ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಬ್ರಿಟಿಷ್ ರಾಣಿ ಎಲಜಬೆತ್ ಪತಿ ಪ್ರಿನ್ಸ್ ಫಿಲಿಪ್ ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳಿದ್ದಾರೆ. ಅವರ ಅಂತ್ಯಕ್ರಿಯೆಯನ್ನು 17ರಂದು ನಡೆಯಲಿದೆ ಎಂದು ಬುಕ್ಕಿಂಗ್ ಅರಮನೆಯಲ್ಲಿ ನೆರವೆರಿಸಲು ನಿರ್ಧರಿಸಲಾಗಿದ್ದು, ಅವರು ಕೊನೆಯ ಆಸೆಯೆಂತೆ ವಿಶೇಷ ಲ್ಯಾಂಡ್ ರೋವರ್ ಕಾರಿನಲ್ಲಿ ಅಂತಿಮ ಯಾತ್ರೆ ಕೈಗೊಳ್ಳುವುದು ಖಚಿತವಾಗಿದೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಕೋವಿಡ್ ಪರಿಣಾಮ ಪ್ರಿನ್ಸ್ ಫಿಲಿಪ್ ಅವರ ಅಂತಿಮ ಯಾತ್ರೆಯಲ್ಲಿ ರಾಜಮನೆತನದ ಸದಸ್ಯರು ಮಾತ್ರ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಇಂಗ್ಲೆಂಡ್ ರಾಜಕುಮಾರ ಫಿಲಿಪ್ ಅವರ ಅಂತ್ಯಕ್ರಿಯೆಯನ್ನು ಹೊಸ ವೈಶಿಷ್ಟ್ಯಗಳೊಂದಿಗೆ ಮಾಡಿಫೈಗೊಳಿಸಲಾದ ಲ್ಯಾಂಡ್ ರೋವರ್ ವಾಹನದಲ್ಲೇ ನೆರವೆರಿಸುವ ಮಾಹಿತಿಗಳು ಲಭ್ಯವಾಗಿವೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಬ್ರಿಟಿಷ್ ಕಾರು ಕಂಪನಿಯಾಗಿರುವ ಲ್ಯಾಂಡ್ ರೋವರ್ ಕಾರುಗಳನ್ನೇ ತಮ್ಮ ಜೀವಮಾನವಿಡೀ ಬಳಕೆ ಮಾಡಿದ್ದ ಪ್ರಿನ್ಸ್ ಫಿಲಿಪ್ ಅವರು ತಮ್ಮ ಜೀವ ಹೋದಾಗಲೂ ಇದೇ ಕಾರಿನಲ್ಲಿ ಅಂತಿಮ ಯಾತ್ರೆ ಕೈಗೊಳ್ಳಿ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಳ್ಳುತ್ತಿದ್ದರಂತೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಹೀಗಾಗಿ 17ರಂದು ನಡೆಯಲಿರುವ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗಾಗಿ 2005ರ ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಮಾದರಿಯನ್ನೇ ಗನ್ ಬಸ್ ಹೆಸರಿನಲ್ಲಿ ಮಾಡಿಫೈಗೊಳಿಸಲಾಗಿದೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಫೋಲೆ ಸ್ಪೆಷಲಿಸ್ಟ್ ವೆಹಿಕಲ್ಸ್ ಮಾಡಿಫೈ ಕಂಪನಿಯು ಮಾಡಿಫೈ ಡಿಫೆಂಡರ್ ಎಸ್‌ಯುವಿಯನ್ನು ಗನ್ ಬಸ್ ಹೆಸರಿನಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಿದ್ದು, ಚಾನ್ಸ್ ಫಿಲಿಪ್ ಅವರ ಮೃತದೇಹವನ್ನು ವಿಂಡ್ಸರ್ ಕ್ಯಾಸಲ್‌ನಿಂದ 17ರ ಸಂಜೆ ಸೇಂಟ್ ಜಾರ್ಜ್ ಚಾಪೆಲ್‌ಗೆ ಇದೇ ವಾಹನದಲ್ಲಿ ಅಂತಿಮ ಯಾತ್ರೆ ಕೈಗೊಳ್ಳಲಾಗುತ್ತದೆ. ಮಾಡಿಫೈ ಮಾಡಲಾದ ಡಿಫೆಂಡರ್ ಗನ್ ಬಸ್ ಮಾದರಿಯು ಹಿಂದಿನ ಪೀಳಿಗೆಯ ಲ್ಯಾಂಡ್ ರೋವರ್ ಡಿಫೆಂಡರ್ 130 ಎಸ್ಯುವಿಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಅಂತಿಮ ಯಾತ್ರೆಯ ಉದ್ದೇಶದಿಂದಾಗಿ ಗನ್ ಬಸ್‌ಗೆ ಹಸಿರು ಬಣ್ಣ ಬಳಿಯಲಾಗಿದ್ದು, ಎಲ್ಇಡಿ ದೀಪಗಳು, ಹಸಿರು ಬಣ್ಣದಿಂದ ಕೂಡಿದ ಲೆದರ್ ಇಂಟಿರಿಯರ್ ಮತ್ತು ಓಕ್ ಮರದಿಂದ ಸಿದ್ದಪಡಿಸಲಾದ ಫಲಕಗಳನ್ನು ಒಳಗೊಂಡ ಅಲಂಕಾರಿಕ ವಿನ್ಯಾಸಗಳು ಹೊಸ ವೈಶಿಷ್ಟ್ಯತೆಗಳಿಂದ ಕೂಡಿವೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಪ್ರಿನ್ಸ್ ಫಿಲಿಪ್ ಅವರ ಇಚ್ಚೆಯೆಂತೆಯೇ ರಾಜಮನೆತನದ ಅಧಿಕಾರಿಗಳು ಅಂತಿಮ ಯಾತ್ರೆಯ ವಾಹನವನ್ನು ಸಿದ್ದಪಡಿಸಿದ್ದು, ರಾಣಿ ಎಲಿಜಬೆತ್‌ರೊಂದಿಗೆ ಮಾತನಾಡುತ್ತಿದ್ದಾಗ ಹಲವಾರು ಬಾರಿ ತಮ್ಮ ಅಂತಿಮ ಯಾತ್ರೆಗೆ ಇದೇ ವಾಹನ ಬಳಕೆ ಮಾಡುವಂತೆ ಮನವಿ ಮಾಡುತ್ತಿದ್ದರಂತೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಪ್ರಿನ್ಸ್ ಫಿಲಿಪ್ ಅವರ ತಮ್ಮ ಅಧಿಕೃತ ಪ್ರವಾಸಗಳಿಗಾಗಿ ಲ್ಯಾಂಡ್ ರೋವರ್ ನಿರ್ಮಿತ ಕಾರುಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಅವರ ಜೀವಿತಾವಧಿಯಲ್ಲಿ ಲ್ಯಾಂಡ್ ರೋವರ್ ಕಂಪನಿಯೊಂದಿಗೆ ಅವರು ಹೊಂದಿದ್ದ ಬಾಂಧವ್ಯ ಇದೀಗ ಅವರ ಅಂತ್ಯಕ್ರಿಯೆಯವರೆಗೂ ಮುಂದುವರಿದೆ.

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಇದೇ ಕಾರಣಕ್ಕೆ ಪ್ರಿನ್ಸ್ ಫಿಲಿಪ್ ಅವರ ಕೋರಿಕೆಯ ಮೇರೆಗೆ ಮಾಡಿಫೈಗೊಳಿಸಲಾದ ಲ್ಯಾಂಡ್ ರೋವರ್ ಡಿಫೆಂಡರ್ ವಾಹನವನ್ನು ಅವರ ಅಂತ್ಯಕ್ರಿಯೆಗೆ ಬಳಸಲಾಗುತ್ತಿದ್ದು, ಇದು ಲ್ಯಾಂಡ್ ರೋವರ್ ಕಾರುಗಳ ಜನಪ್ರಿಯತೆಯನ್ನು ಸೂಚಿಸುತ್ತದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಕೊನೆಯ ಆಸೆಯೆಂತೆ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್

ಇನ್ನು ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರಾಜಕುಮಾರ ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬ್ರಿಟಿಷ್ ಮಿಲಿಟರಿ ಮತ್ತು ರಾಜಮನೆತನಕ್ಕೆ ಮಾತ್ರ ಅವಕಾಶವಿದ್ದು, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕೂಡಾ ಭಾಗವಹಿಸುತ್ತಿಲ್ಲ. ಹೀಗಾಗಿ ಫಿಲಿಪ್ ಅವರ ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದ್ದು, ಫಿಲಿಪ್ ಅವರ ಮೊಮ್ಮಗ ಹ್ಯಾರಿ ನೇತೃತ್ವದಲ್ಲಿ ಅಂತಿಮ ಯಾತ್ರೆ ಸಿದ್ದತೆ ನಡೆಯುತ್ತಿವೆ.

Most Read Articles

Kannada
English summary
Prince Philips Last Ride Will Be A Custom Made Land Rover. Read in Kannada.
Story first published: Wednesday, April 14, 2021, 23:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X