ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಯಾವುದೇ ಕ್ಷೇತ್ರವಿರಲಿ ತಂತ್ರಜ್ಞಾನವು ಪ್ರತಿ ದಿನ ಸುಧಾರಿಸುತ್ತಿದೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ ಎಲ್ಲವೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿವೆ. ಇದರ ಜೊತೆಗೆ ಮನೆಗಳೂ ಸಹ ಸ್ಮಾರ್ಟ್ ಆಗಿವೆ. ಎಲ್ಲಾ ಕ್ಷೇತ್ರಗಳಂತೆ ಆಟೋ ಮೊಬೈಲ್ ಕ್ಷೇತ್ರದಲ್ಲೂ ತಂತ್ರಜ್ಞಾನವು ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿದೆ. ಹಲವು ವಿಧದ ಹೊಸ ತಾಂತ್ರಿಕ ವೈಶಿಷ್ಟ್ಯಗಳನ್ನು ಕಾರುಗಳಲ್ಲಿ ಪರಿಚಯಿಸಲಾಗುತ್ತಿದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ರೇನ್ ಸೆನ್ಸಿಂಗ್ ವೈಪರ್‌ಗಳು ಇದಕ್ಕೆ ಉದಾಹರಣೆಯಾಗಿವೆ. ಹೆಸರಿನಿಂದಲೇ ಇದರ ಕಾರ್ಯವನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಮಳೆ ಬಂದಾಗ ಈ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಚಾಲಿತವಾಗುತ್ತವೆ. ಕಾರಿನ ವಿಂಡ್ ಶೀಲ್ಡ್ ನಲ್ಲಿ ಮಳೆ ನೀರು ಇದ್ದರೆ, ಕಾರಿನಲ್ಲಿರುವ ಸಿಸ್ಟಂ ಅದನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಮಾಡಿ ವೈಪರ್ ಗಳನ್ನು ಸಕ್ರಿಯಗೊಳಿಸುತ್ತದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಆರಂಭದಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರ ವೈಪರ್‌ಗಳನ್ನು ಒದಗಿಸಲಾಗುತ್ತಿತ್ತು. ಆದರೆ ಈಗ ಈ ತಂತ್ರಜ್ಞಾನವು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಈಗ ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಬೆಲೆಯ ಕಾರುಗಳಲ್ಲೂ ಸಹ ಮಳೆ ಬಂದಾಗ ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುವ ವೈಪರ್‌ಗಳನ್ನು ನೀಡಲಾಗುತ್ತಿದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಭವಿಷ್ಯದಲ್ಲಿ ಸಾಮಾನ್ಯ ಬಜೆಟ್ ಬೆಲೆಯ ಕಾರುಗಳಲ್ಲಿ ಸಹ ರೇನ್ ಸೆನ್ಸಿಂಗ್ ಆಟೋಮ್ಯಾಟಿಕ್ ವೈಪರ್‌ಗಳನ್ನು ನೀಡುವ ಸಾಧ್ಯತೆಗಳಿವೆ. ಮಳೆ ಬಂದಾಗ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ಸೆನ್ಸಾರ್ ಗಳು. ಸೆನ್ಸಾರ್ ಗಳು ಕಾರುಗಳ ಮುಂಭಾಗದ ಗಾಜಿನ ಮೇಲೆ ಮಳೆ ನೀರು ಇರುವುದನ್ನು ಗ್ರಹಿಸಿ, ವೈಪರ್ ಗಳು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಕಾರಿನ ವಿಂಡ್ ಶೀಲ್ಡ್ ಒಳಗೆ ಸೆನ್ಸಾರ್ ಗಳನ್ನು ಅಳವಡಿಸಲಾಗಿರುತ್ತದೆ. ಈ ಸೆನ್ಸಾರ್ ಅನ್ನು ಕಾರ್ ಕ್ಯಾಬಿನ್ ಒಳಗಿರುವ ರೇರ್ ವೀವ್ ಮಿರರ್ ಬಳಿ ಅಳವಡಿಸಲಾಗಿರುತ್ತದೆ. ಈ ಸೆನ್ಸಾರ್ ಗಳು ಅತಿ ಕೆಂಪು ಬೆಳಕನ್ನು 45 ಡಿಗ್ರಿ ಕೋನದಲ್ಲಿ ವಿಂಡ್ ಷೀಲ್ಡ್ ಗೆ ಹೊರಸೂಸುತ್ತವೆ. ಎಷ್ಟು ಬೆಳಕು ಮರಳಿ ಪ್ರತಿಫಲಿಸುತ್ತದೆ ಎಂಬುದರ ಆಧಾರದ ಮೇಲೆ ಈ ಇವುಗಳು ಕಾರ್ಯ ನಿರ್ವಹಿಸುತ್ತವೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ವಿವಿಧ ಕೋನಗಳಿಂದ ಬೆಳಕು ಹೇಗೆ ಪ್ರತಿಫಲಿಸುತ್ತದೆ ಎಂಬುದರ ಆಧಾರದ ಮೇಲೆ, ಕಾರಿನ ಗಾಜಿನಲ್ಲಿ ತೇವಾಂಶವಿದೆಯೇ, ಮಳೆ ನೀರು ಇದೆಯೇ ಎಂಬುದನ್ನು ಈ ಸೆನ್ಸಾರ್ ಪತ್ತೆ ಮಾಡುತ್ತದೆ. ನಂತರ ವೈಪರ್‌ಗಳನ್ನು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಸೆನ್ಸಾರ್ ಗಳಿಗೆ ಎಷ್ಟು ಪ್ರಮಾಣದಲ್ಲಿ ಬೆಳಕು ಹಿಂತಿರುಗುತ್ತಿದೆ ಎಂಬುದರ ಆಧಾರದ ಮೇಲೆ ವೈಪರ್ ಗಳು ಕಾರ್ಯ ನಿರ್ವಹಿಸುತ್ತವೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಇದರರ್ಥ ಕಾರಿನ ವಿಂಡ್ ಷೀಲ್ಡ್ ಸ್ಪಷ್ಟವಾಗಿದ್ದರೆ, ಬೆಳಕು ಅದರಿಂದ ಪ್ರತಿಫಲಿಸುತ್ತದೆ ಹಾಗೂ ಸೆನ್ಸಾರ್ ಗಳಿಗೆ ಮರಳುತ್ತದೆ. ಆದರೆ ವಿಂಡ್ ಷೀಲ್ಡ್ ಮೇಲೆ ಮಳೆ ಹನಿಗಳಿದ್ದರೆ, ಪ್ರತಿಫಲಿಸುವ ಬದಲು ಅತಿ ಕೆಂಪು ಬೆಳಕು ಅವುಗಳ ಮೂಲಕ ಹಾದು ಹೋಗುತ್ತದೆ. ಇದರಿಂದ ಸೆನ್ಸಾರ್ ಗಳಿಗೆ ಹಿಂದಿರುಗುವ ಬೆಳಕಿನ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಮುಂಭಾಗದ ಮಿರರ್ ನಲ್ಲಿ ಹೆಚ್ಚು ನೀರು ಇದ್ದರೆ, ಅದು ಕಡಿಮೆ ಬೆಳಕನ್ನು ಪ್ರತಿಫಲಿಸಿ ಸೆನ್ಸಾರ್ ಗಳಿಗೆ ಹಿಂದಿರುಗುತ್ತದೆ. ಹೀಗೆ ಆದಾಗ ವೈಪರ್ ಆಟೋಮ್ಯಾಟಿಕ್ ಆಗಿ ಚಾಲನೆಯಲ್ಲಿರುತ್ತದೆ. ಮಳೆ ಬಂದಾಗ ಕಾರಿನ ಮುಂಭಾಗದ ಗಾಜಿನ ಮೇಲೆ ಅಳವಡಿಸಿರುವ ವೈಪರ್ ಗಳು ಹೇಗೆ ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ನೀವು ಈಗ ಅರ್ಥಮಾಡಿಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಕೆಲವರು ಈ ತಂತ್ರಜ್ಞಾನವನ್ನು ಟೀಕಿಸುತ್ತಾರೆ. ಮಳೆ ಬಂದಾಗ ಚಾಲಕನಿಗೆ ಅದರ ಬಗ್ಗೆ ತಿಳಿದಿರುವುದಿಲ್ಲವೇ, ಅನಗತ್ಯವಾಗಿ ಈ ತಂತ್ರಜ್ಞಾನವನ್ನು ಏಕೆ ನೀಡಲಾಗುತ್ತದೆ. ಈ ತಂತ್ರಜ್ಞಾನವನ್ನು ನೀಡಿ ಕಾರಿನ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ ಎಂದು ಟೀಕಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈ ತಂತ್ರಜ್ಞಾನವನ್ನು ಸುರಕ್ಷತೆಯ ದೃಷ್ಟಿಯಿಂದ ನೀಡಲಾಗುತ್ತದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಈ ತಂತ್ರಜ್ಞಾನವು ಚಾಲಕನ ವ್ಯಾಕುಲತೆಯನ್ನು ಕಡಿಮೆ ಮಾಡಿ, ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಪ್ರಪಂಚದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಚಾಲಕರಲ್ಲಿ ಉಂಟಾಗುವ ಗೊಂದಲವು ಸಹ ಕಾರಣವಾಗುತ್ತದೆ. ಈ ತಂತ್ರಜ್ಞಾನವು ಚಾಲಕರ ವ್ಯಾಕುಲತೆಯನ್ನು ಇಲ್ಲವಾಗಿಸಿ ರಸ್ತೆ ಅಪಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್'ಗಳನ್ನು ಬದಲಿಸಲು ಮೆಕಾನಿಕ್ ಬಳಿ ಸಾಗಬೇಕು, ಇಲ್ಲದಿದ್ದರೆ ದೊಡ್ಡ ಸರ್ವೀಸ್ ಸೆಂಟರ್'ಗೆ ಹೋಗಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್'ಗಳನ್ನು ನಾವೇ ಯಾವ ರೀತಿ ಬದಲಿಸಬಹುದು ಎಂಬುದನ್ನು ನೋಡುವುದಾದರೆ ಮೊದಲು ಕಾರಿನಿಂದ ಚೂರು ಚೂರಾದ ಗಾಜಿನ ತುಂಡುಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಜೊತೆಗೆ ಕಿಟಕಿಗಳಲ್ಲಿ ಅಂಟಿಕೊಂಡಿರುವ ಗಾಜಿನ ಕಣಗಳನ್ನು ತೆಗೆದುಹಾಕಬೇಕು. ಹೊಸ ಗಾಜನ್ನು ಅಳವಡಿಸುವಾಗ ಸಣ್ಣ ತುಂಡುಗಳು ಸಮಸ್ಯೆಗಳನ್ನು ಉಂಟುಮಾಡಬಹುದು.

ರೇನ್ ಸೆನ್ಸಿಂಗ್ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ವಿಧಾನಗಳಿವು

ಮುಖ್ಯವಾಗಿ ಕಾರಿನೊಳಗಿರುವ ಮುರಿದ ಗಾಜಿನ ತುಂಡುಗಳನ್ನು ತೆಗೆದುಹಾಕುವಾಗ ಹೆಚ್ಚು ಜಾಗೃತೆ ವಹಿಸಬೇಕು. ತುಂಡಾದ ಗಾಜುಗಳಿಂದ ಕೈಗಳಿಗೆ ಅಪಾಯ ಸಂಭವಿಸುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ತೆಗೆದು ಹಾಕುವಾಗ ಹ್ಯಾಂಡ್ ಗ್ಲೌಸ್ ಬಳಸುವುದು ಸೂಕ್ತ. ವಿಂಡೋ ಗ್ಲಾಸ್ ಸುಲಭವಾಗಿ ಒಡೆದು ಹೋಗುವುದರಿಂದ ಅಳವಡಿಸುವಾಗ ಹೆಚ್ಚು ಜಾಗರೂಕತೆ ವಹಿಸುವುದು ಮುಖ್ಯ. ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಬೇರೆಯವರ ಸಹಾಯವಿಲ್ಲದೆ ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಅನ್ನು ನಾವೇ ಬದಲಿಸಬಹುದು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
This is how rain sensing wipers operates details
Story first published: Saturday, September 25, 2021, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X