ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಭಾರತದಲ್ಲಿ ಹೊಸದಾಗಿ ಕಾರು ಖರೀದಿಸುವವರು ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ಕಾರಣಕ್ಕೆ ಕೇಂದ್ರ ಸರ್ಕಾರವೂ ಸಹ ಹೊಸ ಕಾರುಗಳಲ್ಲಿ ಹಲವಾರು ಸುರಕ್ಷತಾ ಫೀಚರ್‍‍ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಈ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ಸಹ ಹೆಚ್ಚಿನ ಸುರಕ್ಷತಾ ಫೀಚರ್‍‍ಗಳನ್ನು ಅಳವಡಿಸುತ್ತಿವೆ. ಹೊಸ ಕಾರುಗಳು ಗ್ಲೋಬಲ್ ಎನ್‍‍ಸಿ‍ಎ‍‍ಪಿ ಕ್ರಾಶ್ ಟೆಸ್ಟ್ ನಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ. ಇದರಲ್ಲಿ ಹೊಸ ಕಾರುಗಳ ಸುರಕ್ಷತಾ ಮಾನದಂಡಗಳು ತಿಳಿಯಲಿವೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಭಾರತೀಯ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಟಾಟಾ ಮೋಟಾರ್ಸ್‍‍ನ ಕಾರುಗಳು ಈ ಗ್ಲೋಬಲ್ ಎನ್‍‍ಸಿ‍ಎ‍‍ಪಿ ಕ್ರಾಶ್ ಟೆಸ್ಟ್ ನಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಭಾಗವಹಿಸಿದ್ದ ಟಾಟಾ ನೆಕ್ಸಾನ್ ಭಾರತದಲ್ಲಿ ತಯಾರಾಗಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾದ ಆಲ್ಟ್ರೋಜ್ ಕಾರು ಸಹ 5 ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಈ ಮೂಲಕ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಎರಡನೇ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸದ್ಯಕ್ಕೆ ಭಾರತದಲ್ಲಿ ಟಾಟಾ ಮೋಟಾರ್ಸ್ ಮಾತ್ರ 5 ಸ್ಟಾರ್ ರೇಟಿಂಗ್ ಪಡೆದಿರುವ ಎರಡು ಕಾರುಗಳನ್ನು ಹೊಂದಿರುವ ಏಕೈಕ ಕಂಪನಿಯಾಗಿದೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಈ ಹಿಂದೆ ನಡೆದಿದ್ದ ಹಲವಾರು ಅಪಘಾತಗಳಲ್ಲಿ ಟಾಟಾ ಮೋಟಾರ್ಸ್ ಕಾರುಗಳು ಪ್ರಯಾಣಿಕರ ಜೀವ ಉಳಿಸಿದ್ದವು. ಇದರಲ್ಲಿ ಟಾಟಾ ನೆಕ್ಸಾನ್ ಕಾರು ಪ್ರಯಾಣಿಕರನ್ನು ಹಲವು ವಿಧದ ಗಾಯಗಳಿಂದ ಹಾಗೂ ಚಿಕ್ಕ ಪುಟ್ಟ ಗಾಯಗಳೊಂದಿಗೆ ಪ್ರಾಣವನ್ನು ಉಳಿಸಿತ್ತು.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಇದರಿಂದಾಗಿ ಟಾಟಾ ನೆಕ್ಸಾನ್ ಜೀವ ರಕ್ಷಕ ಕಾರು ಎಂದು ತಿಳಿಯಬಹುದು. ಟಾಟಾ ನೆಕ್ಸಾನ್ ಕಾರಿನಲ್ಲಿರುವ ಗುಣಮಟ್ಟದ ಬಾಡಿ ಇದಕ್ಕೆ ಮುಖ್ಯ ಕಾರಣವಾಗಿದೆ. ಟಾಟಾ ನೆಕ್ಸಾನ್ ಕಾರಿನಲ್ಲಿ ಹಲವಾರು ಸುರಕ್ಷತಾ ಫೀಚರ್‍‍ಗಳಿವೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಇದು ಸಬ್ 4 ಮೀಟರ್‍‍ನ ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿದೆ. ಟಾಟಾ ನೆಕ್ಸಾನ್ ಒಂದೇ ರೀತಿಯ ಎರಡು ಅಪಘಾತಗಳಲ್ಲಿ ಅದರಲ್ಲಿದ್ದ ಪ್ರಯಾಣಿಕರ ಜೀವವನ್ನುಳಿಸಿದೆ. ಈ ಎರಡು ಅಪಘಾತಗಳ ಪೈಕಿ ಮೊದಲನೇ ಅಪಘಾತವು ಫೆಬ್ರವರಿ 14ರಂದು ಸಂಭವಿಸಿತ್ತು.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಮೂವರು ಪ್ರಯಾಣಿಕರಿದ್ದ ಟಾಟಾ ನೆಕ್ಸಾನ್ ಕಾರು ಮುಂಬೈ - ಗೋವಾ ಹೈವೇನಲ್ಲಿ ಚಲಿಸುತ್ತಿತ್ತು. ಆ ಕಾರು ಕಲ್ಯಾಣ್‍‍ನಿಂದ ಶ್ರೀವರ್ಧನ್‍‍ಗೆ ಪ್ರಯಾಣ ಬೆಳೆಸಿತ್ತು. ಈ ಕಾರ್ ಅನ್ನು ಡ್ರೈವ್ ಮಾಡುತ್ತಿದ್ದವರು ಈ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಇದರಿಂದಾಗಿ ಕಾರು 15 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿದೆ. ಆದರೆ ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಕಾರಿನ ಚಾಲಕನು ಡ್ರೈವ್ ಮಾಡುವಾಗ ಕುಡಿದಿರಲಿಲ್ಲವೆಂಬುದು ತನಿಖೆಯಿಂದ ಕಂಡು ಬಂದಿದೆ.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಸೇತುವೆಯಿಂದ ಕೆಳಗೆ ಬಿದ್ದಾಗ ಯಾವುದೇ ವಾಹನಗಳು ಅಲ್ಲಿರಲಿಲ್ಲ. ಇದೇ ರೀತಿಯ ಮತ್ತೊಂದು ಅಪಘಾತ ಫೆಬ್ರವರಿ 23ರಂದು ಮುಂಬೈ - ಗೋವಾ ಹೈವೇನಲ್ಲಿಯೇ ಸಂಭವಿಸಿತ್ತು. ಈ ಅಪಘಾತದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ಕಾರು ಉಲ್ಟಾ ತಿರುಗಿತ್ತು.

ಸೇತುವೆಯಿಂದ ಕೆಳಗೆ ಬಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಟಾಟಾ ನೆಕ್ಸಾನ್

ಈ ಅಪಘಾತದಲ್ಲಿಯೂ ಸಹ ಕಾರು ಮೇಲಿನಿಂದ ಕೆಳಗೆ ಬಿದ್ದರೂ ಇದರಲ್ಲಿದ್ದ ಎಲ್ಲಾ ಪ್ರಯಾಣಿಕರು ಚಿಕ್ಕ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಎರಡು ಘಟನೆಗಳ ನಂತರ ಟಾಟಾ ನೆಕ್ಸಾನ್ ಕಾರು ಭಾರತದ ಅತಿ ಸುರಕ್ಷತೆಯ ಕಾರು ಎಂದು ಸಾಬೀತಾಗಿದೆ.

Most Read Articles

Kannada
English summary
Tata Nexon SUV saves passengers. Read in Kannada.
Story first published: Tuesday, February 25, 2020, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X