Just In
- 4 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 54 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
ಕಳಪೆ ಮಟ್ಟದಲ್ಲಿ ಲಸಿಕೆ ಅಭಿಯಾನ; ಎರಡು ರಾಜ್ಯಗಳಿಗೆ ಕೇಂದ್ರದ ತರಾಟೆ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ
ಹೈಪರ್ ಕಾರುಗಳು ನೋಡಲು ಎಷ್ಟು ಆಕರ್ಷವಾಗಿರುತ್ತವೆಯೋ ಅವುಗಳು ಅಷ್ಟೇ ಭಯ ಹುಟ್ಟಿಸುತ್ತವೆ. ಏಕೆಂದರೆ ಆ ಕಾರುಗಳಿಂದ ಆಗುವ ಅಪಘಾತಗಳು ಸಹ ಅಷ್ಟೇ ಭಯಾನಕ. ಹೈಪರ್ ಕಾರುಗಳಿಂದ ಆ ಕಾರಿನ ಚಾಲಕ, ಪ್ರಯಾಣಿಕ ಅಥವಾ ಸುತ್ತಮುತ್ತಲಿರುವವರಿಗೂ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.

ಇತ್ತೀಚಿಗೆ ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಹೈಪರ್ ಕಾರೊಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಈ ಕಾರಿನ ಮುಂಭಾಗವು ಅಪ್ಪಚ್ಚಿಯಾಗಿದೆ. ಈ ಅಪಘಾತದ ತೀವ್ರತೆ ಎಷ್ಟಿದೆಯೆಂದರೆ ಚಾಲಕನ ಬಳಿಯಿದ್ದ ಡೋರು ಹೊರಬಂದು ರಸ್ತೆಯಲ್ಲಿ ಬಿದ್ದಿದ್ದರೆ, ಮುಂಭಾಗದ ವ್ಹೀಲ್ ಗಳು ಚಾಸಿಸ್ ನಿಂದ ಸಂಪೂರ್ಣವಾಗಿ ಹೊರಬಂದಿವೆ.

ರಸ್ತೆಯಲ್ಲಿ ಬಿದ್ದಿರುವ ಕಾರ್ಬನ್-ಫೈಬರ್ ತುಣುಕುಗಳನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿಗಳ ಪ್ರಕಾರ, 17 ವರ್ಷದ ಕೇಜ್ ಗಿಲಿಯನ್ ಎಂಬಾತ ತನ್ನ ತಂದೆಗೆ ಸೇರಿದ ಈ ಪಗಾನಿ ಹ್ಯುರಾ ರೋಡ್‌ಸ್ಟರ್ ಹೈಪರ್ ಕಾರನ್ನು ಚಾಲನೆ ಮಾಡುತ್ತಿದ್ದ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೆಕ್ಸಾಸ್‌ನ ಖಾಸಗಿ ಷೇರುದಾರ ಟಿಮ್ ಗಿಲಿಯನ್ ಅವರ ಮಗನಾದ ಕೇಜ್ ಯೂಟ್ಯೂಬ್‌ನಲ್ಲಿ ಚಾನೆಲ್‌ಗಳನ್ನು ನಡೆಸುತ್ತಿದ್ದಾನೆ. ಉದ್ಯಮಿ ಟಿಮ್ ಗಿಲಿಯನ್ ಮೆಕ್‌ಲಾರೆನ್ ಸೆನ್ನಾ, ಬುಗಾಟ್ಟಿ ಚಿರೋನ್, ಫೆರಾರಿ ಲಾಫೆರಾರಿ, ರೋಲ್ಸ್ ರಾಯ್ಸ್ ಟೌನ್ ಹಾಗೂ ಲ್ಯಾಂಬೊರ್ಗಿನಿ ಉರುಸ್ ನಂತಹ ಹಲವು ಐಷಾರಾಮಿ ಸೂಪರ್ ಕಾರುಗಳನ್ನು ಹೊಂದಿದ್ದಾರೆ.

ಅಪಘಾತದಲ್ಲಿ ಅಪ್ಪಚ್ಚಿಯಾಗಿರುವ ಪಗಾನಿ ಹ್ಯುರಾ ರೋಡ್‌ಸ್ಟರ್ ಕಾರಿನ ಬೆಲೆ 3.4 ದಶಲಕ್ಷ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.25 ಕೋಟಿಗಳಾಗುತ್ತದೆ. ರಸ್ತೆಯ ಮೇಲಿರುವ ಕಾರ್ಬನ್-ಫೈಬರ್ ತುಂಡುಗಳನ್ನು ನೋಡಿದರೆ ಅಪಘಾತದ ತೀವ್ರತೆ ಕಂಡು ಬರುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಅಪಘಾತದಲ್ಲಿ ಕೇಜ್ ಗಿಲಿಯನ್ ಗೆ ತೀವ್ರ ಸ್ವರೂಪದ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ.

ಕೇಜ್ ಗಿಲಿಯನ್ ಕೆಲವು ವೀಡಿಯೊಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಅವುಗಳಲ್ಲಿ ಹೆಚ್ಚಿನ ವೀಡಿಯೊಗಳು ಕಾರಿನ ಪೆಡಲ್ ಗಳಿಗೆ ಸಂಬಂಧಿಸಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
2018ರಲ್ಲಿ ಬಿಡುಗಡೆಯಾದ ಬಗಾನಿ ಹೈಪರ್ ಕಾರು 754 ಬಿಎಚ್‌ಪಿ ಪವರ್ ಉತ್ಪಾದಿಸುವ ಎಂಜಿನ್ ಅನ್ನು ಹೊಂದಿದೆ. ಕಳೆದ ಜೂನ್‌ನಲ್ಲಿ, ಟಿಮ್ ಗಿಲಿಯನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪಗಾನಿ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಇದಾದ ಆರು ತಿಂಗಳ ಬಳಿಕ ಈ ಅಪಘಾತ ಸಂಭವಿಸಿದೆ. ಪಗಾನಿ ಕಂಪನಿಯು ವರ್ಷಕ್ಕೆ ಕೇವಲ 30 ಹೈ ಪರ್ಫಾಮೆನ್ಸ್ ಹೈಪರ್ ಕಾರುಗಳನ್ನು ಉತ್ಪಾದಿಸುತ್ತದೆ. ಏಕೆಂದರೆ ಪ್ರತಿ ಕಾರನ್ನು ಉತ್ಪಾದಿಸಲು 10 ತಿಂಗಳು ಬೇಕಾಗುತ್ತದೆ.