ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಕಳೆದ ಕೆಲವು ವರ್ಷಗಳಿಂದ ಬೇಸಿಗೆಯ ತಾಪಮಾನವು ವಿಪರಿತವಾಗಿ ಏರಿಕೆಯಾಗುತ್ತದೆ. ಬೇಸಿಗೆಯ ಬಿಸಿಲು ವರ್ಷದಿಂದ ವರ್ಷಕ್ಕೆ ಹೊಸ ದಾಖಲೆಯನ್ನು ಮುಟ್ಟುತ್ತಿದೆ. ಕೆಲವರು ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳುತ್ತಾರೆ.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಆದರೆ ಕಳೆದ ವರ್ಷದಿಂದ ಕರೋನಾ ವೈರಸ್ ಎಂಬ ಮಹಾಮಾರಿ ಈ ಪ್ರವಾಸಕ್ಕೂ ಬ್ರೇಕ್ ಹಾಕಿದೆ. ಇನ್ನೇನು ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲಿ ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿದೆ. ಈ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಇದರಿಂದಾಗಿ ತಿಂಗಳ ಹಿಂದೆಯೇ ಪ್ರವಾಸದ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದವರ ಕನಸಿಗೆ ತಣ್ಣೀರೆರಚಿದಂತಾಗಿದೆ. ಬಿಸಿಲ ಬೇಗೆಯನ್ನು ನೀಗಿಸಲು ಪ್ರವಾಸಕ್ಕೆ ಹೊರಡುವವರು ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳನ್ನು ಹೊಂದಿರುವವರು ಯಾವ ರೀತಿ ಯೋಜನೆ ರೂಪಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಪ್ರವಾಸ ಎಂಬ ಪದ ಕೇಳಿದ ತಕ್ಷಣವೇ ಹಲವರಿಗೆ ಸುಂದರವಾದ ಪರ್ವತ ಶ್ರೇಣಿಗಳು, ಕೋಟೆಗಳು ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಮರಗಳಿರುವ ಉದ್ದ ರಸ್ತೆಗಳು ಮನಸ್ಸಿಗೆ ಬರುತ್ತವೆ.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಯೋಜನೆ

ಪ್ರವಾಸವನ್ನು ಒಂದು ತಿಂಗಳು ಮುಂಚಿತವಾಗಿ ಯೋಜಿಸುವುದು ಉತ್ತಮ. ಬೇಸಿಗೆಯಲ್ಲಿ ಪ್ರಯಾಣಿಸುವಾಗ ನಿರ್ಧರಿಸುವ ಪೂರ್ವ ಯೋಜನೆಗಳು ಅನಗತ್ಯ ತೊಂದರೆಗಳನ್ನು ತಪ್ಪಿಸುತ್ತವೆ. ಪ್ರವಾಸ ಸಮಯವು ಬೇಸಿಗೆ ಪ್ರವಾಸದಲ್ಲಿ ಮೊದಲ ಯೋಜನೆಯಾಗಿರಬೇಕು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಪ್ರವಾಸವನ್ನು ಮುಂಜಾನೆ ವೇಳೆಯಲ್ಲಿ ಆರಂಭಿಸುವುದು ಉತ್ತಮ. ಮಕ್ಕಳೊಂದಿಗೆ ಕೈಗೊಳ್ಳುವ ಪ್ರವಾಸವನ್ನು ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ ಕೈಗೊಳ್ಳದೇ ಇರುವುದು ಒಳ್ಳೆಯದು.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ನೀರು:

ಪ್ರವಾಸದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರನ್ನು ಕೊಂಡೊಯ್ಯಿರಿ. ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುತ್ತದೆ. ನೀರನ್ನು ದಾರಿಯಲ್ಲಿ ಸಿಗುವ ಅಂಗಡಿಗಳಲ್ಲಿ ಖರೀದಿಸಬಹುದು ಎಂಬ ಚಿಂತನೆ ಒಳ್ಳೆಯದಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಕೆಲವು ಬಾರಿ ಎಲ್ಲಾ ದಾರಿಗಳಲ್ಲಿ ನೀರು ಸಿಗದೇ ಇರಬಹುದು. ಜೊತೆಗೆ ಸಿಗುವ ಎಲ್ಲಾ ನೀರು ಶುದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ಫಿಲ್ಟರ್ ಮಾಡಲಾದ ನೀರು ಕೊಡುವುದರಿಂದ ಅನಗತ್ಯ ತೊಂದರೆಯನ್ನು ತಪ್ಪಿಸಬಹುದು.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಆಹಾರ:

ಹೊಟೇಲ್'ಗಳಲ್ಲಿ ಗುಣಮಟ್ಟದ ಹಾಗೂ ರುಚಿಕರವಾದ ಆಹಾರ ಸಿಗುತ್ತದೆ ಎಂದು ಹೇಳುವುದು ಕಷ್ಟ. ಈ ಕಾರಣಕ್ಕೆ ಮಕ್ಕಳಿಗೆ ಮನೆಯಲ್ಲಿಯೇ ಆಹಾರವನ್ನು ಸಿದ್ಧಪಡಿಸಿ ಜೊತೆಗೆ ಕೊಂಡೊಯ್ಯುವುದು ಒಳ್ಳೆಯದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಪ್ರವಾಸದಲ್ಲಿ ಅನಗತ್ಯ ಅನಾನುಕೂಲವನ್ನು ತಪ್ಪಿಸಲು ಪ್ಯಾಕ್ ಮಾಡಲಾದ ತಿಂಡಿಗಳನ್ನು ತಪ್ಪಿಸುವುದು ಉತ್ತಮ. ಕವರ್‌ಗಳಲ್ಲಿ ಪ್ಯಾಕ್ ಮಾಡಲಾಗಿರುವ ಹಣ್ಣು ಹಾಗೂ ಜ್ಯೂಸ್ ಖರೀದಿಸುವ ಬದಲು ಮನೆಯಲ್ಲಿಯೇ ತಯಾರಿಸಿದ ಜ್ಯೂಸ್ ತೆಗೆದುಕೊಂಡು ಹೋಗುವುದು ಒಳಿತು.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಉಡುಪು:

ಮಕ್ಕಳು ಸನ್‌ಸ್ಕ್ರೀನ್ ಧರಿಸುವುದು ಉತ್ತಮ. ಮಕ್ಕಳಿಗೆ ಕಾಟನ್ ಬಟ್ಟೆಗಳನ್ನು ತೊಡಿಸುವುದು ಸೂಕ್ತ. ಈ ಬಟ್ಟೆಗಳು ಸೂರ್ಯನ ಶಾಖದಿಂದ ಉಂಟಾಗುವ ಕಿರಿಕಿರಿ ಹಾಗೂ ಬೇಗೆಯನ್ನು ತಪ್ಪಿಸಲು ನೆರವಾಗುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಮುನ್ನೆಚ್ಚರಿಕೆ ಕ್ರಮಗಳು:

ಪ್ರವಾಸದ ವೇಳೆ ಶೀತ ಹಾಗೂ ಜ್ವರಕ್ಕೆ ಅಗತ್ಯವಿರುವ ಮಾತ್ರೆಗಳನ್ನು ಕೊಂಡೊಯ್ಯುವುದು ಒಳ್ಳೆಯದು. ಇದರಿಂದ ಒಂದು ವೇಳೆ ಜ್ವರ, ಶೀತ ಕಾಣಿಸಿಕೊಂಡರೆ ಮಾತ್ರೆಗಳನ್ನು ಖರೀದಿಸಲು ಅಂಗಡಿಗಳನ್ನು ಹುಡುಕುವುದು ತಪ್ಪುತ್ತದೆ. ಇದರಿಂದ ಸಮಯವೂ ಉಳಿಯುತ್ತದೆ.

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಸ್ಥಳದ ಆಯ್ಕೆ:

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದರೆ ಪ್ರಶಾಂತವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅಲ್ಲಿನ ಶುದ್ಧ ಗಾಳಿ ಮಕ್ಕಳ ದೇಹಕ್ಕೆ ಒಳ್ಳೆಯದು. ಥಿಯೇಟರ್, ಥೀಮ್ ಪಾರ್ಕ್ ಹಾಗೂ ಸರ್ಕಸ್‌ನಂತಹ ಸ್ಥಳಗಳ ಪ್ರವಾಸವನ್ನು ಕೈಗೊಳ್ಳದಿರುವುದು ಉತ್ತಮ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರವಾಸಕ್ಕೆ ತೆರಳುವವರಿಗೆ ನೆರವಾಗುವ ಕೆಲವು ಸಲಹೆಗಳಿವು

ಪ್ರವಾಸಕ್ಕೆ ಹೊರಡುವ ಮುನ್ನ ಹಾಲಿನ ಬಾಟಲ್, ವಾಟರ್ ಬಾಟಲ್, ಕರ್ಚೀಫ್, ಟಿಶ್ಯೂ ಪೇಪರ್‌ನಂತಹ ಅಗತ್ಯ ವಸ್ತುಗಳಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಈ ವಸ್ತುಗಳು ಪ್ರವಾಸದ ಮಾರ್ಗದಲ್ಲಿ ಸಿಗದೇ ಇರಬಹುದು.

Most Read Articles

Kannada
English summary
Tips for people who are planning to travel with kids. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X