Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮಾನದ ಲ್ಯಾಂಡಿಂಗ್ ಬಗ್ಗೆ ನೀವು ತಿಳಿಯದೆ ಇರುವ ವಿಚಾರ ಇಲ್ಲಿವೆ...
ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ... ಪ್ರತಿಯೊಬ್ಬರಿಗೂ ಸಹ ಈ ವಿಚಾರ ಖುಷಿ ನೀಡುತ್ತದೆ. ವಿಮಾನ ಪ್ರಯಾಣ ಆರಾಮದಾಯಕವೂ ಕೂಡ. ವಿಮಾನದ ಬಗ್ಗೆ ಸಾಕಷ್ಟು ವಿಚಾರಗಳು ನಮಗೆ ಅಚ್ಚರಿ ತರಿಸುತ್ತವೆ ಕೂಡ.

ನಮಗೆ ವಿಮಾನವು ಹಾರುತ್ತದೆ, ನಾವುಗಳು ವಿಮಾನದಲ್ಲಿ ಪ್ರಯಾಣಿಸುತ್ತೇವೆ, ಎಂಜಿನ್ ಹೊಂದಿರುತ್ತದೆ ಎಂಬೆಲ್ಲಾ ವಿಚಾರಗಳು ಗೊತ್ತಿವೆ. ಆದ್ರೆ ತಾಂತ್ರಿಕವಾಗಿ ಯಾವೆಲ್ಲಾ ಅಂಶಗಳನ್ನು ವಿಮಾನವು ಒಳಗೊಂಡಿರುತ್ತದೆ ಎಂಬುದನ್ನು ನಮಗೆ ಗ್ರಹಿಸಲು ಕಷ್ಟವಾಗುತ್ತದೆ.

ಅದೇ ರೀತಿ, ವಿಮಾನವು ಭೂಮಿ ಸ್ಪರ್ಶಿಸುವಾಗ ಅಥವಾ ಏರುವಾಗ, ಏಕೆ ದಟ್ಟವಾದ ದೀಪವನ್ನು ಕಡಿಮೆಗೊಳಿಸುತ್ತಾರೆ ? ಹಾಗು ಅದೇ ಸಮಯದಲ್ಲಿ ವಿಂಡೋ ಪರದೆಯನ್ನು ಏಕೆ ಮುಚ್ಚುತ್ತಾರೆ ? ಮತ್ತು ವಿಮಾನದಲ್ಲಿ "ಡಿಂಗ್" ಶಬ್ದ ಏಕೆ ಧ್ವನಿಸುತ್ತದೆ? ಎಂಬುದರ ಬಗ್ಗೆ ನಿಮಗೆ ಗೊತ್ತೆ ?

ವಿಮಾನದಲ್ಲಿ ಅನುಸರಿಸುವ ಕೆಲವು ನಿಯಮಗಳ ಹಿಂದಿನ ಕಾರಣಗಳನ್ನು ಕಂಡುಹಿಡಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದೆ ಇರುತ್ತದೆ. ವಿಮಾನದ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಕೆಲವೊಂದು ಪ್ರೆಶ್ನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ತಿಳಿದುಕೊಳ್ಳಿ.

1. ನೀವು ನೆಲದ ಮೇಲೆ ಇಳಿಯುವುದಕ್ಕೂ ಮುನ್ನ ವಿಶ್ರಮಿಸಿದಂತೆ ಅನ್ನಿಸುತ್ತದೆ :
ವಿಮಾನವು ರೆಕ್ಕೆಗಳಿಂದ ಉತ್ಪತ್ತಿಯಾಗುವ 'ಗ್ರೌಂಡ್ ಎಫೆಕ್ಟ್' ವಿದ್ಯಮಾನವು ಶೀಘ್ರವಾಗಿ ನೆಲಕ್ಕೆ ಹತ್ತಿರವಾಗುವಾಗ ಈ ರೀತಿಯ ಅನುಭವ ನಿಮಗಾಗುವುದುಂಟು.

ವಿಕಿಪೀಡಿಯಾದ ಪ್ರಕಾರ, ಇದು ಪ್ರಾಥಮಿಕವಾಗಿ ಉಂಟಾಗುವ ವಿಂಗ್ಟಿಪ್ ವೋರ್ಟಿಸಸ್ ಎಡಕ್ಕೆ ಕಾರಣ. ಇದರ ಪರಿಣಾಮವಾಗಿ ಒಮ್ಮೆ ನಿಮ್ಮನ್ನು ಹಿಂದಕ್ಕೆ ಯಾರೋ ಎಳೆದಂತೆ ಭಾಸವಾಗುತ್ತದೆ.

2. ವಿಮಾನದ ರೆಕ್ಕೆಗಳ ಕೊನೆಯ ಭಾಗ ಮೇಲಕ್ಕೆ ಚಾಚಿಕೊಂಡಿರುವುದು ಯಾಕೆ ಗೊತ್ತಾ?
ವಿಮಾನದ ರೆಕ್ಕೆಗಳನ್ನ ಸರಿಯಾಗಿ ಗಮನಿಸಿದಾಗ ಅದರ ರೆಕ್ಕೆಗಳು ಕೊನೆಯಲ್ಲಿ ಮೇಲಕ್ಕೆ ಚಾಚಿಕೊಂಡಿರುವುದು ಕಾಣಿಸುತ್ತದೆ. ಮೇಲಕ್ಕೆ ಚಾಚಿಕೊಂಡಿರುವ ಈ ಭಾಗವನ್ನು ವಿಂಗ್‌ಲೆಟ್ ಎಂದು ಕರೆಯುತ್ತಾರೆ. ಈ ಸಣ್ಣ ಭಾಗವು ವಿಮಾನ ಹಾರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

ಈ ವಿಂಗ್‌ಲೆಟ್ಸ್ ವಿಮಾನವು ಯಾವ ರೀತಿ ಹಾರಾಟ ನಡೆಸಬೇಕು ಎಂದು ಅಂದುಕೊಂಡಿದೆಯೋ ಅದೇ ರೀತಿ ಹಾರಾಟ ನಡೆಸಲು ನೆರವು ನೀಡುತ್ತದೆ. ಈ ವಿಂಗ್‌ಲೆಟ್ ಗಾಳಿಯ ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದು ವಿಮಾನದ ರೆಕ್ಕೆಗಳ ನಡುವೆ ಗಾಳಿಯ ಸುಳಿಯ ಸೆಳೆತ ಹೆಚ್ಚಾಗದಂತೆ ಕಂಟ್ರೋಲ್ ಮಾಡುತ್ತದೆ.

ಈ ಸೆಳೆತ ಕಡಿಮೆಯಾದರೆ ವಿಮಾನ ಯಾವುದೆ ಅಡೆ ತಡೆ ಇಲ್ಲದೆ ಸರಯಾಗಿ ಚಲಿಸುತ್ತದೆ. ಇದರಿಂದ ಹೆಚ್ಚು ಇಂಧನ ಕೂಡ ಬಳಕೆಯಾಗುವುದಿಲ್ಲ. ಆದುದರಿಂದ ಪ್ರತಿಯೊಂದು ವಿಮಾನದಲ್ಲಿ ಈ ವಿಂಗ್‌ಲೆಟ್ ಇರುತ್ತದೆ.