ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಕಣಿವೆ ಪ್ರದೇಶಗಳಲ್ಲಿ ದಿನಂಪ್ರತಿ ಒಂದಿಲ್ಲಾ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ವಾಹನ ಚಾಲನೆ ವೇಳೆ ಆಗುವ ಕೆಲವು ಸಣ್ಣಪುಟ್ಟ ಪ್ರಮಾದಗಳೇ ಕಡಿದಾದ ರಸ್ತೆ ತಿರುವುಗಳಲ್ಲಿ ಘೋರ ದುರಂತಗಳಿಗೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಆಫ್ ರೋಡ್‌ಗಳಲ್ಲಿ ವಾಹನಗಳನ್ನು ಚಾಲನೆ ಮಾಡುವ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ವಾಹನ ಚಾಲನೆ ವೇಳೆ ಆಗುವ ಕೆಲವು ಸಣ್ಣಪುಟ್ಟ ತಪ್ಪುಗಳು ಭೀಕರ ಅಪಘಾತಗಳಿಗೆ ಮೂಲ ಕಾರಣ ಎನ್ನುವುದನ್ನು ಮರೆಯಬಾರದು. ಹೀಗೆ ಇಲ್ಲೊಬ್ಬ ಟಾಟಾ ನೆಕ್ಸಾನ್ ಕಾರು ಮಾಲೀಕ ಕೂಡಾ ಕಣಿವೆ ಪ್ರದೇಶದಲ್ಲಿ ಯದ್ವಾತದ್ವಾ ಕಾರು ಚಾಲನೆ ಮಾಡಲು ಹೋಗಿ ಅದೃಷ್ಟ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾನೆ.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಹೌದು, ವಿಶ್ವದ ಅತ್ಯಂತ ಕಠಿಣ ರಸ್ತೆ ಮಾರ್ಗ ಎನ್ನಿಸಿಕೊಂಡಿರುವ ರೋಹಟಂಗ್ ಪಾಸ್‌ನಲ್ಲಿ ಸಾಗುತ್ತಿದ್ದ ಟಾಟಾ ನೆಕ್ಸಾನ್ ಕಾರು ವೇಗದ ಚಾಲನೆ ವೇಳೆ ಪ್ರಪಾತದ ಅಂಚಿನಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರ ಸಹಾಯದಿಂದ ಹೊರಕ್ಕೆ ಬಂದಿದೆ.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಸಮುದ್ರಮಟ್ಟದಿಂದ 13 ಸಾವಿರ ಅಡಿ ಮೇಲಿರುವ ರೋಹಟಂಗ್ ಪಾಸ್ ಮಾರ್ಗವು ಸ್ನೋ ಸ್ಪಾಟ್, ಡೆತ್ ಸ್ಪಾಟ್ ಹಾಗೂ ಅಡ್ವೆಂಚರ್ ಸ್ಪಾಟ್ ಎನಿಸಿಕೊಂಡಿದೆ. ಹೀಗಿರುವಾಗ ಈ ಮಾರ್ಗದಲ್ಲಿ ಸುಧಾರಿತ ಚಾಲನಾ ಕೌಶಲ್ಯ ಹೊಂದಿರುವ ಆಫ್ ರೋಡ್ ವಾಹನಗಳೇ ಕೆಲವು ಬಾರಿ ಅಪಘಾತಕ್ಕೀಡಾಗುತ್ತವೆ.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಇಂತಹ ಕಠಿಣ ರಸ್ತೆ ಮಾರ್ಗದಲ್ಲಿ ಟಾಟಾ ನೆಕ್ಸಾನ್ ಕಾರು ಯದ್ವಾತದ್ವಾ ಚಲಿಸುತ್ತಿದ್ದರೆ ಅನಾಹುತ ಸಂಭವಿಸದಿರಲು ಸಾಧ್ಯವೇ ಇಲ್ಲ. ಆದ್ರೆ ಸರಿಯಾದ ಸಮಯಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರ ಗುಂಪುಗಳು ಕಾರು ಪ್ರಪಾತಕ್ಕೆ ಬೀಳುತ್ತಿದ್ದನ್ನು ತಡೆದು ಪ್ರಪಾತದ ತುದಿಯಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ತುಸು ಯಾಮಾರಿದರೂ ಕಾರಿನ ಸಮೇತವೇ ಮಾಲೀಕ ಕೂಡಾ ಪ್ರಪಾತದ ಪಾಲಾಗಬೇಕಿತ್ತು.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ, ನೆಕ್ಸಾನ್ ಕಾರಿನ ಹಿಂಬದಿ ಒಂದು ಚಕ್ರವು ರಸ್ತೆ ಬಿಟ್ಟು ಪ್ರಪಾತದತ್ತ ಜರಿದ್ದು, ಕಾರಿನ ತೂಕವು ಸಂಪೂರ್ಣವಾಗಿ ಹಿಂಭಾಗಕ್ಕೆ ಬಿದ್ದಿದ್ದರಿಂದ ಕಾರು ನಿಧಾನವಾಗಿ ಪ್ರಪಾತದತ್ತ ವಾಲುತ್ತಿತ್ತು.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಈ ವೇಳೆ ಟಾಟಾ ನೆಕ್ಸಾನ್ ಕಾರು ಪ್ರಪಾತದತ್ತ ವಾಲುತ್ತಿರುವುದನ್ನು ಕಂಡ ಕೂಡಲೇ ನೆರವಿಗೆ ಬಂದ ಕೆಲವರು ಕಾರಿನ ಬ್ಯಾನೆಟ್ ಮೇಲೇರಿ ಕುಳಿತು ಕಾರು ಪ್ರಪಾತದತ್ತ ಸರಿಯುವುದನ್ನು ತಡೆದಿದ್ದಾರೆ. ಕೆಲವು ಸಮಯದ ನಂತರ ಕಾರು ಮೇಲಕ್ಕೆರಿಸುವಲ್ಲಿ ಕಾರು ಮಾಲೀಕ ಕೂಡಾ ಯಶಸ್ವಿಯಾಗಿದ್ದಾನೆ.

ಕಾರಿನ ಮುಂಭಾದ ಮೇಲೆ ಸಾಕಷ್ಟು ಒತ್ತಡ ಹಾಕಿದ ಪರಿಣಾಮ ಕಾರು ಮುಂದುಕ್ಕೆ ನುಗ್ಗಿಕೊಂಡು ಬಂದಿದ್ದು, ಹಿಂಬದಿಯ ಚಕ್ರಕ್ಕೆ ಯಾವುದೇ ಆಸರೆ ಇಲ್ಲದಿದ್ದರೂ ಕಾರಿನಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದೆ ರೋಚಕವಾಗಿತ್ತು.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಹೀಗಾಗಿ ಹಿಮಾಲಯ ರಸ್ತೆಗಳಲ್ಲಿ ಚಾಲನೆ ಬಯಸುವ ಬಹುತೇಕರು 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ವಾಹನಗಳನ್ನೇ ಹೆಚ್ಚು ಬಳಕೆ ಮಾಡಲು ಇಂತಹ ಹಲವು ಕಾರಣವಾಗಿವೆ ಎನ್ನುವುದನ್ನು ಮರೆಯುವಂತಿಲ್ಲ.

MOST READ: ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್ !

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಆದ್ರೆ ಆಲ್ ವೀಲ್ಹ್ ಡ್ರೈವ್ ಸೌಲಭ್ಯವನ್ನು ಹೊರತುಪಡಿಸಿ ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದ್ದು, ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳ ಸೌಲಭ್ಯ ಹೊಂದಿದೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ವಿಶಿಷ್ಟ ವಿನ್ಯಾಸಗಳೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿದೆ.

Most Read Articles

Kannada
English summary
Tata Nexon gets stuck at Rohtang Pass. Read in Kannada.
Story first published: Saturday, June 22, 2019, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X