ನಿದ್ರೆಗೆ ಜಾರಿದ ಚಾಲಕ ಓವರ್‌ಪಾಸ್‌ನಿಂದ ಉರುಳಿದ ಟ್ರಕ್... ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಹೆದ್ದಾರಿಗಳಲ್ಲಿ ಚಾಲನೆ ಮಾಡುವುದು ಡ್ರೈವರ್‌ಗಳಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಇಂತಹ ಕಡೆ ತಾಳ್ಮೆ ಮತ್ತು ಗಮನ ತುಂಬಾ ಮುಖ್ಯವಾಗಿರುತ್ತದೆ. ಒಂದು ಕ್ಷಣ ಯಾಮಾರಿದರೆ ಜೀವ ಹಾನಿಯಾಗಬಹುದು. ಟ್ರಕ್ ಡ್ರೈವರ್‌ಗಳಂತೋ ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಆದರೆ, ಇಲ್ಲೊಬ್ಬ ಚಾಲಕ ನಿದ್ದೆಗೆ ಜಾರುತ್ತಾನೆ ಮುಂದೇನಾಯ್ತು.. ಈ ದೃಶ್ಯಗಳು ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಮೇರಿಕದ ಟ್ರಕ್ ಡ್ರೈವರ್‌ವೊಬ್ಬ ಯೂಟ್ಯೂಬ್ ನಲ್ಲಿ ಈ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ. ಅಲ್ಲಿನ ಹೆದ್ದಾರಿವೊಂದರಲ್ಲಿ ಚಾಲನೆ ಮಾಡುತ್ತಿರುವಾಗ ಟ್ರಕ್ ಡ್ರೈವರ್ ನಿದ್ದೆಗೆ ಜಾರಿದ್ದಾನೆ. ಚಾಲಕನಿಗೆ ತಡೆಯಲಾಗದ ನಿದ್ರೆ ಬಂದರೂ ಟ್ರಕ್ ವೇಗವನ್ನು ಕಡಿಮೆ ಮಾಡಿಲ್ಲ. ಜೊತೆಗೆ ವಿಶ್ರಾಂತಿ ಪಡೆಯಲು ವಾಹನವನ್ನು ಎಲ್ಲಿಯೂ ನಿಲ್ಲಿಸದೆ ಚಲಾಯಿಸಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೀವ್ರ ಆಯಾಸ ಇದ್ದರೂ ತನ್ನ ಟ್ರಕ್ ಅನ್ನು ನಿರ್ದಿಷ್ಟ ಗುರಿಯತ್ತ ಓಡಿಸುವುದನ್ನು ಮುಂದುವರೆಸುತ್ತಾನೆ.

ನಿದ್ರೆಗೆ ಜಾರಿದ ಚಾಲಕ ಓವರ್‌ಪಾಸ್‌ನಿಂದ ಉರುಳಿದ ಟ್ರಕ್... ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಕೆಲವು ಸೆಕೆಂಡುಗಳ ನಂತರ, ಟ್ರಕ್ ಚಾಲಕನಿಗೆ ಆಯಾಸ ಹೆಚ್ಚಾಗುತ್ತದೆ. ಡ್ರೈವ್ ಮಾಡುವಾಗಲೇ ಅವನು ಸಂಪೂರ್ಣವಾಗಿ ನಿದ್ರಿಸುವುದನ್ನು ಆರಂಭಿಸುತ್ತಾನೆ. ಹೀಗಾಗಿ, ಟ್ರಕ್ ಸ್ಟೀರಿಂಗ್ ವೀಲ್ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಆ ವೇಳೆ, ಟ್ರಕ್ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಚಲಿಸುವುದನ್ನು ಆರಂಭಿಸುತ್ತದೆ. ಚಾಲಕ ಎಚ್ಚರಗೊಂಡು ರಸ್ತೆಯಲ್ಲಿ ಟ್ರಕ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಾನೆ. ಅದಾಗಲೇ ತುಂಬಾ ತಡವಾಗಿತ್ತು. ಅಂತಿಮವಾಗಿ, ಟ್ರಕ್ ಎಕ್ಸ್‌ಪ್ರೆಸ್‌ವೇ ಕೆಳಗೆ ನಿರ್ಮಿಸಲಾದ ಅಂಡರ್‌ಪಾಸ್ ಮೇಲೆ ಬೀಳುತ್ತದೆ.

ಅದೃಷ್ಟವಶಾತ್, ಟ್ರಕ್ ಬಿದ್ದಾಗ ಎಕ್ಸ್‌ಪ್ರೆಸ್‌ವೇ ಕೆಳಗಿನ ಅಂಡರ್‌ಪಾಸ್ ಮೇಲೆ ಯಾವುದೇ ವಾಹನಗಳು ಓಡಾಡುತ್ತಿರಲಿಲ್ಲ. ಅಷ್ಟರಲ್ಲಾಗಲೇ ಟ್ರಕ್‌ ಭೀಕರವಾಗಿ ಅಂಡರ್‌ಪಾಸ್ ಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿತ್ತು. ಅಪಘಾತದ ಸಮಯದಲ್ಲಿ ಹಿಂಭಾಗದ ಡೆಕ್‌ನಲ್ಲಿ ಮಲಗಿದ್ದ ಸಹ-ಚಾಲಕ, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಇತಂಹ ಹಲವಾರು ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇದರಿಂದ ತುಂಬಾ ಎಚ್ಚರ ವಹಿಸುವುದು ತುಂಬಾ ಮುಖ್ಯ.

ರಸ್ತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿ, ನಿರಂತರ ಚಾಲನೆ ಮಾಡಿವುದರಿಂದ ಚಾಲಕರಿಗೆ ಸುಸ್ತಾಗುವುದು ಸಹಜ. ಆದರೂ ಚಾಲನೆ ಮಾಡುವ ವೇಳೆ ಆಯಾಸವಾಗಿ ಸ್ಟೀರಿಂಗ್ ವೀಲ್ ಮೇಲೆಯೇ ಸಂಪೂರ್ಣವಾಗಿ ನಿದ್ರಿಸುವ ಮೊದಲು, ಸ್ವಲ್ಪ ವಿಶ್ರಾಂತಿ ಅಥವಾ ಎನರ್ಜಿ ಡ್ರಿಂಕ್‌ ಸೇವನೆ ಮಾಡುವುದು ಉತ್ತಮ. ಈ ರೀತಿ ಮಾಡಿದರೆ, ಅಪಘಾತಕ್ಕೆ ಕಾರಣವಾಗಬಹುದಾದ ದೊಡ್ಡ ಹಾನಿಯನ್ನು ತಪ್ಪಿಸಬಹುದು. ಇದು ನಿರ್ದಿಷ್ಟ ವಾಹನ ಚಾಲಕನಿಗೆ ಮಾತ್ರವಲ್ಲದೆ, ಅಕ್ಕಪಕ್ಕದಲ್ಲಿ ಸಂಚರಿಸುವ ಇತರೆ ಚಾಲಕರಿಗೂ ಜೀವಕ್ಕೆ ಹಾನಿಯಾಗುವ ಸಾಧ್ಯತೆಯನ್ನು ತಡೆಯುತ್ತದೆ.

ಅಪಘಾತ ತಡೆಯುವುದು ಹೇಗೆ:

ಆಗಾಗ್ಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ. ನೀವು ದೂರದ ಸ್ಥಳಗಳಿಗೆ ಚಾಲನೆ ಮಾಡುತ್ತಿದ್ದರೆ, ರಸ್ತೆಗಳಲ್ಲಿ ನಿಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಲು ಪ್ರತಿ 60-90 ನಿಮಿಷಗಳಿಗೊಮ್ಮೆ ಬ್ರೇಕ್ ತೆಗೆದುಕೊಳ್ಳಲು ಮರೆಯದಿರಿ. ನಮ್ಮ ಮೆದುಳನ್ನು ದೀರ್ಘಕಾಲದವರೆಗೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ವಿರಾಮ ಬಹಳ ಮುಖ್ಯವಾಗಿದೆ. ಮಧ್ಯರಾತ್ರಿಯ ನಂತರ, ಮುಂಜಾನೆ ಬಹುತೇಕರಿಗೆ ಹೆಚ್ಚಿನ ನಿದ್ದೆ ಬರುತ್ತದೆ. ದೇಹದ ಚಕ್ರವು ನಿಮ್ಮ ಮೆದುಳನ್ನು ವಿಶ್ರಾಂತಿ ಪಡೆಯುವಂತೆ ಮಾಡುತ್ತದೆ.

ಕಾಫಿ, ಎಸ್ಪ್ರೆಸೊ ಮತ್ತು ರೆಡ್ ಬುಲ್ ನಂತಹ ಹೆಚ್ಚು ಕೆಫೀನ್ ಹೊಂದಿರುವ ಪಾನೀಯಗಳು ತಕ್ಷಣವೇ ನಿಮ್ಮನ್ನು ಎಚ್ಚರಗೊಳಿಸುತ್ತವೆ. ಆದರೆ, ಕಡಿಮೆ ಸಮಯದಲ್ಲಿಯೇ ಕೆಫೀನ್ ಪರಿಣಾಮ ಇಳಿಯುತ್ತದೆ. ನೀವು ಮೊದಲಿಗಿಂತ ಹೆಚ್ಚು ಆಯಾಸ ಅನುಭವಿಸಲು ಪ್ರಾರಂಭಿಸಿದಾಗ ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ವಾಹನವನ್ನು ನಿಲ್ಲಿಸಿ, ಸ್ವಲ್ಪ ನಿದ್ದೆ ಮಾಡುವುದೊಂದೇ ಇದಕ್ಕೆ ದಾರಿ. ನೀವು ನಿದ್ರಾಹೀನತೆ ಅನುಭವಿಸುತ್ತಿದ್ದರೆ, ಎಸಿ ಆಫ್ ಮಾಡಿ, ನಿಮಗೆ ವಾಹನವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಕಿಟಕಿ ತೆರೆಯಿರಿ. ವಿಶ್ರಾಂತಿ ತೆಗೆದುಕೊಳ್ಳಿ.

ದೇಹವು ಕಡಿಮೆ ದಣಿದಿದ್ದರೆ ಅಷ್ಟಾಗಿ ನಿದ್ದೆ ಬರುವುದಿಲ್ಲ. ವಾಹನದಲ್ಲಿ ರಸ್ತೆ ಸಂಚಾರ ವಿರಳವಾಗಿದೆ ಎಂದು ನೀವು ಭಾವಿಸಿದರೆ, ತ್ವರಿತವಾಗಿ ನಿಮ್ಮ ವಾಹವನ್ನು ನಿಲ್ಲಿಸಿ, ವಾಕಿಂಗ್ ಮಾಡಿರಿ. ಆ ವೇಳೆ ನಿಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ಪರಿಶೀಲಿಸಿರಿ. ಜೊತೆಗೆ ಇಂಟರ್ನೆಟ್ ಗೇಮ್ ಆಡುವ ಮೂಲಕ ನಿಮ್ಮ ಮನಸ್ಸು, ಹಾಗೂ ಏಕಾಗ್ರತೆಯನ್ನು ಮಟ್ಟವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಈ ರೀತಿ ಮಾಡುವ ಮೂಲಕ ವಾಹನ ಚಲಾಯಿಸುವಾಗ ಆಗಬಹುದಾದ ಅಪಘಾತಗಳಿಂದ ಆಗುವ ಪ್ರಾಣಹಾನಿಯಿಂದ ತಪ್ಪಿಸಿಕೊಳ್ಳಬಹುದು.

Most Read Articles

Kannada
English summary
The truck fell off the overpass where the driver fell asleep the horrific scene was caught on camera
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X