Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇಂಧನ ಬೆಲೆ ಏರಿಕೆಯಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಭವಿಷ್ಯದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳೇ ಪಾರುಪತ್ಯ ಸಾಧಿಸುತ್ತದೆ. ಆದರೆ ಪ್ರಸ್ತುತ ಅನೇಕ ಎಲೆಕ್ಟ್ರಿಕ್ ವಾಹನಗಳ ಮಾಲೀಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಚಾರ್ಜಿಂಗ್ ಕೇಂದ್ರಗಳ ಕೊರತೆ. ಇತ್ತೀಚೀಗೆ ಈ ಸಮಸ್ಯೆಯು ನಿಧಾನವಾಗಿ ಸುಧಾರಿಸುತ್ತಿವೆ. ಅದರೂ ಈ ಸಮಸ್ಯ ಬಗೆಹರಿಯಲು ಇನ್ನು ಬಹಳ ಸಮಯವನ್ನು ತೆಗೆದುಕೊಳ್ಳಬಹುದು. ಇನ್ನು ಟಾಟಾ ನೆಕ್ಸಾನ್ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಈ ವಿಭಾಗದಲ್ಲಿ ಅತ್ಯಂತ ಅಗ್ಗವಾದ ಮಾದರಿಯಾಗಿದೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಹಲವಾರು ಜನರು ತಮ್ಮ ಎಲೆಕ್ಟ್ರಿಕ್ ಕಾರುಗಳಲ್ಲಿ ರೋಡ್ ಟ್ರಿಪ್ ಮಾಡಿದ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ನೋಡಬಹುದು. ಇತ್ತೀಚೆಗೆ ಟಾಟಾ ನೆಕ್ಸನ್ ಇವಿ ಯಲ್ಲಿ 650 ಕಿ.ಮೀ ರೋಡ್ ಟ್ರಿಪ್ ಹೇಗೆ ತೆರಳಿದ್ದಾರೆ ಎಂಬುದನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಈ ವೀಡಿಯೊವನ್ನು ವ್ಲಾಗರ್ ತಮ್ಮ ಐಗುರು ಕ್ರೇಜಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಹೈದರಾಬಾದ್‌ನಿಂದ ವಿಜಯವಾಡಕ್ಕೆ ರಾಡ್ ಟ್ರಿಪ್‌ಗಾಗಿ ವ್ಲಾಗರ್ ಆರಂಭವಾಗುತ್ತದೆ. ಅವನ ತೆರಳುವ ದೂರವು ಸರಿಸುಮಾರು 350 ಕಿಮೀ ಎಂದು ವ್ಲಾಗರ್ ಹೇಳುತ್ತಾನೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಅಲ್ಲಿಗೆ ತೆರಳಿ ಬರುವಾಗ ಒಟ್ಟು 650 ಕಿ.ಮೀ ದೂರವಾಗುತ್ತದೆ. ಅವರು ತಮ್ಮ ಪ್ರಯಾಣವನ್ನು ಬ್ಯಾಟರಿಯಲ್ಲಿ 100 ಪ್ರತಿಶತ ಚಾರ್ಜ್‌ನೊಂದಿಗೆ ಆರಂಭಿಸುತ್ತಾನೆ. ಚಾರ್ಜ್‌ಗಾಗಿ ಕಾರನ್ನು ಮತ್ತೆ ಪ್ಲಗ್ ಮಾಡುವ ಮೊದಲು ಅರ್ಧದಷ್ಟು ದೂರವನ್ನು ಕ್ರಮಿಸುವುದು ಅವನ ಗುರಿಯಾಗಿತ್ತು. ನೆಕ್ಸಾನ್ ಇವಿ ಯನ್ನು ಸಾಮಾನ್ಯ ಕಾರಿನಂತೆ ಎಸಿ ಆನ್ ಮಾಡಿ ಕಾರಿನಲ್ಲಿ ಟಚ್‌ಸ್ಕ್ರೀನ್ ಸಿಸ್ಟಂಗೆ ಫೋನ್ ಅನ್ನು ಕನೆಕ್ಟಿ ಮಾಡಿ ಪ್ರಯಾಣಿಸುತ್ತಾರೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಪ್ರಯಾಣದ ಅರ್ಧದಾರಿಯಲ್ಲೇ ಚಾರ್ಜಿಂಗ್ ನಿಲ್ದಾಣವನ್ನು ತಲುಪಲು ಬಯಸಿದ್ದರಿಂದ ತಾನು 60-70 ಕಿಮೀ ವೇಗದಲ್ಲಿ ಕಾರನ್ನು ಓಡಿಸುತ್ತಿರುವುದಾಗಿವ್ಲಾಗರ್ ಹೇಳುತ್ತಾನೆ. 157 ಕಿಮೀ ಕ್ರಮಿಸಿದ ನಂತರ ಯೋಜಿಸಿದ ಚಾರ್ಜಿಂಗ್ ಪಾಯಿಂಟ್ ತಲುಪುತ್ತಾರೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಅವರ ಮನೆಯಿಂದ, ಅವರು ಚಾರ್ಜಿಂಗ್ ಪಾಯಿಂಟ್ ತಲುಪಲು 53 ಪ್ರತಿಶತ ಬ್ಯಾಟರಿ ಚಾರ್ಜ್ ಅನ್ನು ಬಳಸಿದ್ದರು. ಇದು ಫಾಸ್ಟ್ ಚಾರ್ಜರ್ ಆಗಿತ್ತು ಮತ್ತು ಅವರು ಕಾರನ್ನು ರಿಫ್ರೆಶ್‌ಮೆಂಟ್‌ಗಾಗಿ ಹೊರಗೆ ಹೋದರು ಅವರು ಕೆಫೆಟೇರಿಯಾದಲ್ಲಿರುವಾಗ ಕಾರಿನಲ್ಲಿ ಚಾರ್ಜ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಮತ್ತು ಒಮ್ಮೆ ಕಾರ್ ಚಾರ್ಜ್ 95 ಪ್ರತಿಶತವಾದಗ ಪ್ಲಗ್ ಅನ್ನು ತೆಗೆದುಹಾಕಿ ಮತ್ತು ತಮ್ಮ ಪ್ರಯಾಣವನ್ನು ಮುಂದುವರಿಸಿದರು.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಈ ಸಮಯದಲ್ಲಿ ಅವರು ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು 80-85 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದರು. ಇಷ್ಟು ವೇಗವಾಗಿ ಚಲಿಸಿದಾಗ ರೇಂಜ್ ಮೇಲೆ ಪ್ರತಿಫಲಿಸುತ್ತದೆ. ವ್ಲಾಗರ್ ವಿಜಯವಾಡದಲ್ಲಿ ತಮ್ಮ ಸ್ಥಳವನ್ನು ತಲುಪಿದರು. ಅದು ಎಂವಿ ಡೀಲರ್‌ಶಿಪ್ ಆಗಿದ್ದು ಅಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಅವರು ವಿಜಯವಾಡ ತಲುಪುವ ಮುನ್ನ ಅವರ ಮುಂಭಾಗದ ಟೈರ್‌ನಲ್ಲಿ ಪಂಕ್ಚರ್ ಆಗಿದ್ದನ್ನು ಕಂಡುಕೊಂಡರು. ಅವರು 350 ಕಿಮೀ ಕ್ರಮಿಸಲು ಸುಮಾರು 6 ಗಂಟೆಗಳನ್ನು ತೆಗೆದುಕೊಂಡರು, ಇದು ಅವರು ಸುದೀರ್ಘ ಸಮಯ ಎಂದು ಉಲ್ಲೇಖಿಸಿದ್ದಾರೆ, ಅವರು ವಿಜಯವಾಡದಲ್ಲಿ ತಮ್ಮ ಕೆಲಸವನ್ನು ಮುಗಿಸಿದರು ಮತ್ತು ನಂತರ ಅದೇ ದಿನ ಹೈದರಾಬಾದಿಗೆ ವಾಪಸ್ಸಾಗಲು ಆರಂಭಿಸಿದರು.

ಅವರು ಈಗಾಗಲೇ ಫಾಸ್ಟ್ ಚಾರ್ಜರ್‌ನಲ್ಲಿ ವಾಹನವನ್ನು ಪ್ಲಗ್ ಮಾಡಿದ್ದರು. ವಿಜಯವಾಡಕ್ಕೆ ಚಾಲನೆ ಮಾಡುವಾಗ ಆರಂಭದಲ್ಲಿ ನಿಲ್ಲಿಸಿದ ಸ್ಥಳದಲ್ಲಿಯೇ ನಿಲ್ಲಿಸುವುದು ಮತ್ತು ಹೈದರಾಬಾದ್‌ಗೆ ಚಾಲನೆ ಮಾಡುವ ಮೊದಲು ಮತ್ತೊಮ್ಮೆ ಕಾರನ್ನು ಚಾರ್ಜ್ ಮಾಡುವುದು ಅವರ ಯೋಜನೆಯಾಗಿತ್ತು.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ದುರದೃಷ್ಟವಶಾತ್, ಅವರು ಸ್ಥಳಕ್ಕೆ ತಲುಪುವ ಹೊತ್ತಿಗೆ, ತಾಂತ್ರಿಕ ದೋಷದಿಂದಾಗಿ ಇವಿ ಚಾರ್ಜರ್ ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ರೇಂಜ್ ಬಗ್ಗೆ ವ್ಲಾಗರ್ ಚಿಂತಿಸತೊಡಗಿದರು. ಅವರ ಕಾರು ಆ ಸಮಯದಲ್ಲಿ 50 ಕಿಲೋಮೀಟರ್‌ಗಳ ಚಾಲನಾ ರೇಂಜ್ ಅನ್ನು ತೋರಿಸುತ್ತಿತ್ತು ಮತ್ತು ಅವರ ಮನೆಯು ಸುಮಾರು 150 ಕಿಮೀಗಳಷ್ಟಿತ್ತು. ಅವರು ಪರ್ಯಾಯ ಆಯ್ಕೆಗಳನ್ನು ಹುಡುಕತೊಡಗಿದರು. ಆದರೆ, ಇದ್ದಕ್ಕಿದ್ದಂತೆ 8 ಕಿಮೀ ಪ್ರಯಾಣ ಮಾಡಿದ ನಂತರ ಮೊದಲು ಕೆಲಸ ಮಾಡದ ಚಾರ್ಜರ್ ಮತ್ತೆ ಕೆಲಸ ಮಾಡಲು ಆರಂಭಿಸಿರುವುದನ್ನು ಅವರಿಗೆ ತಿಳಿಯಿತು.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಆತ ತಿರುಗಿ ಬಂದು ವಾಹನವನ್ನು ಶೇಕಡಾ 91 ರವರೆಗೆ ಚಾರ್ಜ್ ಮಾಡಿ ಮತ್ತೆ ತನ್ನ ಪ್ರಯಾಣವನ್ನು ಆರಂಭಿಸಿದನು. ಚಾರ್ಜಿಂಗ್ ಪಾಯಿಂಟ್‌ನಿಂದಾಗಿ ಇದು ಹಾಳಾದ ಮೋಜಿನ ರಸ್ತೆ ಪ್ರವಾಸ ಎಂದು ಅವರು ಉಲ್ಲೇಖಿಸಿದ್ದಾರೆ. ಚಾರ್ಜಿಂಗ್ ಕೇಂದ್ರಗಳು ಪ್ರಸ್ತುತ ವಿಶ್ವಾಸಾರ್ಹವಲ್ಲ ಎಂದು ಅವರು ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು ಮತ್ತು ಭವಿಷ್ಯದಲ್ಲಿ ವಿಷಯಗಳು ಸುಧಾರಿಸುತ್ತವೆ ಎಂದು ಅವರು ಆಶಿಸಿದ್ದಾರೆ. ಈಗಗಾಲೇ ಹಲವು ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳು ಪ್ರಾರಂಭವಾಗುತ್ತಿದೆ. ಇತರ ಕಡೆಗಳಿಗೆ ವಿಸ್ತರಣೆಯಾಗಲು ಕೆಲವು ವರ್ಷಗಳು ಕಾಯಬೇಕು.

Tata Nexon ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ದಿನ 650 ಕಿ.ಮೀ ಪ್ರಯಾಣಿಸಿದ ವ್ಲಾಗರ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಹೊಂದಿದೆ.

Source: iGuru Carzy/YouTube

Most Read Articles

Kannada
English summary
Tata nexon ev travels 650 kms in a single day find here details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X