ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರದ ನಟಿ

ರಮ್ಯಾ ಪಾಂಡಿಯನ್ ಜೋಕರ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ತಮಿಳು ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಆನ್ ದೇವತೈ ಚಿತ್ರವು ತಮಿಳು ಚಿತ್ರರಂಗದಲ್ಲಿ ರಮ್ಯಾ ಪಾಂಡಿಯನ್‌ರವರಿಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿತು. ಈ ಚಿತ್ರದಲ್ಲಿ ಅವರು ವಿಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದು ಗಮನಾರ್ಹ. ರಮ್ಯಾ ಪಾಂಡಿಯನ್ ಖಾಸಗಿ ಟಿವಿ ಕಾರ್ಯಕ್ರಮಗಳ ಮೂಲಕ ಬಹಳ ಜನಪ್ರಿಯರಾದರು.

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಅವರು ಬಿಗ್ ಬಾಸ್ ಸೇರಿದಂತೆ ಕೆಲವು ಕಾರ್ಯಕ್ರಮಗಳ ಮೂಲಕ ಯುವಜನರು ಹಾಗೂ ಗೃಹಿಣಿಯರ ಮನಸ್ಸನ್ನು ಸೆಳೆದರು. ಈ ಹಿಂದೆ ಅವರು ಕೆಲವು ಹಾಟ್ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಈಗ ನಟಿ ರಮ್ಯಾ ಪಾಂಡಿಯನ್ ದುಬಾರಿ ಬೆಲೆಯ ಬಿಎಂಡಬ್ಲ್ಯು ಜಿಟಿ ಐಷಾರಾಮಿ ಕಾರನ್ನು ಖರೀದಿಸಿ ಮತ್ತೆ ಸುದ್ದಿಯಾಗಿದ್ದಾರೆ. ಅವರ ಸಹೋದರ ಪರಶು ಪಾಂಡಿಯನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ರಮ್ಯಾ ಪಾಂಡಿಯನ್ ಬಿಎಂಡಬ್ಲ್ಯು 5 ಸೀರೀಸ್ ಗ್ರ್ಯಾನ್ ಟ್ಯುರಿಸ್ಮೊ ಕಾರಿನ ಹಳೆಯ ತಲೆಮಾರಿನ ಆವೃತ್ತಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನ ಬೆಲೆ ಆರಂಭಿಕ ಎಕ್ಸ್ ಶೋರೂಂ ದರದಂತೆ ರೂ.50 ಲಕ್ಷಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಟಾಪ್ ಎಂಡ್ ಮಾದರಿಯ ಬೆಲೆ ಇದಕ್ಕಿಂತ ಹೆಚ್ಚಾಗುತ್ತದೆ. ರಮ್ಯಾ ಪಾಂಡಿಯನ್ ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂಬ ಬಗ್ಗೆ ಪರಶು ಪಾಂಡಿಯನ್ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಈ ಕಾರಣಕ್ಕೆ ಅವರು ಖರೀದಿಸಿರುವ ಕಾರಿನ ನಿಖರವಾದ ಬೆಲೆ, ಎಂಜಿನ್ ಹಾಗೂ ಐಷಾರಾಮಿ ಫೀಚರ್'ಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ.ಆದರೆ ಅವರ ಸಹೋದರ ಪರಶು ಪಾಂಡಿಯನ್ ಅವರ ಪೋಸ್ಟ್'ನಿಂದ ಕೆಲವು ಸಂಗತಿಗಳು ಹೊರ ಬಂದಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ರಮ್ಯಾ ಪಾಂಡಿಯನ್ 2011ರಲ್ಲಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರು ಎಂಬ ಸಂಗತಿ ತಿಳಿದು ಬಂದಿದೆ. ಈಗ 2021ರಲ್ಲಿ ಅವರು ತಮ್ಮದೇ ಆದ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಬಗ್ಗೆ ರಮ್ಯಾ ಪಾಂಡಿಯನ್ ಸಹೋದರ ಈ ಮಾಹಿತಿಯನ್ನು ಹೆಮ್ಮೆಯಿಂದ ಶೇರ್ ಮಾಡಿದ್ದಾರೆ.

ಬಿಎಂಡಬ್ಲ್ಯು ಐಷಾರಾಮಿ ಕಾರು ಖರೀದಿಸಿದ ಜೋಕರ್ ಚಿತ್ರ ನಟಿ

ಪರಶು ಪಾಂಡಿಯನ್ ಒಳ್ಳೆಯದಕ್ಕೆ ಒಳ್ಳೆಯದು ಆಗುತ್ತದೆ ಎಂಬ ಹ್ಯಾಶ್‌ಟ್ಯಾಗ್ ಅನ್ನು ತಮ್ಮ ಪೋಸ್ಟ್‌ನಲ್ಲಿ ಬಳಸಿದ್ದಾರೆ. ರಮ್ಯಾ ಪಾಂಡಿಯನ್ ಅವರ ಸಾಧನೆಯು ಹಲವು ಯುವತಿಯರಿಗೆ ಉತ್ತಮ ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
Tamil cine star Ramya Pandian buys BMW luxury car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X