ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಪ್ರಪಂಚದಲ್ಲಿರುವ ರಸ್ತೆಗಳಲ್ಲಿ ಅಮಾನುಷ ಶಕ್ತಿಗಳಿರುತ್ತವೆ ಎಂಬುದು ಜನರ ನಂಬಿಕೆ/ಮೂಢ ನಂಬಿಕೆ. ಈ ಕಾರಣಕ್ಕಾಗಿ ಕೆಲವು ರಸ್ತೆಗಳಲ್ಲಿ ಓಡಾಡಲು ಜನರು ಭಯ ಪಡುವುದರ ಜೊತೆಗೆ ಆ ರಸ್ತೆಗಳತ್ತ ತಲೆ ಹಾಕುವುದಿಲ್ಲ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಆ ರಸ್ತೆಗಳಲ್ಲಿ ಸಂಚರಿಸಿದರೆ ಅಮಾನುಷ ಶಕ್ತಿಗಳು ತಮ್ಮನ್ನು ಕೊಲ್ಲಬಹುದು ಎಂಬ ಭಯ ಇದಕ್ಕೆ ಮುಖ್ಯ ಕಾರಣ. ಕಾಕತಾಳೀಯವೆಂಬಂತೆ ಕೆಲವು ರಸ್ತೆಗಳಲ್ಲಿ ಬೇರೆ ರಸ್ತೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಅಪಘಾತಗಳಾಗಿ ಜನ ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದಾರೆ. ಇದು ಜನರ ಭಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಜನ ಈ ರೀತಿ ಭಯ ಪಡಲು ಆ ರಸ್ತೆಗಳ ಬಳಿ ನೆಲೆಸಿರುವ ಸ್ಥಳೀಯರೂ ಕಾರಣ. ಹೆಚ್ಚು ಅಪಘಾತವಾಗುವ ರಸ್ತೆಗಳ ಭೌಗೋಳಿಕ ಹಿನ್ನೆಲೆಯು ಸಹ ಹೆಚ್ಚಿನ ಪ್ರಮಾಣದ ಅಪಘಾತಗಳಾಗಲು ಕಾರಣವಾಗುತ್ತವೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಟೆಕ್ನಾಲಜಿ ಇಷ್ಟೆಲ್ಲಾ ಅಭಿವೃದ್ಧಿ ಹೊಂದಿದ್ದರೂ ಕೆಲ ರಸ್ತೆಗಳಲ್ಲಿ ಮಾತ್ರವೇ ಹೆಚ್ಚು ಅಪಘಾತಗಳಾಗಲು ಕಾರಣವೇನು ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ. ಈ ಕಾರಣಕ್ಕಾಗಿ ಅಮಾನುಷ ಶಕ್ತಿಗಳಿಂದಾಗಿಯೇ ಹೆಚ್ಚು ಅಪಘಾತಗಳಾಗುತ್ತಿವೆ ಎಂದು ಜನರು ನಂಬುವಂತಾಗಿದೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಹೈವೇ 666ನಲ್ಲಿ ಜನರು ಸಂಚರಿಸಲು ಭಯ ಪಡುತ್ತಾರೆ. ಈ ಹೈವೇಯನ್ನು ಜನರು ಡೆವಿಲ್ ಹೈವೇ ಅಥವಾ ನರಕಕ್ಕೆ ಹೋಗುವ ಹೈವೇ ಎಂದೇ ಕರೆಯುತ್ತಾರೆ. ಹೈವೇ 666ನಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಅದಕ್ಕಾಗಿ ಯಾವುದೇ ಸಂದರ್ಭದಲ್ಲೂ ಜನರು ಈ ರಸ್ತೆಯಲ್ಲಿ ಒಬ್ಬರೇ ಓಡಾಡುವುದಿಲ್ಲ. ಅಂದಹಾಗೆ ಈ ರೀತಿಯಾಗಿ ಕುಖ್ಯಾತಿಯನ್ನು ಪಡೆದಿರುವ ಹೈವೇ 666 ಇರುವುದು ಅಮೇರಿಕಾದಲ್ಲಿ. ಹೈವೇ 666 ಆರಂಭವಾಗುವುದು ಉತಾ ರಾಜ್ಯದಲ್ಲಿರುವ ಮಾಂಟಿಸೆಲ್ಲೊ ನಗರದಿಂದ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಹೈವೇ 666 ಮಾಂಟಿಸೆಲ್ಲೊದಿಂದ ನ್ಯೂ ಮೆಕ್ಸಿಕೊದಲ್ಲಿರುವ ಗಾಲಪ್ ನಗರದವರೆಗೂ ವಿಸ್ತರಿಸಿದೆ. ಸುಮಾರು 200 ಮೈಲುಗಳವರೆಗೆ ಹರಡಿಕೊಂಡಿರುವ ಹೈವೇ 666ನ ಮೇಲೆ ಹಲವು ಭಯಾನಕ ಕಥೆಗಳಿವೆ. ಹೈವೇ 666ನಲ್ಲಿ ಮುಂದೆ ಸಾಗಿದಂತೆ ದೊಡ್ಡ ಗಾತ್ರದ ಬಂಡೆಗಳು ಎದುರಾಗುತ್ತವೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಇದರ ಜೊತೆಗೆ ದೊಡ್ಡ ಗಾತ್ರದ ಕ್ಯಾಕ್ಟಸ್ ಗಿಡಗಳೂ ಕಂಡು ಬಂದು ಇದು ರಸ್ತೆಯೋ ಅಥವಾ ಮರುಭೂಮಿಯೋ ಎಂಬ ಅನುಮಾನ ಮೂಡುವಂತೆ ಮಾಡುತ್ತವೆ. ಈ ಹೈವೇನಲ್ಲಿ ಪ್ರಯಾಣಿಸುವುದು ಹೊಸ ಅನುಭವವನ್ನು ನೀಡಿದರೂ ಸಹ ಜನ ಈ ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಸ್ಥಳೀಯರ ಪ್ರಕಾರ ಈ ರಸ್ತೆಯಲ್ಲಿ ಸಂಚರಿಸುವವರು ವಾಪಸ್ ಬಂದರೆ ಅದೊಂದು ದೊಡ್ಡ ಪವಾಡ. ವಾಸ್ತವವಾಗಿ ಹೈವೇ 666 ಹೆಚ್ಚು ಜನಪ್ರಿಯ ಹೆದ್ದಾರಿಯಾದರೂ, ಅಮಾನುಷ ಶಕ್ತಿಗಳಿವೆ ಎಂಬ ಮೂಢನಂಬಿಕೆಯಿಂದಾಗಿ ಹೆಚ್ಚಿನ ಜನರು ಈ ಹೆದ್ದಾರಿಯಲ್ಲಿ ಓಡಾಡುವುದೇ ಇಲ್ಲ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಈ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಏಕೆ ಆಗುತ್ತಿವೆ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ಹೆದ್ದಾರಿಯಲ್ಲಿ ಹೆಚ್ಚು ಅಪಘಾತವಾಗುವುದರ ಜೊತೆಗೆ ಅತಿ ಹೆಚ್ಚಿನ ಸಂಖ್ಯೆಯ ಜನರು ಸ್ಥಳದಲ್ಲಿಯೇ ಸಾವನ್ನಪ್ಪುತ್ತಿದ್ದಾರೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಇದರಿಂದಾಗಿ ಇದು ಅಮಾನುಷ ಶಕ್ತಿಗಳ ಕಾಟ ಎಂಬ ನಂಬಿಕೆ ಹೆಚ್ಚುವಂತೆ ಮಾಡಿದೆ. 2003ರಲ್ಲಿ ಅಮೇರಿಕಾ ಸರ್ಕಾರವು ಈ ಹೆದ್ದಾರಿಯ ಹೆಸರನ್ನು ಹೈವೇ 666ನಿಂದ ಯು‍ಎಸ್ ರೂಟ್ 491 ಎಂದು ಬದಲಿಸಿತು. ಈ ಹೆದ್ದಾರಿಯಲ್ಲಿ ನಡೆದಿವೆ ಎಂದು ಹೇಳಲಾದ ಘಟನೆಗಳನ್ನು ಈ ಲೇಖನದಲ್ಲಿ ನೋಡೋಣ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

1. ಯಮ ಸ್ವರೂಪಿ ಟ್ರಕ್

ಈ ರಸ್ತೆಯಲ್ಲಿ ಸಂಚರಿಸಿ ಬದುಕುಳಿದ ಕೆಲವರ ಪ್ರಕಾರ ಈ ಹೆದ್ದಾರಿಯಲ್ಲಿ ಚಾಲಕನಿಲ್ಲದ ಟ್ರಕ್‍‍ವೊಂದು ಬಂದು ಈ ಹೆದ್ದಾರಿಯಲ್ಲಿ ಓಡಾಡುವವರಿಗೆ ಗುದ್ದಿ ಅವರ ಪ್ರಾಣ ತೆಗೆಯುತ್ತಿದೆ. ಇನ್ನೂ ಕೆಲವರ ಪ್ರಕಾರ ಚಾಲಕನಿಲ್ಲದ ಟ್ರಕ್ ಅತಿ ವೇಗದಲ್ಲಿ ಚಲಿಸಿ ಜನರ ಪ್ರಾಣ ತೆಗೆಯುತ್ತಿದೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ನಾವು ಈ ರಸ್ತೆಯಲ್ಲಿ ಸಂಚರಿಸುವಾಗ ಟ್ರಕ್ ನಮ್ಮ ವಾಹನಕ್ಕೆ ಬಂದು ಗುದಿಯುತ್ತದೆ. ಅಥವಾ ನಮ್ಮ ವಾಹನದ ಪಕ್ಕದಲ್ಲಿ ಅತಿ ವೇಗವಾಗಿ ಬಂದು ನಮ್ಮನ್ನು ಭಯಪಡಿಸುತ್ತದೆ. ಅದರಲ್ಲಿ ಚಾಲಕನಿರುವುದಿಲ್ಲ ಎಂದು ಈ ಹೆದ್ದಾರಿಯಲ್ಲಿ ಸಂಚರಿಸಿ ಬದುಕಿ ಬಂದ ಕೆಲವರು ಹೇಳಿದ್ದಾರೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಈ ಟ್ರಕ್ ಅನ್ನು ಅಮಾನುಷ ಶಕ್ತಿಗಳು ನಿಯಂತ್ರಿಸುತ್ತಿದ್ದು, ಈ ಹೆದ್ದಾರಿಯಲ್ಲಿ ಓಡಾಡುವ ಜನರ ಪ್ರಾಣವನ್ನು ತೆಗೆಯುವುದು ಅವುಗಳ ಗುರಿಯಾಗಿದೆ ಎಂದು ಇಲ್ಲಿನ ಜನ ಅಭಿಪ್ರಾಯ ಪಡುತ್ತಾರೆ. ಇದರಿಂದ ಈ ಹೆದ್ದಾರಿಯಲ್ಲಿ ಸಂಚರಿಸಲು ಜನರು ಭಯಪಡುವಂತಾಗಿದೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

2. ನಾಯಿಗಳ ಕಾಟ

ಈ ಹೆದ್ದಾರಿಯಲ್ಲಿ ಓಡಾಡಿದವರ ಅನುಭವದ ಪ್ರಕಾರ ಈ ಹೆದ್ದಾರಿಯಲ್ಲಿ ಹಲವು ಬೀದಿ ನಾಯಿಗಳಿವೆ. ನೀವು ಎಷ್ಟೇ ವೇಗವಾಗಿ ಚಲಿಸಿದರೂ ಅಷ್ಟೇ ವೇಗವಾಗಿ ನಿಮ್ಮ ವಾಹನದ ಜೊತೆಗೆ ಓಡಿ ಬರುತ್ತವೆ. ಇದರಿಂದಾಗಿ ಅಪಘಾತಗಳಾಗುತ್ತಿವೆ.

ಇದು ಪ್ರಪಂಚದ ಭಯಾನಕ ಹೆದ್ದಾರಿ..!

ಇವು ದೆವ್ವದ ನಾಯಿಗಳು ಎಂಬುದು ಅವರ ಅಭಿಪ್ರಾಯ. ಈ ರೀತಿ ಎದುರಾಗುವ ನಾಯಿಗಳು ಚೂಪಾದ ಹಲ್ಲುಗಳನ್ನು ಹೊಂದಿದ್ದು, ವಾಹನಗಳ ವಿಂಡೊಗಳ ಮೇಲೆಯೇ ಎರಗುತ್ತವೆ. ಇವುಗಳು ಜನರ ಮೂಢನಂಬಿಕೆಯೋ ಅಥವಾ ಕಟ್ಟು ಕಥೆಯೋ ಎಂಬುದು ಸರಿಯಾದ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

Most Read Articles

Kannada
English summary
This is the most dangerous highway in the world - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X