ಭಾರತೀಯ ಲೈಸನ್ಸ್ ಇಟ್ಟುಕೊಂಡು ಯಾವೆಲ್ಲ ರಾಷ್ಟ್ರಗಳಲ್ಲಿ ಗಾಡಿ ಓಡಿಸಬಹುದು?

By Nagaraja

ಭಾರತೀಯ ಮೋಟಾರು ಕಾಯ್ದೆ ಅಧಿನಿಯಮ ಪ್ರಕಾರ ದ್ವಿಚಕ್ರ ವಾಹನಗಳಿಂದ ಹಿಡಿದು ದೇಶದಲ್ಲಿ ವಾಹನ ಓಡಿಸುವ ಪ್ರತಿಯೊಬ್ಬನೂ ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರತಕ್ಕದ್ದು. ಅಷ್ಟಕ್ಕೂ ಭಾರತೀಯ ಲೈಸನ್ಸ್ ಇಟ್ಟುಕೊಂಡು ವಿದೇಶದಲ್ಲಿ ಗಾಡಿ ಓಡಿಸಲು ಸಾಧ್ಯ ಎಂಬುದರ ಬಗ್ಗೆ ನೀವು ಯಾವತ್ತಾದರೂ ಯೋಚಿಸಿರುವೀರಾ ?

ಅರ್ಥವತ್ತಾದ ಸಂದೇಶ ಸಾರುವ ವ್ಯಂಗ್ಯ ರಸ್ತೆ ಸೂಚನಾ ಫಲಕಗಳು

ಪ್ರವಾಸ, ಉದ್ಯೋಗ ಅಥವಾ ಇನ್ಯಾವುದೇ ಅವಶ್ಯಕತೆಗಳಿಗಾಗಿ ನೀವು ನಾವಿಂದು ಹೇಳಿಕೊಡುವ ರಾಷ್ಟ್ರಗಳಿಗೆ ಭೇಟಿ ಕೊಡುವುದಾದ್ದಲ್ಲಿ ಜೇಬಿನ ಪಾಕೆಟ್ ನಲ್ಲಿ ಡ್ರೈವಿಂಗ್ ಲೈಸನ್ಸ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ. ಯಾಕೆಂದರೆ ಭಾರತೀಯ ಚಾಲನಾ ಪರವಾನಗಿ ಇಟ್ಟಕೊಂಡು ಇಲ್ಲಿ ಕೊಡಲಾಗಿರುವ ದೇಶಗಳಲ್ಲೂ ವಾಹನ ಓಡಿಸಲು ಮಾನ್ಯತೆ ಪಡೆದಿದೆ.

01. ಬ್ರಿಟನ್

01. ಬ್ರಿಟನ್

ಒಂದು ಕಾಲಘಟ್ಟದಲ್ಲಿ ತನ್ನ ವಶಾಹತುಶಾಹಿ ನೀತಿಯಿಂದ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಬ್ರಿಟನ್ ನಲ್ಲಿ ಭಾರತೀಯ ಪರವಾನಗಿ ಇಟ್ಟುಕೊಂಡೇ ವಾಹನ ಚಾಲನೆ ಮಾಡಬಹುದಾಗಿದೆ. ಆದರೆ ಒಂದು ಷರತ್ತಿದೆ. ಗರಿಷ್ಠ ಒಂದು ವರ್ಷದ ಅವಧಿಯ ತನಕ ನೀವಿದರ ಪ್ರಯೋಜನ ಪಡೆಯಬಹುದಾಗಿದೆ.

ಹಾಗಾಗಿ ಮುಂದಿನ ಬಾರಿ ನೀವು ನಿಮ್ಮ ಪ್ರೇಯಸಿಯ ಜೊತೆ ಬ್ರಿಟನ್ ಪ್ರವಾಸಕ್ಕೆ ಹೊರಟಲ್ಲಿ ನೇರವಾಗಿ ಸೆಲ್ಪ್ ಡ್ರೈವಿಂಗ್ ಕಾರೊಂದನ್ನು ಬಾಡಿಗೆಗೆ ತೆಗೆದುಕೊಂಡು

ಅಲ್ಲಿನ ಅದ್ಭುತ ರಸ್ತೆ ಮತ್ತು ಮನೋಹರವಾದ ಸ್ಥಳಗಳ ಮಜಾ ಸವಿಯಬಹುದಾಗಿದೆ.

02. ಆಸ್ಟ್ರೇಲಿಯಾ

02. ಆಸ್ಟ್ರೇಲಿಯಾ

ಭಾರತೀಯ ಲೈಸನ್ಸ್ ಇಟ್ಟುಕೊಂಡು ಆಸ್ಟ್ರೇಲಿಯಾದಲ್ಲಿ ಎಷ್ಟು ಸಮಯ ಬೇಕಾದರೂ ಗಾಡಿ ಓಡಿಸಬಹುದು. ಆದರೆ ಎರಡು ಷರತ್ತುಗಳ ಬಗ್ಗೆ ಮಾತ್ರ ಗಮನ ಹರಿಸಬೇಕಾಗುತ್ತದೆ. ಅದೇನೆಂದರೆ ಮೊದಲನೆಯದಾಗಿ ಪಾಸ್ ಪೋರ್ಟ್ ಇಂಗ್ಲಿಂಷ್ ನಲ್ಲಿ ಮುದ್ರಿತವಾಗಿರಬೇಕು. ಎರಡನೇಯದಾಗಿ ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit) ಹೊಂದಿರಬೇಕು.

03. ಅಮೆರಿಕ

03. ಅಮೆರಿಕ

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕದಲ್ಲೂ ಭಾರತೀಯ ಪರವಾನಗಿ ಇಟ್ಟುಕೊಂಡು ವಾಹನ ಚಾಲನೆ ಮಾಡಲು ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ಡ್ರೈವಿಂಗ್ ಲೈಸನ್ಸ್ ಮಾತ್ರ ಇಂಗ್ಲಿಂಷ್ ನಲ್ಲಿ ಮುದ್ರಿತವಾಗಿರಬೇಕು. ಹಾಗೊಂದು ವೇಳೆ ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿತವಾದ್ದಲ್ಲಿ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಕಡ್ಡಾಯವಾಗಿ ಹಾಜರುಪಡಿಸಬೇಕು.

04. ಜರ್ಮನಿ

04. ಜರ್ಮನಿ

ಭಾರತೀಯ ಪರವಾನಗಿ ಮಾನ್ಯತೆಯಲ್ಲಿ ಜರ್ಮನಿಯಲ್ಲಿ ಹೆಚ್ಚೆಂದರೆ ಆರು ತಿಂಗಳ ವರೆಗೆ ಡ್ರೈವಿಂಗ್ ಮಾಡಬಹುದು. ಅಲ್ಲದೆ ರಾಯಭಾರ ಕಚೇರಿಯಿಂದ ಡ್ರೈವಿಂಗ್ ಲೈಸನ್ಸ್ ಅನುವಾದ ಮಾಡತಕ್ಕದ್ದು. ಹಾಗೊಂದು ವೇಳೆ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಇದ್ದಲ್ಲಿ ಮತ್ತಷ್ಟು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ.

05. ಸ್ವಿಜರ್ಲೆಂಡ್

05. ಸ್ವಿಜರ್ಲೆಂಡ್

ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಸ್ವಿಜರ್ಲೆಂಡ್ ನಲ್ಲೂ ಭಾರತೀಯ ಚಾಲನಾ ಪರವಾನಗಿ ಇಟ್ಟುಕೊಂಡು ಗರಿಷ್ಠ ಒಂದು ವರ್ಷದ ವರೆಗೆ ವಾಹನ ಚಾಲನೆ ಮಾಡಬಹುದಾಗಿದೆ.

06. ಮಾರಿಷಸ್

06. ಮಾರಿಷಸ್

ಬೇಕಾದಷ್ಟು ಸಮುದ್ರ ತೀರದಿಂದ ಕೂಡಿರುವ ಚಿಕ್ಕ ದ್ವೀಪ ರಾಷ್ಟ್ರವಾಗಿರುವ ಮಾರಿಷಸ್ ನಲ್ಲೂ ಭಾರತೀಯ ಚಾಲನಾ ಪರವಾನಗಿ ಇದ್ದಲ್ಲಿ ಒಂದು ವರ್ಷದ ಅವಧಿಯ ವರೆಗೆ ವಾಹನ ಚಾಲನೆ ಮಾಡಬಹುದಾಗಿದೆ.

07. ನ್ಯೂಜಿಲಂಡ್

07. ನ್ಯೂಜಿಲಂಡ್

ಫೆಸಿಫಿಕ್ ಸಾಗರದಲ್ಲಿರುವ ಜಗತ್ತಿನ ಅತ್ಯಂತ ಸುಂದರ ರಾಷ್ಟ್ರಗಳಲ್ಲಿ ಒಂದಾಗಿರುವ ನ್ಯೂಜಿಲೆಂಡ್ ನಲ್ಲೂ ಒಂದು ವರ್ಷದ ಅವಧಿಯ ವರೆಗೆ ಭಾರತೀಯ ಚಾಲನಾ ಪರವಾನಗಿ ಇಟ್ಟುಕೊಂಡು ವಾಹನ ಚಾಲನೆ ಮಾಡಬಹುದಾಗಿದೆ. ಆದರೆ ನಿಮ್ಮ ಲೈಸನ್ಸ್ ಯಾವ ವಾಹನಗಳಿಗೆ ಮಾನ್ಯ ಎಂಬುದನ್ನು ಸೀಮಿತಗೊಳಿಸಲಾಗುತ್ತದೆ.

08. ಫ್ರಾನ್ಸ್

08. ಫ್ರಾನ್ಸ್

ಫ್ರಾನ್ಸ್ ನಲ್ಲೂ ಭಾರತೀಯ ಚಾಲನಾ ಪರವಾನಗಿ ಇಟ್ಟುಕೊಂಡು ವಾಹನ ಚಾಲನೆ ಮಾಡಬಹುದಾಗಿದೆ. ಆದರೆ ನಿಮ್ಮ ಚಾಲನಾ ಪರವಾನಗಿಯನ್ನು ಫ್ರಾನ್ಸ್ ಭಾಷೆಗೆ ಬದಲಾಯಿಸಬೇಕಾಗುತ್ತದೆ.

09. ನಾರ್ವೆ

09. ನಾರ್ವೆ

ಪ್ರಕಾಶಮಾನವಾದ ಸೂರ್ಯ ಕಿರಣಗಳ ಸೌಂದರ್ಯಕ್ಕೆ ಹೆಸರು ಮಾಡಿರುವ ನಾರ್ವೆಯಲ್ಲೂ ಮೂರು ತಿಂಗಳ ವರೆಗೆ ಭಾರತೀಯ ಚಾಲನಾ ಪರವಾನಗಿ ಮಾನ್ಯತೆಯಲ್ಲಿ ಗಾಡಿ ಓಡಿಸಬಹುದಾಗಿದೆ.

10. ದಕ್ಷಿಣ ಆಫ್ರಿಕಾ

10. ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಸಹ ಭಾರತೀಯ ಡ್ರೈವಿಂಗ್ ಲೈಸನ್ಸ್ ಗೆ ಅಸ್ತು ಎಂದಿದೆ. ಆದರೆ ಏಕ ಮಾತ್ರ ಷರತ್ತು ಏನೆಂದರೆ ಚಾಲನಾ ಪರವಾನಗಿ ಮಾತ್ರ ಇಂಗ್ಲಿಂಷ್ ನಲ್ಲಿ ಮುದ್ರಿತವಾಗಿರಬೇಕು.

ಭಾರತೀಯ ಲೈಸನ್ಸ್ ಇಟ್ಟುಕೊಂಡು ಯಾವೆಲ್ಲ ರಾಷ್ಟ್ರಗಳಲ್ಲಿ ಗಾಡಿ ಓಡಿಸಬಹುದು?

ಭಾರತೀಯ ಲೈಸನ್ಸ್ ಪರವಾನಗಿಯಲ್ಲಿ ನೀವು ವಿದೇಶಗಳಲ್ಲಿ ವಾಹನ ಚಾಲನೆ ಮಾಡಿರುವುದಾದ್ದಲ್ಲಿ ಈ ಸಂಬಂಧ ನಿಮ್ಮ ಅಮೂಲ್ಯ ಅನುಭವಗಳನ್ನು ನಮ್ಮ ಜೊತೆ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಭಾರತೀಯ ಲೈಸನ್ಸ್ ಇಟ್ಟುಕೊಂಡು ಯಾವೆಲ್ಲ ರಾಷ್ಟ್ರಗಳಲ್ಲಿ ಗಾಡಿ ಓಡಿಸಬಹುದು?

ವೇಗಕ್ಕೆ ಕಡಿವಾಣ ಹಾಕಲು ತ್ರಿಡಿ ರಸ್ತೆ ಚಿತ್ರದೊಂದಿಗೆ ಇಬ್ಬರು ಮಹಿಳೆಯರ ಚಮತ್ಕಾರ!

ಭಾರತೀಯ ಲೈಸನ್ಸ್ ಇಟ್ಟುಕೊಂಡು ಯಾವೆಲ್ಲ ರಾಷ್ಟ್ರಗಳಲ್ಲಿ ಗಾಡಿ ಓಡಿಸಬಹುದು?

ಡ್ರೈವಿಂಗ್ ಬಗ್ಗೆ ಚಾಲಕರು ತಿಳಿದಿರಬೇಕಾದ 7 ಸ್ವಾರಸ್ಯಕರ ಅಂಶಗಳು

Most Read Articles

Kannada
English summary
Heading Out Of Country? Pack Your Indian Driving License Too
Story first published: Thursday, May 12, 2016, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X