8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಎಲೆಕ್ಟ್ರಿಕ್ ಕಾರುಗಳು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿವೆ. ಜನಪ್ರಿಯತೆಯ ಜೊತೆಗೆ ಟೀಕೆಗೂ ಒಳಗಾಗುತ್ತಿವೆ. ಈ ಎಲೆಕ್ಟ್ರಿಕ್ ಕಾರುಗಳು ದೂರ ಪ್ರಯಾಣಕ್ಕೆ ತಕ್ಕದಾದವುಗಳಲ್ಲ ಎಂಬುದು ಎಲೆಕ್ಟ್ರಿಕ್ ಕಾರುಗಳ ಮೇಲಿರುವ ಪ್ರಮುಖ ಟೀಕೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಎಲೆಕ್ಟ್ರಿಕ್ ಕಾರುಗಳು ಹೆಚ್ಚು ದೂರ ಚಲಿಸುವುದಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಈ ಆರೋಪಕ್ಕೆ ಅಪವಾದವಾಗಿವೆ. ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಟೆಸ್ಲಾ ಕಂಪನಿಯು ಉತ್ಪಾದಿಸುವ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ದೂರವನ್ನು ಕ್ರಮಿಸುವುದು ಮಾತ್ರವಲ್ಲದೇ, ಅತ್ಯುತ್ತಮವಾದ ಪರ್ಫಾಮೆನ್ಸ್ ನೀಡುತ್ತವೆ. ಜೊತೆಗೆ ಈ ಕಾರುಗಳು ಹೆಚ್ಚಿನ ಸುರಕ್ಷತೆಯನ್ನು ಸಹ ಒದಗಿಸುತ್ತವೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಟೆಸ್ಲಾ ಕಾರುಗಳಲ್ಲಿರುವ ಟೆಕ್ನಾಲಜಿಯು ಪ್ರಯಾಣಿಕರ ಜೀವಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಇತ್ತೀಚಿಗೆ ನಡೆದ ಘಟನೆಯು ಇದಕ್ಕೆ ಪೂರಕವಾಗಿದೆ. ಈ ಘಟನೆ ನಡೆದಿರುವುದು ಇಂಗ್ಲೆಂಡ್‍‍ನ ದಕ್ಷಿಣ ಭಾಗದಲ್ಲಿ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಅಲ್ಲಿ ನಡೆದ ಘಟನೆಯಲ್ಲಿ ಟೆಸ್ಲಾ ಕಂಪನಿಯ ಎರಡು ಕಾರುಗಳು 8 ಜನರ ಪ್ರಾಣವನ್ನು ಉಳಿಸಿವೆ. ಈ ಕಾರುಗಳಲ್ಲಿರುವ ಹೈ ಟೆಕ್ ಟೆಕ್ನಾಲಜಿಯಿಂದ ಇದು ಸಾಧ್ಯವಾಗಿದೆ. ಇಂಗ್ಲೆಂಡ್‍‍ನಲ್ಲಿ ಉಂಟಾಗಿರುವ ಬಿರುಗಾಳಿಯು ಅಲ್ಲಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಈ ಬಿರುಗಾಳಿಯಿರುವ ವೇಳೆಯಲ್ಲಿ ಎರಡು ಕುಟುಂಬಗಳ ಸದಸ್ಯರು 2 ಟೆಸ್ಲಾ ಕಾರುಗಳಲ್ಲಿ ಎ 31 ಹೈವೇನಲ್ಲಿ ಪ್ರಯಾಣಿಸುತ್ತಿದ್ದರು. ಈ ಕಾರುಗಳು ಟೆಸ್ಲಾದ ಮಾಡೆಲ್ ಎಕ್ಸ್ ಕಾರುಗಳಾಗಿವೆ. ಒಂದು ಕಾರಿನಲ್ಲಿ 5 ಜನರಿದ್ದರೆ, ಮತ್ತೊಂದು ಕಾರಿನಲ್ಲಿ 3 ಜನ ಪ್ರಯಾಣಿಕರಿದ್ದರು.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಈ ಎರಡೂ ಕಾರುಗಳು ಆಟೋ ಪೈಲಟ್ ಮೋಡ್‍‍ನಲ್ಲಿದ್ದವು. ಈ ಆಟೋ ಪೈಲಟ್ ಈ ಎರಡು ಕುಟುಂಬಗಳ ಸದಸ್ಯರನ್ನು ಕಾಪಾಡಿದೆ. ಇವರು ಚಲಿಸುತ್ತಿದ್ದ ರಸ್ತೆಯಲ್ಲಿದ್ದ ಸುಮಾರು 400 ವರ್ಷ ಹಳೆಯದಾದ ಓಕ್ ಮರ ಕಾರಿನ ಮೇಲೆ ಬೀಳುವುದರಲ್ಲಿತ್ತು.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಇದನ್ನು ಗಮನಿಸಿದ ಆಟೋಪೈಲಟ್ ಎಮರ್ಜೆನ್ಸಿ ಬ್ರೇಕ್ ಹಾಕಿ ಕಾರ್ ಅನ್ನು ನಿಲ್ಲಿಸಿದೆ. ಈ ಸೆಕ್ಯೂರಿಟಿ ಫೀಚರ್‍‍ನಿಂದ ಪ್ರಾಣ ಉಳಿಸಿಕೊಂಡ ಜನರು ಟೆಸ್ಲಾ ಕಂಪನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಒಂದು ಕಾರಿನಲ್ಲಿ ಲಾರೆನ್ಸ್ ಸಾಂಡರ್‍‍ಸನ್‍‍ರವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳ ಜೊತೆಗೆ ಪ್ರಯಾಣಿಸುತ್ತಿದ್ದರು.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಲಾರೆನ್ಸ್ ರವರು ಈ ಘಟನೆಯನ್ನು ಪವಾಡವೆಂದು ಹೇಳಿದ್ದಾರೆ. ಮತ್ತೊಂದು ಕಾರಿನಲ್ಲಿ ಜೋಸ್ ವಿಟ್‍ಲಾಕ್ ಎಂಬುವವರು ತಮ್ಮ ಗರ್ಲ್ ಫ್ರೆಂಡ್ ಕ್ಯಾಟ್ ಹಾಗೂ ಆಕೆಯ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದರು. ಈ ಘಟನೆಯ ನಂತರ ಕ್ಯಾಟ್‍‍ರವರು ಟ್ವಿಟರ್ ಮೂಲಕ ಟೆಸ್ಲಾ ಕಂಪನಿಯ ಸಿಇ‍ಒ ಎಲಾನ್ ಮಸ್ಕ್ ರವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಕ್ಯಾಟ್‍‍ರವರು ಟ್ವಿಟರ್‍‍ನಲ್ಲಿ ಹಾಯ್ ಎಲಾನ್ ಮಸ್ಕ್ ರವರೇ, ನಿಮ್ಮ ಟೆಸ್ಲಾ ಕಾರು ನಮ್ಮ ಪ್ರಾಣವನ್ನು ಉಳಿಸಿದೆ. ನನ್ನ ಬಾಯ್‍‍ಫ್ರೆಂಡ್ ಹಾಗೂ ನನ್ನ ತಾಯಿಯ ಪ್ರಾಣವೂ ಸಹ ಉಳಿದಿದೆ. ಇದರ ಜೊತೆಗೆ ಐದು ಜನರಿದ್ದ ಕುಟುಂಬದ ಸದಸ್ಯರ ಪ್ರಾಣವೂ ಉಳಿದಿದೆ. ಧನ್ಯವಾದಗಳು ಎಂದು ಹೇಳಿದ್ದಾರೆ.

8 ಜನರ ಜೀವ ಕಾಪಾಡಿದ ಟೆಸ್ಲಾ ಕಾರು..!

ಗಮನಿಸಬೇಕಾದ ಸಂಗತಿಯೆಂದರೆ ಈ ಟ್ವೀಟ್‍‍ಗೆ ಎಲಾನ್ ಮಸ್ಕ್ ರವರೂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನೀವೆಲ್ಲರೂ ಸುರಕ್ಷಿತವಾಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ. ಈ ಘಟನೆಯು ವಿಶ್ವವ್ಯಾಪಿ ಪ್ರಶಂಸೆಯನ್ನು ಪಡೆಯುತ್ತಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಜನಪ್ರಿಯವಾಗಿರುವ ಟೆಸ್ಲಾ ನಿಧಾನವಾಗಿ ಭಾರತದಲ್ಲಿಯೂ ಜನಪ್ರಿಯವಾಗುತ್ತಿದೆ.

Most Read Articles

Kannada
English summary
Tesla Model X autopilot saves 8 lives in United Kingdom during storm. Read in Kannada.
Story first published: Friday, February 21, 2020, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X