ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಸಾಕಷ್ಟು ಜನರು ಶೋರೂಂಗಳಿಂದ ವಾಹನಗಳ ವಿತರಣೆಯನ್ನು ಪಡೆದ ನಂತರ ಆ ವಾಹನಗಳನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಬದಲಿಸುತ್ತಾರೆ. ಕೆಲವರು ಆಟೋ ಮೊಬೈಲ್ ಕಂಪನಿಗಳು ನೀಡುವ ಟಯರ್‌ಗಳನ್ನು ಬದಲಿಸಿ, ದೊಡ್ಡ ಟಯರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಇನ್ನೂ ಕೆಲವರು ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಬದಲಿಸಿ ತಮ್ಮಿಷ್ಟದ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳುತ್ತಾರೆ. ಈ ರೀತಿಯ ಮಾಡಿಫಿಕೇಶನ್ ಗಳು ವಾಹನದ ಆಕರ್ಷಣೆಯನ್ನು ಹೆಚ್ಚಿಸಬಹುದು, ಇಲ್ಲವೇ ಅವುಗಳ ಪರ್ಫಾಮೆನ್ಸ್ ಹೆಚ್ಚಿಸಬಹುದು.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಶಿಕ್ಷಕರೊಬ್ಬರು ತಮ್ಮ ವಾಹನವನ್ನು ಚಲಿಸುವ ತರಗತಿಯನ್ನಾಗಿ ಬದಲಿಸಿದ್ದಾರೆ. ಆನ್‌ಲೈನ್‌ ಮೂಲಕ ಕ್ಲಾಸ್ ಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗಾಗಿ ಅವರು ಈ ವ್ಯವಸ್ಥೆ ಮಾಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಕರೋನಾ ವೈರಸ್ ನಂತರ ಭಾರತದಲ್ಲಿ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಕಾರಣಕ್ಕೆ ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಮೂಲಕ ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಶಿಕ್ಷಕರು ಸೆಲ್ ಫೋನ್ ಇಲ್ಲವೇ ಲ್ಯಾಪ್‌ಟಾಪ್ ಮೂಲಕ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಕೆಲವು ವಿದ್ಯಾರ್ಥಿಗಳಿಗೆ ಸೆಲ್ ಫೋನ್, ಲ್ಯಾಪ್‌ಟಾಪ್ ಖರೀದಿಸುವ ಸಾಮರ್ಥ್ಯವಿಲ್ಲದ ಕಾರಣ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಅಂತಹ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕ ರುದ್ರ ರಾಣಾ ವಿದ್ಯಾರ್ಥಿಗಳಿರುವ ಊರುಗಳಿಗೆ ಹೋಗುತ್ತಿದ್ದಾರೆ. ಶಿಕ್ಷಕ ರುದ್ರ ರಾಣಾ ಅವರು ಯಮಹಾ ಬೈಕ್ ಅನ್ನು ಹೊಂದಿದ್ದಾರೆ.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಈ ಬೈಕ್ ಅನ್ನು ಅವರು ಮೊಬೈಲ್ ತರಗತಿಯನ್ನಾಗಿ ಬದಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬರೆಯಲು ಹಾಗೂ ಪಾಠ ಮಾಡಲು ಶಿಕ್ಷಕ ರುದ್ರ ರಾಣಾ ಈ ಬೈಕ್‌ನಲ್ಲಿ ಬೋರ್ಡ್ ಅನ್ನು ಅಳವಡಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಬಿಸಿಲು ಹಾಗೂ ಮಳೆಯನ್ನು ತಡೆದುಕೊಳ್ಳಲು ಛತ್ರಿಯನ್ನು ಕೂಡ ಅಳವಡಿಸಲಾಗಿದೆ. ರುದ್ರ ರಾಣಾರವರು ಸಂಬಂಧಪಟ್ಟ ಗ್ರಾಮಕ್ಕೆ ತೆರಳಿದ ನಂತರ ಗಂಟೆ ಬಾರಿಸಿ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಕರೆಯುತ್ತಾರೆ.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಗಂಟೆ ಬಾರಿಸಿದ ನಂತರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಾರೆ. ನಂತರ ರುದ್ರ ರಾಣಾ ಬೈಕಿಗೆ ಜೋಡಿಸಲಾದ ಬೋರ್ಡ್‌ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿಯೇ ಪಾಠ ಮಾಡುತ್ತಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಅಂದ ಹಾಗೆ ಶಿಕ್ಷಕ ರುದ್ರ ರಾಣಾರವರು ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತರಗತಿಗಳನ್ನು ಕೊಂಡೊಯ್ದಿರುವುದು ಛತ್ತೀಸ್‌ಗಢದಲ್ಲಿ. ಈ ಬಗ್ಗೆ ಮಾತನಾಡಿರುವ ಅವರು ಅನೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರ ಮನೆ ಬಾಗಿಲಿಗೆ ಬಂದು ಪಾಠ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಶಿಕ್ಷಕ ರುದ್ರ ರಾಣಾರವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕರೋನಾ ವೈರಸ್ ನಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕೆಲ ಶಿಕ್ಷಕರು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕೆಲ ತಿಂಗಳ ಹಿಂದೆ ಇರಾನ್‌ನ ಶಿಕ್ಷಕರೊಬ್ಬರು ತಮ್ಮ ಕಾರನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಳಸಿದ್ದರು. ಕಪ್ಪು ಬೋರ್ಡ್ ಇಲ್ಲದ ಕಾರಣಕ್ಕೆ ಕಾರಿನ ಮೇಲೆಯೇ ಬರೆದು ಪಾಠ ಮಾಡಿದ್ದರು.

ಬೈಕ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರಿವರು

ಅವರು ಕಾರಿಗೆ ಹಾನಿಯಾಗಬಹುದು ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಲಿಲ್ಲ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕರೋನಾ ವೈರಸ್ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.

Most Read Articles

Kannada
English summary
Teacher conducting classes on door step through Yamaha bike. Read in Kannada.
Story first published: Friday, September 18, 2020, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X