ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಭಾರತದ ಮೊದಲ ಭೂಮಿ ಹಾಗೂ ಸಮುದ್ರ ವಿಮಾನವು (ಸೀಪ್ಲೇನ್) ಕೊಚ್ಚಿ ಸರೋವರದಲ್ಲಿ ಲ್ಯಾಂಡಿಂಗ್ ಮಾಡಿದೆ. ಈ ವಿಮಾನವು ಭಾನುವಾರ ಮಧ್ಯಾಹ್ನ 12.45ಕ್ಕೆ ವೆಂಡುರುತಿ ಚಾನೆಲ್‌ಗೆ ಬಂದಿಳಿದಿದೆ.

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಈ ಸೀಪ್ಲೇನ್ ಮಾಲಿಯಿಂದ ಗುಜರಾತ್‌ಗೆ ಹೋಗುವ ದಾರಿಯಲ್ಲಿ ಇಂಧನ ತುಂಬಿಸಿಕೊಳ್ಳಲು ಕೊಚ್ಚಿಯಲ್ಲಿ ಇಳಿದಿದೆ. ನೌಕಾಪಡೆಯ ಅನುಮತಿಯೊಂದಿಗೆ ವೆಂಡುರುತಿ ಸೇತುವೆ ಬಳಿ ಈ ಸೀಪ್ಲೇನ್ ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ಇಂಧನ ತುಂಬಿಸಿಕೊಂಡ ನಂತರ ವಿಮಾನವು ನೌಕಾ ನೆಲೆಯಲ್ಲಿರುವ ಜೆಟ್ಟಿಯಿಂದ ಗುಜರಾತ್‌ಗೆ ಪ್ರಯಾಣ ಬೆಳೆಸಿದೆ. ಈ ವಿಮಾನವು ಭಾರತದಲ್ಲಿ ಮೊದಲ ಬಾರಿಗೆ ಕೊಚ್ಚಿಯಲ್ಲಿ ಲ್ಯಾಂಡಿಂಗ್ ಮಾಡಿದೆ.

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಈ ಕಾರಣಕ್ಕೆ ಈ ವಿಮಾನವು ಸ್ವಾಗತಿಸಲು ಕೊಚ್ಚಿ ಜಿಲ್ಲಾಡಳಿತ, ನೌಕಾಪಡೆಯ ಅಧಿಕಾರಿಗಳು, ಸಿಐಎಎಲ್, ಸ್ಪೈಸ್ ಜೆಟ್ ಪ್ರತಿನಿಧಿಗಳು ಸ್ಥಳದಲ್ಲಿ ನೆರೆದಿದ್ದರು. ಇಂಧನ ತುಂಬಿಸಿ ಈ ವಿಮಾನವನ್ನು ತಾಂತ್ರಿಕವಾಗಿ ಪರಿಶೀಲಿಸಿದ ನಂತರ ವಿಮಾನವು ಟೇಕ್ ಆಫ್ ಆಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ವಿಮಾನವು ಸರೋವರದಲ್ಲಿ ಲ್ಯಾಂಡಿಂಗ್ ಆಗುವುದನ್ನು ವೀಕ್ಷಿಸಲು ಪತ್ರಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ವೆಂಡುರುತಿ ಸೇತುವೆ ಬಳಿ ಜಮಾಯಿಸಿದ್ದರು. ಕೊಚ್ಚಿಯ ಜನರಿಗೆ ಸೀಪ್ಲೇನ್ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ವಿಭಿನ್ನ ಅನುಭವವನ್ನು ನೀಡಿತು.

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಈ ವಿಮಾನವನ್ನು ದಕ್ಷಿಣ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಎ.ಕೆ.ಚಾವ್ಲಾ ಬರ ಮಾಡಿಕೊಂಡರು. ಕೊಚ್ಚಿಯಿಂದ ಗುಜರಾತ್‌ಗೆ ಹೋಗುವ ಮಾರ್ಗ ಮಧ್ಯೆ ಈ ವಿಮಾನವು ಬೆಳಿಗ್ಗೆ ಗೋವಾದ ಮಾಂಡೋವಿ ನದಿ ತಲುಪಿ ನಂತರ ಸಬರಮತಿಯನ್ನು ತಲುಪಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಭಾರತದ ಮೊದಲ ಸೀಪ್ಲೇನ್ ಸೇವೆಯನ್ನು ಅಕ್ಟೋಬರ್ 31ರಂದು ಗುಜರಾತ್‌ನಲ್ಲಿ ಆರಂಭಿಸಲಾಗುವುದು. ಈ ಸೇವೆಯು ಸಬರಮತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕಶಿಲೆಯವರೆಗೆ ಇರಲಿದೆ.

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ನಾಗರಿಕ ವಿಮಾನಯಾನ ಇಲಾಖೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಈ ಸೀಪ್ಲೇನ್ ಸೇವೆಯನ್ನು ಸ್ಪೈಸ್ ಜೆಟ್ ನಿರ್ವಹಿಸಲಿದೆ.ಈ ಸೀಪ್ಲೇನ್ ಗಂಟೆಗೆ 290 ಕಿ.ಮೀ ವೇಗದಲ್ಲಿ ಸುಮಾರು ನಾಲ್ಕು ಗಂಟೆಗಳವರೆಗೆ ನಿರಂತರವಾಗಿ ಹಾರಾಟ ನಡೆಸಬಲ್ಲದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಈಗ ಎರಡು ಗಂಟೆಗಳ ಕಾಲ ಹಾರಾಟದ ನಂತರ ವಿರಾಮ ನೀಡಲಾಗಿದೆ. ಈ ಕಾರಣಕ್ಕೆ ಮಾಲಿಯಿಂದ ನೇರವಾಗಿ ಗುಜರಾತ್‌ಗೆ ತಲುಪದೇ ಕೊಚ್ಚಿಗೆ ಬಂದಿಳಿದಿದೆ. ಅಹಮದಾಬಾದ್ - ಕೆವಾಡಿಯಾ ನಡುವೆ ಎಂಟು ವಿಮಾನ ಹಾಗೂ ಅಹಮದಾಬಾದ್‌ನಿಂದ ನಾಲ್ಕು ವಿಮಾನಗಳು ಸಂಚರಿಸಲಿವೆ.

ಟಿಕೆಟ್ ದರ ಪ್ರತಿ ವ್ಯಕ್ತಿಗೆ ರೂ.4,800ಗಳಾಗಿದೆ. ಈ ಸೀಪ್ಲೇನ್ ಸೇವೆಯು ಸಂಜೆ 6 ಗಂಟೆಯವರೆಗೆ ಮಾತ್ರ ಲಭ್ಯವಿರುತ್ತದೆ. ಸೀಪ್ಲೇನ್ ಒಂದು ಬಾರಿ ಹದಿನಾಲ್ಕು ಪ್ರಯಾಣಿಕರನ್ನು ಸಾಗಿಸಬಲ್ಲದು. ಈ ಸೀಪ್ಲೇನ್ 45 ನಿಮಿಷಗಳಲ್ಲಿ 220 ಕಿ.ಮೀ ದೂರ ಚಲಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನೀರಿನ ಮೇಲೆ ಲ್ಯಾಂಡಿಂಗ್ ಆಗುವ ವಿಶಿಷ್ಟ ವಿಮಾನವಿದು

ಸೀಪ್ಲೇನ್ ಪ್ರಮುಖ ವಿಮಾನಯಾನ ಕಂಪನಿಯಾದ ಸ್ಪೈಸ್ ಜೆಟ್ ಒಡೆತನದಲ್ಲಿದೆ. ಟ್ವಿನ್ ಒಟ್ಟರ್ 300 ಎಂದು ಕರೆಯಲ್ಪಡುವ ಈ ಸೀಪ್ಲೇನ್ ಅನ್ನು ಸ್ಪೈಸ್ ಜೆಟ್ ಟೆಕ್ನಿಕ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

Most Read Articles

Kannada
English summary
This unique plane lands on water. Read in Kannada.
Story first published: Tuesday, October 27, 2020, 9:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X