ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಅಜಿತ್​ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತ ನಟರಲ್ಲಿ ಒಬ್ಬರು. ಅವರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತದೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ತಾಲಾ' ಅಜಿತ್​ ಎಂದು ಕರೆಯುತ್ತಾರೆ. ನಟ ಅಜಿತ್​ ಅವರು ಬೈಕ್​ಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ನಟ ಅಜಿತ್ ಸ್ಪರ್ಧಿಯಾಗಿ ಭಾಗವಹಿಸಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದರು. ನಟ ಅಜಿತ್​ ಅವರ ಬಳಿ ದುಬಾರಿ ಕಾರು ಬೈಕ್‌ಗಳ ಕಲೆಕ್ಷನ್ ಇದೆ. ಅವರು ತಮ್ಮ ಬೈಕಿನಲ್ಲಿ ಯುರೋಪ್​ ರಾಷ್ಟ್ರಗಳಲ್ಲಿ ರೋಡ್ ಟ್ರಿಪ್ ಎಲ್ಲಾ ತೆರಳಿದ್ದಾರೆ. ಅವರ ರೋಡ್ ಟ್ರಿಪ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಸ್ತುತ ದೇಶಾದ್ಯಂತ ಬೈಕ್‌ನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ವೇಳೆ ಆದ ಒಂದು ಘಟನೆಯೊಂದನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ಇದರಲ್ಲಿ ಅಜಿತ್ ಕುಮಾರ್ ಎಷ್ಟು ಸಿಂಪಲ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಕನ್ನಿಡಿಗ ಮಂಜು ಕಶ್ಯಪ್ ಕೂಡ ಬೈಕರ್ ಆಗಿದ್ದು, ಅವರು ಲಡಾಖ್‌ನಲ್ಲಿ ಟ್ರಿಪ್ ಹೋಗಿದ್ದರು. ಆದ ನಡೆದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಮಂಜು ಕಶ್ಯಪ್ ಅವರ ಪೋಸ್ಟ್ ನಲ್ಲಿ, ನಾನು ಬೈಕ್‌ನಲ್ಲಿ ಲಡಾಖ್‌ನಲ್ಲಿ ಟ್ರಿಪ್ ತೆರಳಿದ್ದೆ. ಟ್ರಿಪ್ ಮುಗಿಸಿ ಹಿಂದಿರುಗುವ ವೇಳೆ ಇದ್ದಕ್ಕಿದ್ದಂತೆಯೇ ನನ್ನ ಬೈಕ್ ನಿಂತು ಹೋಯ್ತು.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ರಸ್ತೆ ಬದಿ ನಿಲ್ಲಿಸಿಕೊಂಡಿದ್ದೆ. ಅದೇ ದಾರಿಯಲ್ಲಿ ಬಿಎಂಡಬ್ಲ್ಯು ಬೈಕಿನಲ್ಲಿ ನಟ ಅಜಿತ್ ಮತ್ತು ಅವರ ಸ್ನೇಹಿತರು ಹೋಗುತ್ತಿದ್ದರು. ನಾನು ಸಹಾಯ ಕೇಳಿದಾಗ ಅಜಿತ್ ಅವರು ತಕ್ಷಣವೇ ತಮ್ಮ ಬೈಕ್ ನಿಲ್ಲಿಸಿ ಸಹಾಯಕ್ಕೆ ಧಾವಿಸಿದರು. ಮೊದಲು ಆ ವ್ಯಕ್ತಿ ಹೆಲ್ಮೆಟ್ ಹಾಕಿದ್ದರಿಂದ ಅವರು ಅಜಿತ್ ಎಂಬುದು ನಮಗೆ ಗೊತ್ತೇ ಆಗಲಿಲ್ಲ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ನಮ್ಮ ಬಳಿಗೆ ಬಂದ ಅಜಿತ್ ಅವರು ನನ್ನ ಬೈಕ್ ಕೆಳಗೆ ಕೂತು ಪರೀಕ್ಷಿಸಿದರು. ಅವರೇ ಸರಿಮಾಡಿ, ಅದನ್ನು ಓಡಿಸಿ ಚೆಕ್ ಮಾಡಿದರು. ಇದನ್ನು ನೋಡುತ್ತಿದ್ದ ಅಲ್ಲಿದ್ದವರು ಒಂದು ಕ್ಷಣ ಆಶ್ಚರ್ಯಚಕಿತರಾದರು. ನಂತರ ರಸ್ತೆ ಬದಿಯಲ್ಲಿ ಇದ್ದ ಅಂಗಡಿಯಲ್ಲಿ ನಮ್ಮ ಜೊತೆಗೆ ಅಜಿತ್ ಅವರು ಟೀ ಕುಡಿದರು.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ನಮ್ಮ ಜೊತೆಗೆ 10 ನಿಮಿಷ ಮಾತನಾಡಿದರು. ಅಲ್ಲದೆ, ತಮ್ಮ ಹಿಂದಿನ ರೋಡ್ ಟ್ರಿಪ್‌ ಬಗ್ಗೆ ಹೇಳಿದರು. ಇದನ್ನೆಲ್ಲ ನಾನು ಬರೆಯಲು ಕಾರಣ, ಲೆಜೆಂಡ್ ಎನಿಸಿಕೊಂಡಿರುವ ವ್ಯಕ್ತಿಯೊಬ್ಬರು ಜೀರೋ ಅಟಿಟ್ಯೂಡ್‌ ಹೊಂದಿದ್ದಾರೆ ಮತ್ತು ಜನರ, ಅಭಿಮಾನಿಗಳ ಮೇಲೆ ಅದ್ಭುತವಾದ ಪ್ರೀತಿಯನ್ನು ಹೊಂದಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ನಾನು ಅದೃಷ್ಟಶಾಲಿ. ಅವರು ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದ ಈ ದಿನವನ್ನು ನಾನು ಮರೆಯಲಾರೆ' ಎಂದು ಮಂಜು ಕಶ್ಯಪ್ ಬರೆದುಕೊಂಡಿದ್ದಾರೆ. ಜೊತೆಗೆ ಅಜಿತ್ ಅವರ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅಜಿತ್, ಎಷ್ಟೊಂದು ಸಿಂಪಲ್ ಅನ್ನೋದನ್ನು ಕಂಡು ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ. ಮಂಜು ಕಶ್ಯಪ ಅವರ ಪೋಸ್ಟ್ ವೈರಲ್ ಮಾಡಿದ್ದಾರೆ. ಅಜಿತ್‌ ಬೈಕ್, ಚಲಾಯಿಸಿವುದರಲ್ಲಿ ಪರಿಣಿತರು. ಇದೀಗ ಅಜಿತ್ ಅವರು ನಿಪುಣ ಬೈಕ್ ಮೆಕ್ಯಾನಿಕ್ ಎಂಬುದನ್ನು ಕೂಡ ಅವರು ಸಾಬೀತು ಮಾಡಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಇನ್ನು ನಟಿ ಮಂಜು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿರುವ ಸ್ಥಳವು ಲಡಾಖ್ ಆಗಿದ್ದು, ಫೋಟೋಗೆ ಪೋಸ್ ನೀಡುತ್ತಾ ನಟ-ನಟಿಯರಿಬ್ಬರು ನಗುತ್ತಿರುವುದನ್ನು ನೋಡಬಹುದು. ಈ ಇಬ್ಬರೊಂದಿಗೆ ಹಲವರು ಬೈಕ್ ರೈಡರ್‌ಗಳು ಕೂಡ ಕಾಣಿಸಿಕೊಂಡಿದ್ದು ಗುಂಪಾಗಿ ಲಾಂಗ್ ಡ್ರೈವ್ ಹೊರಟಿರುವಂತೆ ಕಾಣುತ್ತಿದೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ನಮ್ಮ ಸೂಪರ್ ಸ್ಟಾರ್ ರೈಡರ್ ಅಜಿತ್ ಕುಮಾರ್ ಸರ್ ಅವರಿಗೆ ಧನ್ಯವಾದಗಳು! ನನಗೆ ನಾಲ್ಕು ಚಕ್ರದ ವಾಹನಗಳಲ್ಲಿ ಸಾವಿರಾರು ಮೈಲುಗಳಷ್ಟು ಪ್ರಯಾಣಿಸಿರುವ ಅನುಭವವಿದೆ. ಆದರೆ ನಾನು ದ್ವಿಚಕ್ರ ವಾಹನದಲ್ಲಿ ಇದೇ ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದೇನೆ ಎಂದು ನಟಿ ಮಂಜು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಇದರೊಂದಿಗೆ ಭಾವೋದ್ರಿಕ್ತ ಬೈಕರ್‌ಗಳ ಈ ಅದ್ಭುತ ಗುಂಪಿಗೆ ಸೇರಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಅಡ್ವೆಂಚರ್ ರೈಡರ್ಸ್ ಇಂಡಿಯಾಗೆ ಹೃತ್ಪೂರ್ವಕ ಧನ್ಯವಾದಗಳು. ಅಜಿತ್ ಸರ್ ಅವರಿಂದ ಅಡ್ವೆಂಚರ್ ರೈಡರ್ಸ್ ಇಂಡಿಯಾದ suprej ಮತ್ತು sardar_sarfaraz_khan ಅವರನ್ನು ಪರಿಚಯಿಸಿದ್ದು ಗೌರವವಾಗಿದೆ! ನನ್ನ ಜೊತೆ ಸೇರಿದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಇನ್ನು ನಟ ಅಜಿತ್ ಈ ಹಿಂದೆಯೂ ಹಲವು ಬಾರಿ ಸ್ನೇಹಿತರೊಂದಿಗೆ ಬೈಕ್ ರೈಡ್ ಮೂಲಕ ಲಡಾಖ್‌ಗೆ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ ಅಜಿತ್ ಬಳಸಿದ ಬೈಕ್ ಅವರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಗ ಕಾಣಿಸಿಕೊಂಡಿರುವ ಫೋಟೋದಲ್ಲಿ ಅಜಿತ್ ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗಿರುವುದನ್ನು ನೋಡಬಹುದು. ಈ ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಸ್ಟ್ಯಾಂಡರ್ಡ್, ಪ್ರೊ ಹಾಗೂ ಡೈನಾಮಿಕ್ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಎಲ್ಲಾ ಮೂರು ಮಾದರಿಗಳಲ್ಲಿ 1170 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 125 ಬಿ‌ಹೆಚ್‌ಪಿ ಪವರ್ ಹಾಗೂ 125 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೋಡ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ನಟ ಅಜಿತ್

ಇನ್ನು ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 16 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಈ ಬೈಕಿನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.25 ಲಕ್ಷಗಳಾಗಿದೆ. ಪ್ರೊ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.20.95 ಲಕ್ಷಗಳಾದರೆ, ಡೈನಾಮಿಕ್ ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.21.30 ಲಕ್ಷಗಳಾಗಿದೆ.

Most Read Articles

Kannada
English summary
Tamil actor ajith turns bike mechanic for his fan details
Story first published: Tuesday, September 20, 2022, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X