ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಹೊಸ ಕಾರು ಖರೀದಿಸಲು ಬಂದಿದ್ದ ಆ ಗ್ರಾಹಕ ಇನ್ನೆನು ಕೆಲವೇ ಗಂಟೆಗಳಲ್ಲಿ ತಾನು ಬುಕ್ ಮಾಡಿದ್ದ ಹ್ಯಾರಿಯರ್ ಕಾರನ್ನು ಡೀಲರ್ಸ್ ಯಾರ್ಡ್‌‌ನಿಂದ ಮನೆಗೆ ತೆಗೆದುಕೊಂಡು ಹೋಗುವ ತವಕದಲ್ಲಿದ್ದ. ಆದ್ರೆ ನಡೆದಿದ್ದೇ ಬೇರೆ. ಟೆಸ್ಟ್ ಡ್ರೈವ್ ವೇಳೆ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಹೊಸ ಕಾರು ಖರೀದಿಸಿ ಮನೆಗೆ ಹೋಗಬೇಕಿದ್ದ ಆತ ಇದೀಗ ಆಸ್ಪೆತ್ರೆ ಸೇರಿದ್ದಾನೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಹೌದು, ಅಪಘಾತವೊಂದರಲ್ಲಿ ಟಾಟಾ ಹೊಚ್ಚ ಹೊಸ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಟೆಸ್ಟ್ ಡ್ರೈವ್‌ಗಾಗಿ ಕಾರು ತೆಗೆದುಕೊಂಡು ಹೋಗಿದ್ದ ಗ್ರಾಹಕನೇ ಅಪಘಾತ ಮಾಡಿದ್ದಾನೆ. ಆದ್ರೆ ಅದೃಷ್ಟವಶಾತ್ ಟಾಟಾ ಕಾರಿನ ಬಲಿಷ್ಠ ಮತ್ತು ಕಾರಿನಲ್ಲಿರುವ ಅತ್ಯುತ್ತಮ ಗುಣಮಟ್ಟದ ಏರ್‌ಬ್ಯಾಗ್ ಸೌಲಭ್ಯದಿಂದಾಗಿ ಡ್ರೈವ್ ಮಾಡುತ್ತಿದ್ದ ಗ್ರಾಹಕನು ಕೆಲವು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ವಾರದ ಹಿಂದೆಯೇ ಹೊಸ ಹ್ಯಾರಿಯರ್ ಕಾರಿಗಾಗಿ ಬುಕ್ ಮಾಡಿದ್ದ ಗ್ರಾಹಕನು ಟೆಸ್ಟ್ ಡ್ರೈವ್‌ಗಾಗಿ ಟಾಟಾ ಡೀಲರ್ಸ್ ಬಳಿ ಬಂದಿದ್ದ. ಕಾರು ಚಾಲನೆ ಬರುತ್ತೆಯಾದ್ರು ಅಪಕ್ವ ಚಾಲನೆಯಿಂದಾಗಿ ಹೊಸ ಕಾರು ನಿಯಂತ್ರಣ ತಪ್ಪಿದ್ದು, ಲಾರಿ ಹಿಂಭಾಗಕ್ಕೆ ರಭಸವಾಗಿ ಗುದ್ದಿಸಿದ್ದಾನೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಗುದ್ದಿದ ಪರಿಣಾಮ ಹ್ಯಾರಿಯರ್ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದ್ದು, ಬ್ಯಾನೆಟ್ ಮತ್ತು ಮುಂಭಾಗದ ಬಂಪರ್ ಪುಡಿಪುಡಿಯಾಗಿದೆ. ಆದ್ರೆ ಸರಿಯಾದ ಸಮಯಕ್ಕೆ ಏರ್‌ಬ್ಯಾಗ್‌ಗಳು ಕಾರ್ಯನಿರ್ವಹಿಸಿದ್ದು, ಮಧ್ಯಪ್ರದೇಶದ ಇಂಧೋರ್‌ನಲ್ಲಿ ಈ ಘಟನೆ ನಡೆದಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿರುವ ನೆಕ್ಸಾನ್ ಕಾರುಗಳ ಮಾದರಿಯಲ್ಲೇ ಹ್ಯಾರಿಯರ್ ಕೂಡಾ ನಿರ್ಮಾಣಗೊಂಡಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಸಿಕ್ಕಿರುವುದು ಗಮನಿಸಬೇಕಾದ ಅಂಶವಾಗಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ನೆಕ್ಸಾನ್ ಕಾರುಗಳಂತೆ ಹ್ಯಾರಿಯರ್ ಕಾರು ಕೂಡಾ ಕ್ರ್ಯಾಶ್ ಟೆಸ್ಟಿಂಗ್ ಪೂರ್ಣಪ್ರಮಾಣದಲ್ಲಿ 5 ಸ್ಟಾರ್ ಗಿಟ್ಟಿಸಿಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಮುಂದಿನ ತಿಂಗಳು ನಡೆಯಲಿರುವ ಹ್ಯಾರಿಯರ್ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ಫಲಿತಾಂಶ ಪ್ರಕಟವಾಗಲಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಭಾರತೀಯ ಗ್ರಾಹಕರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಟಾಟಾ ಸಂಸ್ಥೆಯು ವಾಹನ ಉತ್ಪನ್ನಗಳಲ್ಲಿ ಕಾಲಕ್ಕೆ ತಕ್ಕಂತೆ ಹೊಸತ ಹುಟ್ಟುಹಾಕುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹ್ಯಾರಿಯರ್ ಕೂಡಾ ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಲ್ಲಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಇನ್ನು ಹ್ಯಾರಿಯರ್ ಕಾರು ಜನವರಿ 23ರಂದು ಬಿಡುಗಡೆಯಾಗಿದ್ದು, ಇದುವರೆಗೆ 2 ಸಾವಿರ ಕಾರುಗಳು ಮಾರಾಟವಾಗುವ ಮೂಲಕ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವದಲ್ಲದೇ 10 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನು ಆಗಲಿಲ್ಲ..!

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Most Read Articles

Kannada
English summary
Tata Harrier SUV Crashed Again: Video. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X