ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ವಿಮಾನದಲ್ಲಿ ಕುಳಿತು ಪ್ರಯಾಣ ಮಾಡುವ ಕನಸು ಇನ್ನು ಹಲವರಿಗೆ ಹಾಗೆಯೇ ಇದೆ. ಆದರೆ ಅದೃಷ್ಟವಶಾತ್ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಾಗ ಅದರಲ್ಲಿಯೂ ಇಡೀ ವಿಮಾನದಲ್ಲಿ ನಿಮ್ಮೊಂದಿಗೆ ಸಹ ಪ್ರಯಾಣಿಕರು ಯಾರೂ ಇಲ್ಲದಿದ್ದಾಗೆ ಹೇಗೆ ಅನಿಸುತ್ತೆ ಅಲ್ವಾ.?

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಜಮಾನದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರ ಸಂಪರ್ಕ ಸಾರಿಗೆಯಾಗಿದ್ದ ವಿಮಾನ ಪ್ರಯಾಣವು, ದಿನಕಳೆದಂತೆ ಜನಸಾಮಾನ್ಯರು ಕೂಡಾ ಕೂತು ಪ್ರಯಾಣಿಸಬಹುದಾದ ಅವಕಾಶ ದೊರೆತಿದೆ. 3 ಸಾವಿರದ ಒಳಗೆಯೆ ನೀವು ವಿಮಾನದಲಿ ಹೋಗಿ ಬರಬಹುದಾದ ಸೌಲಭ್ಯಗಳು ಕೂಡ ಈಗ ದೊರೆಯುತ್ತಿದೆ. ಆದರಲ್ಲಿಯು ಏರ್‍‍ಲೈನ್ ಕಂಪೆನಿಗಳಂತೂ ಹಬ್ಬದ ಋತು ಬಂದರೆ ಸಾಕು ಸಾಧಾರಣ ಅಂಗಡಿಗಳಂತೆ ರಿಯಾಯಿತಿ ನೀಡುತ್ತಾರೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ವಿಮಾನದಲ್ಲಿ ಪ್ರಯಾಣಿಸಲು ಸೀಟ್ ಏನೊ ಸಿಕ್ತು, ಖುಷಿ ಆಯ್ತು ಮುಂದೇನು.? ಜನಸಾಮಾನ್ಯರಿಗೆ, ಇತರೆ ದೊಡ್ಡ ದೊಡ್ಡ ಉದ್ಯಮಿಗಳಂತೆ ಮತ್ತು ರಾಜಕೀಯ ಅಧಿಕಾರಿಗಳ ಹಾಗೆ ಪ್ರೈವೇಟ್ ಪ್ಲೇನ್‍‍ಗಳು ಇರುವುದಿಲ್ಲ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಆದ್ರೆ ಜನಸಾಮಾನ್ಯರಿಗೆ ಅದೃಷ್ಟವಶಾತ್ ಇಡೀ ವಿಮಾನದಲ್ಲಿ ಒಬ್ಬರೇ ಕೂತು ಪ್ರಯಾಣ ಮಾಡುವ ಅವಕಾಶ ಬಂದರೆ ಹೇಗಿರುತ್ತೆ ಅಲ್ವಾ.? ಆ ಕ್ಷಣಕ್ಕೆ ಕೊಂಚ ಭಯವಾದರೂ, ಇಡೀ ವಿಮಾನ ನಮ್ಮದೆ ಎಂಬ ಭಾವನೆಯಲ್ಲಿ ಮುಳುಗಿ ಪ್ರಯಾಣಿಸುವ ಮಜಾನೇ ಬೇರೆ. ಇಂದು ನಾವು ಹೇಳಲು ಹೊರಟಿರುವ ವ್ಯಕ್ತಿಯ ಕಥೆ ಕೂಡಾ ಇಂತದ್ದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಈಕೆಗೆ ಅದೃಷ್ಟ ಪಕ್ಕದಲ್ಲಿಯೆ ಇತ್ತೋ ಏನೊ, ಫಿಲಿಫೈನ್ಸ್ ಮೂಲದ ಮಹಿಳೆ ಲೌಯಿಸ್ ಎರಿಪ್ಸ್ ಫಿಲಿಫೈನ್ಸ್ ಏರ್‍‍‍ಲೈನ್ಸ್ PR 2820 ಎಂಬ ವಿಮಾನದಲ್ಲಿ ಡಾವೌ ನಿಂದ ಅಲ್ಲಿನ ಪ್ರಮುಖ ನಗರಗಳಲ್ಲಿ ಒಂದಾದ ಮನಿಲಾಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿಕೊಂಡಳು.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಬುಕ್ಕಿಂಗ್ ಮಾಡಿಕೊಂಡ ನಂತರ ಆಕೆಗೆ ತಿಳಿದು ಬಂದಿದ್ದು, ಇಡೀ ವಿಮಾನದಲ್ಲಿ ತಾನೊಬ್ಬಳೆ ಪ್ರವಾಸಿ ಎಂದು. ಸಿಬ್ಬಂದಿಯನ್ನು ಹೊರತು ಪಡಿಸಿ ಸಹ ಪ್ರಯಾಣಿಕರು ಇಲ್ಲದಿರುವ ಕಾರಣ ಆಕೆಗೆ ಮೊದಲಿಗೆ ಭಯವಾದರೂ, ವಿಮಾನದ ಒಳಗೆ ಬಂದು ಕೂತ ನಂತರ ತನ್ನ ಸಂತೋಷವನ್ನು ತಡೆಯಲಾರದೆ ಸೀಟಿಂದ ಸೀಟಿಗೆ ಹಾರಿ ಕುಣಿದಾಡಿದಳು.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಜೊತೆಗೆ ಆಕೆಯು ತನ್ನ ಫೇಸ್‍ಬುಕ್ ಖಾತೆಯಲ್ಲಿ ತನ್ನ ಒಂಟಿ ಪ್ರಯಾಣದ ಬಗ್ಗೆ ಮಾಡಿದ ಪೋಸ್ಟ್ ಅನ್ನು ಕಂಡರೆ ಆಕೆಯು ಎಂದೂ ಕೂಡಾ ಕಾಣದ ಕನಸೊಂದು ನನಸಾಗಿ ಬಂದಿರುವ ಹಾಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾಳೆ ಎಂದರೆ ನೀವು ನಂಬಲೇಬೇಕು.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಈ ಘಟನೆಯು ಡಿಸೆಂಬರ್ 24, 2018 ರಂದು ನಡೆದಿದ್ದು, ತಾನೊಬ್ಬಳೇ ಕೂತು ಪ್ರಯಾಣಿಸುತ್ತಿದ್ದ ವಿಮಾನದೊಳಗಿದ್ದ ಸಿಬ್ಬಂದಿ ಜೊತೆಗೆ, ವಿಮಾನದ ಒಳಗೆ ಯಾರು ಇಲ್ಲದಿರುವುದರ ಫೋಟೊವನ್ನು ಕ್ಲಿಕ್ಕಿಸಿ ತನ್ನ ಫೇಸ್‍‍ಬುಕ್ ಖಾತೆಗೆ ಹಾಕಿಕೊಂಡಿರುವುದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಹೇಗಾದರು ಒಬ್ಬಳೆ ಯಾರೂ ಸಹಪ್ರಯಾಣಿಕರು ಇಲ್ಲದೆಯೆ ಪ್ರಯಾಣಿಸಲು ಮುಂದಾದ ಈಕೆ ಕೊನೆಗೆ ತನ್ನ ನಿಲ್ದಾಣ ಬಂದ ನಂತರ ತನ್ನ ಈ ಪ್ರಯಾಣವನ್ನು ಸುಖಕರವಾಗಿ ಮುಗಿಸಲು ಸಹಕರಿಸಿದ ಆ ವಿಮಾನದ ಎಲ್ಲಾ ಸಿಬ್ಬಂದಿಗೂ ಅಭಿನಂದಿಸಿದ್ದಾಳೆ. ಕೇವಲ ಓರ್ವ ಪ್ರಯಾಣಿಕರನ್ನು ಹೊಂದಿದ್ದರೂ ವಿಮಾನವು ವಾಸ್ತವವಾಗಿ ಹೊರಟಿದೆ ಎಂಬುದು ಎಲ್ಲರಲ್ಲಿಯು ಆಶ್ಚರ್ಯವನ್ನು ಹುಟ್ಟುಹಾಕಿದೆ.

Image Courtesy: Facebook

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಇತ್ತೀಚೆಗೆ ವಿಮಾನಯಾನದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಪ್ರವಾಸ ಕೈಗೊಳ್ಳುವುದು ತುಂಬಾ ಸುಲಭವಾಗುತ್ತಿದೆ. ಇನ್ನು ದೇಶಿಯ ವಿಮಾನಯಾನ ಕ್ಷೇತ್ರವು ಕೂಡಾ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಈ ಹಿನ್ನೆಲೆ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿದ್ದೇವೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

10. ಎಮಿರೇಟ್ಸ್ ಏರ್‍‍ಲೈನ್ : ದುಬೈ ಟು ಲಾಸ್ ಏಂಜಲೀಸ್

ಅತಿಹೆಚ್ಚು ಪ್ರಯಾಣಿಸುವ ವಿಮಾನಯಾನ ಸೇವೆಗಳಲ್ಲಿ ಎಮಿರೇಟ್ಸ್ ಏರ್‍‍ಲೈನ್ ಕೂಡಾ ಒಂದು. ಎಮಿರೇಟ್ಸ್ ವಿಮಾನವು ದುಬೈನಿಂದ ಲಾಸ್ ಏಂಜಲೀಸ್ ನಗರ ತಲುಪಲು ಸುಮಾರು 13,420 ಕಿಲೋಮೀಟರ್ ಚಲಿಸಬೇಕಾಗಿದ್ದು, ಇದಕ್ಕಾಗಿ ಏ‍ರ್‍‍ಬಸ್ ಎ380ನಲ್ಲಿ 16 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

9. ಇತಿಹಾದ್ ಜೆಟ್ ಏರ್‍‍ವೇಸ್- ಅಬುದಾಬಿ ಟು ಲಾಸ್ ಏಂಜಲೀಸ್

ಬೋಯಿಂಗ್ 777-200ಎಲ್ಆರ್ ವಿಮಾನವು ಅಬುದಾಬಿಯಿಂದ ಲಾಸ್ ಏಂಜಲೀಸ್ ತಲುಪಲು ಸುಮಾರು 13,503 ಕಿ.ಮೀ ಚಲಿಸಬೇಕಾಗಿದ್ದು, 16 ಗಂಟೆ 30 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

8. ಡೆಲ್ಟಾ ಏರ್‍‍ಲೈನ್ಸ್: ಜೊಹಾನ್ಸ್‌ಬರ್ಗ್‌ ಟು ಅಟ್ಲಾಂಟ್

ಬೋಯಿಂಗ್ 777-200ಎಲ್ಆರ್ ಎಂಬ ಹೆಸರಿನ ಈ ವಿಮಾನವು ದಕ್ಷಿಣ ಆಫ್ರಿಕಾದ ಡೆನ್ಸ್ ಕಾಡುಗಳು ದಾಟಿ ಅಟ್ಲಾಂಟ್ ತಲುಪಲು ಸುಮಾರು 13,576 ಕಿ.ಮೀ ಚಲಿಸಬೇಕಾಗಿದ್ದು, 16 ಗಂಟೆ 50 ನಿಮಿಷ ಪ್ರಯಾಣಿಸಬೇಕಾಗುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

7. ಯುನೈಟೆಡ್ ಏರ್‍‍ಲೈನ್ಸ್ - ಸ್ಯಾನ್ ಫ್ರಾನ್ಸಿಸ್ಕೊ ಟು ಸಿಂಗಾಪುರ್

ಬೋಯಿಂಗ್ 787-9 ಎಂಬ ಹೆಸರಿನ ಈ ವಿಮಾನವು ಬಿಜಿನೆಸ್ ಟ್ರಿಪ್ ಗಾಗಿ ವಿಶೇಷವಾಗಿ ಸಿದ್ದವಾಗಿದ್ದು, ಹಾಗೆಯೇ ಇದು ಸ್ಯಾನ್ ಫ್ರಾನ್ಸಿಸ್ಕೊ ನಿಂದ ಸಿಂಗಾಪುರ್ ತಲುಪಲು ಸುಮಾರು 13,594 ಕಿಲೋಮೀಟರ್ ಚಲಿಸಬೇಕಾಗುತ್ತೆ. ನಿರ್ದಿಷ್ಟ ಸ್ಥಾನವನ್ನು ತಲುಪಲು ಸುಮಾರು 17 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

6. ಕ್ವಾಂಟಾಸ್ ಏರ್‍‍ವೇಸ್: ಡಲ್ಲಾಸ್ - ಸಿಡ್ನಿ

ಕ್ವಾಂಟಾಸ್ ಏರ್ವೇಸ್ ಎಂಬುದು ಆಸ್ಟ್ರೇಲಿಯಾದ ಫ್ಲ್ಯಾಗ್ ಕ್ಯಾರಿಯರ್ ವಿಮಾನಯಾನ ಸಂಸ್ಥೆಯಾಗಿದೆ. ಏರ್‍‍ಬಸ್ ಎ380 ಎಂಬ ಈ ವಿಮಾನವು ದಲ್ಲಾಸ್ ನಿಂದ ಸಿಡ್ನಿ ನಗರವನ್ನು ತಲುಪಸು ಸುಮಾರು 13,804 ಸಾವಿರ ಕಿಲೋ ಮೀಟರ್ ಚಲಿಸಬೇಕಾಗಿದ್ದು, ನಿರ್ದಿಷ್ಟ ಸ್ಥಾನವನ್ನು ತಲುಪಲು 17 ಗಂಟೆ 15 ನಿಮಿಷದ ವರೆಗು ಪ್ರಯಾಣಿಸಬೇಕಂತೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

5. ಯುನೈಟೆಡ್ ಏರ್‍‍‍ಲೈನ್ಸ್: ಹೊಸ್ಟನ್ ಟು ಸಿಡ್ನಿ

ಸಿಡ್ನಿಯಿಂದ ಹೊರಡುವ ಬೋಯಿಂಗ್ 787-9 ವಿಮಾನವು ತಮ್ಮ ನಿರ್ದಿಷ್ಟ ಸ್ಥಾನವನ್ನು ತಲುಪಲು 13,834 ಕಿಲೋಮೀಟರ್ ಪ್ರಯಾಣಿಸಬೇಕಾದ್ದು, ಇದಕ್ಕಾಗಿ ಬರೋಬ್ಬರಿ 17 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

4. ಯುನೈಟೆಡ್ ಏರ್‍‍‍ಲೈನ್ಸ್: ಲಾಸ್ ಏಂಜಲೀಸ್ ಟು ಸಿಂಗಾಪುರ್

ಬೋಯಿಂಗ್ 787-9 ವಿಮಾನವು ಉತ್ತರ ಅಮೆರಿಕಾದಿಂದ ಆಗ್ನೇಯಾ ಏಷಿಯಾವನ್ನು ತಲುಪಲು ಸುಮಾರು 14,114 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 50 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

3. ಎಮಿರೇಟ್ಸ್ ಏರ್‍‍ಲೈನ್ : ಔಕ್‍ಲ್ಯಾಂಡ್ - ದುಬೈ

ಏರ್‍‍‍ಬಸ್ ಎ380 ವಿಮಾನವು ಔಕ್‍ಲ್ಯಾಂಡ್ ನಿಂದ ದುಬೈ ತಲುಪಲು ಸುಮಾರು 14,201 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 5 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಇದಲ್ಲದೇ ಈ ವಿಮಾನವು ಅತಿ ಹೆಚ್ಚು ದೂರ ಪ್ರಯಾಣಿಸಿವ ವಿಮಾನಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

MOST READ: ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

2. ಕ್ವಾಂಟಾಸ್ : ಪರ್ತ ಟು ಲಂಡನ್

ಬೋಯಿಂಗ್ 787-9 ಜೆಟ್ ಪರ್ತನಿಂದ ಲಂಡನ್ ತಲುಪಲು ಸುಮಾರು 14,500 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 20 ನಿಮಿಷಗಳ ಕಾಲ ಪ್ರಯಾಣಿಸಬೇಕಾಗಿದೆ ಎನ್ನಲಾಗಿದೆ.

ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

1. ಖತಾರ್ ಏರ್ವೇಸ್ : ಔಕ್‍ಲ್ಯಾಂಡ್ - ದೋಹಾ

ನಾವಿಂದು ತಿಳಿಸಲಿರುವ ಅತಿ ಹೆಚ್ಚು ದೂರ ಪ್ರಯಾಣ ಮಾಡುವ ವಿಮಾನಗಳಲ್ಲಿ ಬೋಯಿಂಗ್ 777-200ಎಲ್ಆರ್ ವಿಮಾನವು ಮೊದಲನೆಯ ಸ್ಥಾನವನ್ನು ಪಡೆದಿದೆ. ಹಾಗೆಯೇ ಇದು ಔಕ್‍ಲ್ಯಾಂಡ್ ನಿಂದ ದೋಹಾವನ್ನು ತಲುಪಲು ಸುಮಾರು 14,535 ಕಿಲೋಮೀಟರ್ ಚಲಿಸಬೇಕಾಗಿದ್ದು, 18 ಗಂಟೆ ಮತ್ತು 5 ನಿಮಿಷಗಳ ಕಾಲ ಪ್ರಯಾಣಿಸಬೇಕಾಗಿದೆಯಂತೆ.

Most Read Articles

Kannada
English summary
This Lucky Philippines Girl Flew Solo From Davao To Manila In Commercial Flight. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X