ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಇಡೀ ದೇಶವೇ ಕರೋನಾ ಮಹಾಮಾರಿಯ ಸಂಕಷ್ಟದಿಂದ ಹೊರಬರಲು ಸರ್ಕಾರ ಮತ್ತು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಬಳಸಲು 32 ಐಷಾರಾಮಿ ಕಾರುಗಳನ್ನು ಖರೀದಿಸಿದೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಸರ್ಕಾರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗಾಗಿ 32 ಕಿಯಾ ಕಾರ್ನಿವಲ್ ಕಾರುಗಳನ್ನು ಖರೀದಿಸಿ ಹಸ್ತಾಂತರಿಸಲಾಗಿದೆ. ಸದ್ಯ ಈ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ತೆಲಂಗಾಣ ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಐಷಾರಾಮಿ ಕಾರುಗಳ ಶೋಕಿ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಭಾನುವಾರದಂದು ಹೈದರಾಬಾದ್‌ನಲ್ಲಿರುವ ಮುಖ್ಯಮಂತ್ರಿ ನಿವಾಸದಿಂದ ಈ ಐಷಾರಾಮಿ ಕಾರುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಅಧಿಕಾರಿಗಳು ಹಾಜರಿದ್ದರು.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಬಿಜೆಪಿ ನಾಯಕ ವಿದ್ಯಾಸಾಗರ್ ರಾವ್ ಅವರು, ಮುಖ್ಯಮಂತ್ರಿ ಅಧಿಕಾರಿಗಳನ್ನು ಮೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು 32 ಐಷಾರಾಮಿ ಕಾರುಗಳನ್ನು ಖರೀದಿಸಲು ಸುಮಾರು ರೂ.11 ಕೋಟಿ ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದನ್ನು ಮುಖ್ಯಮಂತ್ರಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ರಾಜ್ಯವು ಕರೋನಾ ಎಂಬ ಮಹಾಮಾರಿಯ ಸಂಕಷ್ಟ ಎದುರಿಸುತ್ತಿದೆ, ಚಿಕಿತ್ಸೆಯಿಂದಾಗಿ ಬಡ ಜನರು ಭಾರಿ ಸಾಲದಲ್ಲಿದ್ದಾರೆ. ಹೀಗಿರುವಾಗ ರಾಜ್ಯ ನಾಯಕರು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಕೂಡ ಟೀಕಿಸಿದೆ,

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಸದ್ಯ ಕಿಯಾ ಕಾರ್ನಿವಲ್ ಕಾರಿನ ಬೆಲೆಯು ತೆಲಂಗಾಣ ಎಕ್ಸ್ ಶೋರೂಂ ಪ್ರಕಾರ ರೂ.24.95 ಲಕ್ಷದಿಂದ ರೂ.33.95 ಲಕ್ಷಗಳಾಗಿದೆ. ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯನ್ನು ಈ ವರ್ಷದ ಆರಂಭದಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಅಧಿಕೃತವಾಗಿ ದೇಶದಲ್ಲಿ ಬಿಡುಗಡೆ ಮಾಡಲಾಯಿತು.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಈ ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯಲ್ಲಿ 2.2-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 197 ಬಿಹೆಚ್‌ಪಿ ಮತ್ತು 440 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಈ ಎಂಜಿನ್ ಅನ್ನು 8-ಸ್ಪೀಡ್ ಸ್ಪೋರ್ಟ್‌ಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲಾಗಿದೆ. ಇದು ಮುಂಭಾಗದ ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಕಿಯಾ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಂಪಿವಿಯಾಗಿದೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯಲ್ಲಿ ಎಲೆಕ್ಟ್ರಿಕ್ ಸ್ಲೈಡಿಂಗ್ ಹಿಂಭಾಗದ ಡೋರುಗಳು, ಪವರ್-ಫೋಲ್ಡಿಂಗ್ ಒಆರ್ವಿಎಂಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಪವರ್-ಚಾಲಿತ ಟೈಲ್ ಗೇಟ್ ಮತ್ತು ಇತರ ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ. ಇನ್ನು ರೇಡಿಯೇಟರ್ ಗ್ರಿಲ್ ಮತ್ತು ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ 18 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಕೂಡ ಒಳಗೊಂಡಿದೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಕಿಯಾ ಕಾರ್ನಿವಾಲ್ ಎಂಪಿವಿಯು 2,200 ಕೆಜಿ ತೂಕ ಹೊಂದಿದೆ. ಈ ಕಿಯಾ ಎಂಪಿವಿಯು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ಅನ್ನು ನೀಡಲಿದೆ.

ಸಂಕಷ್ಟದ ಸಂದರ್ಭದಲ್ಲೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

ಇನ್ನು ಒಟ್ಟಾರೆಯಾಗಿ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣ 32 ಐಷಾರಾಮಿ ಕಾರುಗಳನ್ನು ಖರೀದಿಸಿರುವುದು ಅನಗತ್ಯವಾಗಿತ್ತು. ಈ ಹಣವನ್ನು ಬಡವರಿಗೆ ನೆರವಾಗುವ ರೀತಿಯಲ್ಲಿ ಸರ್ಕಾರ ಬಳಬಹುದಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ

Most Read Articles

Kannada
English summary
Kia Carnival 32 Units Given By Telangana Chief Minister To State Collectors. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X