'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಸಾಧಾರಣ ಅಕೌಂಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ್ ಸೇತುಪತಿ ಇದೀಗ ತಮಿಳು ಸಿನಿಮಾ ರಂಗದಲ್ಲಿ ತನ್ನ ನಟನೆ, ಲಿರಿಕ್ಸ್ ಮತ್ತು ಸಂಭಾಷಣೆ ಬರವಣಿಗೆ ಇಂದ ಪ್ರಸಿದ್ದರಾಗಿ ಹೆಸರುವಾಸಿಯಾಗಿದ್ದಾರೆ. ಅಷ್ಟೆ ಅಲ್ಲದೇ ಸೂಪರ್ ಸ್ಟಾರ್ ರಜಿನಿಯವರ ಜೋತೆ ಕೂಡಾ ನಟಿಸುವ ಅವಕಾಶವನ್ನು 'ಪೆಟ್ಟಾ' ಸಿನಿಮಾದಲ್ಲಿ ಪಡೆದುಕೊಂಡ ಈತ ಸೌತ್ ಇಂಡಿಯಾದಲ್ಲಿಯೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಮೊದಲಿಗೆ ನಟಿಸಿದ ಸಿನಿಮಾ ಅಷ್ಟಾಗಿ ಯಶಸನ್ನು ಕಾಣಲಿಲ್ಲವಾದರೂ ನಂತರ ನಟಿಸಿದ 'ಪಿಜ್ಜಾ' ಚಿತ್ರದಿಂದ ನಟನಾಗಿ ಗುರುತನ್ನು ಪಡೆದುಕೊಂಡ ನಟ ವಿಜಯ್ ಸೇತುಪತಿ ಇದೀಗ ಲಕ್ಷುರಿ ಬೈಕಿನ ಮಾಲೀಕರಾಗಿದ್ದಾರೆ. ತನ್ನ ಸಿಂಪ್ಲಿಸಿಟಿ ಮತ್ತು ಮಾತಿನ ಚಾತುರ್ಯದಿಂದ ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಈತ ಖರೀದಿಸಿದ ಆ ಬೈಕ್ ಯಾವುದು ಮತ್ತು ಅದರ ವೈಶಿಷ್ಟ್ಯತೆ ಏನು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ...

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ವಿಜಯ್ ಸೇತುಪತಿಯವರು ಬಿಎಂಡಬ್ಲ್ಯೂ ಮೋಟಾರ್‍‍ರಾಡ್ ಬಿಡುಗಡೆ ಇತ್ತೀಚೆಗೆ ಬಿಡುಗಡೆ ಮಾಡಿದ ಜಿ310ಜಿಎಸ್ ಬೈಕ್ ಅನ್ನು ಖರೀಸಿದಿಸಿದ್ದು, ಮೊನ್ನೆಯಷ್ಟೆ ಬೈಕ್ ಅನ್ನು ಡೆಲಿವರಿ ಪಡೆದಿದ್ದಾರೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಇದೇ ಮೊದಲ ಬಾರಿಗೆ ಮೆಡ್ ಇನ್ ಇಂಡಿಯಾ ಅಭಿಯಾನದಡಿ ಅಗ್ಗದ ಬೆಲೆಯಲ್ಲಿ ತನ್ನ ಅಡ್ವೆಂಚರ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊತ್ತುಬಂದಿರುವ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳಿಗೆ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಅಡ್ವೆಂಚರ್ ವೈಶಿಷ್ಟ್ಯತೆ ಹೊಂದಿರುವ ಜಿ 310 ಜಿಎಸ್ ಬೈಕ್ ಖರೀದಿಸಿದ್ದಾರೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಉತ್ಪನ್ನಗಳನ್ನ ಅಭಿವೃದ್ಧಿ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಬೈಕ್‌ಗಳ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದ್ದು, ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಜಿಎಸ್ ಅಂದ್ರೆ ಜರ್ಮನ್ ಭಾಷೆಯಲ್ಲಿ Gelände/Straße(ರೋಡ್ ಮತ್ತು ಆಪ್ ರೋಡ್) ಎಂಬುವುದಾಗಿದ್ದು, ಹೊಸದಾಗಿ ಭಾರತದಲ್ಲಿ ಬಿಡುಗಡೆಗೊಂಡಿರುವ ಜಿ 310 ಜಿಎಸ್ ಬೈಕ್ ಸಹ ಇದೇ ಆಧಾರದ ಮೇಲೆ ಸಿದ್ದವಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ನಿರ್ಮಾಣ ಮಾಡಲ್ ಆಗಿದೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಜಾಗತಿಕವಾಗಿ ಮಾರಾಟವಾಗುತ್ತಿರುವ ಆರ್‌ಎಸ್80 ಜಿಎಸ್ ಬೈಕ್‌ಗಳು 800ಸಿಸಿ ಎಂಜಿನ್ ಪ್ರೇರಣೆ ಹೊಂದಿದ್ದು, ಭಾರತದಲ್ಲಿ ಆಪ್ ರೋಡ್ ಬೈಕ್ ಮಾರಾಟ ವಿಭಾಗದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಜಿ 310 ಜಿಎಸ್ ಬೈಕ್‌ಗಳನ್ನು 313ಸಿಸಿ ಎಂಜಿನ್ ಮಾದರಿಯೊಂದಿಗೆ ನಿರ್ಮಾಣ ಮಾಡಲಾಗಿದೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಡಿಸೈನ್ ಮತ್ತು ಸ್ಟೈಲ್

ಮೊದಲ ನೋಟದಲ್ಲೇ ಆಪ್ ರೋಡ್ ಬೈಕ್ ಸವಾರರನ್ನು ಸೆಳೆಯಬಲ್ಲ ಗುಣಹೊಂದಿರುವ ಜಿ 310 ಜಿಎಸ್ ಬೈಕ್‌ಗಳನ್ನು ಬೆಬಿ ಜಿಎಸ್ ಎಂದೇ ಜನಪ್ರಿಯವಾಗಿದ್ದು, ಮೇಲೆ ಹೇಳಿದ ಹಾಗೆ ಫ್ಯಾಗ್‌ಶಿಫ್ ಬೈಕ್ ಮಾದರಿಯಾದ ಆರ್ 1200 ಜಿಎಸ್ ಬೈಕ್‌ನಂತೆ ಸಿದ್ದವಾಗಿರುವುದು ಬೈಕ್ ಸವಾರರ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

MOST READ: ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಜೊತೆಗೆ ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಟಿವಿಎಸ್ ಅಪಾಚೆ 310 ಆರ್‌ಆರ್ ಮತ್ತು ಕವಾಸಕಿ ನಿಂಜಾ 300 ಬೈಕಿಗೆ ಸಮನಾದ ಎಂಜಿನ್ ಹೊಂದಿದ್ದರೂ ಪ್ರೀಮಿಯಂ ವೈಶಿಷ್ಟ್ಯತೆಗಳಲ್ಲಿ ವಿಶೇಷ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಬ್ರಾಂಡ್ ಆಧಾರಿತವಾಗಿ ಲೆಕ್ಕಾಚಾರ ಹಾಕಿದಾಗ ಬೆಲೆಗೆ ತಕ್ಕ ಬೈಕ್ ಮಾದರಿಯಾಗಿರುವುದನ್ನು ನಾವು ಗಮನಿಸಬಹುದಾಗಿದೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಜಿ 310 ಜಿಎಸ್ ಬೈಕ್ ಮಾದರಿಯು ಲಿಕ್ವಿಡ್ ಕೂಲ್ಡ್ 313 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಜಿ 310 ಆರ್ ಬೈಕಿಗೆ ಸಮನಾಗಿರಲಿದೆ. ಇದೇ ಎಂಜಿನ್ ಸದ್ಯ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲೂ ಇದ್ದರೂ ಸಹ ಜಿ 310 ಜಿಎಸ್ ಬೈಕ್‌ಗಳು ಗರಿಷ್ಠ ಎಂಜಿನ್ ದಕ್ಷತೆ ಪಡೆದುಕೊಂಡಿವೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಈ ಮೂಲಕ 33.6-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಹೊಸ ಜಿ 310 ಜಿಎಸ್ ಬೈಕ್‌ಗಳು ಕೇವಲ 4 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗವನ್ನು ಹೊಂದುವ ಸಾಮರ್ಥ್ಯ ಹೊಂದಿವೆ.

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಇನ್ನು ಹೊಸ ಬೈಕ್ ಮಾದರಿಯು ಬರೋಬ್ಬರಿ 169.5 ಕೆ.ಜಿ ತೂಕ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಅಳವಡಿಸಲಾಗಿದೆ.

MOST READ: ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

'ಪಿಜ್ಜಾ' ಬಾಯ್ ವಿಜಯ್ ಸೇತುಪತಿ ಕೈ ಸೇರಿದ ಹೊಸ ಬೈಕ್ ಯಾವುದು ಗೊತ್ತಾ.?

ಒಟ್ಟಿನಲ್ಲಿ ಜಿ 310 ಜಿಎಸ್ ಬೈಕಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೇ ಹೊಂದಿರುವ ಪ್ರಮುಖ ಬೈಕ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ರು ಸಹ ಅವುಗಳಿಂತಲೂ ವಿಭಿನ್ನ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಆಪ್ ರೋಡ್ ಕೌಶಲ್ಯ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೇ ಕಾರಣಕ್ಕೆ ಆಪ್ ರೋಡ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿವೆ ಎನ್ನಬಹುದು.

Most Read Articles

Kannada
English summary
Tamil Actor Vijay Sethupathi Buys New BMW G310GS Bike. Read In Kannada
Story first published: Monday, February 25, 2019, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X