Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- News
ಆಗಸ್ಟ್ 17ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಬೆಂಗಳೂರಿನ ಈ ಜಾಗದಲ್ಲಿ 5 ನಿಮಿಷ ಅಲ್ಲ, 30 ಸೆಕೆಂಡ್ ಸಹ ಪಾರ್ಕ್ ಮಾಡುವಂತಿಲ್ಲ!
ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ವಲಸೆ ಬರುತ್ತಿರುತ್ತಾರೆ. ಹೀಗಾಗಿ ವಾಹನಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಜನದಟ್ಟಣೆಯೊಂದಿಗೆ ಪಾರ್ಕಿಂಗ್ ಸಮಸ್ಯೆಯೂ ಸಹ ಬಿಗಡಾಯಿಸುತ್ತಿದೆ.

ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಪಾರ್ಕಿಂಗ್ ಸಮಸ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಸಂಚಾರಿ ನಿಯಮ ಪಾಲನೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿದ್ದರೂ ರೂಲ್ಸ್ ಪಾಲಿಸದ ವಾಹನ ಸವಾರರು ಕೆಲವೊಮ್ಮೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಇತರರಿಗೂ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದಾರೆ.

ಪ್ರಮುಖ ರಸ್ತೆಗಳಿಂತಲೂ ಮನೆಯ ಮುಂದೆ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಎಲ್ಲರಿಗಿಂತಲೂ ಹೆಚ್ಚು ಸಮಸ್ಯೆಗೆ ಒಳಗಾಗುವುದು ಬೆಂಗಳೂರಿನ ಮನೆ ಮಾಲೀಕರು ಎಂದರೆ ತಪ್ಪಾಗುವುದಿಲ್ಲ. ಪಾರ್ಕಿಂಗ್ ಸಮಸ್ಯೆಯಿಂದ ಕೆಲವು ವಾಹನ ಮಾಲೀಕರು ಸಾಕಷ್ಟು ಸಲ ಮನೆ ಗೇಟ್‌ನ ಮುಂಭಾಗವೇ ವಾಹನಗಳನ್ನು ಪಾರ್ಕ್ ಮಾಡಿ ಹೋಗುವುದರಿಂದ ಗೇಟ್ ಓಪನ್ ಮಾಡಲು ಸಾಧ್ಯವಾಗದೇ ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವುದು ಸಾಮಾನ್ಯವಾಗಿರುತ್ತದೆ.

ಮನೆ ಮುಂದೆ ಅಪರಿಚಿತರ ವಾಹನ ಪಾರ್ಕ್ ಮಾಡುವುದರಿಂದ ಬೇಸತ್ತಿರುವ ಬೆಂಗಳೂರಿನ ಮನೆಯ ಮಾಲೀಕರೊಬ್ಬರು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡುವ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಲು ಹೊಸ ಉಪಾಯ ಮಾಡಿದ್ದು, ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿಗಾಗಿ ಕಾಂಪೌಂಡ್‌ಗೆ ನೇತು ಹಾಕಿರುವ ವಿಶೇಷ ರೀತಿಯ ನೋ ಪಾರ್ಕಿಂಗ್ ಬೋರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೀವು ಹಲವೆಡೆ ಮನೆಯ ಮುಂಭಾಗದಲ್ಲಿ ಅಥವಾ ಕಂಪೌಂಡ್‌ಗಳಲ್ಲಿ ಇಲ್ಲವೇ ಗೇಟ್‌ಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ನೋಡಿರಬಹುದು. ಬಹುತೇಕ ಎಲ್ಲಾ ನೋ ಪಾರ್ಕಿಂಗ್ ಬೋರ್ಡ್‌ಗಳೂ ಸಹ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಇದ್ದರೂ ಅವುಗಳೆಲ್ಲವೂ ಒಂದೇ ರೀತಿಯದ್ದಾಗಿರುತ್ತದೆ.

ಆದರೆ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಆದಿತ್ಯ ಮೋರಾರ್ಕ್ ಎಂಬ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ನೋ ಪಾರ್ಕಿಂಗ್ ಬೋರ್ಡ್ ಇದೀಗ ವೈರಲ್ ಆಗಿದ್ದು, ಮನೆ ಮಾಲೀಕರಿಗೆ ವಾಹನ ಸವಾರರ ಮೇಲೆ ಕನಿಕರವೇ ಇಲ್ಲ ಎಂಬ ಹಾಸ್ಯಾಸ್ಪದ ತಲೆಬರಹದೊಂದಿಗೆ ವೈರಲ್ ಆಗುತ್ತಿದೆ.

ಫೋಟೋದಲ್ಲಿ ಎಚ್ಚರಿಕೆಯ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, 'ನೀವಿಲ್ಲಿ ಪಾರ್ಕ್ ಮಾಡುವುದರ ಬಗ್ಗೆ ಯೋಚನೇಯೇ ಮಾಡಬೇಡಿ' ಎನ್ನುವ ಬೋರ್ಡ್ ತೂಗುಹಾಕಲಾಗಿದ್ದು, ಮತ್ತೊಂದು ಬೋರ್ಡ್‌ನಲ್ಲಿ "ಕೇವಲ ಐದು ನಿಮಿಷಕ್ಕಲ್ಲ, 30 ಸೆಕೆಂಡ್‌ಗೂ ಸಹ ಇಲ್ಲಿ ಪಾರ್ಕ್ ಮಾಡುವ ಬಗ್ಗೆ ಯೋಚನೆಯೂ ಮಾಡಬೇಡಿ' ಎಂದು ಬರೆಯಲಾಗಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದರ ಕುರಿತಾಗಿ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಆದಿತ್ಯ ಮೋರಾರ್ಕ್ ಪೋಸ್ಟ್ ಮಾಡಿರುವ ಈ ಪೋಸ್ಟ್‌ಗೆ ನೂರಾರು ಸಾವಿರಾರು ಜನ ಲೈಕ್ ಮಾಡಿದ್ದಾರೆ. ಹಲವಾರು ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ.

ಕೆಲವರು ಈ ಬೋರ್ಡ್ ಹಾಕಿರುವ ಮನೆ ಮಾಲೀಕನ ನಿರ್ಧಾರವನ್ನು ಸಮರ್ಥಿಸಿದರೆ ಇನ್ನು ಕೆಲವರು ಇದನ್ನು ವಿರೋಧಿಸಿದ್ದಾರೆ. ಎಲ್ಲೂ ಪಾರ್ಕ್ ಮಾಡಲು ಸ್ಥಳವಿಲ್ಲದೇ ಇರುವಾಗ ಮನೆ ಮುಂದೆ ತುಸು ಪಾರ್ಕ್ ಮಾಡುವುದು ಅಷ್ಟು ದೊಡ್ಡ ಅಪರಾಧವೇನಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಎಚ್ಚರಿಕೆಯ ಬೋರ್ಡ್ ಕುರಿತಾಗಿ ಇನ್ನು ಕೆಲವರು ಮನೆಯ ಮುಂದೆ ಅಥವಾ ಗೇಟ್‌ನಲ್ಲಿ ಪಾರ್ಕ್ ಮಾಡುವುದರಿಂದ ನಾವು ಎದುರಿಸುವ ಸಮಸ್ಯೆಗೆ ಅಂದರೆ ಮನೆ ಮಾಲೀಕರು ಎದುರಿಸುವ ಸಮಸ್ಯೆಗೆ ಹೊಣೆ ಯಾರು ಎಂದು ವಾದಿಸುತ್ತಿದ್ದಾರೆ.

ವಾಸ್ತವದಲ್ಲಿ ಎರಡೂ ಕಡೆಯವರ ವಾದದಲ್ಲೂ ನ್ಯಾಯವಿದ್ದರೂ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷಿಸಲು, ಪಾರ್ಕಿಂಗ್ ಮಾರ್ಷಲ್‌ಗಳು, ಮತ್ತು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸದ ವಾಹನಗಳನ್ನು ಹೊತ್ತೊಯ್ಯಲು ಟ್ರಕ್‌ಗಳು ನಗರದೆಲ್ಲೆಡೆ ಸುಳಿದಾಡುತ್ತಲೇ ಇರುತ್ತದೆ.

ಆದರೂ ಸಹ ಕೆಲವರು ನಿಯಮ ಮೀರಿ ನೋ ಪಾರ್ಕಿಂಗ್ ಜಾಗದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರಿಂದ ಸಹಜವಾಗಿಯೇ ಅಲ್ಲಿರುವ ಜನರಿಗೆ ತೊಂದರೆಯಾಗುತ್ತದೆ. ಇನ್ನು ಕೆಲವೊಮ್ಮೆ ಪಾರ್ಕ್ ಮಾಡಲು ಬೇರೆಡೆ ಸ್ಥಳವಿದ್ದರೂ ಮತ್ತೊಬ್ಬರ ಮನೆಯ ಮುಂದೆ ಪಾರ್ಕ್ ಮಾಡಿ ಹೋಗುವವರೂ ಆ ಮನೆಯ ಮಾಲೀಕರಿಗೆ ತಮ್ಮಿಂದ ಆಗುವ ತೊಂದರೆಯನ್ನು ಯೋಚಿಸದೇ ಹೋಗುವುದು ವಿಪರ್ಯಾಸವೇ ಸರಿ.