ಐಷಾರಾಮಿ ಕಾರ್ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಟೀ ಮಾರಿದ ವ್ಯಕ್ತಿಯೊಬ್ಬರು ದೇಶದ ಪ್ರಧಾನಮಂತ್ರಿಯಾಗಿರುವ ಸಾಧನೆಯ ಕಥೆ ಎಲ್ಲರಿಗೂ ಗೊತ್ತಿದೆ. ಅದೇ ಮಾದರಿಯಲ್ಲಿ ಟೀ ಮಾರಿದ ಕನ್ನಡಿಗನೊಬ್ಬ ಇಂದು ಐಷಾರಾಮಿ ಲ್ಯಾಂಬೊರ್ಗಿನಿ ಡೀಲರ್ ಆಗಿರುವ ಯಶೋಗಾಥೆ ಇದು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಬೆಂಗಳೂರಿನ ಸತೀಶ್ ಅವರೇ ಉದಾಹರಣೆಯಾಗಿದ್ದಾರೆ. 48 ವರ್ಷದ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಉದ್ಯಮಿ ಟಿ.ಎಸ್.ಸತೀಶ್ ಅವರ ಯಶ್ವಸಿನ ರೋಚಕ ಕಥೆ ಇಲ್ಲಿದೆ. ಇವರು ದಕ್ಷಿಣ ಭಾರತದ ಮೊದಲ ಲ್ಯಾಂಬೊರ್ಗಿನಿ ಡೀಲರ್‍‍ಶಿಪ್ ಮಾಲೀಕರಾಗಿದ್ದಾರೆ.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಕರ್ನಾಟಕದ ಮೂಲದ ಸತೀಶ್ 13 ವರ್ಷವಿದ್ದಾಗ ಬೆಂಗಳೂರಿಗೆ ಆಗಮಿಸಿದ್ದರು. ಸತೀಶ್ ಅವರು ತಮ್ಮ ಅಕ್ಕ ಮತ್ತು ಅವರ ಪತಿಯೊಂದಿಗೆ ಮಲ್ಲೇಶ್ವರಂನ 10X10 ಅಡಿ ರೂಂನಲ್ಲಿ ವಾಸಿಸುತ್ತಿದ್ದರು. ಅವರು ವಿದ್ಯಾಭಾಸಕ್ಕಾಗಿ ಬೆಂಗಳೂರಿನ ಆಂಗ್ಲ ಶಾಲೆಯೊಂದಕ್ಕೆ ಸೇರಿಕೊಂಡರು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಅವರ ಆರ್ಥಿಕ ಪರಿಸ್ಥಿತಿ ಚಿಂತಾಜನಕ ವಾಗಿತ್ತು. ಅವರಿಗೆ ಕಾಲೇಜು ವಿದ್ಯಾಭಾಸ ಮುಂದುವರೆಸಲು ಹೆಚ್ಚಿನ ಹಣಕಾಸಿನ ಅಗತ್ಯವಿತ್ತು. ಇದೇ ಕಾರಣದಿಂದ ಅವರು ತಮ್ಮ 16ನೇ ವಯಸ್ಸಿನಲ್ಲಿ ವಕೀಲರ ಕಚೇರಿಯೊಂದರಲ್ಲಿ ಟೀ ಮತ್ತು ಕಾಫಿ ವಿತರಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಇವರು ಟೀ ಮಾರುವ ಕೆಲಸ ಮಾಡುತ್ತ ಬೆಂಗಳೂರಿನಲ್ಲಿ ದಯಾನಂದ್ ಸಾಗರ್ ಸಂಜೆ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಸೇರಿಕೊಂಡರು. ಅವರು 1987ರಲ್ಲಿ ಉದ್ಯೋಗ ಬದಲಿಸಿ ಟೈಟಾನ್ ವಾಚ್ಸ್ ಕಂಪನಿಯಲ್ಲಿ ಟೈಪಿಸ್ಟ್ ಕೆಲಸಕ್ಕೆ ಸೇರಿಕೊಂಡರು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಮೂರು ವರ್ಷಗಳ ನಂತರ ಅವರಿಗೆ ಹೆಚ್‍‍ಪಿ(ಹೆವ್ಲೆಟ್ ಪ್ಯಾಕರ್ಡ್) ಕಂಪನಿಯಲ್ಲಿ ಪರ್ಚೆಸಿಂಗ್ ವಿಭಾಗದಲ್ಲಿ ಟೈಪಿಸ್ಟ್ ಆಗಿ ಕೆಲಸ ಲಭಿಸಿತ್ತು. ಆಗ ಹೆಚ್‍‍ಪಿ ಕಂಪನಿಯಲ್ಲಿ ಅವರಿಗೆ ದೊರೆಯುತ್ತಿದ್ದ ಸಂಬಳ ಕೇವಲ ರೂ.1,200 ಆಗಿತ್ತು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಅಲ್ಲಿಂದ ಅವರು ಹೆಚ್‍‍ಪಿ ಕಂಪನಿಯಲ್ಲಿ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ರಫ್ತು, ಸ್ಟೋರ್ಸ್ ಮತ್ತು ಟ್ಯಾಕ್ಸೆಷನ್ ವಿಭಾಗದಲ್ಲಿ ಕೆಲಸ ಮಾಡಿ ಅನುಭವನ್ನು ಪಡೆದುಕೊಂಡರು. ಅವರು ಅಂತಿಮವಾಗಿ 1999ರಲ್ಲಿ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಆಯ್ಕೆಯಾದರು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಸತೀಶ್ ಅವರಿಗೆ ಅಲ್ಲಿ ರೂ.1.5 ಲಕ್ಷ ಸಂಬಳ ಸಿಗುತ್ತಿತ್ತು. ಇವರು ಹತ್ತು ವರ್ಷದಲ್ಲಿ ಒಂಬತ್ತು ಬಾರಿ ಪ್ರಮೊಷನ್ ಪಡೆದು ಅಷ್ಟು ದೊಡ್ಡ ಹುದ್ದೆಗೆ ಏರಿದರು. ಕೇವಲ 10 ವರ್ಷದಲ್ಲಿ ಒಂಬತ್ತು ಬಾರಿ ಪ್ರಮೋಷನ್ ಪಡೆದು ಅಷ್ಟು ದೊಡ್ಡ ಸ್ಥಾನವನ್ನು ಅಲಂಕರಿಸಬೇಕಾದರೆ ಅವರ ಕಠಿಣ ಪರಿಶ್ರಮ ಎಂತಹದು ಎಂಬುದನ್ನು ಅರಿಯಬಹುದು.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

1999ರ ನಂತರ ಆವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದರು. ರಿಯಲ್ ಎಸ್ಟೇ‍ಟ್‍ನಲ್ಲಿ ಅವರು ರೂ.50,000 ಹೂಡಿಕೆ ಮಾಡುವ ಮೂಲಕ 4,000 ಚದರ ಅಡಿಯ ಜಾಗವನ್ನು ಖರೀದಿಸಿದರು. ಆದರೆ ಅರ್ಥಿಕ ಹಿಂಜರಿತ ಮತ್ತು ಕೆಲವು ಜನರು ಮೋಸ ಮಾಡಿದ ಕಾರಣ ಇವರಿಗೆ ನಷ್ಟ ಉಂಟಾಯಿತು.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಆದರೂ ಅವರು ಛಲ ಬಿಡದೆ ತಮ್ಮ ಉದ್ಯೋಗವನ್ನು ಮುನ್ನಡೆಸಿದರು. ಆಗ ಹೆಚ್‍‍ಪಿ ಕಂಪನಿಯಲ್ಲಿ ಅವರ ಸ್ನೇಹಿತರು ಮತ್ತು ಮಾಜಿ ಸಹೋದ್ಯೋಗಿಗಳು ಬ್ಯಾಂಕ್ ಸಾಲಗಳನ್ನು ನೀಡಿ ಸಹಕರಿಸಿದರು. ಇವರ ಸಹಾಯದಿಂದ ಇವರು ಅಪಾರ್ಟ್‍‍ಪೆಂಟ್ ಅನ್ನು ಖರೀದಿಸಿದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಆರಂಭಿಕ ಐದು ವರ್ಷಗಳು ಅತ್ಯಂತ ಕಷ್ಟಕರವಾದವು ಮತ್ತು 2008-09ರಲ್ಲಿ ಬೆಂಗಳೂರು ಮತ್ತು ಕೇರಳದಲ್ಲಿ ಅನೇಕ ವಸತಿ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಅವರು ರಿಯಲ್ ಎಸ್ಟೇಟ್‍‍ನಲ್ಲಿ ಲಾಭ ಕಂಡುಕೊಂಡರು.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಅವರ ಕಂಪನಿಯ ಮೌಲ್ಯವು 2013ರಲ್ಲೇ ಒಟ್ಟು 400 ಕೋಟಿ ಗಡಿ ದಾಟಿದ್ದು, ಇದೇ ಸಂದರ್ಭದಲ್ಲೇ ಲಂರ್ಬೋಗಿನಿ ಡೀಲರ್‌ಶಿಪ್ ಆರಂಭಿಸಿದರು. ಸತೀಶ್ ಅವರಿಗೆ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿದ್ದು, ಬೆಂಗಳೂರಿನಂತಹ ಮಹಾನಗರದಲ್ಲಿ ಲಂಬೋರ್ಗಿನಿ ಮೂಲಕ ಸಾಕಷ್ಟು ಲಾಭದಾಯಕ ಉದ್ಯಮ ನಡೆಸುತ್ತಿದ್ದಾರೆ.

ಇದೇ ಕಾರಣದಿಂದ ವಿಶಿಷ್ಟವಾದ ಕಾರ್ ಅನ್ನು ಖರೀದಿಸಲು ಸಂಶೋಧನೆಗಳನ್ನು ಮಾಡಿ ಅವರೇ ಸ್ವತಃ ಲಂಬೋರ್ಗಿನಿ ಡೀಲರ್‍‍ಶಿಪ್ ಅನ್ನು ತೆರೆಯಲು ನಿರ್ಧರಿಸುತ್ತಾರೆ. ನಂತರ ಅವರು ಸ್ವತಃ ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್ ಸ್ಟರ್ ಅನ್ನು ಖರೀದಿಸಿದರು. ಈ ಕಾರಿನ ಬೆಲೆ ಸುಮಾರು ರೂ.8 ಕೋಟಿಯಾಗಿದೆ.

ಇದು ಬೆಂಗಳೂರು ಅಲ್ಲದೇ ಭಾರತದಲ್ಲೇ ಅಪರೂಪದ ಕಾರ್ ಆಗಿತ್ತು. ಅವರ ಗ್ಯಾರೇಜ್‍‍ನಲ್ಲಿ ಲ್ಯಾಂಬೊರ್ಗಿನಿಯಲ್ಲದೆ ಅವರ ಬಳಿ ಐಷಾರಾಮಿ ಕಾರುಗಳಾದ ಬಿ‍ಎಂ‍ಡಬ್ಲ್ಯು, ಎರಡು ಆಡಿ ಕಾರು, ಪೋಕ್ಸ್ ವ್ಯಾಗನ್ ಪಾಸಾಟ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿವೆ.

ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಉದ್ಯಮಿಗಳು ದೊಡ್ಡ ಕನಸು ಕಾಣಬೇಕು ಮತ್ತು ದೃಢ ಮನಸ್ಸಿನಿಂದ ಅವರ ಗುರಿಗಳತ್ತ ಗಮನಿಸಬೇಕು ಎಂದು ಅವರು ಸದಾ ಪ್ರೇರಣೆಯ ಮಾತುಗಳನ್ನು ಹೇಳುತ್ತಾರೆ. ಸದ್ಯ ಇವರು ಬೆಂಗಳೂರಿನಂತಹ ಮಹಾನಗರದಲ್ಲಿರುವ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಉದ್ಯೂಗದಲ್ಲಿ ಯಶ್ವಸಿಯಾಗಬೇಕೆನ್ನುವ ಕನಸು ಕಂಡಿರುವವರಿಗೆ ಇವರ ಜೀವನ ಕಥೆಯು ಪ್ರೇರಣೆಯಾಗಿದೆ.

Most Read Articles

Kannada
English summary
Tea-boy becomes a Lamborghini dealer: This is his story - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X