ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಭಾರತದಲ್ಲಿ ಸೂಪರ್‌ಬೈಕ್‍‍ಗಳ ಖರೀದಿಯು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅನೇಕರು ಈ ಬೈಕುಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ. ಆದರೆ ಜವಾಬ್ದಾರಿಯುತ ಬೈಕ್ ಸವಾರನಿಗೆ ಬೇಕಾಗಿರುವ ಜವಾಬ್ದಾರಿಯನ್ನು ಮರೆತಿದ್ದಾರೆ.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಬೈಕ್ ಪ್ರಿಯರು ಹಾಗೂ ವೃತ್ತಿಪರ ಬೈಕರ್‍‍ಗಳ ಪ್ರಕಾರ, ಈ ರೀತಿಯ ಬೈಕುಗಳನ್ನು ಚಾಲನೆ ಮಾಡುವುದು, ಅವರಿಗೆ ಒಂದು ಬಗ್ಗೆಯ ಉತ್ಸಾಹವನ್ನು ನೀಡುತ್ತದೆ. ಒಳ್ಳೆಯ ಸವಾರ ಹಾಗೂ ವೃತ್ತಿಪರ ಸವಾರನ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣವಿದೆ. 10ಆರ್ ಆನ್‍‍ಸ್ಟರಾಯಿಡ್ಸ್ ಅಪ್‍‍ಲೋಡ್ ಮಾಡಿರುವ ಈ ವೀಡಿಯೊದಲ್ಲಿ ಕೆಲವು ಬೈಕರ್‍‍ಗಳು, ಸಾರ್ವಜನಿಕ ರಸ್ತೆಗಳಲ್ಲಿ ಹುಚ್ಚು ಹುಚ್ಚಾಗಿ ಬೈಕ್ ಚಲಾಯಿಸುವುದನ್ನು ಕಾಣಬಹುದು.

ವೀಡಿಯೊದಲ್ಲಿ ಕಾಣುವಂತೆ, ಕವಾಸಕಿ ನಿಂಜಾ ಝಡ್‌ಎಕ್ಸ್ 10 ಸೀರಿಸ್ ಸೂಪರ್‌ಬೈಕ್‌ಗಳು ಸಾರ್ವಜನಿಕ ರಸ್ತೆಯಲ್ಲಿ ಕರ್ಕಶವಾದ ಶಬ್ದವನ್ನುಂಟು ಮಾಡಿಕೊಂಡು ಚಲಿಸುತ್ತಿವೆ. ವೀಡಿಯೊಗೆ ಹೈವೇ ಬ್ಯಾಟಲ್ ಅಥವಾ ಹೆದ್ದಾರಿ ಯುದ್ಧ ಎಂಬ ಟೈಟಲ್ ನೀಡಲಾಗಿದೆ.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಸಾರ್ವಜನಿಕ ರಸ್ತೆಯಲ್ಲಿನ ಈ ಹುಚ್ಚುತನವನ್ನು ನೋಡಿದ ನಂತರ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಬೈಕುಗಳಲ್ಲಿ ಅಪಾಯಕಾರಿಯಾದ ಸ್ಟಂಟ್‌ ಮಾಡುವುದನ್ನು ಕಾಣಬಹುದು. ಇದರ ಜೊತೆಗೆ ಬೈಕ್ ಅತಿಯಾದ ವೇಗದಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಈ ಬೈಕ್‌ಗಳು ಗಂಟೆಗೆ 250 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವುದನ್ನು ಸಹ ಕಾಣಬಹುದಾಗಿದೆ. ಸೂಪರ್‍‍ಬೈಕುಗಳ ಯಾವುದೇ ಹಾರ್ಡ್‌ಕೋರ್ ಉತ್ಸಾಹಿಯಾದರೂ, ಖಾಲಿ ಇರುವ ರಸ್ತೆಯಲ್ಲಿ ಹೆಚ್ಚಿನ ವೇಗದಲ್ಲಿ ಚಲಿಸುವುದನ್ನು ಇಷ್ಟಪಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ದೊಡ್ಡ ಶಕ್ತಿಗಳೊಂದಿಗೆ ದೊಡ್ಡ ಜವಾಬ್ದಾರಿಗಳು ಬರುತ್ತವೆ ಎಂಬ ಜನಪ್ರಿಯ ಗಾದೆಯಂತೆ, ಸೂಪರ್‌ಬೈಕ್‍‍ಗಳನ್ನು ಹೊಂದಿದ ಮಾತ್ರಕ್ಕೆ ರಸ್ತೆಗಳಲ್ಲಿ ಹೇಗೆ ಬೇಕೊ ಹಾಗೆ ವಾಹನ ಚಲಾಯಿಸಬಾರದು. ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ನಮಗೆ ಮಾತ್ರ ಪ್ರಯೋಜನವಾಗದೇ ಬೇರೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಕೆಲವರು ಹೆದ್ದಾರಿಗಳಲ್ಲಿ ವಾಹನಗಳನ್ನು ಚಲಾಯಿಸುವುದರಿಂದ ಯಾವುದೇ ಅಪಾಯವಾಗುವುದಿಲ್ಲವೆಂದು ಹೇಳಬಹುದು. ಆದರೆ ಹೆದ್ದಾರಿಯೇ ಆಗಲಿ, ಭಾರತದ ಯಾವುದೇ ರಸ್ತೆಗಳೇ ಆಗಲಿ ಯಾವತ್ತೂ ಅಪಾಯದಿಂದ ಹೊರತಾಗಿಲ್ಲ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಯಾವುದೇ ಪ್ರಾಣಿಯೇ ಆಗಲಿ, ಮನುಷ್ಯನೇ ಆಗಲಿ ಆಕಸ್ಮಿಕವಾಗಿ ಹೆದ್ದಾರಿಗಳಲ್ಲಿ ಅಡ್ಡಬರಬಹುದು. ನಿಮ್ಮ ವಾಹನವು ಅತಿ ವೇಗದಲ್ಲಿದ್ದಾಗ ಈ ರೀತಿಯಾಗಿ ಯಾರಾದರೂ ಅಡ್ಡ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರೀತಿಯಾಗಿ ಬೈಕುಗಳನ್ನು ಚಲಾಯಿಸುವುದು ಒಂದು ರೀತಿಯ ಕೆಟ್ಟ ಸಂದೇಶವನ್ನು ಹರಡುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಈ ರೀತಿಯಾಗಿ ಸಾರ್ವಜನಿಕವಾಗಿ ಬೈಕ್ ಚಲಾಯಿಸುವುದು ಯುವ ಜನತೆಗೆ ಒಂದು ರೀತಿಯ ಕ್ರೇಜ್ ಆಗಿ ಬಿಟ್ಟಿದೆ. ಯುವ ಜನರಂತೂ ಬೈಕ್ ಸವಾರಿ ಮಾಡಲು ಇದಕ್ಕಿಂತ ಸರಿಯಾದ ಮಾರ್ಗ ಇರಲಾರದೆಂದು ಭಾವಿಸಿದೆ. ಈ ವೀಡಿಯೊದಲ್ಲಿ ಬೈಕ್ ಸವಾರಿ ಮಾಡುತ್ತಿರುವವರು ಜೋಶ್‍‍ನಲ್ಲಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಅವರು ಹೆದ್ದಾರಿಗಳನ್ನು ರೇಸ್ ಟ್ರಾಕ್ ಎಂದೋ ಅಥವಾ ಆಟದ ಮೈದಾನವೆಂದೊ ಪರಿಗಣಿಸಿರುವಂತಿದೆ. ಜವಾಬ್ದಾರಿಯುತ ಸವಾರನ ಬಹುದೊಡ್ಡ ಜವಾಬ್ದಾರಿ ಎಂದರೆ ಸೂಪರ್‌ಬೈಕ್‌ಗಳನ್ನು ಜವಾಬ್ದಾರಿಯುತವಾಗಿ ಯಾವುದೇ ತೊಂದರೆಯಿಲ್ಲದಂತೆ ಚಲಾಯಿಸುವುದು.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಈ ಬೈಕುಗಳಿಗಾಗಿ ಹೆಚ್ಚಿನ ಹಣವನ್ನು ವೆಚ್ಚ ಮಾಡಿದ್ದಾರೆ ಎಂಬುದನ್ನು ಒಪ್ಪಬೇಕಾದರೂ, ಬೇರೆಯವರ ಪ್ರಾಣದ ಜೊತೆ ಆಟ ಆಡಿ, ಮಸ್ತಿ ಮಾಡುವುದು ಸರಿಯಲ್ಲ. ಈ ರೀತಿಯ ಸೂಪರ್‍‍‍ಬೈಕುಗಳಿಗಾಗಿಯೇ ಸರ್ಕ್ಯೂಟ್‌ ಹಾಗೂ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಸಾಧ್ಯವಾದರೆ ಈ ಟ್ರಾಕ್‍‍ಗಳಲ್ಲಿ ಬೈಕುಗಳನ್ನು ಚಲಾಯಿಸಬಹುದು.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಭಾರತದಲ್ಲಿ ಸೀಮಿತ ಸಂಖ್ಯೆಯ ಸರ್ಕ್ಯೂಟ್‌ಗಳು ಮಾತ್ರ ಇವೆ ಎಂಬುದನ್ನು ಒಪ್ಪಬೇಕಾದರೂ, ಹೆದ್ದಾರಿಯಲ್ಲಿ ಗಂಟೆಗೆ ಸುಮಾರು 250 ಕಿ.ಮೀ ವೇಗದಲ್ಲಿ ಸವಾರಿ ಮಾಡುವುದು ಸಮರ್ಥಿನೀಯವಲ್ಲ. ಈ ಹೆದ್ದಾರಿಗಳು ಯಾವಾಗಲೂ ಖಾಲಿಯಾಗಿರುವುದಿಲ್ಲ. ಅನೇಕ ಬಾರಿ ಕಾರ್ಯನಿರತವಾಗಿರುತ್ತವೆ.

ಸೂಪರ್ ಬೈಕ್ ಆದ್ರೆ ಏನಂತೆ, ಯದ್ವಾ ತದ್ವಾ ಬೈಕ್ ಸವಾರಿ ಎಷ್ಟು ಸರಿ ?

ಬಹುತೇಕ ನಗರಗಳ ಹೊರವಲಯದಲ್ಲಿ ನಿರ್ಜನ ರಸ್ತೆಗಳಲ್ಲಿರುತ್ತವೆ. ಅಂತಹ ಸ್ಥಳಗಳಲ್ಲಿ ಬೈಕಿನ ವೇಗವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ನಿಮ್ಮ ಬಳಿಯೂ ಸೂಪರ್‍‍ಬೈಕುಗಳಿದ್ದರೆ, ಸಂಚಾರಿ ನಿಯಮಗಳನ್ನು ಪಾಲಿಸಿ ಬೈಕ್ ಚಲಾಯಿಸಿ. ಇದರಿಂದ ನಿಮಗೂ ಒಳ್ಳೆಯದು. ಇತರರಿಗೂ ಒಳ್ಳೆಯದು.

Source: 10r_onsteroids/YouTube

Most Read Articles

Kannada
English summary
Superbikes street racing on Indian roads - Read in kannada
Story first published: Thursday, August 22, 2019, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more