ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಬಾಲಿವುಡ್ ನಟ ಟೈಗರ್ ಶ್ರಾಫ್ ಸಾಹಸ ದೃಶ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಟೈಗರ್ ಶ್ರಾಫ್ ತಮ್ಮ ಬಹುತೇಕ ಚಿತ್ರಗಳಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ. ಈ ರೀತಿಯ ದೃಶ್ಯಗಳಲ್ಲಿ ಭಾಗಿಯಾಗುವ ಮುನ್ನ ಅವರು ಹಲವು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ.

ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಇತ್ತೀಚೆಗೆ ಟೈಗರ್ ಶ್ರಾಫ್‌ರವರು ವೀಡಿಯೊವನ್ನು ಶೇರ್‌ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೀಡಿಯೊವನ್ನು ಶೇರ್‌ಮಾಡಿರುವ ಟೈಗರ್ ಶ್ರಾಫ್ ಲಾಕ್‌ಡೌನ್ ನಂತರ ಜನರು ಕಾರ್ ಅನ್ನು ಈ ರೀತಿ ಓಡಿಸುತ್ತಾರೆ ಎಂದು ಹೇಳಿದ್ದಾರೆ. ಈ ವೀಡಿಯೊದಲ್ಲಿ ಫೆರಾರಿ 458 ಕಾರು ವೇಗವಾಗಿ ಬರುತ್ತಿರುವುದನ್ನು ಕಾಣಬಹುದು.

ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಕಾರಿಗೆ ಹಿಮ್ಮುಖವಾಗಿ ನಿಂತಿದ್ದಾರೆ. ಈ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟೈಗರ್‌ ಶ್ರಾಫ್‌ ಬ್ಯಾಕ್‌ ಫ್ಲಿಪ್‌ ಹೊಡೆಯುತ್ತಾರೆ. ಅಂದ ಹಾಗೆ ಈ ವೀಡಿಯೊ ಟೈಗರ್ ಶ್ರಾಫ್‌‌ರವರ ಹೊಸ ಸಿನಿಮಾದ ಆಕ್ಷನ್ ದೃಶ್ಯವಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಟೈಗರ್ ಶ್ರಾಫ್‌ ಶೇರ್ ಮಾಡಿರುವ ಈ ವೀಡಿಯೊವನ್ನು ಇದುವರೆಗೂ 2.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಟೈಗರ್ ಶ್ರಾಫ್‌ರವರ ಅಭಿಮಾನಿಗಳು ಈ ವೀಡಿಯೊಗೆ ಫಿದಾ ಆಗಿದ್ದು, ಹಲವಾರು ಕಮೆಂಟ್‌ಗಳನ್ನು ಮಾಡಿದ್ದಾರೆ.

ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಈ ವೀಡಿಯೊದಲ್ಲಿ ತೋರಿಸಿರುವ ಸಾಹಸ ದೃಶ್ಯಗಳನ್ನು ಪೂರ್ಣ ಪ್ರಮಾಣದ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ವಹಿಸಿ ಮಾಡಲಾಗಿದೆ. ಈ ದೃಶ್ಯಗಳನ್ನು ವೃತ್ತಿಪರ ಸ್ಟಂಟ್‌ಮೆನ್‌ಗಳ ಸಹಾಯದಿಂದ ಮಾಡಲಾಗುತ್ತದೆ. ಟೈಗರ್ ಶ್ರಾಫ್‌ರವರು ತಮ್ಮ ಚಿತ್ರ ಜೀವನದುದ್ದಕ್ಕೂ ಈ ರೀತಿಯ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವೃತ್ತಿಪರರ ಮೇಲ್ವಿಚಾರಣೆಯಿಲ್ಲದೆ, ಮನೆಯಲ್ಲಿ ಇಂತಹ ಸಾಹಸಗಳನ್ನು ಮಾಡುವುದು ಅಪಾಯಕಾರಿ. ಈ ರೀತಿಯ ಸಾಹಸವು ಮಾರಣಾಂತಿಕ ಗಾಯಗಳಿಗೆ, ಕೆಲವೊಮ್ಮೆ ಸಾವಿಗೂ ಸಹ ಕಾರಣವಾಗಬಹುದು. ಸಿನಿಮಾಗಳಲ್ಲಿ ಈ ರೀತಿಯ ಸ್ಟಂಟ್‌ಗಳನ್ನು ಪ್ರೇಕ್ಷಕರನ್ನು ರಂಜಿಸಲು ಮಾಡಲಾಗುತ್ತದೆ.

ವೇಗವಾಗಿ ಬಂದ ಕಾರಿನ ಮೇಲೆ ಬ್ಯಾಕ್ ಫ್ಲಿಪ್ ಮಾಡಿದ ಟೈಗರ್ ಶ್ರಾಫ್

ಸಿನಿಮಾಗಳಲ್ಲಿ ತೋರಿಸಲಾಗುವ ಬಹುತೇಕ ಸಾಹಸ ದೃಶ್ಯಗಳು ನಕಲಿಯಾಗಿದ್ದರೂ ಸಹ ನೈಜವಾಗಿ ಕಾಣುತ್ತವೆ. ಇನ್ನೂ ಕೆಲವು ಸಾಹಸ ದೃಶ್ಯಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್ ನೆರವಿನಿಂದ ಮಾಡಲಾಗುತ್ತದೆ.

Most Read Articles

Kannada
English summary
Tiger Shroff does backflip over Ferarri 458 Italia. Read in Kannada.
Story first published: Tuesday, June 2, 2020, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X