ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ರೈಲ್ವೆ ಟ್ರ್ಯಾಕ್‌ಮನ್‌ಗಳು ರೈಲ್ವೇ ಟ್ರಾಕ್ ಗಳ ಮೇಲೆ ಭಾರೀ ಗಾತ್ರದ ಕಾರ್ಟ್ ಗಳನ್ನು ಬಳಸುವ ಬದಲು ಲಘು ತೂಕದ ಸೈಕಲ್ ಗಳನ್ನು ಬಳಸಲಿ ಎಂಬ ಕಾರಣಕ್ಕೆ ಪಂಕಜ್ ಎಂಬುವವರು ಹೊಸ ರೀತಿಯ ಸೈಕಲ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಈ ಲಘು ಗಾತ್ರದ ಸೈಕಲ್ ಅನ್ನು ಎಲ್ಲಿಗೆ ಬೇಕಾದರೂ ಹೊತ್ತಿಕೊಂಡು ಸಾಗಬಹುದು. ಆದರೆ ರೈಲ್ವೆ ಕಾರ್ಟ್ ಅನ್ನು ಮತ್ತೊಂದು ಟ್ರ್ಯಾಕ್‌ನಲ್ಲಿ ಸಾಗಿಸುವುದಕ್ಕೆ ಸಾಧ್ಯವಿಲ್ಲ. ಈ ಸೈಕಲ್ ಟ್ರ್ಯಾಕ್‌ಮ್ಯಾನ್‌ಗಳಿಗೆ ತುಂಬಾ ಅನುಕೂಲವಾಗಿದೆ. ಕಡಿಮೆ ತೂಕದ ಈ ಸೈಕಲ್ ವೇಗವಾಗಿ ಸಾಗುತ್ತದೆ. ಈ ಸೈಕಲ್ ಚಾಲನೆಗೆ ಕೇವಲ ಒಬ್ಬ ವ್ಯಕ್ತಿ ಸಾಕು. ಈ ಸೈಕಲ್, ಟ್ರ್ಯಾಕ್‌ಮ್ಯಾನ್‌ ಸರಿಯಾದ ಸಮಯಕ್ಕೆ ಟ್ರಾಕ್ ಗಳ ಮೇಲೆ ತಲುಪಿ ಅವುಗಳನ್ನು ಸರಿಪಡಿಸಲು ನೆರವಾಗುತ್ತದೆ.

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಈ ವೀಡಿಯೊವನ್ನು ಶೇರ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾರವರು, ಹೊಸ ಆವಿಷ್ಕಾರಗಳು ನಮ್ಮ ಜೀವನವನ್ನು ಸುಲಭಗೊಳಿಸುತ್ತವೆ. ಈ ರೀತಿಯ ಸಣ್ಣ ಆದರೆ ಉಪಯೋಗಕ್ಕೆ ಬರುವ ಅನೇಕ ಆವಿಷ್ಕಾರಗಳನ್ನು ಭಾರತ ದೇಶದಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಆನಂದ್ ಮಹೀಂದ್ರಾರವರು ಹೊಸ ರೀತಿಯ ಸೈಕಲ್ ಅಭಿವೃದ್ಧಿ ಪಡಿಸಿರುವ ಎಂಜಿನಿಯರ್ ಪಂಕಜ್ ಸೋಯಿನ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ರೈಲ್ವೇ ಟ್ರಾಕ್ ಗಳಲ್ಲಿ ಬಳಸುವ ಟ್ರಾಕ್ ರಿಪೇರಿ ಕಾರ್ಟ್ ಗಳು ದೊಡ್ಡದಾಗಿದ್ದು, ಹೆಚ್ಚು ಭಾರವನ್ನು ಹೊಂದಿರುತ್ತವೆ.

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಇವುಗಳ ಚಾಲನೆಗೆ ಟ್ರ್ಯಾಕ್‌ಮ್ಯಾನ್ ಗಳು ಹೆಚ್ಚಿನ ಶ್ರಮ ವಹಿಸಬೇಕು. ಆದರೆ ಈ ಸೈಕಲ್ ಕಾರ್ಟ್ ನ ತೂಕ ಕೇವಲ 20 ಕೆ.ಜಿಗಳಾಗಿದ್ದು, ಅದನ್ನು ಸುಲಭವಾಗಿ ಹೊತ್ತಿಕೊಂಡು ಸಾಗಬಹುದು. ಮಾಮೂಲಿ ಸೈಕಲ್ ಗಳಂತೆ ಈ ಸೈಕಲ್ ಕಾರ್ಟ್ ಅನ್ನು ಸಹ ಪೆಡಲ್ ನಲ್ಲಿ ಚಾಲನೆ ಮಾಡಬಹುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಟ್ರ್ಯಾಕ್‌ಮ್ಯಾನ್ ತನ್ನ ಸಾಧನಗಳನ್ನು ಈ ಸೈಕಲ್ ಮೇಲೆ ಇಟ್ಟುಕೊಳ್ಳಬಹುದು. ಈ ಸೈಕಲ್ ತಯಾರಿಸಲು ಪೈಪ್‌ಗಳನ್ನು ಬಳಸಿದ್ದು, ಟ್ರ್ಯಾಕ್‌ನಲ್ಲಿ ಚಲಿಸಲು ಅನುಕೂಲವಾಗುವಂತೆ ಸಣ್ಣ ವ್ಹೀಲ್ ಗಳನ್ನು ಮುಂಭಾಗ ಹಾಗೂ ಹಿಂಬದಿಯ ವ್ಹೀಲ್ ಗಳಲ್ಲಿ ಅಳವಡಿಸಲಾಗಿದೆ.

ಸೈಕಲ್ ಟ್ರಾಕ್ ಗಳ ಮೇಲೆ ಇರುವಂತಾಗಲು ಪೈಪ್‌ಗಳ ಸಹಾಯದಿಂದ, ಸೈಕಲ್‌ನ ಎಡಭಾಗದಲ್ಲಿ ಮತ್ತೊಂದು ವ್ಹೀಲ್ ಅಳವಡಿಸಲಾಗಿದೆ. ಈ ಸೈಕಲ್ ಮೇಲೆ ಇಬ್ಬರು ಕುಳಿತು ಪ್ರಯಾಣ ಬೆಳೆಸಬಹುದು. ಟ್ರಾಕ್ ಗಳ ಮೇಲೆ ಈ ಸೈಕಲ್ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರೈಲು ಹಳಿಗಳ ಮೇಲೆ ಸರಾಗವಾಗಿ ಸಾಗುತ್ತದೆ ಈ ಸೈಕಲ್

ಪಂಕಜ್ ರವರು ಈ ಸೈಕಲ್ ತಯಾರಿಸಲು ರೂ.5000 ಖರ್ಚು ಮಾಡಿದ್ದಾರೆ. ಹಳೆಯ ಸೈಕಲ್ ಹಾಗೂ ಕೆಲವು ಕಬ್ಬಿಣದ ಪೈಪ್ ಗಳನ್ನು ಖರೀದಿಸಿ ಸೈಕಲ್ ಅನ್ನು ವಿನ್ಯಾಸಗೊಳಿಸಿದ್ದಾರೆ. ನಂತರ ಎಲ್ಲಾ ಭಾಗಗಳನ್ನು ಜೋಡಿಸಿ ವೆಲ್ಡ್ ಮಾಡಿ ಟ್ರ್ಯಾಕ್ ಸೈಕಲ್ ಸಿದ್ಧಪಡಿಸಿದ್ದಾರೆ.

Most Read Articles

Kannada
English summary
This bicycle runs on railway track without any difficulties. Read in Kannada.
Story first published: Tuesday, August 4, 2020, 13:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X