ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ.

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಆನಂದ್ ಮಹೀಂದ್ರಾರವರು ಈಗ ಮತ್ತೊಂದು ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಬಾರಿ ಅವರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ 70 ವರ್ಷ ಹಳೆಯ ಜೀಪಿನ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ಜೀಪ್ ಇನ್ನೂ ಸಹ ಸುಸ್ಥಿತಿಯಲ್ಲಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ವೀಡಿಯೊದಲ್ಲಿ ಕೆಲವರು ಈ ಜೀಪಿನಲ್ಲಿ ಕುಳಿತು ಎರಡು ಬಂಡೆಗಳ ನಡುವೆ ಸಾಗುತ್ತಿರುವುದನ್ನು ಕಾಣಬಹುದು.

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಈ ವೀಡಿಯೊವನ್ನು ಇದುವರೆಗೂ 1.47 ಲಕ್ಷ ಜನರು ವೀಕ್ಷಿಸಿದ್ದರೆ, 18 ಸಾವಿರ ಜನ ಲೈಕ್ ಮಾಡಿದ್ದಾರೆ. ವೀಡಿಯೊ ನೋಡಿದ ಕೆಲವರು ಇದೇ ರೀತಿಯ ಜೀಪ್ ಬಿಡುಗಡೆಗೊಳಿಸುವಂತೆ ಆನಂದ್ ಮಹೀಂದ್ರಾರವರನ್ನು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ವೀಡಿಯೊದಲ್ಲಿರುವುದು ಮಹೀಂದ್ರಾ ಕಂಪನಿಯ ಹಳೆ ಜೀಪ್ ಎಂದು ಹೇಳಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಈ ವೀಡಿಯೊದಲ್ಲಿರುವುದು 1948ರಲ್ಲಿ ತಯಾರಾದ ವಿಲ್ಲೀಸ್ ಸಿಜೆ 2 ಎ ಜೀಪ್ ಆಗಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕಾ ಸೇನೆಯ ಬಳಕೆಗಾಗಿ ಈ ಜೇಪ್ ಅನ್ನು ತಯಾರಿಸಲಾಗಿತ್ತು. 2ನೇ ಮಹಾಯುದ್ಧದ ನಂತರ, ಈ ಜೀಪ್ ಅನ್ನು ಸಾರ್ವಜನಿಕರಿಗೂ ಮಾರಾಟ ಮಾಡಲಾಯಿತು.

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ವೀಡಿಯೊದಲ್ಲಿರುವ 70 ವರ್ಷ ಹಳೆಯದಾದ ಈ ಜೀಪ್ ಅನ್ನು ಖರೀದಿಸಿರುವವರು ಅದನ್ನು ಮಾಡಿಫೈಗೊಳಿಸಿದ್ದಾರೆ. ಈ ಜೀಪ್ ಅನ್ನು ತಯಾರಿಸಿದ್ದ ವಿಲ್ಲೀಸ್-ಓವರ್‌ಲ್ಯಾಂಡ್ ಕಂಪನಿಯು ಈ ವಾಹನವನ್ನು ಕೃಷಿ ವಾಹನವಾಗಿ ಬದಲಿಸಲು ಬಯಸಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಆದರೆ 1950 ಹಾಗೂ 1960ರ ದಶಕಗಳಲ್ಲಿ ಈ ವಾಹನದ ಜನಪ್ರಿಯತೆ ಹೆಚ್ಚಾಗಿದ್ದ ಕಾರಣಕ್ಕೆ ಕಂಪನಿಯು ಕಾರ್ ಆಗಿಯೇ ಮಾರಾಟ ಮಾಡಲು ನಿರ್ಧರಿಸಿತು. ವಿಲ್ಲೀಸ್ ಸಿಜೆ 2 ಎ ಇಂದಿನ ಆಧುನಿಕ ಜೀಪ್ ರೈಲುಗಳಿಗೆ ಆಧಾರವಾಗಿದೆ.

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಅಮೆರಿಕಾದ ಜೀಪ್ ಕಂಪನಿಯು ಮೊದಲಿಗೆ ಈ ವಿಲ್ಲೀಸ್ ಸಿಜೆ 2 ಎ ವನ್ನು ಮರುವಿನ್ಯಾಸಗೊಳಿಸಿ ನಂತರ ತನ್ನ ಕಂಪನಿಯ ಬ್ಯಾನರ್ ನಡಿಯಲ್ಲಿ ಮರು ಮಾರಾಟ ಮಾಡಿತು. ಈ ಕಾರು ಎಷ್ಟು ಜನಪ್ರಿಯವಾಯಿತು ಎಂದರೆ ಇದನ್ನು ಜೀಪ್ ಎಂದು ಕರೆಯಲಾಗುತ್ತಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಇಂದು ಮಾರುಕಟ್ಟೆಯಲ್ಲಿರುವ ಜೀಪ್ ಹಾಗೂ ಫೋರ್ಡ್ ಕಂಪನಿಯ ಅನೇಕ ಕಾರುಗಳನ್ನು ಈ ಜೀಪಿನ ವಿನ್ಯಾಸದ ಮೇಲೆ ನಿರ್ಮಿಸಲಾಗುತ್ತಿದೆ. ಆನಂದ್ ಮಹೀಂದ್ರಾ ಇತ್ತೀಚೆಗೆ ತಮ್ಮ ಮಹೀಂದ್ರಾ ಕಂಪನಿಯ ಬುಲೆಟ್ ಪ್ರೂಫ್ ವಾಹನದ ವೀಡಿಯೊವನ್ನು ಶೇರ್ ಮಾಡಿದ್ದರು.

ಈ ಬುಲೆಟ್ ಪ್ರೂಫ್ ವಾಹನವನ್ನು ಮಹೀಂದ್ರಾ ಕಂಪನಿಯ ರಕ್ಷಣಾ ಉತ್ಪಾದನಾ ಘಟಕವು ನಿರ್ಮಿಸಿದೆ. ಈ ವಾಹನವನ್ನು ವಿಶ್ವಸಂಸ್ಥೆಯ ಆವರಣದಲ್ಲಿ ಬಳಸಲಾಗುತ್ತದೆ. ಮಹೀಂದ್ರಾ ಕಂಪನಿಯ ಏರೋಸ್ಪೇಸ್ ಹಾಗೂ ರಕ್ಷಣಾ ಘಟಕವು ಸೇನೆಯು ಬಳಸುವ ವಾಹನಗಳನ್ನು ಉತ್ಪಾದಿಸುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಯಾವುದೇ ಜಾಗದಲ್ಲೂ ಚಲಿಸಬಲ್ಲದು 70 ವರ್ಷ ಹಳೆಯದಾದ ಈ ಜೀಪ್

ಇವುಗಳಲ್ಲಿ ಯಾಂಟಿ ಮೈನ್ ಟ್ರಕ್‌ಗಳು, ಬುಲೆಟ್ ಪ್ರೂಫ್ ವಾಹನಗಳು, ಕ್ಯಾರೇಜ್ ಟ್ರಕ್‌ಗಳು, ಗಸ್ತು ವಾಹನಗಳು, ಲ್ಯಾಂಡ್ ಮೈನ್ ಡಿಫ್ಯೂಸರ್‌ಗಳು ಸೇರಿವೆ. ಈ ವಾಹನಗಳನ್ನು ಭಾರತೀಯ ಸೇನೆಯು ಸೇರಿದಂತೆ ವಿಶ್ವದ ಹಲವು ಸೇನೆಗಳು ಬಳಸುತ್ತವೆ.

Most Read Articles

Kannada
English summary
This 70 years old Willys jeep moves in any place. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X