ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ನಾವು ಇದೀಗ ಪ್ರತಿಯೊಂದಕ್ಕೂ ತಂತ್ರಜ್ಞಾನದ ಮೇಲೆ ಅವಲಂಬಿಗಳಾಗಿದ್ದೇವೆ. ಅದು ಹೇಗೆ ಅಂದ್ರೆ, ಬೆಳಗಿನ ಸುಪ್ರಭಾತದಿಂದ ಹಿಡಿದು ರಾತ್ರಿ ಮಲಗುವ ತನಕವೂ ತಂತ್ರಜ್ಞಾನದ ಸಹಾಯವಿಲ್ಲದೇ ಯಾವ ಕೆಲಸವು ಸಾಗದು ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನಶೈಲಿ ಬಂದು ನಿಂತಿದೆ. ಆದ್ರೆ ನಾವೇ ಆವಿಷ್ಕಾರ ಮಾಡಿದ ತಂತ್ರಜ್ಞಾನಗಳು ಇಂದು ನಮ್ಮನ್ನೇ ದಿಕ್ಕುತಪ್ಪಿಸುವಂತಾಗಿವೆ ಅಂದ್ರೆ ನಾವು ನಂಬಲೇಬೇಕು.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಅಷ್ಟಕ್ಕೂ ಇಷ್ಟೇಲ್ಲಾ ಯಾಕೆ ಪೀಠಿಕೆ ಹಾಕ್ತಾ ಇದಾರೆ ಅಂದುಕೊಂಡ್ರಾ ಅದಕ್ಕೂ ಒಂದು ಕಾರಣವಿದೆ. ಮಾವನ ತನಗೆ ಅನುಕೂಲಕಲವಾಗಲಿ ಅಂತಾನೆ ನಾನಾ ಬಗೆಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದ್ದಾನೆ. ಆದ್ರೆ ಅವುಗಳ ನಮಗೆ ಉಪಯೋಗವಾಗುವುದಕ್ಕಿಂತ ಅನಾನೂಕೂಲವೇ ಹೆಚ್ಚು ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಹೌದು, ಜಗತ್ತಿನಾದ್ಯಂತ ಹೆಚ್ಚು ಬಳಕೆಯಲ್ಲಿರುವ ಜಿಪಿಎಸ್ ತಂತ್ರಜ್ಞಾನವು ದಾರಿ ಕಾಣದಾಗಿದೆ ಎಂದ ಕೂಡಲೇ ನಮ್ಮ ನೆರವಿಗೆ ಬರುತ್ತೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಜಿಪಿಎಸ್ ತಂತ್ರಜ್ಞಾನ ದಾರಿ ತೊರಿಸುವ ಬದಲು ಯಮಲೋಕದ ಕಡೆಗೆ ದಾರಿ ತೋರಿಸಿದ್ರೆ ಏನು ಮಾಡದೋ ಹೇಳಿ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಜಿಪಿಎಸ್​ ಇದ್ರೆ ಸಾಕು ಯಾವುದೇ ಪ್ರದೇಶಕ್ಕೂ ಆದ್ರು ಸುಲಭವಾಗಿ ಹೋಗಬಹುದು ಎನ್ನುವುದು ನಮ್ಮೆಲ್ಲರ ಲೆಕ್ಕಾಚಾರ. ಆದ್ರೆ ಇದೇ ಜಿಪಿಎಸ್​ ಕೆಲವೊಮ್ಮೆ ದಿಕ್ಕು ತಪ್ಪಿಸಿ ಬೇರೆಯೆಡೆ ಕರೆದುಕೊಂಡು ಹೋದ್ರೆ ಹೇಗಾಗಿರಬೇಡ ಹೇಳಿ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಇಲ್ಲೂ ಕೂಡಾ ನಡೆದಿದ್ದು ಅದೇ ಕಣ್ರಿ. ಮಹಿಳೆಯೊಬ್ಬಳು ಜಿಪಿಎಸ್ ನಂಬಿಕೊಂಡು ಕಾರು ಚಾಲನೆ ಮಾಡುತ್ತಿದ್ದಾಗ ರಸ್ತೆ ಮೇಲೆ ಬಿಟ್ಟು ರೈಲ್ವೆ ಹಳಿ ಮೇಲೆ ಕರೆದುಕೊಂಡು ಹೋಗಿರುವ ಘಟನೆ ಇದೀಗ ಜಗತ್ ಜಾಹೀರಾಗಿದೆ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಜಿಪಿಎಸ್​ ಮಾರ್ಗದರ್ಶನದಂತೆ ಕಾರು ಚಾಲನೆ ಮಾಡುತ್ತಿದ್ದು ಪೆನ್ಸಿಲ್ವೆನಿಯಾದ ಮಹಿಳೆಯೊಬ್ಬರಿಗೆ ಈ ರೀತಿ ಆಗಿದ್ದು, ಅದೃಷ್ಟವಾಶಾತ್ ಕಾರು ಹಳಿ ಮೇಲೆ ಹೋದಾಗ ಆ ವೇಳೆ ಯಾವುದೇ ರೈಲು ಇಲ್ಲದ ಕಾರಣ ಮಹಿಳೆಯ ಜೀವ ಬಚಾವ್ ಆಗಿದೆ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಜಿಪಿಎಸ್ ಸರಿಯಾಗಿಯೇ ಮಾರ್ಗವನ್ನೇ ತೊರಿಸುತ್ತಿದೆ ಎಂದುಕೊಂಡ ಹೋದ ಮಹಿಳೆಗೆ ಟ್ರ್ಯಾಕ್ ಮಧ್ಯೆ ಸಿಲುಕಿಕೊಂಡಾಗಲೇ ಗೊತ್ತಾಗಿದ್ದು, ನಾನು ಹೊರಟಿರುವುದು ಬೇಕಾದ ಸ್ಥಳಕ್ಕೆ ಅಲ್ಲ, ಬದಲಾಗಿ ಯಮಲೋಕದ ಶಾರ್ಟ್ ಕಟ್ ರೂಟ್ ಇದು ಎನ್ನುವುದು.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಕೂಡಲೇ ಕಾರಿನಿಂದನಿಂದಲೇ ಇಳಿದ ಮಹಿಳೆಯು ಜಿಪಿಎಸ್ ಕಂಡುಹಿಡಿದವರಿಗೆ ಶಪಿಸುತ್ತಲೇ ಪೊಲೀಸರಿಗೆ ಫೋನ್ ಮಾಡಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಡ್ಯುಕ್ವೆನ್ಸ್ ನಗರದ ಪೊಲೀಸರು ನಡೆದ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಇದು ಜಿಪಿಎಸ್‌ನಿಂದಲೇ ಆದ ಅವಾಂತರ ಎಂಬವುದನ್ನು ಸ್ಪಷ್ಟಪಡಿಸಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಇದಕ್ಕೂ ಮುನ್ನ ಮಹಿಳೆಯು ಎನಾದ್ರು ಗುಂಡು ಹಾಕಿಕೊಂಡು ಹೀಗೆ ಮಾಡಿರಬಹುದಾ ಅಂತಾ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು, ಜಿಪಿಎಸ್ ಮಾರ್ಗದರ್ಶನದಂತೆ ಕಾರು ಚಾಲನೆ ಮಾಡಿದ ಮಹಿಳೆಯದ್ದು ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಿಪಿಎಸ್ ಸೌಲಭ್ಯದ ಕುರಿತಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳಾಗುತ್ತಿದ್ದು, ಮತ್ತೆ ಕೆಲವರು ಜಿಪಿಎಸ್ ನಂಬಿ ರೈಲ್ವೆ ಟ್ರ್ಯಾಕ್ ಮೇಲೆ ಕಾರು ಹತ್ತಿಸಿದ್ದ ಮಹಿಳೆಯ ಅವಾಂತವನ್ನು ಟ್ರೋಲ್ ಮಾಡುತ್ತಿದ್ದಾರೆ.

MOST READ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಜಿಪಿಎಸ್ ನಂಬಿಕೊಂಡು ಹೋಗಿ ಕೆಟ್ಟವರ ಪಾಡು ಇದೇ ಮೊದಲೇನು ಅಲ್ಲಾ. ಈ ಹಿಂದೆ ಚೀನಾದಲ್ಲೂ ಒಬ್ಬ ಕಾರು ಸಮೇತ ನದಿಗೆ ನುಗ್ಗಿದ್ದ. ಒಟ್ಟಿನಲ್ಲಿ ತಂತ್ರಜ್ಞಾನವು ನಮ್ಮ ಸಹಾಯಕ್ಕೆ ಬರುತ್ತೆ ಅಂತಾ ನಂಬಿಕೊಂಡು ಹೋದ್ರೆ ಹೀಗೆಲ್ಲಾ ಆಗುತ್ತೆ ಅಂತಾ ಯಾರಿಗೆ ತಾನೇ ಗೊತ್ತಿರುತ್ತೆ ಹೇಳಿ?

Most Read Articles

Kannada
Read more on auto facts off beat
English summary
The GPS Made Me Do It, Says Woman Who Drove Her Car Onto Railway Tracks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X