳಲ್ಲಿ ಜಗತ್ತಿನೆಲ್ಲೆಡೆ ಶೋರೂಂನಲ್ಲಿ ಗ್ರಾಹಕರನ್ನು ಸ್ವಾಗತಿಸಲು ನಾಯಿಗಳನ್ನೇ ನೇಮಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.

Most Read Articles

Kannada
English summary
Stray dog employed at Hyundai showroom. Read in Kannada.
Story first published: Wednesday, August 5, 2020, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X