ರೈಲು ಹಳಿಯ ಮೇಲೆಯೇ ಕಾರ್ ಪಾರ್ಕ್ ಮಾಡಿದ ಭೂಪ..!

ಭಾರತದಲ್ಲಿ ಅಸಾಧಾರವಾದ ಸಂಘಟನೆಗಳು ನಡೆಯುವುದು ಸಾಧಾರಣವೇನಲ್ಲ. ಪ್ರಪಂಚದಲ್ಲಿ ರಸ್ತೆ ಸಾರಿಗೆಯಲ್ಲಿ ಭಾರತ ದೇಶವು ಎರಡನೆಯ ಸ್ಥಾನವನ್ನು ಪಡೆದಿದ್ದರೆ, ಇನ್ನಿ ರೈಲು ಸಂಚಾರದಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ.

By Rahul Ts

ಭಾರತದಲ್ಲಿ ಅಸಾಧಾರಣವಾದ ಘಟನೆಗಳು ನಡೆಯುವುದು ಹೊಸತಲ್ಲ. ಕಾರ್ ಪಾರ್ಕ್ ಮಾಡಲು ಜಾಗವಿಲ್ಲ ಅಂತಾ ಇಲ್ಲೊಬ್ಬ ಅಸಾಮಿ ರೈಲಿನ ಹಳಿ ಮೇಲೆಯೇ ಕಾರು ನಿಲ್ಲಿಸಿರುವ ಘಟನೆ ನಡೆದಿದೆ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ದೇಶದಲ್ಲಿನ ಬಹುತೇಕ ರಸ್ತೆ ಮತ್ತು ರೈಲು ಮಾರ್ಗಗಳು ಬಹುತೇಕ ಕಡೆಗಳಲ್ಲಿ ಹತ್ತಿರದಲ್ಲೇ ಇವೆ. ಆದರೆ ಇವೆರಡರ ನಡುವೆ ಸ್ವಲ್ವ ದೂರವಾದರೂ ಇರುತ್ತದೆ. ಕೆಲ ಪ್ರದೇಶಗಳಲ್ಲಿ ಒಂದನೊಂದು ಹಾದುಹೋಗಲು ಲೆವೆಲ್ ಕ್ರಾಸಿಂಗ್, ಫ್ಲೈ-ಓವರ್ ಮತ್ತು ಸುರಂಗ ಮಾರ್ಗಗಗಳನ್ನು ನಿರ್ಮಿಸಲಾಗಿದೆ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ಆದರೆ ಪಂಜಾಬ್‍‍ನಲ್ಲಿನ ಪಠಾನ್‍ಕೋಟ್ ನಗರದಲ್ಲಿ ರಸ್ತೆ ಮತ್ತು ರೈಲು ಮಾರ್ಗ ಎರಡೂ ತುಂಬ ಸಮೀಪದಲ್ಲಿವೆ. ಸರಿಯಾದ ಮಾರ್ಗ ಇಲ್ಲದಿರುವುದರಿಂದ ಎರಡರ ಮಧ್ಯೆ ಬ್ಯಾರಿಕೇಡ್‍‍ಗಳನ್ನು ಕೂಡಾ ಅಳವಡಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ಹೀಗಿರುವಾಗ ಇಲ್ಲೊಬ್ಬ ಅಸಾಮಿ ತನ್ನ ಟಾಟಾ ಪಿಕ್ ಅಪ್ ಕಾರುನ್ನು ರೈಲಿನ ಹಳಿಯ ಮೇಲೆಯೇ ಪಾರ್ಕ್ ಮಾಡಿದ್ದ. ಆ ಸಮಯದಲ್ಲಿ ನಿಧಾನವಾಗಿ ಬಂದ ರೈಲು ಪಾರ್ಕ್ ಆಗಿದ್ದ ಕಾರಿಗಿಂತ ಕೊಂಚ ದೂರದಲ್ಲಿಯೆ ನಿಂತಿದೆ. ಆದರೆ ಆ ಕಾರ್ ಡ್ರೈವರ್ ಮಾತ್ರ ತನಗೆ ಏನೂ ತಿಳಿಯದಂತೆ ರೈಲು ತನ್ನ ಕಾರಿನ ಹಿಂದೆ ಇರುವುದನ್ನು ಕೂಡಾ ಗಮನಿಸಿಲ್ಲ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ಇಷ್ಟರಲ್ಲಿ ಪೂರ್ತಿಯಾಗಿ ನಿಂತ ರೈಲು ದಾರಿ ನೀಡಲು ಸಂದೇಶಿಸಿ ಗಟ್ಟಿಯಾಗಿ ಶಬ್ದ ಮಾಡಿದೆ. ರೈಲು ಮಾಡಿದ ಶಬ್ದದಿಂದ ಎಚ್ಚರಗೊಂಡ ಟಾಟಾ ಪಿಕ್ ಅಪ್ ಡ್ರೈವರ್ ತನ್ನ ಕಾರಿನ ಹಿಂದೆ ರೈಲು ನಿಂತಿರುವುದನ್ನು ಗ್ರಹಿಸಿ ಕಾರನ್ನು ಆಲ್ಲಿಂದ ಹಿಂದೆ ತೆಗೆದಿದ್ದಾನೆ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ಯಾವುದೇ ಕಾರಣ ಇಲ್ಲದೆ ರೈಲನ್ನು ನಿಲ್ಲಿಸುವುದು ಶಿಕ್ಷಾರ್ಹ ಅಪರಾಧ. ಅದಕ್ಕೆ ಕಾರಣರಾದವರ ಮೇಲೆ ದಂಡ ಹಾಕಿ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಬಹುದು. ಆದ್ರೆ ಇಲ್ಲಿ ನಡೆದ ಘಟನೆಯು ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದಲ್ಲಿ ಇವೆಲ್ಲಾ ಸರ್ವೆ ಸಾಧಾರಣ ಎನ್ನಿಸುತ್ತದೆ.

ವೀಡಿಯೊವನ್ನು ಗಮನಿಸಿದ್ದಲ್ಲಿ, ರೈಲು ಹಳಿಯ ಪಕ್ಕದಲ್ಲೇ ಹಲವು ಕಾರುಗಳನ್ನು ಸಹ ಪಾರ್ಕ್ ಮಾಡಲಾಗಿದೆ. ಆದ್ರೆ ಟಾಟಾ ಕಾರಿನ ಚಾಲಕ ಮಾತ್ರ ತನ್ನ ರೈಲು ಹಳಿಯ ಮೇಲೆಯೇ ಪಾರ್ಕ್ ಮಾಡಿದ್ದ ಕಾರಣ ರೈಲು ನಿಂತಿದೆ. ರೈಲು ಮತ್ತು ರಸ್ತೆ ಮಾರ್ಗವು ಪಕ್ಕಪಕ್ಕದಲ್ಲಿಯೇ ಇರುವ ಕಾರಣ ಸ್ವಲ್ಪ ಇಕ್ಕಟ್ಟಾಗಿ ಇರುತ್ತದೆ. ಇನ್ನು ಅಲ್ಲಿನ ಪ್ರದೇಶದಲ್ಲಿ ರೈಲು ಕೂಡಾ ಕಡಿಮೆ ವೇಗದಲ್ಲಿ ಚಲಿಸುತ್ತವೆ.

ರೈಲು ಪಟ್ಟಿಯ ಮೇಲೆ ಕಾರ್ ಪಾರ್ಕ್ ಮಾಡಿದ ಕಾರಣದಿಂದಾಗಿ ನಿಂತ ರೈಲು..

ವಿಭಿನ್ನ ಪ್ರಾಂತ್ಯ, ಪ್ರಜೆಗಳು, ಅವರ ಜೀವನ ಶೈಲಿ, ಭಾಷೆ, ವೇಷಧಾರಣೆ, ಆಹಾರ ಪದ್ಧತಿ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಭಾರತ ದೇಶವು ವಿಭಿನ್ನತೆಯನ್ನು ಹೊಂದಿದ್ದು, ಇದರಿಂದ ಇಂತಹ ಅದೆಷ್ಟೋ ಘಟನೆಗಳು ನಮ್ಮಲ್ಲಿ ನಡೆಯುತ್ತಲೇ ಇರುತ್ತವೆ.

Most Read Articles

Kannada
Read more on tata motors train
English summary
Tata Xenon blocks moving train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X