ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಜಗತ್ತಿನಾದ್ಯಂತ ಪ್ರತಿದಿನ ನೂರಾರು ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ. ಭಾರತದಲ್ಲಿಯೂ ಹಲವಾರು ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿವೆ.

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಟೋಕಿಯೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯಾರೂ ನಿರೀಕ್ಷಿಸದ ವಿಶೇಷ ವಿನ್ಯಾಸವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಜಪಾನಿಯರು ತಮ್ಮ ವಿಭಿನ್ನ ಆಲೋಚನೆಗಳು ಹಾಗೂ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದಾರೆ ಎಂಬುದಕ್ಕೆ ಈಗ ಅಭಿವೃದ್ಧಿಪಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಸಾಕ್ಷಿಯಾಗಿದೆ.

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಇದು ಗಾಳಿ ತುಂಬಬಹುದಾದ ಬಲೂನ್ ತರಹದ ವಾಹನವಾಗಿದೆ. ಟಯರ್‌ನಿಂದ ಸೀಟಿನವರೆಗೆ ಎಲ್ಲವೂ ಗಾಳಿಯಾಡಬಲ್ಲವು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗಾಳಿಯಿಂದ ತುಂಬಿಸಬಹುದು. ಅಗತ್ಯವಿದ್ದರೆ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬಹುದು. ಬೇಡವೆಂದರೆ ಗಾಳಿಯನ್ನು ಹೊರಹಾಕಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಟೋಕಿಯೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಂತಹ ವಿಶಿಷ್ಟ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಈಗ ಇದನ್ನು ಮೂಲಮಾದರಿಯಾಗಿ ಪರಿಚಯಿಸಿದ್ದಾರೆ. ಈ ವಿದ್ಯಾರ್ಥಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನವನ್ನು ಸೂಟ್‌ಕೇಸ್ ರೂಪದಲ್ಲಿ ಪರಿಚಯಿಸಿದ್ದಾರೆ.

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ಗಾಳಿ ತುಂಬಿದ ಚೀಲ ರೂಪದಲ್ಲಿ ಹಾಗೂ ಚಲಿಸುವ ವ್ಹೀಲ್ ಶೇಪ್ ನಲ್ಲಿ ಉತ್ಪಾದಿಸಲು ಯೋಜಿಸಲಾಗಿದೆ. ಈ ವಿಲಕ್ಷಣ ಎಲೆಕ್ಟ್ರಿಕ್ ವಾಹನಗಳು ಪೋರ್ಟಬಲ್ ಹಾಗೂ ಗಾಳಿ ತುಂಬಬಹುದಾದ ಚಲನಶೀಲತೆಯನ್ನು ಆಧರಿಸಿವೆ. ಇದರಿಂದ ಈ ವಾಹನಗಳನ್ನು ಸುಲಭವಾಗಿ ಎತ್ತಿಕೊಂಡು ಹೋಗಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಇದರ ಆಧಾರದ ಮೇಲೆ ಟೋಕಿಯೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಹುಪಯೋಗಿ ವಾಹನಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದಾರೆ. ಸೂಟ್‌ಕೇಸ್ ಶೇಪಿನ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುವ ಇವುಗಳನ್ನು ಪರಿಚಯಿಸಲಾಗುವುದು.

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಗಾಳಿಯನ್ನು ತೆಗೆದ ನಂತರ ಈ ವಾಹನಗಳನ್ನು ಕ್ಯಾರಿ-ಆನ್ ಬ್ಯಾಗ್ ಅಥವಾ ಬ್ಯಾಕ್ ಪ್ಯಾಕ್ ಗಳಲ್ಲಿ ಸಾಗಿಸಬಹುದು. ಇದರಿಂದ ಈ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಈ ವಾಹನಗಳನ್ನು ನಮ್ಮ ಜೊತೆಗೆ ಕೊಂಡೊಯ್ಯುವುದರಿಂದ ಕಳ್ಳತನದ ಭಯವೂ ಇರುವುದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಈ ವಾಹನಗಳನ್ನು ಟೋಕಿಯೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತೊಂದು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಜಪಾನ್ ಮೂಲದ ಮರ್ಕಾರಿ ಆರ್ 4 ಡಿ ಈ ವಿಚಿತ್ರ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸಲು ವಿದ್ಯಾರ್ಥಿಗಳಿಗೆ ನೆರವಾಗಿದೆ.

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಈ ಸಹಭಾಗಿತ್ವವು ಭವಿಷ್ಯದಲ್ಲಿ ಗುಣಮಟ್ಟದ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಈಗ ಪರಿಚಯಿಸಲಾಗುತ್ತಿರುವ ಎಲೆಕ್ಟ್ರಿಕ್ ವಾಹನವನ್ನು ನಿಭಾಯಿಸುವುದು ಸುಲಭವಲ್ಲ. ಅವುಗಳು ತುಂಬಾ ಹಗುರವಾಗಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೋಕಿಯೊ ವಿಶ್ವವಿದ್ಯಾಲಯವು ಯುರೋಬ್ ಚಾನೆಲ್ ಮೂಲಕ ಈ ಎಲೆಕ್ಟ್ರಿಕ್ ವಾಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುವ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಸೂಟ್‌ಕೇಸ್ ರೂಪದಲ್ಲಿರುವ ಎಲೆಕ್ಟ್ರಿಕ್ ವಾಹನದ ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದೆ. ಈ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ಗಾಳಿ ತುಂಬಬಹುದಾದ ಬಲೂನ್ ಮಾದರಿಯ ವಾಹನಗಳಾಗಿರುವುದರಿಂದ ಇವುಗಳನ್ನು ತಕ್ಷಣ ಹಾಗೂ ಅಗತ್ಯ ಪ್ರಮಾಣದಲ್ಲಿ ಪಡೆಯಬಹುದು. ಈ ರೀತಿಯ ಹಲವಾರು ಫೀಚರ್ ಗಳನ್ನು ಹೊಂದಿರುವ ಈ ವಿಲಕ್ಷಣ ಎಲೆಕ್ಟ್ರಿಕ್ ವಾಹನಗಳು ಶೀಘ್ರದಲ್ಲೇ ಜಗತ್ತಿನಲ್ಲಿ ಪ್ರದರ್ಶನಗೊಳ್ಳಲಿವೆ.

ಮುಂದಿನ ವಾರ ಅಮೆರಿಕಾದಲ್ಲಿ ನಡೆಯುವ ಯುಐಎಸ್ ಟಿ 2020 ಆನ್‌ಲೈನ್ ಸಮ್ಮೇಳನದಲ್ಲಿ ಈ ಎಲೆಕ್ಟ್ರಿಕ್ ವಾಹನದ ಮೂಲಮಾದರಿಗಳನ್ನು ಪ್ರದರ್ಶಿಸಲಾಗುವುದು. ಟೋಕಿಯೋ ವಿದ್ಯಾರ್ಥಿಗಳ ಈ ವಿಲಕ್ಷಣ ಎಲೆಕ್ಟ್ರಿಕ್ ವಾಹನವು ಎಲೆಕ್ಟ್ರಿಕ್ ವಾಹನ ಪ್ರಿಯರಲ್ಲಿ ಉತ್ಸಾಹವನ್ನುಂಟು ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸ್ಕೂಟರ್‌ಗಳನ್ನು ಸೂಟ್ ಕೇಸಿನಲ್ಲಿ ಕೊಂಡೊಯ್ಯಬಹುದು

ಈ ವಾಹನಗಳು ಯಾವಾಗ ಬಿಡುಗಡೆಯಾಗುತ್ತವೆ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಆದರೆ ಈ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬಿಡುಗಡೆಯ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.

Most Read Articles

Kannada
English summary
Tokyo University students develops portable e scooter. Read in Kannada.
Story first published: Saturday, October 24, 2020, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X