ಕರೋನಾ ವೈರಸ್ ಎಫೆಕ್ಟ್ : ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಕರೋನಾ ವೈರಸ್ ನಿಂದಾಗಿ ಅನೇಕ ವ್ಯವಹಾರಗಳು ಸ್ಥಗಿತಗೊಂಡಿವೆ. ಈ ಕಾರಣಕ್ಕೆ ಜನರು ಜೀವನೋಪಾಯಕ್ಕಾಗಿ ಹೊಸ ವ್ಯವಹಾರ, ಉದ್ಯಮಗಳನ್ನು ಆರಂಭಿಸುತ್ತಿದ್ದಾರೆ. ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಕಾರಣಕ್ಕೆ ಸಾವಿರಾರು ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರು ನಿರುದ್ಯೋಗಿಗಳಾಗಿದ್ದಾರೆ.

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಆದಾಯದ ಮೂಲವೇ ಇಲ್ಲವಾಗಿರುವುದರಿಂದ ಕ್ಯಾಬ್ ಚಾಲಕರು ಸಂಪಾದನೆಗಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಕ್ಯಾಬ್ ಚಾಲಕರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹೈದರಾಬಾದ್ ನ ನೂರಾರು ಕ್ಯಾಬ್ ಚಾಲಕರು ಸಂಪಾದನೆಗಾಗಿ ಹಣ್ಣುಗಳು ಹಾಗೂ ಜ್ಯೂಸ್ ಮಾರಾಟವನ್ನು ಆರಂಭಿಸಿದ್ದಾರೆ. ತಮ್ಮ ಟ್ಯಾಕ್ಸಿಗಳಲ್ಲಿ ಜ್ಯೂಸ್ ತಯಾರಿಸುವ ಯಂತ್ರ ಹಾಗೂ ಸ್ಟಾಲ್‌ಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಹೊಸ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಹೈದರಾಬಾದ್ ನ ಬಹುತೇಕ ಟ್ಯಾಕ್ಸಿ ಚಾಲಕರು ಬ್ಯಾಂಕ್ ಸಾಲದಲ್ಲಿ ಟ್ಯಾಕ್ಸಿ ಖರೀದಿಸಿದ್ದಾರೆ. ಯಾವುದೇ ಆದಾಯವಿಲ್ಲದೇ ಬಡ್ಡಿ ಮರುಪಾವತಿ ಸಾಧ್ಯವಾಗುವುದಿಲ್ಲ. ಆದಾಯವಿರಲಿ, ಇಲ್ಲದಿರಲಿ ಬಡ್ಡಿ ಮರುಪಾವತಿಸುವುದು ಅವರ ಜವಾಬ್ದಾರಿಯಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಇಟಿ ಆಟೋ ವರದಿಗಳ ಪ್ರಕಾರ, ಬಹುತೇಕಾ ಕ್ಯಾಬ್ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅವಧಿ, ರಿಜಿಸ್ಟ್ರೇಷನ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಮಾನ್ಯತಾ ಅವಧಿ ಮುಗಿದಿದೆ.

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಫಿಟ್‌ನೆಸ್ ಸರ್ಟಿಫಿಕೇಟ್ ಮಾನ್ಯತಾ ಅವಧಿ ಮುಗಿದಿರುವ ಕಾರಣಕ್ಕೆ ಓಲಾ ಹಾಗೂ ಉಬರ್ ಕಂಪನಿಗಳು ತಮ್ಮ ಚಾಲಕರ ಐಡಿಗಳನ್ನು ಬ್ಲಾಕ್ ಮಾಡಿವೆ. ಇದರಿಂದ ಈ ಚಾಲಕರಿಗೆ ಬುಕ್ಕಿಂಗ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಓಲಾ ಹಾಗೂ ಉಬರ್‌ನಂತಹ ಕಂಪನಿಗಳು ಪರವಾನಗಿ ನವೀಕರಸದ ಕ್ಯಾಬ್ ಚಾಲಕರನ್ನು ನಿರ್ಬಂಧಿಸಿವೆ ಎಂದು ವರದಿಗಳಾಗಿವೆ. ಕೇಂದ್ರ ಸರ್ಕಾರವು ಮಾನ್ಯತಾ ಅವಧಿ ಮುಗಿದ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಹಣ್ಣು ವ್ಯಾಪಾರಿಗಳಾದ ಕ್ಯಾಬ್ ಚಾಲಕರು

ಆಂಧ್ರಪ್ರದೇಶ ಹಾಗೂ ದೆಹಲಿ ಸರ್ಕಾರಗಳೂ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಪರಿಹಾರವನ್ನು ಘೋಷಿಸಿವೆ. ಆಂಧ್ರಪ್ರದೇಶ ಸರ್ಕಾರದ ವಾಹನ್ ಮಿತ್ರ ಯೋಜನೆಯಡಿಯಲ್ಲಿ ಒಟ್ಟು ರೂ.262 ಕೋಟಿಗಳನ್ನು ಆಟೋ, ಟ್ಯಾಕ್ಸಿ ಚಾಲಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಈ ಯೋಜನೆಯಿಂದಾಗಿ 2,62,493 ಚಾಲಕರಿಗೆ ಅನುಕೂಲವಾಗಲಿದೆ.

Most Read Articles

Kannada
English summary
Taxi Drivers in Hyderabad sells fruit and juice in vehicles during Coronavirus Pandemic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X