ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಕಳೆದ ತಿಂಗಳ 23ರಂದು ಸೂಯೆಜ್ ಕಾಲುವೆ ದಾಟುವ ವೇಳೆ ಎವರ್‌ಗ್ರೀನ್ ಹಡಗು ಹವಾಮಾನ ವೈಪರೀತ್ಯದಿಂದಾಗಿ ಸೂಯೆಜ್ ಕಾಲುವೆಯಲ್ಲಿ ಸಿಲುಕಿತ್ತು. ಸತತ ಕಾರ್ಯಾಚರಣೆಯ ನಂತರ ಕಳೆದ ತಿಂಗಳ 29ರಂದು ಈ ಹಡಗನ್ನು ಹೊರ ತರಲಾಯಿತು.

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಹೊರ ಬಂದ ನಂತರ ಈ ಹಡಗನ್ನು ಸೂಯೆಜ್ ಕಾಲುವೆಯ ಲೇಕ್ ಗ್ರೇಟರ್ ಪಿಟ್‌ನಲ್ಲಿ ನಿಲ್ಲಿಸಲಾಗಿತ್ತು. ಹಡಗು ಕಾರ್ಯನಿರ್ವಹಿಸಲು ಯೋಗ್ಯವಾಗಿದೆಯೇ ಹಾಗೂ ಹಡಗು ಹಳಿ ತಪ್ಪಲು ಕಾರಣವೇನು ಎಂಬುದನ್ನು ಕಂಡು ಹಿಡಿಯಲು ತನಿಖೆ ನಡೆಸಲಾಗುತ್ತಿದೆ.

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಈ ಮಧ್ಯೆ ಸೂಯೆಜ್ ಕಾಲುವೆ ಪ್ರಾಧಿಕಾರವು ಹಡಗು ಸೂಯೆಜ್ ಕಾಲುವೆಯಲ್ಲಿ ಸಿಲುಕಿದ ಕಾರಣಕ್ಕೆ ಉಂಟಾದ ಆದಾಯದ ನಷ್ಟ ಹಾಗೂ ಹಡಗನ್ನು ಹೊರ ತೆಗೆಯಲು ನಡೆಸಿದ ಕಾರ್ಯಾಚರಣೆಯ ವೆಚ್ಚವನ್ನು ಹಡಗು ಮಾಲೀಕರು ಭರಿಸಬೇಕು ಎಂದು ಹೇಳಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ನಷ್ಟ ಪರಿಹಾರವಾಗಿ ಹಾಗೂ ಟಗ್ ಬೋಟ್‌ಗಳಿಗೆ ಖರ್ಚು ಮಾಡಿದ ವೆಚ್ಚವೂ ಸೇರಿದಂತೆ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.7,500 ಕೋಟಿ ಪರಿಹಾರ ನೀಡುವಂತೆ ಸೂಯೆಜ್ ಕಾಲುವೆ ಪ್ರಾಧಿಕಾರವು ಹಡಗು ಕಂಪನಿಗೆ ತಿಳಿಸಿದೆ.

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಈ ಹಿನ್ನೆಲೆಯಲ್ಲಿ ಸೂಯೆಜ್ ಕಾಲುವೆ ಪ್ರಾಧಿಕಾರವು ಈಜಿಪ್ಟ್ ಸರ್ಕಾರದ ಸಹಯೋಗದೊಂದಿಗೆ ಸೂಯೆಜ್ ಕಾಲುವೆಯ ಲೇಕ್ ಗ್ರೇಟರ್ ಪಿಟ್‌ನಲ್ಲಿರುವ ಎವರ್‌ಗ್ರೀನ್ ಹಡಗನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಇದರಿಂದಾಗಿ ಹಡಗಿನಲ್ಲಿದ್ದ 25 ಭಾರತೀಯ ಸಿಬ್ಬಂದಿಗಳ ಕುಟುಂಬಗಳು ಆತಂಕಕ್ಕೀಡಾಗಿವೆ. ಎಲ್ಲಾ ಸಿಬ್ಬಂದಿಯನ್ನು ಸೂಯೆಜ್ ಕಾಲುವೆ ಪ್ರಾಧಿಕಾರದಲ್ಲಿ ಸೆರೆಯಲ್ಲಿಡಲಾಗಿದೆ.

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಹಡಗಿನ ತಾಂತ್ರಿಕ ನಿರ್ವಹಣೆಯನ್ನು ನೋಡಿಕೊಳ್ಳುವ ಬರ್ನ್‌ಹಾರ್ಡ್ ಶಟಲ್ ಶಿಪ್ ಮ್ಯಾನೇಜ್‌ಮೆಂಟ್ ಸೂಯೆಜ್ ಕಾಲುವೆ ಪ್ರಾಧಿಕಾರದ ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಿಇಒ ಇಯಾನ್ ಬೆವರಿಡ್ಜ್, ಎವರ್‌ಗ್ರೀನ್ ಹಡಗನ್ನು ವಶಪಡಿಸಿಕೊಳ್ಳಲು ಸೂಯೆಜ್ ಕಾಲುವೆ ಪ್ರಾಧಿಕಾರವು ನಿರ್ಧರಿಸುವುದು ನಿಜಕ್ಕೂ ನಮಗೆ ಅಸಮಾಧಾನವನ್ನುಂಟು ಮಾಡಿದೆ ಎಂದು ಹೇಳಿದರು.

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಹಡಗಿನ ಚಲನೆಗೆ ಸಂಬಂಧಿಸಿದಂತೆ ಸೂಯೆಜ್ ಕಾಲುವೆ ಪ್ರಾಧಿಕಾರವು ಕೋರಿದ ವಾಯ್ಸ್ ಡೇಟಾ ರೆಕಾರ್ಡರ್ ಸೇರಿದಂತೆ ಎಲ್ಲಾ ಡೇಟಾ ಹಾಗೂ ದಾಖಲೆಗಳನ್ನು ನೀಡಲಾಗಿದೆ. ಸಾಧ್ಯವಾದಷ್ಟು ಬೇಗ ಹಡಗನ್ನು ಬಿಡುಗಡೆಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಾರಿಕ್ ಅಲ್-ಹಶಿಮಿ ಎಂಬುವವರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೂಯೆಜ್ ಕಾಲುವೆ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಸಿಬ್ಬಂದಿ

ಸೂಯೆಜ್ ಕಾಲುವೆ ಪ್ರಾಧಿಕಾರವು ಆದಷ್ಟು ಬೇಗೆ ಎವರ್‌ಗ್ರೀನ್ ಹಡಗನ್ನು ಬಿಡುಗಡೆಗೊಳಿಸಿ, ಬಂಧಿಯಾಗಿರುವ ಎಲ್ಲಾ ಭಾರತೀಯ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬೇಕು ಎಂಬುದು ಎಲ್ಲರ ಆಶಯವಾಗಿದೆ.

Most Read Articles

Kannada
English summary
Suej canal authority decision takes Evergreen ship into trouble. Read in Kannada.
Story first published: Friday, April 16, 2021, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X