ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವುದಕ್ಕೆ ಇಂತದ್ದೇ ಅಂತಾ ಕಾರಣ ಬೇಕಿಲ್ಲ. ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂತ ಬೇಡದ ವಿಚಾರಗಳೇ ಹೆಚ್ಚು ಸುದ್ದಿಯಾಗುತ್ತವೆ. ಇಲ್ಲೂ ಕೂಡಾ ಅಂತದ್ದೇ ಒಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಹೌದು, ಹಯಾಬುಸಾ ಬೈಕ್ ಮಾಲೀಕನೊಬ್ಬ ಪಾಪ್ ಕಾರ್ನ್ ತಯಾರಿಸಲು ಮಾಡಿದ ಪ್ಲ್ಯಾನ್ ನಿಮ್ಮ ತಲೆ ಕೆಡಿಸುತ್ತೆ. ಇದು ಹಯಾಬುಸಾ ಬೈಕ್ ಮಾಲೀಕನ ಜಾಣತನವೋ ಅಥವಾ ಮಾಡಲು ಕೆಲಸ ಇಲ್ಲದಿರುವವರು ಹೀಗೆಲ್ಲಾ ಮಾಡ್ತಾರೋ ಎನ್ನುವುದು ನಿಮ್ಮ ತರ್ಕಕ್ಕೆ ಬಿಟ್ಟಿದ್ದು. ಹಾಗಾದ್ರೆ ಪಾಪ್ ಕಾರ್ನ್ ತಯಾರಿಸಲು ಹಯಾಬುಸಾ ಬೈಕ್ ಮಾಲೀಕ ಮಾಡಿದ್ದೇನು? ಪಾಪ್ ಕಾರ್ನ್ ಅನ್ನು ಹೀಗೂ ತಯಾರಿ ಮಾಡಬಹುದಾ ಎನ್ನುವುದಕ್ಕೆ ಬೈಕ್ ಮಾಲೀಕನ ಹೊಸ ಐಡಿಯಾ ಏನು? ಇಲ್ಲಿದೆ ನೋಡಿ..

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಸೂಪರ್ ಬೈಕ್ ಇರುವ ಬಹುತೇಕ ಮಾಲೀಕರು ಟಾಪ್ ಸ್ಪೀಡ್ ರೈಡ್ ಮಾಡಿದ ವಿಡಿಯೋಗಳನ್ನು ಇಲ್ಲವೋ ಆಫ್ ರೋಡ್‌ನಲ್ಲಿ ಮಾಡಿದ ರೈಡಿಂಗ್ ಕೌಶಲ್ಯ ಪ್ರದರ್ಶನವನ್ನೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನೋಡಿಯೇ ಇರುತ್ತೇವೆ.

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಆದ್ರೆ, ಈ ಹಯಾಬುಸಾ ಬೈಕ್ ಮಾಲೀಕ ಮಾತ್ರ ಮನೆಯಲ್ಲೇ ಇದ್ದುಕೊಂಡು ಬೈಕಿನ ಎಕ್ಸಾಸ್ಟ್ ಮೂಲಕ ಪಾಪ್ ಕಾರ್ನ್ ಮಾಡಬಹುದು ಎನ್ನುವುದನ್ನು ತೊರಿಸಿಕೊಟ್ಟಿದ್ದಾನೆ. ಕಾದ ಹಂಚಿನಂತಿರುವ ಎಕ್ಸಾಸ್ಟ್‌ನಲ್ಲಿ ಜೋಳ ಸುರಿದು ಪಾಪ್ ಕಾರ್ನ್ ತಯಾರಿಸಿ ತಿನ್ನುವುದನ್ನು ನೋಡಿದ್ರೆ ಎಂತವರಿಗೂ ವಾಕರಿಕೆ ಬರದೇ ಇರಲಾರದು.

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಪಾಪ್ ಕಾರ್ನ್ ಅಂದ್ರೆ ಬಹುತೇಕರಿಗೆ ಇಷ್ಟವಾಗುವುದೇ ಅದರ ರುಚಿಯಿಂದ. ಹೀಗಿರುವಾಗ ಈ ಹಯಾಬುಸಾ ಬೈಕ್ ಮಾಲೀಕನು ಬೈಕ್ ಎಕ್ಸಾಸ್ಟ್‌ನಲ್ಲೇ ಜೋಳ ಸುರಿದು ಪಾಪ್ ಕಾರ್ನ್ ತಯಾರಿಸುವುದನ್ನು ನೋಡುತ್ತಿದ್ರೆ ಪಾಪ್ ಕಾರ್ನ್ ತಿನ್ನಬೇಕೆನ್ನುವ ಆಸೆಯು ಹೊರಟುಹೋಗಬಹುದು. ಆದರೂ ಈ ಬೈಕ್ ಮಾಲೀಕ ಮಾಡಿದ ಸಾಧನೆಯನ್ನು ವ್ಹಾ , ವ್ಹಾ ಎನ್ನುವ ಹೊಗಳಿ ಚಪ್ಪಾಳೆ ತಟ್ಟುವವರ ಸಂಖ್ಯೆಗೇನು ಕಡಿಮೆಯಿಲ್ಲ.

ಹಾಗಾದ್ರೆ ಬೈಕ್ ಎಕ್ಸಾಸ್ಟ್‌ನಲ್ಲಿ ಪಾಪ್ ಕಾರ್ನ್ ಹೇಗೆ ಸಿದ್ದವಾಗುತ್ತೆ? ಈ ವಿಡಿಯೋ ನೋಡಿ..

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಇನ್ನು ಬಲಿಷ್ಠ ಎಂಜಿನ್ ವಿಚಾರವಾಗಿ ಜನಪ್ರಿಯತೆ ಹೊಂದಿರುವ ಸುಜುಕಿ ಹಯಾಬುಸಾ ಬೈಕಿನಲ್ಲಿ ಪಾಪ್ ಕಾರ್ನ್ ತಯಾರು ಮಾಡಿರುವ ಟರ್ಬೋ ಎಕ್ಸ್‌ಟ್ರಿಮ್ ಯುಟ್ಯೂಬ್ ಚಾನೆಲ್ ಸದಸ್ಯರು ಸೂಪರ್ ಬೈಕ್ ಮಾಲೀಕರಿಗೆ ಚಾಲೆಂಜ್ ಒಂದನ್ನು ನೀಡಿದೆ.

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಸೂಪರ್ ಬೈಕ್ ರೈಡರ್‌ಗಳಿಗೆ ನೀಡಬಹುದಾದ ಟಾಪ್ ಸ್ಪೀಡ್ ಚಾಲೆಂಜ್, ಟೈಮ್ ಲ್ಯಾಪ್ಸ್ ಚಾಲೆಂಜ್ ಬದಲಾಗಿ ಪಾಪ್ ಕಾರ್ನ್ ಚಾಲೆಂಜ್ ನೀಡಿರುವ ಎಕ್ಸ್‌ಟ್ರಿಮ್ ತಂಡವು, ನಮ್ಮಂತೆ ಎಕ್ಸಾಸ್ಟ್ ಮೂಲಕ ಪಾಪ್ ಕಾರ್ನ್ ತಯಾರಿಸುವಂತೆ ಸವಾಲು ಹಾಕಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಒಟ್ಟಿನಲ್ಲಿ ಜನಪ್ರಿಯತೆ ಮಾಡಲು ಏನಾದ್ರೋ ಒಂದು ಮಾಡಲೇಬೇಕು ಎನ್ನುವವರ ತಲೆಯಲ್ಲಿ ಮಾತ್ರ ಇಂತಹ ಐಡಿಯಾಗಳು ಹೊಳೆಯಲು ಸಾಧ್ಯ. ಹಾಗಂತ ನೀವು ಕೂಡಾ ಇವತ್ತು ಪಾಪ್ ಕಾರ್ನ್ ತಯಾರಿ ಮಾಡಿಯೇ ಬಿಡೋಣ ಅಂತಾ ಬೈಕ್ ಎಕ್ಸಾಸ್ಟ್‌ಗೆ ಜೋಳ ಸುರಿದು ಬಿಟ್ರೆ ಕಥೆ ಅಷ್ಟೇ.

Most Read Articles

Kannada
English summary
Crazy Suzuki Hayabusa owner Makes A Pop Corn With His Bike. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X