ಗಸ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ವಿಶ್ವದಲ್ಲೇ ಅತಿ ಹೆಚ್ಚು ಐಷಾರಾಮಿ ಗಸ್ತು ನಿರ್ವಹಣೆಯ ವಾಹನಗಳನ್ನು ಹೊಂದಿರುವ ದುಬೈ ಪೊಲೀಸರು ಇದೀಗ ಟೆಸ್ಲಾ ಎಲೆಕ್ಟ್ರಿಕ್ ಸೈಬರ್‌ಟ್ರಕ್ ಮೇಲೆ ಕಣ್ಣಿಟ್ಟಿದ್ದಾರೆ. ವೇಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಸೈಬರ್‌ಟ್ರಕ್ ಮುಂದಿನ ಕೆಲವೇ ದಿನಗಳಲ್ಲಿ ದುಬೈ ಪೊಲೀಸರ ಕೈ ಸೇರಲಿದ್ದು, ಬಿಡುಗಡೆಗೂ ಮುನ್ನವೇ ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಯ ಮುನ್ಸೂಚನೆ ನೀಡಿದ್ದಾರೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಗಸ್ತು ನಿರ್ವಹಣೆಗಾಗಿ ಈಗಾಗಲೇ ಫೆರಾರಿ ಎಫ್‌ಎಫ್, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ, ಮೆಕ‌್‌ಲ್ಯಾರೆನ್ 12ಸಿ, ಬಿಎಂಡಬ್ಲ್ಯು 6 ಸಿರೀಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬ್ರಾಬಸ್ ಜಿ63, ಬುಗಾಟಿ ವೆರೋನ್, ಆಸ್ಟನ್ ಮಾರ್ಟಿನ್ ಒನ್ 77, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ ಕ್ಲಾಸ್, ಷೆವರ್ಲೆ ಕ್ಯಾಮರೊ, ಟೊಯೊಟೊ ಪ್ರಾಡೊ, ಟೊಯೊಟಾ ಫಾರ್ಚೂನರ್, ಹಮ್ಮರ್ ಎಚ್1 ಮತ್ತು ಲಂಬೊರ್ಗಿನಿ ಅವೆಂಟಡೊರ್ ಸೇರಿದಂತೆ ಹಲವಾರು ಸೂಪರ್ ಕಾರುಗಳನ್ನು ಬಳಕೆ ಮಾಡುತ್ತಿರುವ ದುಬೈ ಪೊಲೀಸರು ಇದೇ ಮೊದಲ ಬಾರಿಗೆ ಟೆಸ್ಲಾ ನಿರ್ಮಾಣದ ಸೈಬರ್‌ಟ್ರಕ್ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದಾರೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಕಳೆದ ವಾರವಷ್ಟೇ ಅನಾವರಣಗೊಂಡಿರುವ ಸೈಬರ್‌ಟ್ರಕ್ ಮಾದರಿಯು ಎಲೆಕ್ಟ್ರಿಕ್ ವಾಹನಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬರುತ್ತಿದ್ದು, ದುಬೈ ಪೊಲೀಸರು ತಮ್ಮ ಅಧಿಕೃತ ಟಿಟ್ವರ್ ಖಾತೆಯಲ್ಲಿ ಮಾಡಿಫೈಗೊಳಿಸಲಾದ ಸೈಬರ್‌ಟ್ರಕ್ ಕಾರಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕುತುಹೂಲ ಮೂಡಿಸಿದ್ದಾರೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ದುಬೈ ಪೊಲೀಸರು ಇತ್ತೀಚೆಗೆ ಹೆಚ್ಚೆಚ್ಚು ಪರಿಸರ ಸ್ನೇಹಿ ವಾಹನಗಳ ಖರೀದಿಯತ್ತ ವಿಶೇಷ ಆದ್ಯತೆ ನೀಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಐಕಾನಿಕ್ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಮತ್ತು ಮೂರು ಪನಮೆರಾ ಎಸ್‌ಇ ಹೈಬ್ರಿಡ್ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದರು.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಇದೀಗ ಖರೀದಿ ಮಾಡಲು ಮುಂದಾಗಿರುವ ಟೆಸ್ಲಾ ಸೈಬರ್‌ಟ್ರಕ್ ಮಾದರಿಯು 2020ರ ಕೊನೆಯಲ್ಲಿ ಇಲ್ಲವೇ 2021ರ ಆರಂಭದಲ್ಲಿ ಗಸ್ತುನಿರ್ವಹಣೆಗೆ ಲಭ್ಯವಾಗಲಿದ್ದು, ಬಿಡುಗಡೆಗೂ ಮುನ್ನವೇ ಸೈಬರ್ ಕಾರು ಬರೋಬ್ಬರಿ 3 ಲಕ್ಷ ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದೆ. ಮಾಡೆಲ್ ವೈ ಮತ್ತು ರೋಡ್‌ಸ್ಟರ್ ಕಾರಿನ ನಡುವಿನ ಸ್ಥಾನ ಪಡೆದುಕೊಂಡಿರುವ ಸೈಬರ್‌ಟ್ರಕ್ ಪಿಕ್ಅಪ್ ವಾಹನವು ವಿಶೇಷ ವಿನ್ಯಾಸದೊಂದಿಗೆ ರಸ್ತೆಗಿಳಿಯಲಿದ್ದು, ಹೊರಭಾಗದ ವಿನ್ಯಾಸವು ತುಸು ವಿಚಿತ್ರ ಎನ್ನಿಸಿದರೂ ಸಹ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಬಿಡುಗಡೆಗೊಳ್ಳಲಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೇ ಆಪ್ ರೋಡ್‌ಗಳಲ್ಲೂ ಬಲಶಾಲಿ ಡ್ರೈವ್ ಸೌಲಭ್ಯವನ್ನು ಹೊಂದಿರುವ ಸೈಬರ್‌ಟ್ರಕ್ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪಡೆದುಕೊಂಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಆರಂಭಿಕ ಆವೃತ್ತಿಯು ಸಿಂಗಲ್ ಮೋಟಾರ್ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ 400ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 6.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗದ ಪಡೆದುಕೊಳ್ಳುವ ಮೂಲಕ ಗರಿಷ್ಠ 3,400 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಮಧ್ಯಮ ಗಾತ್ರದ ಆವೃತ್ತಿಯು ಡ್ಯುಯಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 482 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 4.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆಯುವ ಮೂಲಕ 4,500 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಕೊನೆಯದಾಗಿ ಹೈ ಎಂಡ್ ಮಾದರಿಯು ತ್ರಿಬಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಜೊತೆಗೆ ಹೈ ಎಂಡ್ ಮಾದರಿಯಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೇರಿದಂತೆ ವಿವಿಧ ಡ್ರೈವ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, ಇದು 6,350 ಕೆ.ಜಿ ಸರಕು ಎಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೈ ಎಂಡ್ ಮಾದರಿಯ ವೇಗವು ಪೋರ್ಷೆ 911 ಸೂಪರ್ ಕಾರಿನ ವೇಗಕ್ಕೆ ಸಮನಾಗಿದ್ದು, ಆಟೋ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಲಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಸದ್ಯ ಇದು ಅನಾವರಣಗೊಳಿಸಿರುವ ಪಿಕ್ಅಪ್ ಟ್ರಕ್ ಆವೃತ್ತಿಯಾಗಿದ್ದು, ಬಿಡುಗಡೆಯ ಹೊತ್ತಿಗೆ ಇನ್ನು ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆದರೂ ಶೇ.90 ರಷ್ಟು ಉತ್ಪಾದನಾ ಆವೃತ್ತಿಯಲ್ಲೂ ಇದೇ ವಿನ್ಯಾಸವನ್ನೇ ಪಡೆದುಕೊಳ್ಳಲಿದ್ದು, ಬೆಲೆ ಕೂಡಾ ಆಕರ್ಷಕವಾಗಿರಲಿವೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸೈಬರ್‌ಟ್ರಕ್ ನಿರ್ಮಾಣಕ್ಕೆ ಬಳಸಲಾಗಿರುವ ಸ್ಟೈನ್ ಲೆಸ್ ಸ್ಟೀಲ್ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದು, ಸ್ಪೇಸ್‌ ಎಕ್ಸ್‌ ರಾಕೆಟ್‌ ಗಳಲ್ಲಿ ಬಳಸಲಾಗುವ ದಪ್ಪ ಸ್ಟೈನ್‌ ಲೆಸ್ ಸ್ಟೀಲ್ ಇದಾಗಿದೆಯೆಂತೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಬಿಡುಗಡೆಯ ಅವಧಿ ಮತ್ತು ಬೆಲೆ (ಅಂದಾಜು)

2020ರ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಸೈಬರ್‌ಟ್ರಕ್ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ಆವೃತ್ತಿಯು ಭಾರತೀಯ ಬೆಲೆಯಲ್ಲಿ ರೂ.35 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.55 ಲಕ್ಷ ಬೆಲೆ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಗತ್ತು ನಿರ್ವಹಣೆಗಾಗಿ ಮತ್ತೊಂದು ಅತ್ಯಾಧುನಿಕ ಕಾರು ಖರೀದಿಸಲಿದ್ದಾರೆ ದುಬೈ ಪೊಲೀಸರು..!

ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಇನ್ನು ಹಲವು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಸಿದ್ದಪಡಿಸಿರುವ ಟೆಸ್ಲಾ ಸಂಸ್ಥೆಯು ಮುಂಬರುವ 2020ರ ವೇಳೆಗೆ ಭಾರತದಲ್ಲೂ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನಗಳ ಮಾರಾಟವನ್ನು ಅಧಿಕೃತವಾಗಿ ಆರಂಭಿಸುವ ಯೋಜನೆಯಲ್ಲಿದ್ದು, ವ್ಯಯಕ್ತಿಯ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳನ್ನು ಟೆಸ್ಲಾ ಮಾರಾಟ ಮಾಡಲಿದೆ.

Most Read Articles

Kannada
English summary
Tesla Cybertruck will be added in the official car fleet of the Dubai Police in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X